ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Samsung Galaxy F70 5G: ₹19,999ಕ್ಕೆ ಏನೆಲ್ಲ ಸಿಗುತ್ತೆ?

Author
Published
19/10/2026
Updated
19/10/2026
Published On: October 19, 2026 8:50 am
Samsung Galaxy F70 5G
Google News
Follow Us

20 ಸಾವಿರ ರೂಪಾಯಿ ಬಜೆಟ್‌ನಲ್ಲಿ ಸ್ಯಾಮ್‌ಸಂಗ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F70 5G (Samsung Galaxy F70 5G) ಗಮನಿಸಬಹುದಾದ ಹೊಸ ಆಯ್ಕೆಯಾಗಿದೆ. ಈ ಫೋನ್ ಅಕ್ಟೋಬರ್ 18ರಂದು ಭಾರತದಲ್ಲಿ ಬಿಡುಗಡೆಯಾಗಿದೆ. 7.5mm ಸ್ಲಿಮ್ ವಿನ್ಯಾಸ, Super AMOLED ಡಿಸ್ಪ್ಲೇ, OIS ಹೊಂದಿರುವ 50MP ಮುಖ್ಯ ಕ್ಯಾಮೆರಾ ಮತ್ತು 5000mAh ಬ್ಯಾಟರಿ ಇದರ ಪ್ರಮುಖ ಫೀಚರ್‌ಗಳಾಗಿವೆ.

ಇದರ ಆರಂಭಿಕ ಬೆಲೆ ₹19,999 ಆಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿರುವ ಹಲವು ಫೋನ್‌ಗಳ ನಡುವೆ F70 5G ಹೇಗೆ ನಿಲ್ಲುತ್ತದೆ ಎಂಬುದನ್ನೂ ನೋಡಬೇಕಾಗಿದೆ. ಮೊದಲ ಸೇಲ್ ಅಕ್ಟೋಬರ್ 20ರಂದು ಆರಂಭವಾಗಲಿದ್ದು, ಖರೀದಿಸುವ ಮುನ್ನ ಇದರ ಬೆಲೆ, ಫೀಚರ್‌ಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.

Samsung Galaxy F70 5G ಬೆಲೆ ಎಷ್ಟು?

ಮೊದಲು ಬೆಲೆ ವಿಷಯ ನೋಡಿ. 4GB + 128GB ಮಾಡೆಲ್‌ಗೆ ₹19,999, 6GB + 128GB ಮಾಡೆಲ್‌ಗೆ ₹22,999. ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್ ಆಫರ್ ಸೇರಿಸಿದರೆ ಇದು ₹17,999 ಮತ್ತು ₹20,999ಕ್ಕೆ ಇಳಿಯುತ್ತದೆ. ಜಾಹೀರಾತಿನಲ್ಲಿ ದೊಡ್ಡದಾಗಿ ಕಾಣುವ ₹17,999 ಆಫರ್ ಬೆಲೆ ಅಷ್ಟೇ, ಫೋನಿನ ಮೂಲ ಬೆಲೆ ಅಲ್ಲ.

ಮಾರಾಟ ಅಕ್ಟೋಬರ್ 20ರ ಮಧ್ಯಾಹ್ನ 12 ಗಂಟೆಗೆ ಆರಂಭವಾಗುತ್ತದೆ. ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್ ವೆಬ್‌ಸೈಟ್ ಮತ್ತು ಆಯ್ದ ಅಂಗಡಿಗಳಲ್ಲಿ ಸಿಗುತ್ತದೆ. ಬಣ್ಣಗಳು ಎರಡೇ: ವಿವಿಡ್ ವೈಲೆಟ್ ಮತ್ತು ಬೋಲ್ಡ್ ಬ್ಲ್ಯಾಕ್.

Also Read: Samsung Galaxy A08 ಭಾರತದಲ್ಲಿ ಬಿಡುಗಡೆ: ಬೆಲೆ ₹18,499, 6000mAh ಬ್ಯಾಟರಿ, ಫೀಚರ್ಸ್

ಡಿಸ್ಪ್ಲೇ ಮತ್ತು ವಿನ್ಯಾಸ

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 5G ಫೋನ್‌ನಲ್ಲಿ 6.7 ಇಂಚಿನ FHD+ AMOLED ಡಿಸ್ಪ್ಲೇ ಇದೆ. ಇದರ ರೆಸಲ್ಯೂಷನ್ 1080 × 2340 ಪಿಕ್ಸೆಲ್ ಆಗಿದ್ದು, 90Hz ರಿಫ್ರೆಶ್ ರೇಟ್ ಸಿಗುತ್ತದೆ. ಸ್ಕ್ರೀನ್‌ಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಕೂಡ ಇದೆ. ಈ ಬೆಲೆಯಲ್ಲೇ AMOLED ಡಿಸ್ಪ್ಲೇ ಜೊತೆಗೆ ಉತ್ತಮ ಸ್ಕ್ರೀನ್ ರಕ್ಷಣೆ ಸಿಗುವುದು ಒಳ್ಳೆಯ ವಿಚಾರ.

ವಿನ್ಯಾಸದ ವಿಚಾರದಲ್ಲೂ F70 5G ಗಮನ ಸೆಳೆಯುತ್ತದೆ. ಫೋನ್ ಕೇವಲ 7.5mm ದಪ್ಪವಿದ್ದು, ತೂಕ 192 ಗ್ರಾಂ ಇದೆ. ಕೈಯಲ್ಲಿ ಹಿಡಿದಾಗ ಹೆಚ್ಚು ಭಾರ ಅನ್ನಿಸದ ರೀತಿಯ ವಿನ್ಯಾಸ ಇದಾಗಿದೆ. ಜೊತೆಗೆ IP54 ರೇಟಿಂಗ್ ಇರುವುದರಿಂದ ಧೂಳು ಮತ್ತು ನೀರಿನ ಸಣ್ಣ ಸಿಂಪಡಣೆಯಿಂದ ರಕ್ಷಣೆ ಸಿಗುತ್ತದೆ. ಆದರೆ ಇದು ಸಂಪೂರ್ಣ ವಾಟರ್‌ಪ್ರೂಫ್ ಫೋನ್ ಅಲ್ಲ. ಹಾಗಾಗಿ ಫೋನ್ ಅನ್ನು ನೀರಿನಲ್ಲಿ ಮುಳುಗಿಸುವುದು ಸೂಕ್ತವಲ್ಲ.

ಕ್ಯಾಮೆರಾ ಹೇಗಿದೆ?

ಈ ಫೋನಿನ ಪ್ರಮುಖ ಹೈಲೈಟ್ 50MP ಮುಖ್ಯ ಕ್ಯಾಮೆರಾ. ಇದಕ್ಕೆ OIS ಇರುವುದರಿಂದ ಕೈ ಸ್ವಲ್ಪ ಅಲುಗಾಡಿದರೂ ಫೋಟೋ ಮತ್ತು ವಿಡಿಯೋದಲ್ಲಿ ಶೇಕ್ ಕಡಿಮೆಯಾಗುತ್ತದೆ. ರಾತ್ರಿ ಫೋಟೋ ತೆಗೆಯುವಾಗಲೂ ಇದು ಸಹಾಯ ಮಾಡುತ್ತದೆ. Samsung ಇದನ್ನು “No Shake Cam” ಎಂದು ಕರೆಯುತ್ತದೆ. ಜೊತೆಗೆ 5MP ಅಲ್ಟ್ರಾವೈಡ್, 2MP ಮ್ಯಾಕ್ರೋ ಮತ್ತು 13MP ಸೆಲ್ಫಿ ಕ್ಯಾಮೆರಾ ಇದೆ.

ಅಲ್ಟ್ರಾವೈಡ್ ಮತ್ತು ಮ್ಯಾಕ್ರೋ ಕ್ಯಾಮೆರಾಗಳಿಂದ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳದಿರುವುದೇ ಒಳ್ಳೆಯದು. ಸಾಮಾನ್ಯ ಬಳಕೆಗೆ ಅವು ಸಾಕಾಗುತ್ತವೆ. ವಿಡಿಯೋ ರೆಕಾರ್ಡಿಂಗ್ ವಿಷಯದಲ್ಲಿ ಮುಂದೆ ಮತ್ತು ಹಿಂದೆ ಎರಡೂ ಕಡೆ ಗರಿಷ್ಠ 1080p, 30fps ವರೆಗೆ ಮಾತ್ರ ಸಪೋರ್ಟ್ ಇದೆ. 4K ವಿಡಿಯೋ ಸೌಲಭ್ಯ ಇಲ್ಲ.

Also Read: Best Camera Phone Under 20000: ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು

ಪರ್ಫಾರ್ಮೆನ್ಸ್ ಮತ್ತು ಬ್ಯಾಟರಿ ಹೇಗಿದೆ?

ಒಳಗೆ 5nm ಎಕ್ಸಿನೋಸ್ 1330 (Exynos 1330) ಚಿಪ್‌ಸೆಟ್ ಇದೆ. ಸ್ಟೋರೇಜ್ ಕಡಿಮೆಯಾದರೆ ಮೈಕ್ರೋಎಸ್‌ಡಿ ಕಾರ್ಡ್ ಹಾಕಿ ಹೆಚ್ಚಿಸಿಕೊಳ್ಳಬಹುದು. ಇದೇ ಚಿಪ್ ಗ್ಯಾಲಕ್ಸಿ A17 ಮತ್ತು F17ನಲ್ಲೂ ಇದೆ. ಸೋಷಿಯಲ್ ಮೀಡಿಯಾ, ಯೂಟ್ಯೂಬ್ ಮತ್ತು ದಿನನಿತ್ಯದ ಕೆಲಸಗಳಿಗೆ ಪರ್ಫಾರ್ಮೆನ್ಸ್ ಸಾಕಾಗುತ್ತದೆ. ಆದರೆ BGMI ತರಹದ ಭಾರೀ ಗೇಮ್‌ಗಳನ್ನು ಆಡಲು ಇದು ಅಷ್ಟೇನು ಸೂಕ್ತವಲ್ಲ. ಹೆಚ್ಚು ಆ್ಯಪ್‌ಗಳನ್ನು ಬಳಸುವ ಅಭ್ಯಾಸವಿದ್ದರೆ 4GB ಬದಲು 6GB ಮಾಡೆಲ್ ತೆಗೆದುಕೊಳ್ಳುವುದು ಉತ್ತಮ.

ಬ್ಯಾಟರಿ 5000mAh ಇದ್ದು, 25W ಚಾರ್ಜಿಂಗ್ ಸಪೋರ್ಟ್ ಇದೆ. ಇನ್ನೊಂದು ವಿಷಯವೆಂದರೆ 25W ಚಾರ್ಜರ್ ಬಾಕ್ಸ್‌ನಲ್ಲಿ ಸಿಗುವುದಿಲ್ಲ. ಅದನ್ನು ಪ್ರತ್ಯೇಕವಾಗಿ ಖರೀದಿಸಬೇಕು. ಹೀಗಾಗಿ ಫೋನ್ ಖರೀದಿಸುವಾಗ ಚಾರ್ಜರ್ ಬೆಲೆಯನ್ನೂ ಬಜೆಟ್‌ನಲ್ಲಿ ಲೆಕ್ಕ ಹಾಕಿಕೊಳ್ಳುವುದು ಒಳ್ಳೆಯದು.

ಸಾಫ್ಟ್‌ವೇರ್ ಮತ್ತು ಇತರ ಫೀಚರ್‌ಗಳು

ಸರ್ಕಲ್ ಟು ಸರ್ಚ್, ಗೂಗಲ್ ಜೆಮಿನಿ, ಸ್ಯಾಮ್‌ಸಂಗ್ ವಾಲೆಟ್, ಕ್ವಿಕ್ ಶೇರ್, ವಾಯ್ಸ್ ಫೋಕಸ್ ಮತ್ತು ನಾಕ್ಸ್ ಸೆಕ್ಯುರಿಟಿ ಸೇರಿದಂತೆ ಹಲವು ಫೀಚರ್‌ಗಳು ಇವೆ. ಇದರಲ್ಲಿ ಸರ್ಕಲ್ ಟು ಸರ್ಚ್ ದಿನನಿತ್ಯದ ಬಳಕೆಗೆ ಸಾಕಷ್ಟು ಉಪಯುಕ್ತವಾಗಿದೆ. ಅಪ್‌ಡೇಟ್ ವಿಚಾರದಲ್ಲೂ ಸ್ಯಾಮ್‌ಸಂಗ್ ಉತ್ತಮ ಬೆಂಬಲ ನೀಡುತ್ತಿದೆ. ಈ ಫೋನ್‌ಗೆ 4 ವರ್ಷಗಳ ಆಂಡ್ರಾಯ್ಡ್ ಅಪ್‌ಡೇಟ್ ಮತ್ತು 5 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ಸಿಗಲಿದೆ. ಹಾಗಾಗಿ ಫೋನ್ ಅನ್ನು ಹಲವು ವರ್ಷಗಳ ಕಾಲ ಬಳಸಲು ಬಯಸುವವರಿಗೆ ಇದು ಪ್ಲಸ್ ಪಾಯಿಂಟ್ ಆಗಿದೆ.

ಹಾಗಾದರೆ ಯಾರಿಗೆ ಸೂಕ್ತ?

ಹಗುರವಾಗಿರುವ ಫೋನ್, ಉತ್ತಮ ಡಿಸ್ಪ್ಲೇ, OIS ಇರುವ ಕ್ಯಾಮೆರಾ ಮತ್ತು ಸ್ಯಾಮ್‌ಸಂಗ್‌ನ ಸರ್ವಿಸ್ ಸೌಲಭ್ಯ ಬೇಕಿರುವವರಿಗೆ ಗ್ಯಾಲಕ್ಸಿ F70 5G ಒಳ್ಳೆಯ ಆಯ್ಕೆಯಾಗಬಹುದು. ದಿನನಿತ್ಯದ ಬಳಕೆ, ಸೋಷಿಯಲ್ ಮೀಡಿಯಾ, ಯೂಟ್ಯೂಬ್ ಮತ್ತು ಸಾಮಾನ್ಯ ಫೋಟೋ-ವಿಡಿಯೋಗೆ ಇದು ಸಾಕಾಗುತ್ತದೆ.

ಆದರೆ ಗೇಮಿಂಗ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವವರು, 4K ವಿಡಿಯೋ ರೆಕಾರ್ಡಿಂಗ್ ಬೇಕಿರುವವರು ಅಥವಾ ವೇಗವಾಗಿ ಚಾರ್ಜ್ ಆಗುವ ಫೋನ್ ಬಯಸುವವರು ಇದೇ ಬಜೆಟ್‌ನಲ್ಲಿರುವ ಬೇರೆ ಫೋನ್‌ಗಳನ್ನೂ ಒಮ್ಮೆ ಹೋಲಿಸಿ ನೋಡುವುದು ಉತ್ತಮ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →