ಸ್ಮಾರ್ಟ್‌ಫೋನ್ ಮಾರುಕಟ್ಟೆ ನೋಡಿದ್ರೆ ಈಗ ಎಲ್ಲಾ ಕಂಪನಿಗಳೂ ದೊಡ್ಡ ಸ್ಕ್ರೀನ್, ದೊಡ್ಡ ಬ್ಯಾಟರಿ ಅಂತ ಒಂದೇ ದಿಕ್ಕಿನಲ್ಲಿ ಓಡ್ತಿವೆ. ಆದ್ರೆ ಇದೇ ಸಮಯದಲ್ಲಿ ಕೆಲವರು, ಫೋನ್ ಒಂದೇ ಕೈಯಲ್ಲಿ ಆರಾಮಾಗಿ ಹಿಡಿಯುವಂತೆ ಇರಬೇಕು, ಜೇಬಿನಲ್ಲಿ ಭಾರ ಅನಿಸಬಾರದು, ಆದ್ರೂ ಕ್ಯಾಮೆರಾ ಅಥವಾ ಪರ್ಫಾರ್ಮೆನ್ಸ್ ವಿಷಯದಲ್ಲಿ ಯಾವುದೇ ರಾಜಿ ಬೇಡ ಅಂತ ಬಯಸ್ತಾರೆ. ಇಂಥವರನ್ನೇ ಗುರಿಯಾಗಿಟ್ಟುಕೊಂಡು ವಿವೋ ತನ್ನ X300 ಸೀರಿಸ್‌ಗೆ ಹೊಸ ಸೇರ್ಪಡೆಯಾಗಿ X300 FE ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
“FE” ಅಂದ್ರೆ ಫ್ಯಾನ್ ಎಡಿಷನ್ ಅಂತ ಅರ್ಥ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ, X300 ಪ್ರೊ ಮಾದರಿಯ ZEISS ಟೆಲಿಫೋಟೋ ಕ್ಯಾಮೆರಾ ಟೆಕ್ನಾಲಜಿ ಮತ್ತು ಫ್ಲ್ಯಾಗ್‌ಶಿಪ್ ಪ್ರೊಸೆಸರ್ ಅನ್ನೇ, ಚಿಕ್ಕದಾದ, ಹಗುರವಾದ ಬಾಡಿಯಲ್ಲಿ ಮತ್ತು ಸ್ವಲ್ಪ ಕಡಿಮೆ ಬೆಲೆಗೆ ಕೊಡುವ ಪ್ರಯತ್ನ ಇದು. ವಿವೋ ಹಿಂದೆ X ಸೀರಿಸ್‌ನಲ್ಲಿ ಪ್ರೀಮಿಯಂ, ಕಾಂಪ್ಯಾಕ್ಟ್ ಫೋನ್‌ಗಳಿಗೆ ಹೆಸರುವಾಸಿಯಾಗಿತ್ತು, ಈ X300 FE ಕೂಡ ಅದೇ ರೀತಿಯನ್ನೇ ಮುಂದುವರಿಸುತ್ತಿರುವ ಹಾಗಿದೆ. ಹಾಗಾದ್ರೆ ಈ ಫೋನ್‌ನಲ್ಲಿ ಏನೆಲ್ಲಾ ಇದೆ ಅನ್ನೋದನ್ನ ಮುಂದೆ ನೋಡೋಣ.
Also Read: Vivo V80 ಲಾಂಚ್ ಡೇಟ್ ಕನ್ಫರ್ಮ್! ZEISS ಕ್ಯಾಮೆರಾ, 144Hz ಡಿಸ್ಪ್ಲೇ ಫುಲ್ ಡೀಟೇಲ್ಸ್
Vivo X300 FE ವಿಶೇಷಣಗಳು
| ಫೀಚರ್ | Vivo X300 FE |
|---|---|
| ಡಿಸ್‌ಪ್ಲೇ | 6.31-ಇಂಚು ZEISS ಮಾಸ್ಟರ್ ಕಲರ್ ಡಿಸ್‌ಪ್ಲೇ, 120Hz |
| ಪ್ರೊಸೆಸರ್ | Snapdragon 8 Gen 5 |
| RAM | 8GB / 12GB LPDDR5X Ultra |
| ಸ್ಟೋರೇಜ್ | 256GB / 512GB UFS 4.1 |
| ಹಿಂಬದಿ ಕ್ಯಾಮೆರಾ | 50MP ZEISS ಮೇನ್ + 50MP ZEISS ಟೆಲಿಫೋಟೋ + 8MP ಅಲ್ಟ್ರಾ ವೈಡ್ |
| ಟೆಲಿಫೋಟೋ ಕ್ಯಾಮೆರಾ | 50MP, 3x ಆಪ್ಟಿಕಲ್ ಜೂಮ್, 100x ಡಿಜಿಟಲ್ ಜೂಮ್ |
| ಫ್ರಂಟ್ ಕ್ಯಾಮೆರಾ | 50MP ZEISS ವೈಡ್-ಆಂಗಲ್ |
| ಬ್ಯಾಟರಿ | 6500mAh BlueVolt |
| ವೈರ್ಡ್ ಚಾರ್ಜಿಂಗ್ | 90W FlashCharge |
| ಕಲರ್‌ಗಳು | Urban Olive, Lilac Purple, Noir Black |
ಕಾಂಪ್ಯಾಕ್ಟ್ ಗಾತ್ರದಲ್ಲಿ ಪ್ರೀಮಿಯಂ ಡಿಸೈನ್

X300 FE 6.31 ಇಂಚಿನ ಕಾಂಪ್ಯಾಕ್ಟ್ ಸ್ಕ್ರೀನ್ ಹೊಂದಿದ್ದು, ಒಂದೇ ಕೈಯಲ್ಲಿ ಬಳಸುವಂತೆ ವಿನ್ಯಾಸ ಮಾಡಲಾಗಿದೆ. ತೂಕ ಕೇವಲ 191 ಗ್ರಾಂ, ದಪ್ಪ 7.99mm ಮಾತ್ರ. ಜೇಬಿನಲ್ಲಿಟ್ಟಾಗ ಭಾರ ಅನಿಸುವುದಿಲ್ಲ. ಫ್ಲ್ಯಾಟ್ ಫ್ರೇಮ್ ಮತ್ತು AG ಫಿನಿಶ್ ಬ್ಯಾಕ್ ಇರುವುದರಿಂದ ಕೈಯಲ್ಲಿ ಹಿಡಿದಾಗ ಜಾರುವುದಿಲ್ಲ, ಬೆರಳಚ್ಚು ಗುರುತುಗಳೂ ಅಷ್ಟಾಗಿ ಕಾಣಿಸುವುದಿಲ್ಲ.
ಡಿಸ್‌ಪ್ಲೇಗೆ ZEISS ಮಾಸ್ಟರ್ ಕಲರ್ ಡಿಸ್‌ಪ್ಲೇ ತಂತ್ರಜ್ಞಾನ ಬಳಸಲಾಗಿದ್ದು, 460 PPI ಪಿಕ್ಸೆಲ್ ಡೆನ್ಸಿಟಿ, 1.07 ಬಿಲಿಯನ್ ಕಲರ್ ಸಪೋರ್ಟ್ ಮತ್ತು P3 ವೈಡ್ ಕಲರ್ ಗ್ಯಾಮಟ್ ಇರುವುದರಿಂದ ಬಣ್ಣಗಳು ರಿಚ್ ಆಗಿ, ನ್ಯಾಚುರಲ್ ಆಗಿ ಮೂಡಿಬರುತ್ತವೆ. 2160Hz PWM ಡಿಮ್ಮಿಂಗ್ ಸಿಗುವುದರಿಂದ ರಾತ್ರಿ ಹೊತ್ತು ಸ್ಕ್ರೀನ್ ಬಳಸಿದಾಗ ಕಣ್ಣಿಗೆ ಆಯಾಸ ಕಡಿಮೆ. ಗರಿಷ್ಠ ಬ್ರೈಟ್‌ನೆಸ್ 5000 nits ವರೆಗೆ ತಲುಪುತ್ತೆ ಅಂತ ಕಂಪನಿ ಕ್ಲೇಮ್ ಮಾಡಿದ್ದು, ಇದರಿಂದ ಬಿಸಿಲಿನಲ್ಲೂ ಸ್ಕ್ರೀನ್ ಸ್ಪಷ್ಟವಾಗಿ ಕಾಣಿಸುತ್ತೆ.
ಇದಲ್ಲದೆ IP68 ಮತ್ತು IP69 ರೇಟಿಂಗ್ ಇರುವುದರಿಂದ ಧೂಳು, ನೀರಿನಿಂದ ಉತ್ತಮ ರಕ್ಷಣೆ ಸಿಗುತ್ತೆ. SGS ಫೈವ್-ಸ್ಟಾರ್ ಡ್ರಾಪ್ ರೆಸಿಸ್ಟೆನ್ಸ್ ಸರ್ಟಿಫಿಕೇಶನ್ ಸಹ ಇರುವುದರಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದರೂ ಹಾಳಾಗುವ ಸಾಧ್ಯತೆ ಕಡಿಮೆ. ಬಣ್ಣಗಳ ವಿಷಯದಲ್ಲಿ ಅರ್ಬನ್ ಆಲಿವ್, ಲೈಲಾಕ್ ಪರ್ಪಲ್ ಮತ್ತು ನಾಯರ್ ಬ್ಲ್ಯಾಕ್ ಎಂಬ ಮೂರು ಶೇಡ್‌ಗಳಲ್ಲಿ ಫೋನ್ ಲಭ್ಯ ಇದ್ದು, ಎಲ್ಲಾ ಕಲರ್‌ಗಳೂ ಸಾಫ್ಟ್ ಮತ್ತು ಪ್ರೀಮಿಯಂ ಟಚ್ ಕೊಡುತ್ತವೆ.
ZEISS ಕ್ಯಾಮೆರಾ ಈ ಫೋನ್‌ನ ದೊಡ್ಡ ಆಕರ್ಷಣೆ

X300 FE ಯ ನಿಜವಾದ ಆಕರ್ಷಣೆ ಇರೋದೇ ಕ್ಯಾಮೆರಾ ವಿಭಾಗದಲ್ಲಿ. ಹಿಂಭಾಗದಲ್ಲಿ ಮುಖ್ಯವಾಗಿ 50MP ZEISS ಟೆಲಿಫೋಟೋ ಕ್ಯಾಮೆರಾ ಗಮನ ಸೆಳೆಯುತ್ತೆ, ಇದರಲ್ಲಿ Sony IMX882 ಸೆನ್ಸರ್ ಬಳಸಲಾಗಿದ್ದು, 1/1.95″ ಸೈಜ್ ಇರುವುದರಿಂದ ಕಡಿಮೆ ಬೆಳಕಿನಲ್ಲೂ ಫೋಟೋ ಚೆನ್ನಾಗಿ ಬರುತ್ತೆ. ಇದು 3x ಆಪ್ಟಿಕಲ್ ಜೂಮ್ ಕೊಟ್ಟು, 100x ವರೆಗೆ ಡಿಜಿಟಲ್ ಜೂಮ್ ಸಾಮರ್ಥ್ಯ ಹೊಂದಿದೆ. Sony IMX921 ಸೆನ್ಸರ್ ಬಳಸಿದ 50MP ZEISS ಮೇನ್ ಕ್ಯಾಮೆರಾ ಮತ್ತು 110° FoV ಕೊಡುವ 8MP ಅಲ್ಟ್ರಾ ವೈಡ್ ಕ್ಯಾಮೆರಾ ಸಹ ಇದೆ. ಮುಂಭಾಗದಲ್ಲಿ 90° FoV ಜೊತೆಗೆ 0.8x ನಿಂದ 2x ವರೆಗೆ ಸೀಮ್‌ಲೆಸ್ ಜೂಮ್ ಕೊಡುವ 50MP ZEISS ವೈಡ್-ಆಂಗಲ್ ಸೆಲ್ಫಿ ಕ್ಯಾಮೆರಾ ಸೇರಿಸಲಾಗಿದ್ದು, ಗುಂಪು ಫೋಟೋಗಳಿಗೆ ಇದು ಅನುಕೂಲ ಆಗುತ್ತೆ.
ಟೆಲಿಫೋಟೋ ಕ್ಯಾಮೆರಾ ಜೊತೆ AI ಟ್ರೂ ಕ್ಲಾರಿಟಿ ಎಂಜಿನ್ ಎಂಬ ಪ್ರೊಸೆಸಿಂಗ್ ಸಿಸ್ಟಂ ಬಳಸಲಾಗಿದೆ. ಇದರಲ್ಲಿ ನೈಸ್ 3.0 ಆಪ್ಟಿಕಲ್ ರೀಕನ್‌ಸ್ಟ್ರಕ್ಷನ್ ಎಂಜಿನ್ ಮತ್ತು ಮ್ಯಾಜಿಕ್ 2.0 ಇಮೇಜ್ ರೆಸ್ಟೋರೇಶನ್ ಎಂಜಿನ್ ಒಟ್ಟಿಗೆ ಕೆಲಸ ಮಾಡಿ, 3x, 10x ಮತ್ತು 20x ಜೂಮ್‌ನಲ್ಲೂ ಫೋಟೋ ಸ್ಪಷ್ಟವಾಗಿ ಮೂಡಿಬರುವಂತೆ ನೋಡಿಕೊಳ್ಳುತ್ತೆ ಅಂತ ವಿವೋ ವಿವರಿಸಿದೆ. 23mm ನಿಂದ 100mm ವರೆಗಿನ ಐದು ಫೋಕಲ್ ಲೆಂಗ್ತ್‌ಗಳಲ್ಲಿ ಶೂಟ್ ಮಾಡಬಹುದಾದ ZEISS ಮಲ್ಟಿಫೋಕಲ್ ಪೋರ್ಟ್ರೇಟ್ ಮೋಡ್ ಕೂಡ ಇಲ್ಲಿ ಸೇರಿಸಲಾಗಿದ್ದು, ಇದೇ ಫೋಕಲ್ ಲೆಂಗ್ತ್‌ಗಳಿಗೆ ಹೊಂದಿಕೊಳ್ಳುವ ಅಡಾಪ್ಟಿವ್ ಜೂಮ್ ಫ್ಲ್ಯಾಶ್ ಫೀಚರ್ ನೈಟ್ ಪೋರ್ಟ್ರೇಟ್‌ಗಳನ್ನು ಇನ್ನಷ್ಟು ಸ್ಪಷ್ಟ ಮತ್ತು ನ್ಯಾಚುರಲ್ ಆಗಿಸುತ್ತೆ.
ಪ್ರತ್ಯೇಕವಾಗಿ ಖರೀದಿಸಬಹುದಾದ ವಿವೋ ZEISS ಟೆಲಿಫೋಟೋ ಎಕ್ಸ್‌ಟೆಂಡರ್ ಜೆನ್ 2 ಎಂಬ ಆಕ್ಸೆಸರಿ ಈ ಫೋನ್‌ಗೆ ಹೊಂದಿಕೊಳ್ಳುತ್ತೆ. ಇದನ್ನು ಜೋಡಿಸಿದರೆ 200mm ಈಕ್ವಿವಲೆಂಟ್ ರೀಚ್ ಸಿಗುತ್ತೆ, ಮತ್ತು ಇದರ ತೂಕ ಕೇವಲ 153 ಗ್ರಾಂ ಆಗಿರುವುದರಿಂದ ಜೊತೆಗೆ ಕೊಂಡೊಯ್ಯಲು ಕಷ್ಟ ಆಗುವುದಿಲ್ಲ. ಕಾನ್ಸರ್ಟ್ ಅಥವಾ ಸ್ಟೇಜ್ ಫೋಟೋಗ್ರಫಿ ಮಾಡುವವರಿಗೆ ಇದೊಂದು ಉಪಯುಕ್ತ ಆಕ್ಸೆಸರಿ. ಜೊತೆಗೆ ಸ್ಟ್ರೀಟ್ ಫೋಟೋಗ್ರಫಿ ಮೋಡ್ ಮತ್ತು AI ಕ್ರಿಯೇಟಿವ್ ಕ್ಯಾಮೆರಾ ಮೋಡ್‌ಗಳಿಂದ ಫೋಟೋಗಳಿಗೆ ಬೇರೆ ಬೇರೆ ಸ್ಟೈಲ್ ಮತ್ತು ಬ್ಯಾಕ್‌ಗ್ರೌಂಡ್ ಸೇರಿಸಬಹುದು. ವಿಡಿಯೋ ರೆಕಾರ್ಡಿಂಗ್ 4K 120fps ವರೆಗೆ ಇರುವುದರಿಂದ ವೇಗದ ಚಲನೆಯನ್ನೂ ಸ್ಪಷ್ಟವಾಗಿ ಸೆರೆಹಿಡಿಯಬಹುದು.
ಪರ್ಫಾರ್ಮೆನ್ಸ್‌ನಲ್ಲಿ ಫೋನ್ ಹೇಗಿದೆ?
ಈ ಫೋನ್‌ನ ಒಳಗೆ ಸ್ನ್ಯಾಪ್‌ಡ್ರ್ಯಾಗನ್ 8 ಜೆನ್ 5 (Snapdragon 8 Gen 5) ಚಿಪ್‌ಸೆಟ್ ಇದ್ದು, ಇದೇ ಪ್ರೊಸೆಸರ್ ಇತ್ತೀಚಿನ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲೂ ಬಳಕೆಯಾಗ್ತಿದೆ. ಹಿಂದಿನ ಜನರೇಶನ್‌ಗೆ ಹೋಲಿಸಿದರೆ CPU ಪರ್ಫಾರ್ಮೆನ್ಸ್ 36%, GPU 11% ಮತ್ತು NPU 46% ವರೆಗೆ ಸುಧಾರಿಸಿದೆ ಅಂತ ವಿವೋ ನೀಡಿರುವ ಮಾಹಿತಿ ಹೇಳ್ತದೆ. UFS 4.1 ಸ್ಟೋರೇಜ್ ಮತ್ತು LPDDR5X ಅಲ್ಟ್ರಾ RAM ಕೂಡ ಸೇರಿಸಲಾಗಿದ್ದು, ಇದರಿಂದ ಭಾರೀ ಆ್ಯಪ್‌ಗಳನ್ನೂ ಒಟ್ಟಿಗೆ ಬಳಸಿದಾಗ ಫೋನ್ ಸ್ಮೂತ್ ಆಗಿ ಕೆಲಸ ಮಾಡುತ್ತೆ ಅಂತ ನಿರೀಕ್ಷಿಸಬಹುದು. ಮೆಮೊರಿ ಆಯ್ಕೆ ವಿಷಯಕ್ಕೆ ಬಂದ್ರೆ, 8GB+256GB, 12GB+256GB ಮತ್ತು 12GB+512GB ಎಂಬ ಮೂರು ವೇರಿಯಂಟ್‌ಗಳಲ್ಲಿ ಈ ಫೋನ್ ಮಾರುಕಟ್ಟೆಗೆ ಬಂದಿದ್ದು, ಬಳಕೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.
ದೊಡ್ಡ ಬ್ಯಾಟರಿ ಜೊತೆ ಫಾಸ್ಟ್ ಚಾರ್ಜಿಂಗ್
ಗಾತ್ರದಲ್ಲಿ ಕಾಂಪ್ಯಾಕ್ಟ್ ಆಗಿದ್ದರೂ ಬ್ಯಾಟರಿ ವಿಷಯದಲ್ಲಿ ವಿವೋ ಯಾವುದೇ ರಾಜಿ ಮಾಡಿಕೊಂಡಿಲ್ಲ. 6500mAh ಬ್ಲೂವೋಲ್ಟ್ ಬ್ಯಾಟರಿ ಅಳವಡಿಸಲಾಗಿದ್ದು, ಇಷ್ಟು ಚಿಕ್ಕ ಫೋನ್‌ಗೆ ದೊಡ್ಡ ಬ್ಯಾಟರಿ ಸಿಕ್ಕಿರೋದು ವಿಶೇಷವೇ. ಚಾರ್ಜಿಂಗ್ ವೇಗಕ್ಕೆ 90W ವೈರ್ಡ್ ಫ್ಲ್ಯಾಶ್‌ಚಾರ್ಜ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ನೀಡುತ್ತೆ. ಕಂಪನಿಯ ಪ್ರಕಾರ ಒಂದೇ ಚಾರ್ಜ್‌ನಲ್ಲಿ 10.45 ಗಂಟೆ ನ್ಯಾವಿಗೇಷನ್ ಬಳಸಬಹುದು, ಇಲ್ಲವೇ 38.4 ಗಂಟೆ ಯೂಟ್ಯೂಬ್ ವಿಡಿಯೋ ನೋಡಬಹುದು. ಬೈಪಾಸ್ ಚಾರ್ಜಿಂಗ್ ಮತ್ತು ಓವರ್‌ಹೀಟಿಂಗ್ ಪ್ರೊಟೆಕ್ಷನ್‌ನಂತಹ ಫೀಚರ್‌ಗಳು ಗೇಮಿಂಗ್ ಮಾಡುತ್ತಲೇ ಚಾರ್ಜ್ ಮಾಡಿದಾಗಲೂ ಬ್ಯಾಟರಿ ಬಾಳಿಕೆ ಕಾಪಾಡಲು ನೆರವಾಗುತ್ತವೆ.
AI ಮತ್ತು ಸಾಫ್ಟ್‌ವೇರ್ ಅಪ್‌ಡೇಟ್‌ಗಳು
OriginOS 6 ಮೇಲೆ ರನ್ ಆಗುವ ಈ ಫೋನ್‌ಗೆ ವಿವೋ 5 ವರ್ಷ OS ಅಪ್‌ಡೇಟ್ ಮತ್ತು 7 ವರ್ಷ ಸೆಕ್ಯುರಿಟಿ ಅಪ್‌ಡೇಟ್‌ಗಳ ಭರವಸೆ ಕೊಟ್ಟಿದೆ. ಬಹಳಷ್ಟು ಜನ ಫೋನ್ ಅನ್ನು ದೀರ್ಘಕಾಲ ಬಳಸಬೇಕು ಅಂತ ಬಯಸುವ ಇತ್ತೀಚಿನ ದಿನಗಳಲ್ಲಿ, ಇಂತಹ ಭರವಸೆ ದೊಡ್ಡ ಪ್ಲಸ್ ಪಾಯಿಂಟ್. AI ಸರ್ಚ್, AI ಕ್ರಿಯೇಷನ್, AI ಕ್ಯಾಪ್ಶನ್ಸ್ ಮತ್ತು ಜೆಮಿನಿ ಲೈವ್‌ನಂತಹ ಫೀಚರ್‌ಗಳೂ ಸಾಫ್ಟ್‌ವೇರ್‌ನಲ್ಲಿ ಸೇರಿಸಲಾಗಿದ್ದು, ಇವೆಲ್ಲಾ ಒಮ್ಮೆಗೇ ಸಿಗದೆ ಹಂತ ಹಂತವಾಗಿ OTA ಮೂಲಕ ಬಿಡುಗಡೆ ಆಗಲಿವೆ ಅಂತ ಕಂಪನಿ ಸ್ಪಷ್ಟಪಡಿಸಿದೆ.
Also Read: ಯಾವ ವಿವೋ 5G ಫೋನ್ ಬೆಸ್ಟ್? – Vivo Phones Under 20000 ಲಿಸ್ಟ್
Vivo X300 FE ಬೆಲೆ ಮತ್ತು ಲಭ್ಯತೆ

ಫ್ಲಿಪ್‌ಕಾರ್ಟ್‌ನಲ್ಲಿ Vivo X300 FE ಮೂರು ವೇರಿಯಂಟ್‌ಗಳಲ್ಲಿ ಲಭ್ಯ ಇದೆ. 8GB RAM + 256GB ಸ್ಟೋರೇಜ್ ಮಾದರಿಗೆ ₹89,999, 12GB RAM + 256GB ಸ್ಟೋರೇಜ್ ಮಾದರಿಗೆ ₹94,999 ಮತ್ತು ಟಾಪ್ ವೇರಿಯಂಟ್ ಆಗಿರುವ 12GB RAM + 512GB ಸ್ಟೋರೇಜ್ ಮಾದರಿಗೆ ₹99,999 ಬೆಲೆ ಇದೆ.
ಇದಲ್ಲದೆ, ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಫರ್ ಬಳಸಿ ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಮತ್ತು ಫ್ಲಿಪ್‌ಕಾರ್ಟ್ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ ₹14,000 ವರೆಗೆ ಕ್ಯಾಶ್‌ಬ್ಯಾಕ್ ಸಿಗುತ್ತೆ. ಜೊತೆಗೆ ಹಳೆಯ ಫೋನ್ ಕೊಟ್ಟು ಎಕ್ಸ್‌ಚೇಂಜ್ ಮಾಡಿದ್ರೆ ಇನ್ನಷ್ಟು ಉಳಿತಾಯ ಮಾಡಬಹುದು.
ಹೇಗಿದೆ Vivo X300 FE?
Vivo X300 FE ಒಂದು ಕಾಂಪ್ಯಾಕ್ಟ್ ಬಾಡಿಯಲ್ಲಿ ಫ್ಲ್ಯಾಗ್‌ಶಿಪ್ ಮಟ್ಟದ ಕ್ಯಾಮೆರಾ ಟೆಕ್ನಾಲಜಿ ತಂದಿರುವ ಫೋನ್. ದೊಡ್ಡ ಸ್ಕ್ರೀನ್‌ಗಳಿಗಿಂತ ಚಿಕ್ಕ ಗಾತ್ರ ಇಷ್ಟಪಡುವವರಿಗೆ, ಒಂದೇ ಕೈಯಲ್ಲಿ ಆರಾಮಾಗಿ ಬಳಸುವಂತದ್ದು ಬೇಕು ಅನ್ನೋವರಿಗೆ ಇದು ಗಮನ ಸೆಳೆಯುತ್ತದೆ. ಜೊತೆಗೆ ಫೋಟೋಗ್ರಫಿ ವಿಷಯದಲ್ಲೂ ಯಾವುದೇ ಕೊರತೆ ಇರಬಾರದು ಅನ್ನೋ ನಿರೀಕ್ಷೆ ಇದ್ದರೆ, ZEISS ಟೆಲಿಫೋಟೋ ಕ್ಯಾಮೆರಾ ಪ್ರಮುಖ ಹೈಲೈಟ್ ಆಗಿದೆ.
ದೊಡ್ಡ ಬ್ಯಾಟರಿ ಮತ್ತು ಸುದೀರ್ಘ ಸಾಫ್ಟ್‌ವೇರ್ ಬೆಂಬಲವೂ ಇದರ ಪ್ರಮುಖ ಪ್ಲಸ್ ಪಾಯಿಂಟ್‌ಗಳಾಗಿವೆ. ಬೆಲೆ ಪ್ರೀಮಿಯಂ ಆಗಿದ್ದರೂ, ದಿನನಿತ್ಯದ ಬಳಕೆ, ಫೋಟೋಗ್ರಫಿ ಮತ್ತು ಪರ್ಫಾರ್ಮೆನ್ಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವವರಿಗೆ X300 FE ಒಮ್ಮೆ ನೋಡಬಹುದಾದ ಆಯ್ಕೆಯಾಗಿದೆ.












