ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Vivo T5 5G ಬಿಡುಗಡೆ: 7050mAh ಬ್ಯಾಟರಿ, 144Hz ಡಿಸ್ಪ್ಲೇ – ಬೆಲೆ ಎಷ್ಟು?

Author
Published
02/09/2026
Updated
13/09/2026
Published On: September 2, 2026 1:13 pm
Vivo T5 5G
Google News
Follow Us

ವಿವೋ ತನ್ನ T ಸೀರೀಸ್‌ಗೆ ಮತ್ತೊಂದು ಹೊಸ ಫೋನ್ ಸೇರಿಸಿದೆ. ವಿವೋ T5 5G (Vivo T5 5G) ಅನ್ನು ಸೆಪ್ಟೆಂಬರ್ 2, 2026ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಲಾಂಚ್‌ಗೂ ಮುನ್ನವೇ ಈ ಫೋನ್‌ ಬಗ್ಗೆ Flipkart ಮೈಕ್ರೋಸೈಟ್‌ನಲ್ಲಿ ಟೀಸರ್‌ಗಳು ಕಾಣಿಸಿಕೊಂಡಿದ್ದವು. ತೆಳ್ಳಗಿನ ಬಾಡಿ, ಕರ್ವ್ಡ್ ಡಿಸ್ಪ್ಲೇ ಮತ್ತು AI ಫೀಚರ್ಸ್‌ಗಳ ಸುಳಿವು ನೀಡಿದ್ದರಿಂದ, ಫೋನ್‌ ಹೇಗಿರಲಿದೆ ಎಂಬ ಕುತೂಹಲ ಗ್ರಾಹಕರಲ್ಲಿ ಮೊದಲೇ ಮೂಡಿತ್ತು. ಈಗಾಗಲೇ ವಿವೋ T5 ಲೈಟ್, T5 ಪ್ರೊ, T5e ಮತ್ತು T5x ಮಾದರಿಗಳು ಮಾರುಕಟ್ಟೆಯಲ್ಲಿವೆ. ಇದೀಗ ಈ ಸರಣಿಗೆ ವಿವೋ T5 5G ಕೂಡ ಸೇರ್ಪಡೆಯಾಗಿದೆ. T5 ಪ್ರೊ ಮತ್ತು T5x ನಡುವಿನ ಸ್ಥಾನವನ್ನು ಪಡೆಯುವ ಈ ಫೋನ್, ಬೆಲೆ ಮತ್ತು ಫೀಚರ್ಸ್‌ಗಳ ನಡುವೆ ಉತ್ತಮ ಸಮತೋಲನ ನೀಡುವ ನಿರೀಕ್ಷೆಯಿದೆ. ಈ ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳಿವೆ, ಬೆಲೆ ಎಷ್ಟು ಮತ್ತು ವಿಶೇಷತೆ ಏನು ಎಂಬುದನ್ನು ಮುಂದೆ ವಿವರವಾಗಿ ನೋಡೋಣ.

ಡಿಸೈನ್ ಮತ್ತು ಡಿಸ್ಪ್ಲೇ – ತೆಳ್ಳಗಿನ ಫೋನ್, ದೊಡ್ಡ ಸ್ಕ್ರೀನ್

ವಿವೋ T5 5G ನೋಡಿದಾಗ ಮೊದಲು ಗಮನ ಸೆಳೆಯೋದು ಇದರ ಸ್ಲಿಮ್ ಡಿಸೈನ್. ಬರೀ 7.99mm ದಪ್ಪ ಇರುವ ಈ ಫೋನ್, ಈ ಬೆಲೆ ವಿಭಾಗದಲ್ಲಿ ಅತ್ಯಂತ ತೆಳ್ಳಗಿನ 3D ಕರ್ವ್ಡ್ ಡಿಸ್ಪ್ಲೇ ಹೊಂದಿರುವ ಫೋನ್ ಎಂದು ಕಂಪನಿ ಹೇಳಿಕೊಂಡಿದೆ. 6.83 ಇಂಚಿನ AMOLED ಸ್ಕ್ರೀನ್ 144Hz ರಿಫ್ರೆಶ್ ರೇಟ್ ಹಾಗೂ 2000 nits ವರೆಗಿನ ಬ್ರೈಟ್‌ನೆಸ್ ಹೊಂದಿದ್ದು, ಗೇಮಿಂಗ್ ಆಗಲಿ, ಸ್ಕ್ರಾಲಿಂಗ್ ಆಗಲಿ ತುಂಬಾ ಸ್ಮೂತ್ ಅನುಭವ ಕೊಡುತ್ತೆ. ಫೋನ್‌ಗೆ IP68 ಮತ್ತು IP69 ರೇಟಿಂಗ್ ಇದ್ದು, ಧೂಳು-ನೀರಿನಿಂದ ರಕ್ಷಣೆ ಸಿಗುತ್ತೆ.

ಪ್ರೊಸೆಸರ್ ಮತ್ತು AI ಫೀಚರ್ಸ್

ಫೋನ್‌ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7500 ಟರ್ಬೊ ಚಿಪ್‌ಸೆಟ್ ಬಳಸಲಾಗಿದ್ದು, ಇದರ ಜೊತೆ ಜೆನ್‌ಎಐ-ರೆಡಿ ಎನ್‌ಪಿಯು (GenAI-ready NPU) ಕೂಡ ಇದೆ. ಅಂದ್ರೆ ಎಐ ಆಧಾರಿತ ಫೀಚರ್ಸ್ ಈ ಫೋನಿನ ಒಂದು ಮುಖ್ಯ ಆಕರ್ಷಣೆ ಆಗಲಿದೆ. ಆಂಡ್ರಾಯ್ಡ್ 16 ಆಧಾರಿತ ಒರಿಜಿನ್‌ಓಎಸ್ (OriginOS) ಆಪರೇಟಿಂಗ್ ಸಿಸ್ಟಂ ಮೇಲೆ ಫೋನ್ ಕೆಲಸ ಮಾಡಲಿದ್ದು, 6GB RAM ಮತ್ತು 128GB ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಬಂದಿದೆ.

ಬ್ಯಾಟರಿ ಮತ್ತು ಕ್ಯಾಮೆರಾ

ಬ್ಯಾಟರಿ ವಿಷಯಕ್ಕೆ ಬಂದ್ರೆ, ವಿವೋ T5 5G ಫೋನ್ ಬರೋಬ್ಬರಿ 7050mAh ಬ್ಯಾಟರಿ ಹೊಂದಿದ್ದು, 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೊಡುತ್ತೆ. ಇಷ್ಟು ದೊಡ್ಡ ಬ್ಯಾಟರಿ ಇದ್ದರೂ ಫೋನ್ ಇಷ್ಟು ತೆಳ್ಳಗಿರೋದು ನಿಜಕ್ಕೂ ಗಮನ ಸೆಳೆಯುತ್ತೆ. ಕ್ಯಾಮೆರಾ ವಿಚಾರಕ್ಕೆ ಬಂದರೆ, ಹಿಂಭಾಗದಲ್ಲಿ OIS ಸಪೋರ್ಟ್‌ನೊಂದಿಗೆ 50MP Sony IMX882 ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಇದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

Vivo T5 5G ಮತ್ತು Realme P4s 5G ನಡುವಿನ ಸಂಪೂರ್ಣ ಹೋಲಿಕೆಗಾಗಿ Vivo T5 5G vs Realme P4s 5G ಲೇಖನವನ್ನು ಓದಿ.

Vivo T5 5G ಬೆಲೆ ಮತ್ತು ವೇರಿಯಂಟ್‌ಗಳು

Vivo T5 5G Price

ಫೋನ್ ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಬೆಲೆ ಕೂಡ ಖಚಿತವಾಗಿದೆ. Vivo T5 5G ನಾಲ್ಕು ವೇರಿಯಂಟ್‌ಗಳಲ್ಲಿ ಲಭ್ಯ:

  • 128GB + 6GB – ₹34,999 
  • 128GB + 8GB – ₹39,999 
  • 256GB + 8GB – ₹44,999 
  • 256GB + 12GB – ₹49,999

ಫೋನ್ ರಾಯಲ್ ಬ್ರಾಂಜ್ ಮತ್ತು ಸಿಲ್ವರ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಸ್ಟೋರ್‌ನಲ್ಲಿ ಇದರ ಮಾರಾಟ ಸೆಪ್ಟೆಂಬರ್ 9, 2026ರಂದು ಆರಂಭವಾಗಿತ್ತು.

ಇದೇ ಬೆಲೆ ವಿಭಾಗದಲ್ಲಿ ಈಗಾಗಲೇ ಐಕ್ಯೂ Z11 ಇರುವುದರಿಂದ, ವಿವೋ T5 5Gಗೆ ಇದು ನೇರ ಪ್ರತಿಸ್ಪರ್ಧಿಯಾಗಬಹುದು. ಎರಡೂ ಫೋನ್‌ಗಳ ಸಂಪೂರ್ಣ ಹೋಲಿಕೆಯನ್ನು [Vivo T5 5G vs iQOO Z11 5G ಹೋಲಿಕೆ] ಆರ್ಟಿಕಲ್‌ನಲ್ಲಿ ನೋಡಬಹುದು.

ಈ ಫೋನ್ ಯಾರಿಗೆ ಸೂಕ್ತ?

ಒಂದೇ ಚಾರ್ಜ್‌ನಲ್ಲಿ ಹೆಚ್ಚು ಸಮಯ ಫೋನ್ ಬಳಸಬೇಕು ಅನ್ನೋರಿಗೆ ವಿವೋ T5 5G ಒಳ್ಳೆಯ ಆಯ್ಕೆಯಾಗಬಹುದು. ದೊಡ್ಡ ಬ್ಯಾಟರಿ ಜೊತೆಗೆ ಸ್ಲಿಮ್ ಮತ್ತು ಸ್ಟೈಲಿಶ್ ಡಿಸೈನ್ ಬೇಕು ಅನ್ನೋರಿಗೂ ಈ ಫೋನ್ ಗಮನ ಸೆಳೆಯಬಹುದು. ₹35,000–₹40,000 ಬಜೆಟ್‌ನಲ್ಲಿ ಹೊಸ 5G ಫೋನ್ ಹುಡುಕುತ್ತಿರೋರು ಇದನ್ನು ಒಮ್ಮೆ ನೋಡಬಹುದು.

ಪದೇ ಪದೇ ಕೇಳುವ ಪ್ರಶ್ನೆಗಳು (FAQ)

01. ವಿವೋ T5 5G ಬೆಲೆ ಎಷ್ಟು?

ವಿವೋ T5 5Gಯ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ₹34,999 ಬೆಲೆಯಲ್ಲಿ ಲಭ್ಯವಿದೆ. ಇದೇ ಫೋನ್‌ನ ಆರಂಭಿಕ ಬೆಲೆಯಾಗಿದೆ.

02. ವಿವೋ T5 5G ಯಾವ ಬಣ್ಣಗಳಲ್ಲಿ ಸಿಗುತ್ತದೆ?

ವಿವೋ T5 5G ರಾಯಲ್ ಬ್ರಾಂಜ್ ಮತ್ತು ಸಿಲ್ವರ್ ಗ್ರೀನ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.

03. ಈ ಫೋನ್‌ನಲ್ಲಿ ಎಷ್ಟು ಬ್ಯಾಟರಿ ಇದೆ?

ವಿವೋ T5 5Gನಲ್ಲಿ 7,050mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇದು 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

04. ವಿವೋ T5 5G ಎಲ್ಲಿ ಖರೀದಿಸಬಹುದು?

ವಿವೋ T5 5G ಅನ್ನು ವಿವೋ ಮತ್ತು ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದು.

05. ವಿವೋ T5 5Gನಲ್ಲಿ ಯಾವ ಪ್ರೊಸೆಸರ್ ಬಳಸಲಾಗಿದೆ?

ವಿವೋ T5 5Gನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7500 ಟರ್ಬೊ ಪ್ರೊಸೆಸರ್ ನೀಡಲಾಗಿದೆ. ಇದು ದಿನನಿತ್ಯದ ಬಳಕೆ, ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್‌ಗೆ ಉತ್ತಮ ಕಾರ್ಯಕ್ಷಮತೆ ನೀಡುವ ಸಾಮರ್ಥ್ಯ ಹೊಂದಿದೆ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →