ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Best Phones Under ₹50000 (2026): ಈ 6 ಫೋನ್‌ಗಳು ನಿಮ್ಮ ಬಜೆಟ್‌ಗೆ ಪರ್ಫೆಕ್ಟ್!

Author
Published
22/09/2026
Updated
22/09/2026
Published On: September 22, 2026 5:03 pm
Best Phones Under ₹50000
Google News
Follow Us

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ₹50,000 ಬಜೆಟ್‌ ಸೆಗ್ಮೆಂಟ್‌ ಈಗ ಸಾಕಷ್ಟು ಸ್ಪರ್ಧಾತ್ಮಕವಾಗಿದೆ. ಈ ಹಿಂದೆ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಪೆರಿಸ್ಕೋಪ್ ಕ್ಯಾಮೆರಾ, 10,000mAh ಬ್ಯಾಟರಿ, 165Hz ಡಿಸ್ಪ್ಲೇಯಂತಹ ಫೀಚರ್‌ಗಳು ಈಗ ಈ ಬೆಲೆಯ ಫೋನ್‌ಗಳಲ್ಲೂ ಸಿಗುತ್ತಿವೆ. ಇದರಿಂದ ಗ್ರಾಹಕರಿಗೆ ಅನುಕೂಲ ಆದಂತೆಯೇ, ಯಾವ ಫೋನ್‌ ಖರೀದಿಸಬೇಕು ಎಂಬ ಗೊಂದಲವೂ ಸಹಜವಾಗಿಯೇ ಹೆಚ್ಚಾಗಿದೆ. ಪ್ರತಿ ಫೋನ್‌ ಒಂದೊಂದು ವಿಷಯದಲ್ಲಿ ಮುಂದೆ ಇರುವುದರಿಂದ, ನಿಮಗೆ ಸೂಕ್ತವಾಗುವ ಫೋನ್‌ ಕೂಡ ನಿಮ್ಮ ಬಳಕೆಗೆ ಅನುಗುಣವಾಗಿ ಬದಲಾಗಬಹುದು. ಈ ಲೇಖನದಲ್ಲಿ ₹50,000 ಒಳಗಿನ ಗಮನ ಸೆಳೆಯುತ್ತಿರುವ ಆರು ಫೋನ್‌ಗಳನ್ನು ನೋಡೋಣ.

Best Phones under ₹50000 – ಪ್ರಮುಖ Specs ಹೋಲಿಕೆ

ಫೋನ್ಡಿಸ್ಪ್ಲೇಪ್ರೊಸೆಸರ್ಹಿಂಬದಿ ಕ್ಯಾಮೆರಾಫ್ರಂಟ್ ಕ್ಯಾಮೆರಾಬ್ಯಾಟರಿ & ಚಾರ್ಜಿಂಗ್
POCO X8 Pro Max6.83″ 1.5K AMOLED, 120Hzಮೀಡಿಯಾಟೆಕ್ ಡೈಮೆನ್ಸಿಟಿ 9500s50MP + 8MP20MP9000mAh, 100W
Motorola Edge 70 Pro+ 5G6.8″ ಕ್ವಾಡ್-ಕರ್ವ್ಡ್ AMOLED, 144Hzಮೀಡಿಯಾಟೆಕ್ ಡೈಮೆನ್ಸಿಟಿ 8500 ಎಕ್ಸ್‌ಟ್ರೀಮ್50MP ಟ್ರಿಪಲ್ ಕ್ಯಾಮೆರಾ, 3.5x ಪೆರಿಸ್ಕೋಪ್50MP6500mAh, 90W
Redmi Note 17 Pro Max 5G6.83″ 1.5K AMOLEDಸ್ನ್ಯಾಪ್‌ಡ್ರ್ಯಾಗನ್ 6 ಜೆನ್ 550MP + 8MP32MP10,000mAh, 100W
Redmi Turbo 56.59″ 1.5K AMOLED, 120Hzಮೀಡಿಯಾಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ50MP + 8MP20MP7540mAh, 100W
OnePlus Nord 66.78″ 1.5K AMOLED, 165Hzಸ್ನ್ಯಾಪ್‌ಡ್ರ್ಯಾಗನ್ 8s ಜೆನ್ 450MP + 8MP32MP9000mAh, 80W
Nothing Phone (4a) Pro6.83″ AMOLED, 144Hzಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 450MP + 50MP + 8MP32MP5400mAh, 50W

POCO X8 Pro Max

POCO X8 Pro Max

ಬ್ಯಾಟರಿ ಬಗ್ಗೆ ಹೆಚ್ಚು ಚಿಂತೆ ಮಾಡದೆ ಫೋನ್ ಬಳಸಬೇಕು ಎನ್ನುವವರಿಗೆ ಪೊಕೊ ಈ ಫೋನ್ ಸೂಕ್ತ ಆಯ್ಕೆಯಾಗಬಹುದು. ಭಾರತೀಯ ಮಾರುಕಟ್ಟೆಗಾಗಿ ಇದರಲ್ಲಿ 9000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ನೀಡಲಾಗಿದೆ. ಜಾಗತಿಕ ಮಾಡೆಲ್‌ನ 8500mAh ಸಾಮರ್ಥ್ಯಕ್ಕೆ ಹೋಲಿಸಿದರೆ ಇದು ಇನ್ನಷ್ಟು ದೊಡ್ಡದು. ಇಷ್ಟು ದೊಡ್ಡ ಬ್ಯಾಟರಿಯ ಜೊತೆಗೆ 100W ಚಾರ್ಜಿಂಗ್ ಕೂಡ ಇರುವುದರಿಂದ, ಚಾರ್ಜ್ ಮಾಡಲು ಹೆಚ್ಚು ಸಮಯ ಕಾಯಬೇಕಾಗಿಲ್ಲ.

ಪರ್ಫಾರ್ಮೆನ್ಸ್‌ಗಾಗಿ ಮೀಡಿಯಾಟೆಕ್ ಡೈಮೆನ್ಸಿಟಿ 9500s ಚಿಪ್‌ಸೆಟ್ ಈ ಸೆಗ್ಮೆಂಟ್‌ನ ಅತ್ಯುತ್ತಮ ಪ್ರೊಸೆಸರ್‌ಗಳಲ್ಲಿ ಒಂದಾಗಿದ್ದು, ಬೆಂಚ್‌ಮಾರ್ಕ್ ಟೆಸ್ಟ್‌ಗಳಲ್ಲೂ ಇದು ಪೈಪೋಟಿಯ ಮಾಡೆಲ್‌ಗಳಿಗೆ ಉತ್ತಮ ಸ್ಪರ್ಧೆ ನೀಡುತ್ತದೆ. 6.83 ಇಂಚಿನ 1.5K AMOLED ಡಿಸ್ಪ್ಲೇ ಮತ್ತು IP69K ರೇಟಿಂಗ್ ಕೂಡ ಪ್ರಮುಖ ಫೀಚರ್‌ಗಳಾಗಿವೆ. 12GB RAM + 256GB ವೇರಿಯಂಟ್ ಸದ್ಯ ಮಾರುಕಟ್ಟೆಯಲ್ಲಿ ₹48,999ಕ್ಕೆ ಸಿಗುತ್ತದೆ.

Motorola Edge 70 Pro Plus 5G

Motorola Edge 70 Pro Plus 5G

ಈ ಬಜೆಟ್‌ನಲ್ಲಿ ಹೆಚ್ಚಿನ ಫೋನ್‌ಗಳಲ್ಲಿ ಟೆಲಿಫೋಟೋ ಲೆನ್ಸ್ ಸಿಗುವುದಿಲ್ಲ. ಆದರೆ ಮೊಟೊರೊಲಾ ಎಡ್ಜ್ 70 ಪ್ರೊ ಪ್ಲಸ್‌ನಲ್ಲಿ ಟೆಲಿಫೋಟೋ ಲೆನ್ಸ್ ಕೂಡ ಸಿಗುತ್ತದೆ. ಇದರ ಟ್ರಿಪಲ್ ಕ್ಯಾಮೆರಾ ಸೆಟಪ್‌ನಲ್ಲಿರುವ ಮೂರೂ ಲೆನ್ಸ್‌ಗಳು 50MP ಆಗಿದ್ದು, 3.5x ಆಪ್ಟಿಕಲ್ ಝೂಮ್ ನೀಡುವ ಪೆರಿಸ್ಕೋಪ್ ಲೆನ್ಸ್ ಕೂಡ ಇದೆ. ಸಾಮಾನ್ಯವಾಗಿ ಈ ಫೀಚರ್ ಇನ್ನೂ ದುಬಾರಿ ಫೋನ್‌ಗಳಲ್ಲಿ ಕಾಣಸಿಗುತ್ತವೆ. ಅದರಲ್ಲೂ ₹47,999ಕ್ಕೆ ಈ ಫೀಚರ್ ಸಿಗುವುದು ವಿಶೇಷ.

ಇನ್ನು ಡಿಸ್ಪ್ಲೇ ವಿಚಾರಕ್ಕೆ ಬಂದರೆ, 6.8 ಇಂಚಿನ ಕ್ವಾಡ್-ಕರ್ವ್ಡ್ AMOLED ಪ್ಯಾನೆಲ್ 144Hz ರಿಫ್ರೆಶ್ ರೇಟ್ ಮತ್ತು 5200 ನಿಟ್ಸ್ ಬ್ರೈಟ್‌ನೆಸ್ ಹೊಂದಿದ್ದು, ಬಿಸಿಲಿನಲ್ಲೂ ಸ್ಪಷ್ಟವಾಗಿ ಕಾಣುತ್ತದೆ ಎಂದು ವರದಿಗಳು ಹೇಳುತ್ತವೆ. 6500mAh ಬ್ಯಾಟರಿ ಸಾಮರ್ಥ್ಯ ಈ ಪಟ್ಟಿಯಲ್ಲಿರುವ ಕೆಲವು ಮಾಡೆಲ್‌ಗಳಿಗಿಂತ ಕಡಿಮೆಯಾದರೂ, 90W ಫಾಸ್ಟ್ ಚಾರ್ಜಿಂಗ್ ಇರುವುದರಿಂದ ಚಾರ್ಜಿಂಗ್ ವೇಗದಲ್ಲಿ ಕೊರತೆ ಕಾಣಿಸುವುದಿಲ್ಲ.

Redmi Note 17 Pro Max 5G

Redmi Note 17 Pro Max 5G

ರೆಡ್‌ಮಿ ನೋಟ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ‘Max’ ಹೆಸರಿನ ಮಾಡೆಲ್ ಬಿಡುಗಡೆಯಾಗಿದೆ, ಮತ್ತು ಈ ಹೆಸರಿಗೆ ತಕ್ಕಂತೆ ಬ್ಯಾಟರಿ ಗಾತ್ರವೂ ಇದೆ. 10,000mAh ಬ್ಯಾಟರಿ ಈ ಸೆಗ್ಮೆಂಟ್‌ನಲ್ಲಿ ಸದ್ಯಕ್ಕೆ ಅತಿ ದೊಡ್ಡದು ಎಂದೇ ಹೇಳಬಹುದು. ಇದರ ಜೊತೆಗೆ 100W ಹೈಪರ್‌ಚಾರ್ಜ್ ಇರುವುದರಿಂದ, ಚಾರ್ಜಿಂಗ್ ಸ್ಪೀಡ್ ಬಗ್ಗೆ ಕೂಡ ಚಿಂತೆ ಮಾಡುವ ಅಗತ್ಯವಿಲ್ಲ. ಸ್ನ್ಯಾಪ್‌ಡ್ರ್ಯಾಗನ್ 6 ಜೆನ್ 5 ಪ್ರೊಸೆಸರ್ ಸ್ಟ್ಯಾಂಡರ್ಡ್ ನೋಟ್ 17 ಪ್ರೊ ಫೋನ್‌ನ ಸ್ನ್ಯಾಪ್‌ಡ್ರ್ಯಾಗನ್ 6s ಜೆನ್ 4 ಗಿಂತ ಉತ್ತಮ ಎಂದು ಕಂಪನಿ ಹೇಳಿಕೊಂಡಿದೆ.

3500 ನಿಟ್ಸ್ ಬ್ರೈಟ್‌ನೆಸ್‌ನ 1.5K AMOLED ಡಿಸ್ಪ್ಲೇ, 32MP ಫ್ರಂಟ್ ಕ್ಯಾಮೆರಾ ಮತ್ತು IP69K ರೇಟಿಂಗ್ ಕೂಡ ಸಿಗುತ್ತವೆ. ಒಂದೇ ಕೊರತೆ ಎಂದರೆ ಟೆಲಿಫೋಟೋ ಲೆನ್ಸ್ ನೀಡಿಲ್ಲ. 8GB+256GB ವೇರಿಯಂಟ್‌ಗೆ ₹49,999 ಬೆಲೆ ನಿಗದಿಯಾಗಿದ್ದು, ಸೆಪ್ಟೆಂಬರ್ 23ರಿಂದ ಮಾರಾಟ ಆರಂಭವಾಗಲಿದೆ.

Also Read: 9,000mAh ಬ್ಯಾಟರಿಯ Redmi Note 17 Pro ಲಾಂಚ್; ಭಾರತದಲ್ಲಿ ಬೆಲೆ ₹36,999ರಿಂದ

Redmi Turbo 5

Redmi Turbo 5

ರೆಡ್‌ಮಿ ಇತ್ತೀಚೆಗೆ ಪರಿಚಯಿಸಿದ Turbo ಸರಣಿಯ ಮೊದಲ ಫೋನ್ ಇದು. ಬಜೆಟ್‌ನಲ್ಲೇ ಉತ್ತಮ ಗೇಮಿಂಗ್ ಪರ್ಫಾರ್ಮೆನ್ಸ್ ನೀಡುವುದು ಇದರ ಮುಖ್ಯ ಉದ್ದೇಶ. ಡೈಮೆನ್ಸಿಟಿ 8500 ಅಲ್ಟ್ರಾ ಚಿಪ್‌ಸೆಟ್ ಜೊತೆಗೆ 7540mAh ಬ್ಯಾಟರಿ ನೀಡಲಾಗಿದ್ದು, ದೀರ್ಘ ಗೇಮಿಂಗ್ ಸೆಷನ್‌ಗಳಿಗೆ ಸೂಕ್ತ ಎಂದು ಕಂಪನಿ ಹೇಳಿದೆ. ಬೆಲೆಯ ವಿಚಾರದಲ್ಲೂ ಈ ಫೋನ್‌ ವಿಶೇಷವಾಗಿದೆ. 8GB+256GB ವೇರಿಯಂಟ್ ₹44,999ಕ್ಕೇ ಸಿಗಲಿದ್ದು, ಈ ಪಟ್ಟಿಯಲ್ಲಿರುವ ಇತರ ಫೋನ್‌ಗಳಿಗಿಂತ ಕಡಿಮೆ ಬೆಲೆಯಾಗಿದೆ.

6.59 ಇಂಚಿನ ಡಿಸ್ಪ್ಲೇ ಗಾತ್ರ ಸ್ವಲ್ಪ ಚಿಕ್ಕದಾಗಿ ಕಾಣಿಸಬಹುದು. ಆದರೆ ಕಾಂಪ್ಯಾಕ್ಟ್ ಡಿಸ್ಪ್ಲೇ ಇಷ್ಟಪಡುವವರಿಗೆ ಈ ಗಾತ್ರ ಸರಿಹೋಗಬಹುದು. 50MP ಕ್ಯಾಮೆರಾ ಮತ್ತು 100W ಚಾರ್ಜಿಂಗ್ ಕೂಡ ಇದರ ಪ್ರಮುಖ ಸ್ಪೆಕ್ಸ್‌ಗಳಲ್ಲಿ ಸೇರಿವೆ.

OnePlus Nord 6

OnePlus Nord 6

ಸ್ಮೂತ್ ಸಾಫ್ಟ್‌ವೇರ್ ಮತ್ತು ಪ್ರೀಮಿಯಂ ಫೀಲ್‌ಗೆ ಹೆಸರುವಾಸಿಯಾದ ಒನ್‌ಪ್ಲಸ್, ಈ ಬಾರಿ Nord 6ರಲ್ಲಿ ಡಿಸ್ಪ್ಲೇ ವಿಷಯದಲ್ಲಿ ವಿಶೇಷ ಗಮನ ಕೊಟ್ಟಿದೆ. 165Hz ರಿಫ್ರೆಶ್ ರೇಟ್ ಈ ಬಜೆಟ್‌ನಲ್ಲಿ ಅಪರೂಪವಾಗಿದ್ದು, ಸಾಮಾನ್ಯವಾಗಿ 120Hz ಅಥವಾ 144Hz ರಿಫ್ರೆಶ್ ರೇಟ್ ಹೊಂದಿರುವ ಫೋನ್‌ಗಳ ನಡುವೆ ಇದು ವಿಭಿನ್ನವಾಗಿದೆ. ಸ್ನ್ಯಾಪ್‌ಡ್ರ್ಯಾಗನ್ 8s ಜೆನ್ 4 ಪ್ರೊಸೆಸರ್, 9000mAh ಬ್ಯಾಟರಿ, MIL-STD-810H ಡ್ಯುರಬಿಲಿಟಿ ಸರ್ಟಿಫಿಕೇಶನ್ ಮತ್ತು IP69K ರೇಟಿಂಗ್ ಕೂಡ ಈ ಫೋನ್‌ನಲ್ಲಿವೆ.

8GB+256GB ವೇರಿಯಂಟ್ ಬೆಲೆ ₹46,999 ಆಗಿದ್ದು, ಲಾಂಚ್ ಸಮಯದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿತ್ತು. ಆದರೆ ಮೆಮೊರಿ ಬೆಲೆ ಏರಿಕೆಯ ನಂತರ ಈಗ ಇದರ ಬೆಲೆ ಸ್ವಲ್ಪ ಹೆಚ್ಚಾಗಿದೆ.

Nothing Phone (4a) Pro

Nothing Phone (4a) Pro

ಫೋನ್ ಡಿಸೈನ್ ವಿಷಯದಲ್ಲಿ ನಥಿಂಗ್ ಯಾವಾಗಲೂ ತನ್ನದೇ ಆದ ಲುಕ್‌ಗಾಗಿ ಗುರುತಿಸಿಕೊಂಡಿದೆ. Glyph Matrix ಎಂಬ ಹಿಂಬದಿಯ ಲೈಟಿಂಗ್ ಡಿಸ್‌ಪ್ಲೇ ಈ ಫೋನ್‌ನ ವಿಶೇಷತೆಗಳಲ್ಲಿ ಒಂದಾಗಿದ್ದು, ನೋಟಿಫಿಕೇಶನ್‌ಗಳಿಂದ ಹಿಡಿದು ಟೈಮರ್‌ವರೆಗೆ ಹಲವು ಕೆಲಸಗಳಿಗೆ ಬಳಸಬಹುದು. ಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 4 ಚಿಪ್‌ಸೆಟ್ ಪರ್ಫಾರ್ಮೆನ್ಸ್‌ನಲ್ಲಿ ಪಟ್ಟಿಯಲ್ಲಿರುವ ಕೆಲವು ಫೋನ್‌ಗಳಿಗಿಂತ ಹಿಂದೆ ಇದ್ದರೂ, ಟ್ರಿಪಲ್ 50MP ಕ್ಯಾಮೆರಾ ಸೆಟಪ್‌ನಲ್ಲಿ ಟೆಲಿಫೋಟೋ ಲೆನ್ಸ್ ನೀಡಿರುವುದು ಗಮನಿಸಬಹುದಾದ ವಿಷಯ.

5400mAh ಬ್ಯಾಟರಿ ಈ ಪಟ್ಟಿಯಲ್ಲಿರುವ ಇತರ ಫೋನ್‌ಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. ಆದರೆ 50W ಚಾರ್ಜಿಂಗ್ ಈ ಕೊರತೆಯನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸುತ್ತದೆ. 8GB+256GB ವೇರಿಯಂಟ್ ಸದ್ಯ ₹49,999ಕ್ಕೆ ಸಿಗುತ್ತಿದ್ದು, ಆಫರ್‌ಗಳಿಗೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸವಾಗಬಹುದು.

Also Read: Nothing Phone 4b Review: ₹40,000ದೊಳಗೆ ಈ ಫೋನ್ ಹೇಗಿದೆ?

ಕೊನೆಯ ಮಾತು

ಈ ಆರೂ ಫೋನ್‌ಗಳು ಒಂದೇ ಬಜೆಟ್‌ನಲ್ಲಿ ಬಂದರೂ, ಪ್ರತಿಯೊಂದರಲ್ಲೂ ಬೇರೆ ಬೇರೆ ಫೀಚರ್‌ಗಳಿಗೆ ಆದ್ಯತೆ ನೀಡಲಾಗಿದೆ. ಬ್ಯಾಟರಿ ಬ್ಯಾಕಪ್ ಮುಖ್ಯವಾಗಿದ್ದರೆ ರೆಡ್‌ಮಿ ನೋಟ್ 17 ಪ್ರೊ ಮ್ಯಾಕ್ಸ್ ಮತ್ತು ಪೊಕೊ X8 ಪ್ರೊ ಮ್ಯಾಕ್ಸ್ ನೋಡಬಹುದು. ಕ್ಯಾಮೆರಾ ಗುಣಮಟ್ಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವವರು ಮೊಟೊರೊಲಾ ಎಡ್ಜ್ 70 ಪ್ರೊ ಪ್ಲಸ್ ಮತ್ತು ನಥಿಂಗ್ ಫೋನ್ 4a ಪ್ರೊ ಪರಿಗಣಿಸಬಹುದು. ಕಡಿಮೆ ಬಜೆಟ್‌ನಲ್ಲಿ ಫೋನ್ ಬೇಕಿದ್ದರೆ ರೆಡ್‌ಮಿ ಟರ್ಬೊ 5 ಆಯ್ಕೆಯಿದೆ. ಡಿಸ್ಪ್ಲೇಯಲ್ಲಿ ಹೆಚ್ಚಿನ ರಿಫ್ರೆಶ್ ರೇಟ್ ಬೇಕಿದ್ದರೆ ಒನ್‌ಪ್ಲಸ್ ನಾರ್ಡ್ 6 ಕೂಡ ನೋಡಬಹುದು.

ಹೀಗಾಗಿ ಫೋನ್ ಖರೀದಿಸುವ ಮೊದಲು ನಿಮ್ಮ ಬಳಕೆ ಹೇಗಿದೆ ಮತ್ತು ನಿಮಗೆ ಯಾವ ಫೀಚರ್‌ಗಳು ಮುಖ್ಯ ಎಂಬುದನ್ನು ಮೊದಲು ನಿರ್ಧರಿಸಿ. ನಂತರ ಈ ಪಟ್ಟಿಯಲ್ಲಿರುವ ಫೋನ್‌ಗಳ ಪೈಕಿ ನಿಮಗೆ ಹೊಂದುವ ಮಾಡೆಲ್ ಆಯ್ಕೆ ಮಾಡಿಕೊಳ್ಳಬಹುದು.

(ಗಮನಿಸಿ: ಈ ಲೇಖನದಲ್ಲಿನ ಬೆಲೆಗಳು ಸೆಪ್ಟೆಂಬರ್ 2026ರ ಸಮಯಕ್ಕೆ ಅನುಗುಣವಾಗಿವೆ. ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳಿಗೆ ಅನುಗುಣವಾಗಿ ಬೆಲೆಯಲ್ಲಿ ಬದಲಾವಣೆ ಆಗಬಹುದು. ಖರೀದಿಸುವ ಮೊದಲು ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್‌ನಲ್ಲಿ ಪ್ರಸ್ತುತ ಬೆಲೆಯನ್ನು ಒಮ್ಮೆ ಪರಿಶೀಲಿಸಿ.)

ಪದೇ ಪದೇ ಕೇಳುವ ಪ್ರಶ್ನೆಗಳು (FAQ)

1. ₹50,000 ಬಜೆಟ್‌ನಲ್ಲಿ ಅತಿ ಹೆಚ್ಚು ಬ್ಯಾಟರಿ ಬ್ಯಾಕಪ್ ಕೊಡುವ ಫೋನ್ ಯಾವುದು?

ಇಲ್ಲಿ ಪಟ್ಟಿ ಮಾಡಿದ ಫೋನ್‌ಗಳಲ್ಲಿ ರೆಡ್‌ಮಿ ನೋಟ್ 17 ಪ್ರೊ ಮ್ಯಾಕ್ಸ್ 5G ಮುಂದಿದೆ. 10,000mAh ಬ್ಯಾಟರಿ ಜೊತೆಗೆ 100W ಫಾಸ್ಟ್ ಚಾರ್ಜಿಂಗ್ ಕೂಡ ಇರುವುದರಿಂದ ಬ್ಯಾಕಪ್ ಮತ್ತು ಚಾರ್ಜಿಂಗ್ ವೇಗ ಎರಡೂ ಉತ್ತಮವಾಗಿವೆ. ಪೊಕೊ X8 ಪ್ರೊ ಮ್ಯಾಕ್ಸ್ ಕೂಡ 9000mAh ಬ್ಯಾಟರಿಯೊಂದಿಗೆ ಹತ್ತಿರದ ಪೈಪೋಟಿ ನೀಡುತ್ತದೆ.

2. ಕ್ಯಾಮೆರಾ ಚೆನ್ನಾಗಿರುವ ಫೋನ್ ಯಾವುದು?

ಟೆಲಿಫೋಟೋ ಲೆನ್ಸ್ ಬೇಕು ಎನ್ನುವವರಿಗೆ ಮೊಟೊರೊಲಾ ಎಡ್ಜ್ 70 ಪ್ರೊ ಪ್ಲಸ್ ಸೂಕ್ತ. ಇದರಲ್ಲಿ 3.5x ಆಪ್ಟಿಕಲ್ ಝೂಮ್ ಇರುವ ಪೆರಿಸ್ಕೋಪ್ ಕ್ಯಾಮೆರಾ ಸಿಗುತ್ತದೆ. ನಥಿಂಗ್ ಫೋನ್ 4a ಪ್ರೊ ಕೂಡ ಟ್ರಿಪಲ್ ಕ್ಯಾಮೆರಾ ಸೆಟಪ್‌ನಲ್ಲಿ ಟೆಲಿಫೋಟೋ ಲೆನ್ಸ್ ನೀಡುತ್ತದೆ.

3. ಗೇಮಿಂಗ್‌ಗೆ ಯಾವ ಫೋನ್ ಒಳ್ಳೆಯದು?

ಪೊಕೊ X8 ಪ್ರೊ ಮ್ಯಾಕ್ಸ್ ಮತ್ತು ರೆಡ್‌ಮಿ ಟರ್ಬೊ 5 ಎರಡೂ ಗೇಮಿಂಗ್‌ಗೆ ಉತ್ತಮ ಆಯ್ಕೆಗಳಾಗಿವೆ. ಪೊಕೊದಲ್ಲಿ ಡೈಮೆನ್ಸಿಟಿ 9500s ಚಿಪ್‌ಸೆಟ್ ಇರುವುದರಿಂದ ಪರ್ಫಾರ್ಮೆನ್ಸ್‌ಗೆ ಹೆಚ್ಚು ಒತ್ತು ನೀಡಲಾಗಿದೆ. ರೆಡ್‌ಮಿ ಟರ್ಬೊ 5 ಕಡಿಮೆ ಬೆಲೆಯಲ್ಲೇ ಪರ್ಫಾರ್ಮೆನ್ಸ್ ಮತ್ತು ಬ್ಯಾಟರಿ ವಿಚಾರದಲ್ಲಿ ಒಳ್ಳೆಯ ಆಯ್ಕೆಯಾಗಿದೆ.

4. 165Hz ಅಥವಾ ಹೆಚ್ಚಿನ ರಿಫ್ರೆಶ್ ರೇಟ್ ಡಿಸ್ಪ್ಲೇ ಬೇಕು ಎನ್ನುವವರಿಗೆ ಯಾವ ಫೋನ್ ಸೂಕ್ತ?

ಒನ್‌ಪ್ಲಸ್ ನಾರ್ಡ್ 6ನಲ್ಲಿ 165Hz ರಿಫ್ರೆಶ್ ರೇಟ್ ಡಿಸ್ಪ್ಲೇ ಇದೆ. ಈ ಬಜೆಟ್‌ನಲ್ಲಿ ಬೇರೆ ಯಾವ ಫೋನ್‌ನಲ್ಲೂ 165Hz ರಿಫ್ರೆಶ್ ರೇಟ್ ಸಿಗುವುದಿಲ್ಲ. ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಎರಡರಲ್ಲೂ ಇದು ಸ್ಮೂತ್ ಅನುಭವ ನೀಡುತ್ತದೆ.

5. ಕಡಿಮೆ ಬೆಲೆಯಲ್ಲಿ ಉತ್ತಮ ವ್ಯಾಲ್ಯೂ ಕೊಡುವ ಫೋನ್ ಯಾವುದು?

ರೆಡ್‌ಮಿ ಟರ್ಬೊ 5 ಈ ಪಟ್ಟಿಯಲ್ಲಿ ₹44,999ಕ್ಕೆ ಸಿಗುವ ಫೋನ್‌ಗಳಲ್ಲಿ ಒಂದಾಗಿದೆ. ಇದರ ಪರ್ಫಾರ್ಮೆನ್ಸ್ ಮತ್ತು ಬ್ಯಾಟರಿ ಕೂಡ ಚೆನ್ನಾಗಿವೆ. ಹೆಚ್ಚು ಹಣ ಖರ್ಚು ಮಾಡದೆ ಪರ್ಫಾರ್ಮೆನ್ಸ್‌ಗೆ ಒತ್ತು ಕೊಡುವವರು ಈ ಫೋನ್‌ ನೋಡಬಹುದು.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →