ಇತ್ತೀಚಿಗೆ ಒಟಿಟಿ ಪ್ಲಾಟ್ಫಾರ್ಮ್ಗಳ ಸಂಖ್ಯೆ ಜಾಸ್ತಿ ಆಗ್ತಿದ್ದಂತೆ, ಪ್ರತಿಯೊಂದಕ್ಕೂ ಬೇರೆ ಬೇರೆ ಸಬ್ಸ್ಕ್ರಿಪ್ಷನ್ ತಗೊಂಡು ಹಣ ಖರ್ಚು ಮಾಡೋದು ಜೇಬಿಗೆ ಭಾರ ಆಗ್ತಿದೆ. Netflixಗೆ ಒಂದು, JioHotstarಗೆ ಇನ್ನೊಂದು, ZEE5ಗೆ ಮತ್ತೊಂದು—ಹೀಗೆ ಎಲ್ಲಾ ಸೇರಿಸಿದ್ರೆ ತಿಂಗಳಿಗೆ ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗಬಹುದು. ಜೊತೆಗೆ, ಪ್ರತಿಯೊಂದು ಸಬ್ಸ್ಕ್ರಿಪ್ಷನ್ನ ರಿನ್ಯುವಲ್ ಡೇಟ್ ನೆನಪಿಟ್ಟುಕೊಳ್ಳೋದು ಕೂಡ ಕಿರಿಕಿರಿ ಕೆಲಸ. ಇದೇ ಸಮಸ್ಯೆಗೆ ಏರ್ಟೆಲ್ ಈಗ ಒಂದು ಸಿಂಪಲ್ ಪರಿಹಾರ ತಂದಿದೆ.
ಕೇವಲ ₹279ಕ್ಕೆ Netflix, JioHotstar ಸೇರಿದಂತೆ 25ಕ್ಕೂ ಹೆಚ್ಚು OTT ಪ್ಲಾಟ್ಫಾರ್ಮ್ಗಳ ಆಕ್ಸೆಸ್ ಅನ್ನು ಒಂದೇ ಪ್ಯಾಕ್ನಲ್ಲಿ ನೀಡುತ್ತಿದೆ. ಒಂದೇ ಸಲ ನೋಡಿದ್ರೆ ಇದೊಂದು ಸೂಪರ್ ಡೀಲ್ ತರ ಕಾಣಿಸಬಹುದು. ಆದರೆ ರೀಚಾರ್ಜ್ ಮಾಡೋ ಮುಂಚೆ ಈ ಪ್ಯಾಕ್ನಲ್ಲಿ ನಿಜವಾಗಿಯೂ ಏನೇನು ಸಿಗುತ್ತೆ, ವ್ಯಾಲಿಡಿಟಿ ಎಷ್ಟು ಮತ್ತು ಯಾವ OTT ಸೇವೆಗಳನ್ನು ಹೇಗೆ ಆಕ್ಟಿವೇಟ್ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳೋದು ಮುಖ್ಯ. ಅದನ್ನೇ ಈ ಲೇಖನದಲ್ಲಿ ವಿವರವಾಗಿ ನೋಡೋಣ.
₹279 ಪ್ಯಾಕ್ ಸಾಮಾನ್ಯ ರೀಚಾರ್ಜ್ ಪ್ಲಾನ್ ಅಲ್ಲ
ಮೊದಲು ಒಂದು ವಿಷಯ ಕ್ಲಿಯರ್ ಮಾಡ್ಕೊಬೇಕು — ₹279 ಪ್ಯಾಕ್ ಒಂದು ಆಡ್-ಆನ್ ಡೇಟಾ ವೋಚರ್, ಪ್ರೈಮರಿ ಪ್ಲಾನ್ ಅಲ್ಲ. ಅಂದ್ರೆ ಇದನ್ನ ಒಂಟಿಯಾಗಿ ರೀಚಾರ್ಜ್ ಮಾಡಿದ್ರೆ ಕೆಲಸ ಆಗಲ್ಲ. ನಿಮ್ಮ ನಂಬರ್ನಲ್ಲಿ ಈಗಾಗಲೇ ಒಂದು ಬೇಸ್ ಪ್ಲಾನ್ ಆಕ್ಟಿವ್ ಆಗಿರಬೇಕು. ಆಗ ಮಾತ್ರ ₹279 ವೋಚರ್ನ OTT ಮತ್ತು ಇತರ ಪ್ರಯೋಜನಗಳನ್ನು ಬಳಸಬಹುದು. ಹೀಗಾಗಿ ಇದನ್ನ ಒಂದು ರೀತಿಯ “ಬೂಸ್ಟರ್ ಪ್ಯಾಕ್” ಅಂತ ತಿಳ್ಕೊಳ್ಳಬಹುದು.
Airtel ₹279 ಪ್ಯಾಕ್ನಲ್ಲಿ ಸಿಗೋ OTT ಮತ್ತು ಡೇಟಾ ಬೆನಿಫಿಟ್ಗಳು
ಸ್ವಲ್ಪ ಯೋಚ್ಸಿ ನೋಡಿ – Netflix ಒಂದೇ ತಗೊಳ್ಳೋಕೆ ₹199 ಆಗುತ್ತದೆ. ಅದೇ ಜಾಗದಲ್ಲಿ ₹279 ಗೆ ಇಷ್ಟೆಲ್ಲಾ ಪ್ಲಾಟ್ಫಾರ್ಮ್ ಸಿಗ್ತಿದ್ರೆ, ಬಹಳಷ್ಟು ಜನಕ್ಕೆ ಇದು ಲಾಭದಾಯಕ ಡೀಲ್ ಆಗಿಯೇ ಕಾಣುತ್ತೆ.
ಡೇಟಾ ವಿಚಾರಕ್ಕೆ ಬಂದ್ರೆ, ಇಲ್ಲಿ ಜಾಸ್ತಿ ನಿರೀಕ್ಷೆ ಇಟ್ಕೊಳ್ಳೋದು ಬೇಡ. ಈ ಪ್ಯಾಕ್ನಲ್ಲಿ 30 ದಿನಗಳ ವ್ಯಾಲಿಡಿಟಿಗೆ ಸಿಗೋದು ಕೇವಲ 1GB ಡೇಟಾ. ಇದರಲ್ಲಿ ಕಾಲಿಂಗ್ ಅಥವಾ SMS ಬೆನಿಫಿಟ್ಗಳು ಕೂಡ ಇಲ್ಲ. 1GB ಡೇಟಾ ಮುಗಿದ ನಂತರ ಪ್ರತಿ MBಗೆ ₹0.50 ದರದಲ್ಲಿ ಚಾರ್ಜ್ ಆಗುತ್ತದೆ.
ಆದ್ರೆ ಈ ಪ್ಯಾಕ್ನ ಪ್ರಮುಖ ಆಕರ್ಷಣೆ ಇರೋದು OTT ಬೆನಿಫಿಟ್ಗಳಲ್ಲಿ. 30 ದಿನಗಳವರೆಗೆ Netflix Basic, JioHotstar Super ಮತ್ತು ZEE5 Premium ಜೊತೆಗೆ Airtel Xstream Play Premium ಕೂಡ ಸಿಗುತ್ತದೆ. Xstream Play ಮೂಲಕ SonyLIV, Hoichoi, ErosNow, ShemarooMe, Aha, SunNXT ಸೇರಿದಂತೆ ಇನ್ನೂ 20ಕ್ಕೂ ಹೆಚ್ಚು OTT ಪ್ಲಾಟ್ಫಾರ್ಮ್ಗಳ ಕಂಟೆಂಟ್ ಅನ್ನು ಆಕ್ಸೆಸ್ ಮಾಡಬಹುದು.
Netflix Basicಗೆ ಪ್ರತ್ಯೇಕವಾಗಿ ಸಬ್ಸ್ಕ್ರಿಪ್ಷನ್ ತೆಗೆದುಕೊಳ್ಳುವುದಕ್ಕಿಂತ, ₹279ಕ್ಕೆ ಇಷ್ಟೊಂದು OTT ಸೇವೆಗಳು ಸಿಗುವುದು ಈ ಪ್ಯಾಕ್ನ ಪ್ರಮುಖ ಆಕರ್ಷಣೆಯಾಗಿದೆ. ಆದರೆ ನಿಮಗೆ ಈ ಎಲ್ಲಾ OTT ಪ್ಲಾಟ್ಫಾರ್ಮ್ಗಳ ಅಗತ್ಯವಿದೆಯೇ ಅನ್ನೋದನ್ನು ಗಮನಿಸಿ ರೀಚಾರ್ಜ್ ಮಾಡೋದು ಉತ್ತಮ.
ವೋಚರ್ ಅನ್ನು ಹೇಗೆ ರೀಚಾರ್ಜ್ ಮಾಡೋದು?
1. Airtel Thanks ಆಪ್ ಓಪನ್ ಮಾಡಿ ಅಥವಾ ಏರ್ಟೆಲ್ ಅಧಿಕೃತ ವೆಬ್ಸೈಟ್ಗೆ ಹೋಗಿ
2. ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ
3. Recharge ಆಯ್ಕೆ ಮಾಡಿ ಮತ್ತು ಲಭ್ಯವಿರುವ ಪ್ಲಾನ್ಗಳಲ್ಲಿ ₹279 ವೋಚರ್ ಅನ್ನು ಹುಡುಕಿ.
4. ₹279 ವೋಚರ್ ಸೆಲೆಕ್ಟ್ ಮಾಡಿ (ನಿಮ್ಮ ನಂಬರ್ಗೆ ಲಭ್ಯ ಇದ್ರೆ ಮಾತ್ರ ಕಾಣುತ್ತದೆ)
5. UPI, ಕಾರ್ಡ್ ಅಥವಾ ಲಭ್ಯವಿರುವ ಇತರ ಪೇಮೆಂಟ್ ಆಯ್ಕೆಗಳ ಮೂಲಕ ಪೇಮೆಂಟ್ ಮಾಡಿ ರೀಚಾರ್ಜ್ ಪೂರ್ಣಗೊಳಿಸಿ.
ಈ ಪ್ಯಾಕ್ ಯಾರಿಗೆ ಸೂಕ್ತ?
ದಿನನಿತ್ಯ ಫೋನ್ನಲ್ಲಿ ಜಾಸ್ತಿ ಡೇಟಾ ಬಳಸುವ, ರೀಲ್ಸ್ ನೋಡುವ ಅಥವಾ ವಿಡಿಯೋ ಕಾಲ್ ಮಾಡುವವರಿಗೆ ತಿಂಗಳಿಗೆ 1GB ಡೇಟಾ ಸಾಕಾಗಲ್ಲ. ಆದರೆ ನಿಮ್ಮ ಬಳಿ ಈಗಾಗಲೇ ಒಳ್ಳೆಯ ಡೇಟಾ ಪ್ಲಾನ್ ಇದ್ದು, ಮನೆಯಲ್ಲಿ ವೈ-ಫೈ ಮೂಲಕ Netflix, JioHotstar ಸೇರಿದಂತೆ OTT ಕಂಟೆಂಟ್ಗಳನ್ನು ನೋಡುವ ಅಭ್ಯಾಸವಿದ್ದರೆ, ಈ ವೋಚರ್ ನಿಮಗೆ ಹೆಚ್ಚು ಉಪಯುಕ್ತವಾಗಬಹುದು.
ರೀಚಾರ್ಜ್ ಮಾಡುವ ಮುಂಚೆ ಇದನ್ನು ಗಮನಿಸಿ
ಟೆಲಿಕಾಂ ಪ್ಲಾನ್ಗಳು, ಅದರಲ್ಲೂ OTT ಪ್ಯಾಕ್ಗಳು ಆಗಾಗ ಬದಲಾಗುತ್ತಾ ಇರುತ್ತವೆ. ಕೆಲವೊಮ್ಮೆ ಸರ್ಕಲ್ಗೆ ಅನುಗುಣವಾಗಿ ಬೆನಿಫಿಟ್ಗಳಲ್ಲೂ ವ್ಯತ್ಯಾಸ ಇರಬಹುದು. ಹಾಗಾಗಿ ರೀಚಾರ್ಜ್ ಮಾಡುವ ಮುಂಚೆ ಒಮ್ಮೆ Airtel Thanks ಆಪ್ನಲ್ಲಿ ನಿಮ್ಮ ನಂಬರ್ಗೆ ಲಭ್ಯವಿರುವ ಎಕ್ಸಾಕ್ಟ್ ಬೆನಿಫಿಟ್ಗಳನ್ನು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು.
Also Read: Best Phones Under ₹50000 (2026): ಈ 6 ಫೋನ್ಗಳು ನಿಮ್ಮ ಬಜೆಟ್ಗೆ ಪರ್ಫೆಕ್ಟ್!
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
1. ₹279 ಪ್ಲಾನ್ ಅನ್ನು ಪ್ರತ್ಯೇಕವಾಗಿ ರೀಚಾರ್ಜ್ ಮಾಡಬಹುದಾ?
ಇಲ್ಲ. ಇದೊಂದು ಆಡ್-ಆನ್ ಡೇಟಾ ವೋಚರ್. ಹಾಗಾಗಿ ನಿಮ್ಮ ನಂಬರ್ನಲ್ಲಿ ಈಗಾಗಲೇ ಒಂದು ಬೇಸ್ ಪ್ಲಾನ್ ಆಕ್ಟಿವ್ ಇರಲೇಬೇಕು.
2. 1GB ಡೇಟಾ ಖಾಲಿ ಆದ ಮೇಲೆ OTT ಬೆನಿಫಿಟ್ ಇರುತ್ತಾ?
ಹೌದು. Netflix, JioHotstar ಸೇರಿದಂತೆ ಎಲ್ಲಾ OTT ಸಬ್ಸ್ಕ್ರಿಪ್ಷನ್ಗಳು 30 ದಿನಗಳ ವ್ಯಾಲಿಡಿಟಿ ಮುಗಿಯುವವರೆಗೂ ಇರುತ್ತವೆ. ಡೇಟಾ ಖಾಲಿ ಆಗುವುದಕ್ಕೂ OTT ಬೆನಿಫಿಟ್ಗಳಿಗೂ ಸಂಬಂಧವಿಲ್ಲ.
3. ಈ ಪ್ಲಾನ್ನಲ್ಲಿ ಕಾಲಿಂಗ್ ಬೆನಿಫಿಟ್ ಸಿಗುತ್ತಾ?
ಇಲ್ಲ. ಇದು ಡೇಟಾ + OTT ವೋಚರ್ ಮಾತ್ರ. ಕಾಲ್ ಅಥವಾ SMS ಬೆನಿಫಿಟ್ ಇದರಲ್ಲಿ ಸೇರಿಲ್ಲ. ಅದಕ್ಕಾಗಿ ಪ್ರತ್ಯೇಕ ಬೇಸ್ ಪ್ಲಾನ್ ಬೇಕಾಗುತ್ತದೆ.
4. ₹279 ಪ್ಯಾಕ್ ರೀಚಾರ್ಜ್ ಮಾಡಿದ ತಕ್ಷಣ OTT ಬೆನಿಫಿಟ್ ಸಿಗುತ್ತಾ?
ರೀಚಾರ್ಜ್ ಮಾಡಿದ ನಂತರ ಪ್ಯಾಕ್ಗೆ ಸೇರಿದ OTT ಬೆನಿಫಿಟ್ಗಳನ್ನು ಆಕ್ಟಿವೇಟ್/ಕ್ಲೇಮ್ ಮಾಡಿಕೊಳ್ಳಬಹುದು. ಕೆಲವು OTT ಸೇವೆಗಳಿಗೆ ಪ್ರತ್ಯೇಕವಾಗಿ ಆಕ್ಟಿವೇಟ್ ಮಾಡಬೇಕಾಗಬಹುದು.
5. ₹279 ವೋಚರ್ ಅನ್ನು ಎಲ್ಲಿ ರೀಚಾರ್ಜ್ ಮಾಡಬಹುದು?
Airtel Thanks ಆಪ್, ಏರ್ಟೆಲ್ನ ಅಧಿಕೃತ ವೆಬ್ಸೈಟ್ ಅಥವಾ ಹತ್ತಿರದ ಏರ್ಟೆಲ್ ಸ್ಟೋರ್ನಲ್ಲಿ ರೀಚಾರ್ಜ್ ಮಾಡಬಹುದು. ರೀಚಾರ್ಜ್ ಮಾಡುವ ಮುಂಚೆ ನಿಮ್ಮ ನಂಬರ್ಗೆ ಈ ವೋಚರ್ ಲಭ್ಯವಿದೆಯೇ ಎಂದು ಆಪ್ನಲ್ಲಿ ಒಮ್ಮೆ ಚೆಕ್ ಮಾಡಿಕೊಳ್ಳಿ.










