ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Jio Recharge ₹349 ಮತ್ತು ₹399: Canva Pro + Google Gemini ಫ್ರೀ ಆಫರ್ ವಿವರ

Author
Published
23/09/2026
Updated
23/09/2026
Published On: September 23, 2026 7:19 pm
Jio Recharge
Google News
Follow Us

ಇತ್ತೀಚೆಗೆ Jio Recharge ಬೆಲೆಗಳು ಒಂದೊಂದೇ ಸಲ ಜಾಸ್ತಿ ಆಗ್ತಿರೋದ್ರಿಂದ, ಪ್ರತಿಯೊಬ್ಬರೂ ಯಾವ ಪ್ಲಾನ್ ತಗೊಂಡ್ರೆ ದುಡ್ಡಿಗೆ ತಕ್ಕ ಬೆಲೆ ಸಿಗುತ್ತೆ ಅಂತ ಯೋಚ್ನೆ ಮಾಡೋದು ಸಹಜ. ಜಿಯೋ ಕೂಡ ಈ ವಿಷಯದಲ್ಲಿ ಯಾವಾಗ್ಲೂ ಒಂದಲ್ಲ ಒಂದು ಹೊಸ ಆಫರ್‌ಗಳನ್ನು ಪರಿಚಯಿಸುತ್ತಾ ಇರುತ್ತೆ. ಈ ಬಾರಿ ₹349 ಮತ್ತು ₹399 ಪ್ಲಾನ್‌ಗಳ ಜೊತೆಗೆ Canva Pro ಮತ್ತು Google Gemini Pro ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಕೊಡ್ತಾ ಇರೋದ್ರಿಂದ, ಸಾಮಾನ್ಯ ಯೂಸರ್ಸ್ ಮಾತ್ರವಲ್ಲದೆ ಡಿಸೈನರ್ಸ್, ಸ್ಟೂಡೆಂಟ್ಸ್ ಮತ್ತು AI ಟೂಲ್ಸ್ ಬಳಸೋರ ಗಮನವನ್ನೂ ಸೆಳೆಯುತ್ತಿದೆ. ಈ ಆರ್ಟಿಕಲ್‌ನಲ್ಲಿ Jio Recharge ಎರಡು ಪ್ಲಾನ್‌ಗಳಲ್ಲಿ ಏನೇನು ಬೆನಿಫಿಟ್ಸ್ ಇವೆ, ಮತ್ತು ಯಾವ ಪ್ಲಾನ್ ಯಾರಿಗೆ ಸೂಕ್ತ ಅನ್ನೋದನ್ನ ಈಗ ನೋಡೋಣ.

Jio ₹349 ಪ್ಲಾನ್‌ನಲ್ಲಿ ಏನೇನು ಸಿಗುತ್ತೆ?

Jio ₹349

₹349 ಪ್ಲಾನ್ ಅನ್ನೋದು ಜಿಯೋನ “5G + AI + JioHotstar” ಬೆನಿಫಿಟ್‌ಗಳನ್ನು ಒಳಗೊಂಡಿರುವ ಎಂಟ್ರಿ-ಲೆವೆಲ್ ಪ್ಲಾನ್ ಅಂತ ಹೇಳಬಹುದು. ದೊಡ್ಡ ಪ್ರಮಾಣದ ಡೇಟಾ ಬೇಡ, ಆದ್ರೆ ದಿನನಿತ್ಯದ ಬಳಕೆಗೆ ಸಾಕಾಗುವಷ್ಟು ಡೇಟಾ ಬೇಕು ಅಂತ ಇರೋರಿಗೆ ಈ ಪ್ಲಾನ್ ಬಜೆಟ್ ಫ್ರೆಂಡ್ಲಿ ಆಯ್ಕೆ.

ಈ ಪ್ಲಾನ್‌ನ ಜೊತೆ ಕೆಲವು ಸ್ಪೆಷಲ್ ಆಫರ್ ಬೆನಿಫಿಟ್ಸ್ ಕೂಡ ಸೇರಿವೆ. JioAICloud ನಲ್ಲಿ 50GB ಫ್ರೀ ಸ್ಟೋರೇಜ್ ಜೊತೆಗೆ 18 ತಿಂಗಳ Google Gemini Pro Plan ಸಿಗುತ್ತೆ. ಇದ್ರಲ್ಲಿ 5TB ಕ್ಲೌಡ್ ಸ್ಟೋರೇಜ್ ಮತ್ತು Nano Banana ಸೇರಿದಂತೆ ಹಲವು AI ಫೀಚರ್ಸ್ ಇವೆ. ಇದರ ಜೊತೆಗೆ 12 ತಿಂಗಳ Canva Pro Lite ಕೂಡ ಫ್ರೀಯಾಗಿ ಲಭ್ಯವಿದೆ.

ಇಲ್ಲಿ ಒಂದು ವಿಷಯ ಗಮನದಲ್ಲಿಡಿ. ದಿನಕ್ಕೆ ಸಿಗೋ 2GB ಅನ್ನೋದು ನಿಮ್ಮ ಸಾಮಾನ್ಯ ಹೈ-ಸ್ಪೀಡ್ ಡೇಟಾ ಲಿಮಿಟ್. ಇದು ಮುಗಿದ ಮೇಲೆ ಸ್ಪೀಡ್ 64kbps ಗೆ ಕಡಿಮೆಯಾಗುತ್ತೆ. ಆದ್ರೆ ನಿಮ್ಮ ಫೋನ್ True 5G ಸಪೋರ್ಟ್ ಮಾಡೋದಾದ್ರೆ ಮತ್ತು 5G ಕವರೇಜ್ ಇರೋ ಏರಿಯಾದಲ್ಲಿ ಬಳಸಿದ್ರೆ, 5G ಡೇಟಾ ಅನ್‌ಲಿಮಿಟೆಡ್ ಆಗಿರುತ್ತೆ. ಅಂದ್ರೆ ನೀವು ಬಳಸೋ 5G ಡೇಟಾ ಆ 2GB ಕೋಟಾದಲ್ಲಿ ಕೌಂಟ್ ಆಗಲ್ಲ. 5G ಕವರೇಜ್ ಇಲ್ಲದಾಗ 4G ಗೆ ಫಾಲ್ ಬ್ಯಾಕ್ ಆದ್ರೆ ಮಾತ್ರ 2GB ಡೈಲಿ ಲಿಮಿಟ್ ಅನ್ವಯ ಆಗುತ್ತೆ. ಹಾಗಾಗಿ True 5G ಫೋನ್ ಬಳಸ್ತಿರೋ ಮತ್ತು 5G ಕವರೇಜ್ ಇರೋ ಏರಿಯಾದಲ್ಲಿರೋರಿಗೆ ಈ ಪ್ಲಾನ್ ಇನ್ನಷ್ಟು ವ್ಯಾಲ್ಯೂ ಕೊಡುತ್ತೆ.

Jio ₹399 ರೀಚಾರ್ಜ್ ಪ್ಲಾನ್: ಬೆನಿಫಿಟ್ಸ್ ಏನು?

Jio ₹399

₹349 ಪ್ಲಾನ್‌ಗೆ ಹೋಲಿಸಿದ್ರೆ ಕೇವಲ ₹50 ಜಾಸ್ತಿ ಕೊಟ್ಟು ಸ್ವಲ್ಪ ಜಾಸ್ತಿ ಡೇಟಾ ಮತ್ತು ಫುಲ್ Canva Pro ಬೇಕು ಅಂತ ಇರೋರಿಗೆ ಈ ಪ್ಲಾನ್ ಒಳ್ಳೆ ಆಯ್ಕೆ. ಇದರಲ್ಲಿ “CANVA PRO WORTH ₹4000” ಅನ್ನೋ ಆಫರ್ ಇರೋದು ಈ ಪ್ಲಾನ್‌ನ ಪ್ರಮುಖ ಆಕರ್ಷಣೆ.

₹349 ಪ್ಲಾನ್‌ಗಿಂತ ಇಲ್ಲಿ ಇನ್ನೂ ಒಂದೆರಡು ಆಪ್‌ಗಳ ಸೌಲಭ್ಯವೂ ಇದೆ. JioGames Mobile ಮತ್ತು FanCode (JioTV ಮೂಲಕ) ಸೇರ್ಪಡೆಯಾಗಿದ್ದು, JioHotstar ನಲ್ಲಿ Mobile+ Hollywood ಕಂಟೆಂಟ್ ಕೂಡ ನೋಡಬಹುದು.

JioAICloud ನಲ್ಲಿ 50GB ಫ್ರೀ ಸ್ಟೋರೇಜ್ ಮತ್ತು 18 ತಿಂಗಳ Google Gemini Pro Plan ಸಿಗುತ್ತೆ. ಇದ್ರಲ್ಲಿ 5000GB ಸ್ಟೋರೇಜ್ ಮತ್ತು Nano Banana ಸೇರಿದಂತೆ ಹಲವು AI ಫೀಚರ್ಸ್ ಇವೆ. ₹349 ಪ್ಲಾನ್‌ಗಿಂತ ಇಲ್ಲಿರುವ ದೊಡ್ಡ ವ್ಯತ್ಯಾಸ ಅಂದ್ರೆ Canva Pro Lite ಬದಲು ಪೂರ್ತಿ 12 ತಿಂಗಳ Canva Pro ಫ್ರೀಯಾಗಿ ಸಿಗೋದು.

ಕ್ರಿಕೆಟ್ ನೋಡೋರಿಗೆ, ಮೂವೀಸ್ ಸ್ಟ್ರೀಮ್ ಮಾಡೋರಿಗೆ ಮತ್ತು ಗೇಮ್ ಆಡೋರಿಗೆ ಈ ಪ್ಲಾನ್ ಹೆಚ್ಚು ವ್ಯಾಲ್ಯೂ ಕೊಡುತ್ತೆ. True 5G ಕವರೇಜ್ ಇರೋ ಏರಿಯಾದಲ್ಲಿ ಬಳಸಿದ್ರೆ ಡೇಟಾ ಅನ್‌ಲಿಮಿಟೆಡ್ ಆಗಿರುತ್ತೆ. 5G ಕವರೇಜ್ ಇಲ್ಲದಾಗ 4G ಗೆ ಫಾಲ್ ಬ್ಯಾಕ್ ಆದ್ರೆ ಮಾತ್ರ ದಿನಕ್ಕೆ 2.5GB ಡೈಲಿ ಲಿಮಿಟ್ ಅನ್ವಯ ಆಗುತ್ತೆ. ಅದು ಮುಗಿದ ಮೇಲೆ ಸ್ಪೀಡ್ 64kbps ಗೆ ಕಡಿಮೆಯಾಗುತ್ತೆ.

Jio ಆಫರ್ ಆಕ್ಟಿವೇಟ್ ಮಾಡೋದು ಹೇಗೆ?

ಹೇಗೆ ಪಡೆಯೋದು:

  • ಅರ್ಹತೆ ಇರೋ ಪ್ಲಾನ್ (₹349 ಅಥವಾ ₹399) ರೀಚಾರ್ಜ್ ಮಾಡಿ
  • JioHotstar, JioGames, JioAICloud ಆಪ್‌ಗಳಿಗೆ ಅದೇ ಜಿಯೋ ನಂಬರ್‌ನಿಂದ ಲಾಗಿನ್ ಆಗಿ. ಈ ಬೆನಿಫಿಟ್ಸ್ ಆಟೋಮ್ಯಾಟಿಕ್ ಆಗಿ ಆಕ್ಟಿವ್ ಆಗುತ್ತೆ.
  • Canva ಬೆನಿಫಿಟ್‌ಗೆ ಮಾತ್ರ MyJio ಆಪ್‌ನ ಹೋಂ ಸ್ಕ್ರೀನ್‌ನಲ್ಲಿ ಕಾಣಿಸೋ ಬ್ಯಾನರ್ ಟ್ಯಾಪ್ ಮಾಡಿ ಪ್ರತ್ಯೇಕವಾಗಿ ರಿಜಿಸ್ಟರ್ ಆಗ್ಬೇಕು

ಗಮನಿಸಬೇಕಾದ ನಿಯಮಗಳು:

  • ಪ್ರತಿ ಯುನಿಕ್ ಮೊಬೈಲ್ ನಂಬರ್‌ಗೆ ಒಂದೇ ಸಲ ಮಾತ್ರ ಆಫರ್ ಕ್ಲೈಮ್ ಮಾಡಬಹುದು
  • ಈ ಮೊದಲು Canva ಪ್ರೀಮಿಯಂಗೆ ಎಂದೂ ಪೇ ಮಾಡದೇ ಇರೋರಿಗೆ ಮಾತ್ರ Canva ಆಫರ್ ಸಿಗುತ್ತೆ
  • ಬೆನಿಫಿಟ್ಸ್ ಮುಂದುವರಿಸಬೇಕು ಅಂದ್ರೆ ಇಡೀ ಆಫರ್ ಪೀರಿಯಡ್‌ನಲ್ಲಿ ನಿಮ್ಮ ನಂಬರ್ ಅರ್ಹತೆ ಇರೋ ಪ್ಲಾನ್‌ನಲ್ಲೇ ಕಂಟಿನ್ಯೂಸ್ ಆಗಿ ಆಕ್ಟಿವ್ ಆಗಿರಬೇಕು. ಇಲ್ಲದಿದ್ರೆ ಆ ಬೆನಿಫಿಟ್ಸ್ ನಿಂತು ಹೋಗುತ್ತೆ
  • JioHotstar ಮುಂದುವರಿಸೋಕೆ ಪ್ಲಾನ್ ಮುಗಿಯುವ 48 ಗಂಟೆಗಳ ಒಳಗೆ ರೀಚಾರ್ಜ್ ಮಾಡಬೇಕು

Jio Recharge ₹349 vs ₹399 — ವಿವರವಾದ ಹೋಲಿಕೆ

ವಿವರಗಳು₹349 ಪ್ಲಾನ್₹399 ಪ್ಲಾನ್
ದಿನದ ಹೈ-ಸ್ಪೀಡ್ ಡೇಟಾ (4G)2GB2.5GB
True 5G ಡೇಟಾಅನ್‌ಲಿಮಿಟೆಡ್ಅನ್‌ಲಿಮಿಟೆಡ್
ಒಟ್ಟು ಡೇಟಾ56GB70GB
ವ್ಯಾಲಿಡಿಟಿ28 ದಿನ28 ದಿನ
ಕಾಲಿಂಗ್ / SMSಅನ್‌ಲಿಮಿಟೆಡ್ / 100 ದಿನಕ್ಕೆಅನ್‌ಲಿಮಿಟೆಡ್ / 100 ದಿನಕ್ಕೆ
Canva ಬೆನಿಫಿಟ್Pro Lite (₹1,590 ಮೌಲ್ಯ)Pro (₹4,000 ಮೌಲ್ಯ)
Google Gemini18 ತಿಂಗಳ Pro (₹35,100 ಮೌಲ್ಯ)18 ತಿಂಗಳ Pro (₹35,100 ಮೌಲ್ಯ)
JioAICloud50GB ಫ್ರೀ50GB ಫ್ರೀ
ಬೇರೆ ಆಪ್ ಬೆನಿಫಿಟ್JioTV, JioHotstar (Mobile)JioTV, JioGames, FanCode, JioHotstar (Mobile+ Hollywood)

ಎರಡೂ ಪ್ಲಾನ್‌ಗಳಲ್ಲಿ True 5G ಡೇಟಾ ಅನ್‌ಲಿಮಿಟೆಡ್ ಇರೋದ್ರಿಂದ ಮತ್ತು Google Gemini ಆಫರ್ ಒಂದೇ ಥರ ಇರೋದ್ರಿಂದ, ವ್ಯತ್ಯಾಸ ಇರೋದು ಮುಖ್ಯವಾಗಿ 4G ಡೈಲಿ ಡೇಟಾ ಪ್ರಮಾಣ, Canva ಟೈರ್ ಮತ್ತು OTT/ಗೇಮಿಂಗ್ ಆಪ್ ಬೆನಿಫಿಟ್‌ಗಳಲ್ಲಿ ಮಾತ್ರ. ₹50 ಜಾಸ್ತಿ ಕೊಟ್ರೆ ಫುಲ್ Canva Pro, ಜಾಸ್ತಿ 4G ಡೇಟಾ ಜೊತೆಗೆ FanCode ಮತ್ತು JioGames ಥರದ ಎಕ್ಸ್ಟ್ರಾ ಆಪ್ ಬೆನಿಫಿಟ್ಸ್ ಸಿಗುತ್ತೆ. ಹೀಗಾಗಿ ಹೆಚ್ಚುವರಿ ಬೆನಿಫಿಟ್ಸ್ ಬೇಕಿರೋರಿಗೆ ₹399 ಪ್ಲಾನ್ ಸೂಕ್ತವಾಗಬಹುದು.

ಯಾವ ಪ್ಲಾನ್ ಯಾರಿಗೆ ಸೂಕ್ತ?

5G ಕವರೇಜ್ ಇಲ್ಲದ ಏರಿಯಾದಲ್ಲಿ ಇದ್ದು 4G ಮೇಲೇ ಜಾಸ್ತಿ ಡಿಪೆಂಡ್ ಆಗೋರಿಗೆ ಮತ್ತು ಬಜೆಟ್ ಟೈಟ್ ಇರೋರಿಗೆ ₹349 ಪ್ಲಾನ್ ಸಾಕಾಗಬಹುದು. Canva Pro Lite ಮತ್ತು Google Gemini Pro ಎರಡೂ ಇರೋದ್ರಿಂದ, ಆಗಾಗ ಸಿಂಪಲ್ ಡಿಸೈನ್ ಮಾಡೋರಿಗೆ ಮತ್ತು AI ಟೂಲ್ಸ್ ಟ್ರೈ ಮಾಡೋರಿಗೆ ಇದು ಒಳ್ಳೆ ಆಯ್ಕೆ.

OTT ಪ್ಲಾಟ್‌ಫಾರ್ಮ್‌ಗಳಿಗಾಗಿ ಕಡಿಮೆ ಬಜೆಟ್‌ನಲ್ಲಿ ಪ್ಲಾನ್ ಹುಡುಕ್ತಿದ್ರೆ, Airtel ₹279 OTT Pack ಬಗ್ಗೆ ಒಮ್ಮೆ ನೋಡಿ.

ಇನ್ನು True 5G ಕವರೇಜ್ ಇರೋ ಏರಿಯಾದಲ್ಲಿ ಇರೋರಿಗೆ ಎರಡೂ ಪ್ಲಾನ್‌ಗಳಲ್ಲಿ ಡೇಟಾ ಬಗ್ಗೆ ಅಷ್ಟಾಗಿ ಟೆನ್ಷನ್ ಇರಲ್ಲ. ಆದ್ರೆ JioHotstar ಅಥವಾ FanCode ನಲ್ಲಿ ಕ್ರಿಕೆಟ್, ಮೂವೀಸ್ ನೋಡೋರಿಗೆ, ಗೇಮ್ ಆಡೋರಿಗೆ, ಫ್ರೀಲಾನ್ಸ್ ಡಿಸೈನರ್ಸ್ ಮತ್ತು ಕಂಟೆಂಟ್ ಕ್ರಿಯೇಟರ್ಸ್‌ಗೆ ₹399 ಪ್ಲಾನ್‌ನ ಹೆಚ್ಚುವರಿ ಬೆನಿಫಿಟ್ಸ್ ಹೆಚ್ಚು ಸೂಕ್ತ. ಫುಲ್ Canva Proನ AI ಟೂಲ್ಸ್ ಮತ್ತು ಹೆಚ್ಚುವರಿ ಸ್ಟೋರೇಜ್ ಪ್ರೊಫೆಷನಲ್ ಕೆಲಸಗಳಿಗೆ ಸಹಾಯ ಆಗುತ್ತೆ.

ಕೊನೆಯ ಮಾತು

₹349 ಮತ್ತು ₹399 ಎರಡೂ ಪ್ಲಾನ್‌ಗಳು ಒಳ್ಳೆ ಬಜೆಟ್ ಆಪ್ಷನ್ ಆಗಿದ್ದು, True 5G ಡೇಟಾ ಅನ್‌ಲಿಮಿಟೆಡ್ ಇರೋದು ಇವುಗಳ ದೊಡ್ಡ ಪ್ಲಸ್ ಪಾಯಿಂಟ್. Canva ಮತ್ತು Google Gemini ಆಫರ್ ಸೇರಿದ ಮೇಲಂತೂ ಇವುಗಳ ವ್ಯಾಲ್ಯೂ ಇನ್ನೂ ಜಾಸ್ತಿ ಆಗಿದೆ. ನಿಮ್ಮ ಡೇಟಾ ಬಳಕೆ, 5G ಕವರೇಜ್, ಡಿಸೈನ್ ಅಗತ್ಯ, AI ಟೂಲ್ ಬಳಕೆ ಮತ್ತು ಸ್ಟ್ರೀಮಿಂಗ್ ಹವ್ಯಾಸಕ್ಕೆ ತಕ್ಕಂತೆ ಪ್ಲಾನ್ ಆಯ್ಕೆ ಮಾಡಬಹುದು. ಆಫರ್ ಬೆನಿಫಿಟ್ ಮುಂದುವರಿಸಬೇಕು ಅಂದ್ರೆ ಪ್ಲಾನ್ ಆಕ್ಟಿವ್ ಆಗಿ ಇಡೋದನ್ನ ಮರೀಬೇಡಿ.

(ಗಮನಿಸಿ: ಪ್ಲಾನ್ ಬೆಲೆ, ಡೇಟಾ ಮತ್ತು ಆಫರ್ ಷರತ್ತುಗಳು ಸಮಯಕ್ಕೆ ತಕ್ಕಂತೆ ಬದಲಾಗಬಹುದು. ರೀಚಾರ್ಜ್ ಮಾಡುವ ಮುನ್ನ MyJio ಆಪ್ ಅಥವಾ Jio ವೆಬ್‌ಸೈಟ್‌ನಲ್ಲಿ ಲೇಟೆಸ್ಟ್ ಡೀಟೇಲ್ಸ್ ಒಮ್ಮೆ ಚೆಕ್ ಮಾಡಿಕೊಳ್ಳಿ.)

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →