ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

iPhone 18 Pro: ₹1,64,900 ಬೆಲೆ, A20 Pro, 48MP ಕ್ಯಾಮೆರಾ

Author
Published
24/08/2026
Updated
13/09/2026
Published On: August 24, 2026 4:48 pm
iPhone 18 Pro
Google News
Follow Us

ಆಪಲ್ ತನ್ನ ವಾರ್ಷಿಕ “Surprise and Shine” ಈವೆಂಟ್‌ನಲ್ಲಿ ಸೆಪ್ಟೆಂಬರ್ 9, 2026ರಂದು ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ (iPhone 18 Pro ಮತ್ತು iPhone 18 Pro Max) ಅನ್ನು ಅಧಿಕೃತವಾಗಿ ಪರಿಚಯಿಸಿದೆ. ಇದೇ ಈವೆಂಟ್‌ನಲ್ಲಿ ಆಪಲ್‌ನ ಮೊದಲ ಫೋಲ್ಡೆಬಲ್ ಫೋನ್ iPhone Duo, Apple Watch Series 12, Apple Watch Ultra 4 ಮತ್ತು AirPods 5 ಕೂಡ ಬಿಡುಗಡೆಯಾಗಿವೆ.

ಈ ಬಾರಿ ಆಪಲ್ ತನ್ನ ಐಫೋನ್ ಬಿಡುಗಡೆ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಿದೆ. ಸಾಮಾನ್ಯ ಐಫೋನ್ 18 ಮತ್ತು ಕೈಗೆಟುಕುವ ಐಫೋನ್ 18e ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗದೆ, 2027ರ ಆರಂಭದಲ್ಲಿ ಪ್ರತ್ಯೇಕವಾಗಿ ಬರಲಿವೆ. ಈ ಬಾರಿ ಸೆಪ್ಟೆಂಬರ್ ಈವೆಂಟ್‌ನಲ್ಲಿ ಪ್ರೊ ಮಾದರಿಗಳಿಗೆ ಮಾತ್ರ ಆದ್ಯತೆ ಸಿಕ್ಕಿದೆ.

ಬಿಡುಗಡೆ ದಿನಾಂಕ ಮತ್ತು ಲಭ್ಯತೆ

iPhone 18 Pro Launch

ಆಪಲ್ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಅನ್ನು ಸೆಪ್ಟೆಂಬರ್ 9, 2026ರಂದು ಅಧಿಕೃತವಾಗಿ ಪರಿಚಯಿಸಿದೆ. ಭಾರತದಲ್ಲಿ ಈ ಎರಡೂ ಮಾದರಿಗಳ ಪ್ರೀ-ಆರ್ಡರ್ ಸೆಪ್ಟೆಂಬರ್ 12, 2026ರಂದು ಸಂಜೆ 5:30ಕ್ಕೆ ಆರಂಭವಾಗಿದ್ದು, ಸೆಪ್ಟೆಂಬರ್ 18, 2026ರಿಂದ ಮಾರಾಟಕ್ಕೆ ಲಭ್ಯವಾಗಲಿವೆ. 

ಡಿಸೈನ್: ಚಿಕ್ಕದಾದ ಡೈನಾಮಿಕ್ ಐಲ್ಯಾಂಡ್

ಈ ಸರಣಿಯಲ್ಲಿ ಚಿಕ್ಕದಾದ ಡೈನಾಮಿಕ್ ಐಲ್ಯಾಂಡ್ ನೀಡಲಾಗಿದೆ. ಪ್ರೊ ಮಾದರಿಯಲ್ಲಿ 6.3-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇ ಇದ್ದರೆ, ಪ್ರೊ ಮ್ಯಾಕ್ಸ್ ಮಾದರಿಯಲ್ಲಿ 6.9-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇ ಇದೆ. ಎರಡೂ ಮಾದರಿಗಳಲ್ಲಿ ಪ್ರೊಮೋಷನ್ ಮತ್ತು ಆಲ್ವೇಸ್-ಆನ್ ಡಿಸ್ಪ್ಲೇ ಫೀಚರ್‌ಗಳು ಮುಂದುವರಿದಿವೆ.

ಬಣ್ಣಗಳ ಆಯ್ಕೆಗಳಲ್ಲಿ ಬ್ಲ್ಯಾಕ್, ಸಿಲ್ವರ್, ಗ್ಲೇಸಿಯರ್ ಮತ್ತು ಬರ್ಗಂಡಿ ಸೇರಿವೆ. ವಿಶೇಷವಾಗಿ ಬರ್ಗಂಡಿ ಬಣ್ಣವು ಈ ಬಾರಿ ಹೊಸ ಆಯ್ಕೆಯಾಗಿ ಗಮನ ಸೆಳೆಯುತ್ತದೆ.

ಚಿಪ್: A20 Pro – ಆಪಲ್‌ನ ಮೊದಲ 2nm ಚಿಪ್ 

ಐಫೋನ್ 18 ಪ್ರೊ ಸರಣಿಯಲ್ಲಿ ಎ20 ಪ್ರೊ ಚಿಪ್ ಬಂದಿದೆ. ಇದು ಆಪಲ್‌ನ ಮೊದಲ 2-ನ್ಯಾನೋಮೀಟರ್ ಚಿಪ್ ಆಗಿದೆ. ಎ20 ಪ್ರೊ (A20 Pro) ಚಿಪ್ 6-ಕೋರ್ CPU, 7-ಕೋರ್ ಜಿಪಿಯು ಮತ್ತು ಡ್ಯುಯಲ್ 16-ಕೋರ್ ನ್ಯೂರಲ್ ಎಂಜಿನ್ (Neural Engine) ಹೊಂದಿದೆ. ಎ19 ಪ್ರೊಗೆ (A19 Pro) ಹೋಲಿಸಿದರೆ GPU 40% ವೇಗವಾಗಿದೆ ಎಂದು ಹೇಳಲಾಗಿದೆ.

ಇದರೊಂದಿಗೆ ಹೊಸ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಂ ಕೂಡ ಬಂದಿದೆ. ಇದು ಐಫೋನ್ 17 ಪ್ರೊಗೆ ಹೋಲಿಸಿದರೆ ಮೂರುಪಟ್ಟು ದೊಡ್ಡ ಸರ್ಫೇಸ್ ಏರಿಯಾ ಹೊಂದಿದೆ. ಇದರಿಂದ ದೀರ್ಘಕಾಲ ಗೇಮಿಂಗ್ ಅಥವಾ ವೀಡಿಯೊ ಎಡಿಟಿಂಗ್ ಮಾಡುವಾಗ 40% ಉತ್ತಮ ಸಸ್ಟೇನ್ಡ್ ಪರ್ಫಾರ್ಮೆನ್ಸ್ ಪಡೆಯಬಹುದು ಎಂದು ಆಪಲ್ ಹೇಳಿದೆ.

ಕ್ಯಾಮೆರಾ: ಮೆಕ್ಯಾನಿಕಲ್ ವೇರಿಯೇಬಲ್ ಅಪರ್ಚರ್

iPhone 18 Pro Camera

“ಮೆಕ್ಯಾನಿಕಲ್ ಐರಿಸ್” ಫೀಚರ್ ಐಫೋನ್ 18 ಪ್ರೊ ಸರಣಿಯಲ್ಲಿ ಅಧಿಕೃತವಾಗಿ ಬಂದಿದೆ. ಮುಖ್ಯ 48MP ಫ್ಯೂಷನ್ ಕ್ಯಾಮೆರಾದಲ್ಲಿ ಆರು ಲೇಸರ್-ಕಟ್ ಬ್ಲೇಡ್‌ಗಳ ಮೂಲಕ f/1.48ರಿಂದ f/4ವರೆಗೆ ಬದಲಾಗುವ ವೇರಿಯೇಬಲ್ ಅಪರ್ಚರ್ ನೀಡಲಾಗಿದೆ. ಇದು ಮ್ಯಾನುವಲ್ ಕಂಟ್ರೋಲ್‌ಗೂ ಅವಕಾಶ ನೀಡುತ್ತದೆ.

ಇದರೊಂದಿಗೆ 48MP ಅಲ್ಟ್ರಾ-ವೈಡ್ ಮತ್ತು 48MP ಟೆಲಿಫೋಟೋ ಕ್ಯಾಮೆರಾಗಳಿವೆ. ಮುಂಭಾಗದಲ್ಲಿ 18MP ಸೆಂಟರ್ ಸ್ಟೇಜ್ (Center Stage) ಸೆಲ್ಫಿ ಕ್ಯಾಮೆರಾ ಇದೆ.

RAM, ಸ್ಟೋರೇಜ್ ಮತ್ತು ಬ್ಯಾಟರಿ

ಎರಡೂ Pro ಮಾದರಿಗಳಲ್ಲಿ 12GB RAM ಇದೆ. ಬೇಸ್ ಸ್ಟೋರೇಜ್ 256GB ಆಗಿದ್ದು, ಮೊದಲ ಬಾರಿಗೆ Pro ಸರಣಿಯಲ್ಲಿ 2TB ಸ್ಟೋರೇಜ್ ಆಯ್ಕೆಯೂ ಸಿಕ್ಕಿದೆ. ಒಟ್ಟು ಸ್ಟೋರೇಜ್ ಆಯ್ಕೆಗಳಲ್ಲಿ 256GB, 512GB, 1TB ಮತ್ತು 2TB ಸೇರಿವೆ.

ಬ್ಯಾಟರಿ ಬಾಳಿಕೆಯಲ್ಲೂ ಸುಧಾರಣೆ ಕಂಡುಬಂದಿದೆ. ಹಿಂದಿನ 17 Pro ಮಾದರಿಯಲ್ಲಿ 33 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಇದ್ದರೆ, ಹೊಸ ಮಾದರಿಯಲ್ಲಿ ಇದು 36 ಗಂಟೆಗಳಿಗೆ ಏರಿಕೆಯಾಗಿದೆ. ಪ್ರೊ ಮ್ಯಾಕ್ಸ್ ಮಾದರಿಯು 45 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ನೀಡುತ್ತದೆ.

iPhone 18 Pro ಬೆಲೆ ಮತ್ತು ವೇರಿಯಂಟ್‌ಗಳು

iPhone 18 Pro ಬೆಲೆ

iPhone 18 ಪ್ರೊ ಸರಣಿಯ ಆರಂಭಿಕ ಬೆಲೆ ಭಾರತದಲ್ಲಿ ಕಳೆದ ವರ್ಷದ ಮಾದರಿಗಳಿಗಿಂತ ₹30,000 ಹೆಚ್ಚಾಗಿದೆ. 256GB ಸ್ಟೋರೇಜ್ ಹೊಂದಿರುವ ಪ್ರೊ ಮಾದರಿಯ ಬೆಲೆ ₹1,64,900 ಆಗಿದ್ದರೆ, ಪ್ರೊ ಮ್ಯಾಕ್ಸ್ ₹1,79,900ರಿಂದ ಆರಂಭವಾಗುತ್ತದೆ.

ಬೇಸ್ ಸ್ಟೋರೇಜ್ 256GB ಆಗಿದ್ದು, 512GB, 1TB ಮತ್ತು 2TB ಆಯ್ಕೆಗಳೂ ಲಭ್ಯವಿವೆ. 2TB ವೇರಿಯಂಟ್‌ಗೆ ಪ್ರೊ ಮಾದರಿಯ ಬೆಲೆ ₹3,14,900 ಮತ್ತು ಪ್ರೊ ಮ್ಯಾಕ್ಸ್ ಬೆಲೆ ₹3,29,900 ಆಗಿದೆ.

ಐಫೋನ್ 18 ಪ್ರೊ vs ಐಫೋನ್ 18 ಪ್ರೊ ಮ್ಯಾಕ್ಸ್: ಹೋಲಿಕೆ

ಫೀಚರ್ಐಫೋನ್ 18 ಪ್ರೊಐಫೋನ್ 18 ಪ್ರೊ ಮ್ಯಾಕ್ಸ್
ಡಿಸ್ಪ್ಲೇ6.3-ಇಂಚು Super Retina XDR6.9-ಇಂಚು Super Retina XDR
ರಿಫ್ರೆಶ್ ರೇಟ್120Hz ProMotion120Hz ProMotion
ಚಿಪ್A20 ProA20 Pro
RAM12GB12GB
ಹಿಂಬದಿಯ ಕ್ಯಾಮೆರಾ48MP + 48MP + 48MP48MP + 48MP + 48MP
ಮುಖ್ಯ ಕ್ಯಾಮೆರಾ48MP Fusion, ವೇರಿಯೇಬಲ್ ಅಪರ್ಚರ್48MP Fusion, ವೇರಿಯೇಬಲ್ ಅಪರ್ಚರ್
ಅಲ್ಟ್ರಾ-ವೈಡ್48MP48MP
ಟೆಲಿಫೋಟೋ48MP48MP
ಸೆಲ್ಫಿ ಕ್ಯಾಮೆರಾ18MP ಸೆಂಟರ್ ಸ್ಟೇಜ್18MP ಸೆಂಟರ್ ಸ್ಟೇಜ್
ಸ್ಟೋರೇಜ್256GB, 512GB, 1TB, 2TB256GB, 512GB, 1TB, 2TB
ವೀಡಿಯೊ ಪ್ಲೇಬ್ಯಾಕ್36 ಗಂಟೆಗಳವರೆಗೆ45 ಗಂಟೆಗಳವರೆಗೆ
ಬಣ್ಣಗಳುಬ್ಲ್ಯಾಕ್, ಸಿಲ್ವರ್, ಗ್ಲೇಸಿಯರ್, ಬರ್ಗಂಡಿಬ್ಲ್ಯಾಕ್, ಸಿಲ್ವರ್, ಗ್ಲೇಸಿಯರ್, ಬರ್ಗಂಡಿ
ಆರಂಭಿಕ ಬೆಲೆ₹1,64,900₹1,79,900

ಪದೇ ಪದೇ ಕೇಳುವ ಪ್ರಶ್ನೆಗಳು (FAQ)

01. ಐಫೋನ್ 18 ಪ್ರೊ ಭಾರತದಲ್ಲಿ ಯಾವಾಗ ಸಿಗುತ್ತದೆ?

ಪ್ರೀ-ಆರ್ಡರ್ ಸೆಪ್ಟೆಂಬರ್ 12ರಂದು ಆರಂಭವಾಗಿದ್ದು, ಮಾರಾಟ ಸೆಪ್ಟೆಂಬರ್ 18ರಿಂದ ಆರಂಭವಾಗುತ್ತದೆ.

02. ಸಾಮಾನ್ಯ ಐಫೋನ್ 18 ಈಗ ಬರುತ್ತದೆಯೇ?

ಇಲ್ಲ. ಐಫೋನ್ 18 ಮತ್ತು ಐಫೋನ್ 18ಇ 2027ರ ಆರಂಭದಲ್ಲಿ ಪ್ರತ್ಯೇಕ ಈವೆಂಟ್‌ನಲ್ಲಿ ಬಿಡುಗಡೆಯಾಗಲಿವೆ.

03. ಐಫೋನ್ 18 ಪ್ರೊನ ಅತಿ ದೊಡ್ಡ ಹೊಸ ಫೀಚರ್ ಯಾವುದು?

ವೇರಿಯೇಬಲ್ ಅಪರ್ಚರ್ ಇರುವ ಮುಖ್ಯ ಕ್ಯಾಮೆರಾ ಮತ್ತು A20 Pro 2nm ಚಿಪ್ ಪ್ರಮುಖ ಹೊಸ ಫೀಚರ್‌ಗಳಾಗಿವೆ.

04. ಐಫೋನ್ 18 ಪ್ರೊ ಮತ್ತು ಪ್ರೊ ಮ್ಯಾಕ್ಸ್ ನಡುವೆ ಪ್ರಮುಖ ವ್ಯತ್ಯಾಸ?

ಐಫೋನ್ 18 ಪ್ರೊ ಮ್ಯಾಕ್ಸ್‌ನಲ್ಲಿ 6.9-ಇಂಚಿನ ದೊಡ್ಡ ಡಿಸ್ಪ್ಲೇ ಜೊತೆಗೆ ಹೆಚ್ಚು ಬ್ಯಾಟರಿ ಬಾಳಿಕೆ ಸಿಗುತ್ತದೆ. ಐಫೋನ್ 18 ಪ್ರೊ 6.3-ಇಂಚಿನ ಡಿಸ್ಪ್ಲೇ ಹೊಂದಿದೆ. ಇದನ್ನು ಹೊರತುಪಡಿಸಿ, ಎರಡೂ ಫೋನ್‌ಗಳಲ್ಲಿರುವ ಪ್ರಮುಖ ಫೀಚರ್‌ಗಳು ಬಹುತೇಕ ಒಂದೇ ಆಗಿವೆ.

05. ಐಫೋನ್ 18 ಪ್ರೊನಲ್ಲಿ ಎಷ್ಟು ಸ್ಟೋರೇಜ್ ಆಯ್ಕೆಗಳಿವೆ?

ಐಫೋನ್ 18 ಪ್ರೊ ಸರಣಿಯಲ್ಲಿ 256GB, 512GB, 1GB ಮತ್ತು 2GB ಸ್ಟೋರೇಜ್ ಆಯ್ಕೆಗಳಿವೆ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →