ಏರ್ಟೆಲ್ನ ₹200 ರೀಚಾರ್ಜ್ ಪ್ಯಾಕ್ ಈಗ ಮೊದಲಿನಂತಿಲ್ಲ. ಹೆಸರೂ ಬದಲಾಗಿದೆ, ಒಳಗಿರುವ ಸೌಲಭ್ಯಗಳೂ ಹೆಚ್ಚಾಗಿವೆ. ಕಂಪನಿ ಇದಕ್ಕೆ ‘ಬಾಕ್ಸ್ ಆಫೀಸ್ ಪ್ಯಾಕ್’ ಅಂತ ಹೊಸ ಹೆಸರು ಕೊಟ್ಟು, ಈಗಾಗಲೇ ಇದ್ದ ಜಿಯೋಹಾಟ್ಸ್ಟಾರ್ ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು Zee5 ಪ್ರೀಮಿಯಂ ಅನ್ನೂ ಸೇರಿಸಿದೆ. ಡೇಟಾ 30GB, ವ್ಯಾಲಿಡಿಟಿ 28 ದಿನ. ಹಾಗಂತ ಕಣ್ಣುಮುಚ್ಚಿ ರೀಚಾರ್ಜ್ ಮಾಡುವ ಮುನ್ನ ಕೆಲವು ಮಿತಿಗಳನ್ನೂ ತಿಳಿದುಕೊಳ್ಳಿ. ಸಿನಿಮಾ, ವೆಬ್ ಸರಣಿ, ಕ್ರಿಕೆಟ್ ಎಲ್ಲವನ್ನೂ ಫೋನ್ನಲ್ಲೇ ನೋಡುವ ಅಭ್ಯಾಸ ನಿಮಗಿದ್ದರೆ ಈ ಪ್ಯಾಕ್ ಗಮನಿಸಲೇಬೇಕು. ಜಿಯೋದ ಇದೇ ಬೆಲೆಯ ಪ್ಲಾನ್ ಜೊತೆ ಹೋಲಿಕೆಯೂ ಕೊನೆಯಲ್ಲಿ ಇದೆ.
Airtel ₹200 Recharge ಪ್ಯಾಕ್ನಲ್ಲಿ ಏನೇನಿದೆ?
ಈ ಪ್ಯಾಕ್ನಲ್ಲಿ 30GB ಹೈಸ್ಪೀಡ್ ಡೇಟಾ ಸಿಗುತ್ತದೆ, 28 ದಿನ ಬಳಸಬಹುದು. 5G ಫೋನ್ ಇದ್ದರೆ ಅನಿಯಮಿತ 5G ಕೂಡ ಇದೆ. ಆದರೆ ನಿಮ್ಮ ಏರಿಯಾದಲ್ಲಿ ಏರ್ಟೆಲ್ 5G ಬರುತ್ತಿದ್ದರೆ ಮಾತ್ರ ಇದರ ಲಾಭ ಸಿಗುತ್ತದೆ ಅನ್ನುವುದು ನೆನಪಿರಲಿ.
ಒಟಿಟಿ ವಿಷಯಕ್ಕೆ ಬಂದರೆ, ಜಿಯೋಹಾಟ್ಸ್ಟಾರ್ ಮೊಬೈಲ್ 28 ದಿನ ಸಿಗುತ್ತದೆ. ಇದರ ಮೌಲ್ಯ ₹149 ಅಂತ ಹೇಳಲಾಗಿದೆ. ಲೈವ್ ಕ್ರಿಕೆಟ್, ಸಿನಿಮಾ, ಹಾಟ್ಸ್ಟಾರ್ ಸ್ಪೆಷಲ್ಸ್ ಎಲ್ಲವನ್ನೂ ಫೋನ್ನಲ್ಲಿ ನೋಡಬಹುದು. ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಕೂಡ ಇದೆ, ಆದರೆ ಅದು ಒಂದೇ ಮೊಬೈಲ್ನಲ್ಲಿ, SD ಕ್ವಾಲಿಟಿಯಲ್ಲಿ, ಜಾಹೀರಾತುಗಳ ಜೊತೆ ಮಾತ್ರ. ಟಿವಿಯಲ್ಲಿ ನೋಡಬೇಕು ಅಂದುಕೊಂಡಿದ್ದರೆ ಇದು ಹೊಂದುವುದಿಲ್ಲ.
Zee5 ಪ್ರೀಮಿಯಂ ಸ್ವಲ್ಪ ಉತ್ತಮ. 28 ದಿನಗಳ ಸಬ್ಸ್ಕ್ರಿಪ್ಶನ್ ಇದ್ದು, ಒಂದಕ್ಕಿಂತ ಹೆಚ್ಚು ಡಿವೈಸ್ಗಳಲ್ಲಿ ನೋಡಬಹುದು. ಇನ್ನು ಸ್ಕ್ರೀನ್ಶಾಟ್ನಲ್ಲಿ ಕೊನೆಯಲ್ಲಿ ಕಾಣುವ Aha Premium ಎಂದರೆ Airtel Xstream Play Premium. ಇದರಲ್ಲಿ 18ಕ್ಕೂ ಹೆಚ್ಚು OTT ಪ್ಲಾಟ್ಫಾರ್ಮ್ಗಳಿವೆ, SonyLIV, Lionsgate Play, Aha, Chaupal, Sun NXT ಸೇರಿ. ತೆಲುಗು, ತಮಿಳು ಸಿನಿಮಾ ನೋಡುವವರಿಗೆ Aha ಮತ್ತು Sun NXT ಉಪಯೋಗಕ್ಕೆ ಬರುತ್ತವೆ.
Also Read: Airtel ₹279 OTT Pack: 25+ OTT ಜೊತೆ 1GB ಡೇಟಾ – Super Deal!
ರೀಚಾರ್ಜ್ ಮಾಡುವ ಮುನ್ನ ತಿಳಿಯಿರಿ
ಮೊದಲನೆಯದು, ಇದು ಡೇಟಾ ಆ್ಯಡ್-ಆನ್ ರೀತಿಯ ಪ್ಯಾಕ್. ಅಂದರೆ ಇದರಲ್ಲಿ ಕರೆ ಅಥವಾ SMS ಸೌಲಭ್ಯಗಳಿಲ್ಲ. ಹಾಗಾಗಿ ನಿಮ್ಮ ನಂಬರ್ನಲ್ಲಿ ಬೇರೆ ರೆಗ್ಯುಲರ್ ರೀಚಾರ್ಜ್ ಪ್ಲಾನ್ ಇರಬೇಕು. ಎರಡನೆಯದು, ಈ ಪ್ಯಾಕ್ನಲ್ಲಿ ಸಿಗುವ 30GB ಡೇಟಾ ಮುಗಿದ ನಂತರ ಹೆಚ್ಚುವರಿ ಡೇಟಾ ಬಳಕೆಗೆ ಚಾರ್ಜ್ ಆಗಬಹುದು. ಹಾಗಾಗಿ ಹೆಚ್ಚು ವಿಡಿಯೋ ಅಥವಾ OTT ಕಂಟೆಂಟ್ ನೋಡುವವರು ತಮ್ಮ ಬಾಕಿ ಡೇಟಾ ಮೇಲೆ ಗಮನ ಇಡುವುದು ಒಳ್ಳೆಯದು.
ಜಿಯೋ ₹200 ಪ್ಲಾನ್ ಜೊತೆ ಹೋಲಿಸಿದರೆ?
ಜಿಯೋ ಕೂಡ ಇದೇ ಬೆಲೆಗೆ 30GB ಡೇಟಾ, 28 ದಿನ ವ್ಯಾಲಿಡಿಟಿ ಕೊಡುತ್ತದೆ. ವ್ಯತ್ಯಾಸ ಇರುವುದು ಒಟಿಟಿಯಲ್ಲಿ. ಜಿಯೋದಲ್ಲಿ YouTube Premium, Prime Video Mobile, JioHotstar, SonyLIV, ZEE5 ಸೇರಿ ಹಲವು OTTಗಳಿವೆ. YouTube Premium ನಿಮಗೆ ಮುಖ್ಯವಾದರೆ ಜಿಯೋ ಕಡೆ ಹೆಚ್ಚು ಒಲವು ಇರಬಹುದು. Aha, Sun NXTನಂತಹ ಕನ್ನಡ, ತೆಲುಗು, ತಮಿಳಿನಂತಹ ಭಾಷೆಗಳ ಕಂಟೆಂಟ್ ಬೇಕಿದ್ದರೆ ಏರ್ಟೆಲ್ ಸರಿ. ಕೊನೆಗೆ ನೀವು ಯಾವ ಸಿಮ್ ಬಳಸುತ್ತೀರಿ ಅನ್ನುವುದೇ ಹೆಚ್ಚಿನ ಸಲ ನಿರ್ಧಾರ ಮಾಡುತ್ತದೆ.
Also Read: Netflix ಫ್ರೀ ಬೇಕಾ? Airtel ₹598 ಪ್ಲಾನ್ನಲ್ಲಿ ಏನೇನು ಸಿಗುತ್ತೆ?
ರೀಚಾರ್ಜ್ ಮಾಡುವುದು ಹೇಗೆ
ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ತೆರೆದು ರೀಚಾರ್ಜ್ಗೆ ಹೋಗಿ, ₹200 ಪ್ಯಾಕ್ ಆರಿಸಿ ‘Get Pack’ ಒತ್ತಿ. ಪಾವತಿ ಆದ ಮೇಲೆ ಜೀ5, ಹಾಟ್ಸ್ಟಾರ್ ಮುಂತಾದ ಆ್ಯಪ್ಗಳಲ್ಲಿ ಅದೇ ನಂಬರ್ನಿಂದ ಲಾಗಿನ್ ಆಗಿ ಆ್ಯಕ್ಟಿವೇಟ್ ಮಾಡಿಕೊಳ್ಳಿ.
ಒಟ್ಟಾರೆ, ಹೆಚ್ಚುವರಿ ಡೇಟಾ ಜೊತೆ OTT ಕೂಡ ಬೇಕು ಅನ್ನುವವರಿಗೆ ₹200ಕ್ಕೆ ಇದು ಕೆಟ್ಟ ಡೀಲ್ ಅಲ್ಲ. ಆದರೆ ಕಂಪನಿಗಳು ಪ್ಯಾಕ್ ವಿವರಗಳನ್ನು ಆಗಾಗ ಬದಲಿಸುತ್ತವೆ. ಹಾಗಾಗಿ ರೀಚಾರ್ಜ್ ಮಾಡುವ ಮುನ್ನ ಆ್ಯಪ್ನಲ್ಲಿ ಒಮ್ಮೆ ಪರಿಶೀಲಿಸಿ.












