ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Best Camera Phone Under 20000: ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು

Author
Published
17/08/2026
Updated
13/09/2026
Published On: August 17, 2026 6:03 pm
Best Camera Phone Under 20000
Google News
Follow Us

₹20,000 ಒಳಗೆ Best Camera Phone Under 20000 ಹುಡುಕುತ್ತಿರುವವರಿಗೆ ಈ ಬೆಲೆ ವಿಭಾಗದಲ್ಲಿ ಹಲವು ಉತ್ತಮ ಆಯ್ಕೆಗಳಿವೆ. ಮೋಟೋರೋಲಾ, ಸ್ಯಾಮ್‌ಸಂಗ್, ವಿವೋ, ರಿಯಲ್‌ಮಿ, ಒಪ್ಪೋ ಮತ್ತು ಪೊಕೊ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಈ ಬೆಲೆ ವಿಭಾಗದಲ್ಲಿ ಉತ್ತಮ ಫೋನ್‌ಗಳನ್ನು ನೀಡುತ್ತಿವೆ. ಆದರೆ ಎಲ್ಲ ಫೋನ್‌ಗಳ ಕ್ಯಾಮೆರಾ ಒಂದೇ ರೀತಿಯ ಅನುಭವ ನೀಡುವುದಿಲ್ಲ. ಪ್ರತಿಯೊಂದು ಫೋನ್‌ನ ಕ್ಯಾಮೆರಾ ತನ್ನದೇ ಆದ ಸಾಮರ್ಥ್ಯ ಮತ್ತು ಮಿತಿಗಳನ್ನು ಹೊಂದಿರುತ್ತದೆ.

ಕೆಲವು ಫೋನ್‌ಗಳು ಹಗಲಿನಲ್ಲಿ ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯುತ್ತವೆ. ಆದರೆ ರಾತ್ರಿ ಅದೇ ಮಟ್ಟದ ಕಾರ್ಯಕ್ಷಮತೆಯನ್ನು ನೀಡುವುದಿಲ್ಲ. ಇನ್ನೂ ಕೆಲವು ಫೋನ್‌ಗಳು ಸೆಲ್ಫಿ ಮತ್ತು ವಿಡಿಯೋ ರೆಕಾರ್ಡಿಂಗ್‌ನಲ್ಲಿ ಉತ್ತಮವಾಗಿದ್ದರೂ, ಬಣ್ಣಗಳ ನೈಜತೆ, ಡೀಟೇಲ್ ಅಥವಾ ಡೈನಾಮಿಕ್ ರೇಂಜ್‌ನಲ್ಲಿ ಸ್ವಲ್ಪ ಕಡಿಮೆ ಅನಿಸಬಹುದು. ಅದಕ್ಕಾಗಿಯೇ ಕೇವಲ 50MP ಅಥವಾ 64MP ಕ್ಯಾಮೆರಾ ಇದೆ ಎಂದು ನೋಡಿ ಫೋನ್ ಆಯ್ಕೆ ಮಾಡುವುದು ಸರಿಯಾದ ಆಯ್ಕೆಯಾಗುವುದಿಲ್ಲ.

ಈ ಪಟ್ಟಿಯನ್ನು ಕೇವಲ ಕ್ಯಾಮೆರಾ ಮೆಗಾಪಿಕ್ಸೆಲ್‌ಗಳನ್ನು ಆಧರಿಸಿ ಸಿದ್ಧಪಡಿಸಿಲ್ಲ. ಕ್ಯಾಮೆರಾದ ನೈಜ ಕಾರ್ಯಕ್ಷಮತೆ, OIS, ಸೆನ್ಸಾರ್ ಕ್ವಾಲಿಟಿ, ಇಮೇಜ್ ಪ್ರೊಸೆಸಿಂಗ್, ಕಡಿಮೆ ಬೆಳಕಿನಲ್ಲಿನ ಕಾರ್ಯಕ್ಷಮತೆ, ಸೆಲ್ಫಿ ಕ್ವಾಲಿಟಿ, ವೀಡಿಯೋ ರೆಕಾರ್ಡಿಂಗ್ ಹಾಗೂ ಬೆಲೆಗೆ ತಕ್ಕ ಮೌಲ್ಯ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಫೋನ್‌ಗಳನ್ನು ಆಯ್ಕೆ ಮಾಡಲಾಗಿದೆ. ಫೋಟೋಗ್ರಫಿ, ಇನ್‌ಸ್ಟಾಗ್ರಾಮ್, ರೀಲ್ಸ್, ಯೂಟ್ಯೂಬ್ ವೀಡಿಯೊಗಳು ಅಥವಾ ದೈನಂದಿನ ಬಳಕೆಗೆ ಉತ್ತಮ ಕ್ಯಾಮೆರಾ ಫೋನ್ ಹುಡುಕುತ್ತಿರುವವರಿಗೆ ಈ ಪಟ್ಟಿ ಉಪಯುಕ್ತವಾಗಲಿದೆ.

ನೀವು ₹10,000 ಬಜೆಟ್‌ನಲ್ಲಿ ಉತ್ತಮ 5G ಫೋನ್ ಹುಡುಕುತ್ತಿದ್ದರೆ, ನಮ್ಮ Best 5G Mobile Phones Under 10000 ಲೇಖನವನ್ನೂ ಓದಿ.

₹20,000 ಒಳಗಿನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು: ಸಂಕ್ಷಿಪ್ತ ಹೋಲಿಕೆ

PhoneMain CameraSelfieProcessorBatteryCharging
Moto G86 Power50MP + 8MP32MPDimensity 74006720mAh33W
POCO X7 5G50MP + 8MP + 2MP20MPDimensity 7300 Ultra5110mAh45W
Samsung Galaxy M36 5G50MP + 8MP + 2MP13MPExynos 13805000mAh25W
Realme P2 Pro 5G50MP + 8MP32MPSnapdragon 7s Gen 25200mAh80W
Samsung Galaxy M17 5G50MP + 5MP + 2MP13MPExynos 13305000mAh25W
Vivo T4x 5G50MP + 2MP8MPDimensity 73006500mAh44W

Moto G86 Power

Moto G86 Power

ಪ್ರಮುಖ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.7-ಇಂಚಿನ 1.5K pOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್
  • ಪ್ರೊಸೆಸರ್: MediaTek Dimensity 7400
  • ಹಿಂಬದಿಯ ಕ್ಯಾಮೆರಾ: 50MP (Sony LYT-600 ಸೆನ್ಸರ್, OIS) + 8MP ಅಲ್ಟ್ರಾ-ವೈಡ್ ಕ್ಯಾಮೆರಾ
  • ಮುಂಭಾಗದ ಕ್ಯಾಮೆರಾ: 32MP ಸೆಲ್ಫಿ ಕ್ಯಾಮೆರಾ
  • ಬ್ಯಾಟರಿ: 6720mAh
  • ಚಾರ್ಜಿಂಗ್: 33W TurboPower Charging

Moto G86 Powerನ ಪ್ರಮುಖ ಬಲ ಅದರ 50MP Sony LYT-600 ಮುಖ್ಯ ಕ್ಯಾಮೆರಾ. OIS ಇರುವುದರಿಂದ ಈ ಸೆನ್ಸರ್ ಬೆಳಕು ಕಡಿಮೆ ಇರುವ ಸಂಜೆ ಅಥವಾ ಒಳಾಂಗಣ ಶಾಟ್‌ಗಳಲ್ಲೂ ಬ್ಲರ್ ಆಗದೆ ಸ್ಪಷ್ಟ ಫೋಟೋ ಕೊಡುತ್ತದೆ. ಬಣ್ಣಗಳು ಸ್ವಲ್ಪ ನ್ಯಾಚುರಲ್ ಟೋನ್‌ಗೆ ಹತ್ತಿರವಾಗಿದ್ದು, ಓವರ್-ಸ್ಯಾಚುರೇಷನ್ ಕಡಿಮೆ. Portrait ಫೋಟೋಗಳಲ್ಲಿ subject ಮತ್ತು background ನಡುವಿನ separation ಕೂಡ ಚೆನ್ನಾಗಿದೆ. 32MP ಸೆಲ್ಫಿ ಕ್ಯಾಮೆರಾ ಕೂಡ ಈ ಬೆಲೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. OIS ಇರುವುದರಿಂದ ವಿಡಿಯೋ ರೆಕಾರ್ಡ್ ಮಾಡುವಾಗಲೂ footage ಹೆಚ್ಚು ಸ್ಥಿರವಾಗಿರುತ್ತದೆ. ಒಟ್ಟಿನಲ್ಲಿ, ಕ್ಯಾಮೆರಾಕ್ಕೆ ಆದ್ಯತೆ ನೀಡುವವರಿಗೆ Moto G86 Power ಈ ಪಟ್ಟಿಯಲ್ಲಿರುವ ಉತ್ತಮ ಆಯ್ಕೆಗಳಲ್ಲಿ ಒಂದು.

POCO X7 5G

POCO X7 5G

ಪ್ರಮುಖ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.67-ಇಂಚಿನ 1.5K AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್
  • ಪ್ರೊಸೆಸರ್: MediaTek Dimensity 7300 Ultra
  • ಹಿಂಬದಿಯ ಕ್ಯಾಮೆರಾ: 50MP (Sony IMX882 ಸೆನ್ಸರ್, OIS) + 8MP ಅಲ್ಟ್ರಾ-ವೈಡ್ + 2MP ಮ್ಯಾಕ್ರೋ
  • ಮುಂಭಾಗದ ಕ್ಯಾಮೆರಾ: 20MP ಸೆಲ್ಫಿ ಕ್ಯಾಮೆರಾ
  • ಬ್ಯಾಟರಿ: 5110mAh
  • ಚಾರ್ಜಿಂಗ್: 45W Turbo Charging

POCO X7 5Gನ Sony IMX882 ಸೆನ್ಸರ್ ಹಗಲಿನ ಫೋಟೋಗಳಲ್ಲಿ ಉತ್ತಮ sharpness ಮತ್ತು ಡೀಟೇಲ್ ನೀಡುತ್ತದೆ. 2x ಇನ್-ಸೆನ್ಸರ್ ಜೂಮ್ ಬಳಸಿದಾಗಲೂ ಫೋಟೋದಲ್ಲಿ ಡೀಟೇಲ್ ಹೆಚ್ಚು ಕಳೆದುಹೋಗುವುದಿಲ್ಲ. ಈ ಬೆಲೆಯ ಫೋನ್‌ನಲ್ಲಿ ಇದು ಖಂಡಿತವಾಗಿಯೂ ಗಮನಿಸಬಹುದಾದ ಪ್ಲಸ್ ಪಾಯಿಂಟ್. ಅಲ್ಟ್ರಾ-ವೈಡ್ ಕ್ಯಾಮೆರಾ ಇರುವುದರಿಂದ ಗ್ರೂಪ್ ಫೋಟೋ ಮತ್ತು ಲ್ಯಾಂಡ್‌ಸ್ಕೇಪ್ ಶಾಟ್‌ಗಳನ್ನು ತೆಗೆಯಲು ಅನುಕೂಲವಾಗುತ್ತದೆ. 4K ವಿಡಿಯೋ ರೆಕಾರ್ಡಿಂಗ್‌ನಲ್ಲಿ OIS ಇರುವುದರಿಂದ ಕೈ ಸ್ವಲ್ಪ ಅಲುಗಾಡಿದರೂ footage ಹೆಚ್ಚು ಸ್ಥಿರವಾಗಿ ಬರುತ್ತದೆ. ಒಟ್ಟಿನಲ್ಲಿ, ಜೂಮ್ ಬಳಸಿ ಫೋಟೋ ತೆಗೆಯುವವರಿಗೆ POCO X7 5G ಉತ್ತಮ ಆಯ್ಕೆಯಾಗಬಹುದು.

Samsung Galaxy M36 5G

Samsung Galaxy M36 5G

ಪ್ರಮುಖ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.7-ಇಂಚಿನ Super AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್
  • ಪ್ರೊಸೆಸರ್: Exynos 1380
  • ಹಿಂಬದಿಯ ಕ್ಯಾಮೆರಾ: 50MP (OIS) + 8MP ಅಲ್ಟ್ರಾ-ವೈಡ್ + 2MP ಮ್ಯಾಕ್ರೋ
  • ಮುಂಭಾಗದ ಕ್ಯಾಮೆರಾ: 13MP ಸೆಲ್ಫಿ ಕ್ಯಾಮೆರಾ
  • ಬ್ಯಾಟರಿ: 5000mAh
  • ಚಾರ್ಜಿಂಗ್: 25W Fast Charging

Samsung Galaxy M36 5Gನಲ್ಲಿ ಕ್ಯಾಮೆರಾ ಪ್ರೊಸೆಸಿಂಗ್ ಚೆನ್ನಾಗಿದ್ದು, ವಿಶೇಷವಾಗಿ ರಾತ್ರಿ ಫೋಟೋಗಳಲ್ಲಿ ಇದರ ಪರಿಣಾಮ ಕಾಣಿಸುತ್ತದೆ. ಕಡಿಮೆ ಬೆಳಕಿನಲ್ಲೂ ನಾಯ್ಸ್ ಅನ್ನು ನಿಯಂತ್ರಿಸುವುದು ಉತ್ತಮವಾಗಿದ್ದು, OIS + ನೈಟ್ ಮೋಡ್ ಸಹಾಯದಿಂದ ಡಾರ್ಕ್ ಜಾಗಗಳಲ್ಲೂ ಡೀಟೇಲ್ ಹೆಚ್ಚು ಕಳೆದುಹೋಗುವುದಿಲ್ಲ. Portrait ಮೋಡ್‌ನಲ್ಲೂ ಬ್ಯಾಕ್‌ಗ್ರೌಂಡ್ ಬ್ಲರ್ ಸಹಜವಾಗಿ ಕಾಣುತ್ತದೆ. 13MP ಸೆಲ್ಫಿ ಕ್ಯಾಮೆರಾ ಮೆಗಾಪಿಕ್ಸೆಲ್ ಸಂಖ್ಯೆ ಕಡಿಮೆ ಇದ್ದರೂ, ಸಾಮಾನ್ಯ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗೆ ಉತ್ತಮವಾಗಿಯೇ ಸಾಕಾಗುತ್ತದೆ.

Realme P2 Pro 5G

Realme P2 Pro 5G

ಪ್ರಮುಖ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.7-ಇಂಚಿನ FHD+ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್
  • ಪ್ರೊಸೆಸರ್: Qualcomm Snapdragon 7s Gen 2
  • ಹಿಂಬದಿಯ ಕ್ಯಾಮೆರಾ: 50MP (Sony LYT-600 ಸೆನ್ಸರ್, OIS) + 8MP ಅಲ್ಟ್ರಾ-ವೈಡ್ ಕ್ಯಾಮೆರಾ
  • ಮುಂಭಾಗದ ಕ್ಯಾಮೆರಾ: 32MP ಸೆಲ್ಫಿ ಕ್ಯಾಮೆರಾ
  • ಬ್ಯಾಟರಿ: 5200mAh
  • ಚಾರ್ಜಿಂಗ್: 80W SUPERVOOC Fast Charging

Realme P2 Pro 5Gನ ದೊಡ್ಡ ಸೆನ್ಸರ್ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ತೆಗೆಯಲು ಸಹಾಯ ಮಾಡುತ್ತದೆ. ಹೆಚ್ಚು ಬೆಳಕನ್ನು ಸೆರೆಹಿಡಿಯುವುದರಿಂದ ರಾತ್ರಿ ಅಥವಾ ಒಳಾಂಗಣ ಫೋಟೋಗಳಲ್ಲಿ ಡೀಟೇಲ್ ಚೆನ್ನಾಗಿ ಕಾಣುತ್ತದೆ. Realme ಇಲ್ಲಿ AI HyperRAW ಎಂಬ ಪ್ರೊಸೆಸಿಂಗ್ ಬಳಸುತ್ತಿದ್ದು, ಇದು ಸ್ಕೈ/ಶ್ಯಾಡೋ ಎರಡರಲ್ಲೂ ಬ್ಯಾಲೆನ್ಸ್ ಕಾಪಾಡಲು ಸಹಾಯ ಮಾಡುತ್ತದೆ. ಬ್ಯಾಕ್‌ಲಿಟ್ ಫೋಟೋಗಳಲ್ಲಿ ಇದು ವಿಶೇಷವಾಗಿ ಎದ್ದು ಕಾಣುತ್ತದೆ. OIS ಇರುವುದರಿಂದ ಚಲಿಸುತ್ತಾ ವಿಡಿಯೋ ರೆಕಾರ್ಡ್ ಮಾಡಿದಾಗಲೂ ಫುಟೇಜ್ ಹೆಚ್ಚು ಸ್ಥಿರವಾಗಿರುತ್ತದೆ. ಅಲ್ಟ್ರಾ-ವೈಡ್ ಕ್ಯಾಮೆರಾ ದೊಡ್ಡ ದೃಶ್ಯಗಳನ್ನು ಒಂದೇ ಫ್ರೇಮ್‌ನಲ್ಲಿ ಸೆರೆಹಿಡಿಯಲು ಉಪಯುಕ್ತವಾಗಿದೆ. 32MP ಸೆಲ್ಫಿ ಕ್ಯಾಮೆರಾ ಕೂಡ ಸ್ಪಷ್ಟವಾದ ಫೋಟೋಗಳನ್ನು ನೀಡುತ್ತದೆ.

Samsung Galaxy M17 5G

Samsung Galaxy M17 5G

ಪ್ರಮುಖ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.7-ಇಂಚಿನ FHD+ Super AMOLED ಡಿಸ್ಪ್ಲೇ, 90Hz ರಿಫ್ರೆಶ್ ರೇಟ್
  • ಪ್ರೊಸೆಸರ್: Exynos 1330
  • ಹಿಂಬದಿಯ ಕ್ಯಾಮೆರಾ: 50MP (OIS) + 5MP ಅಲ್ಟ್ರಾ-ವೈಡ್ ಕ್ಯಾಮೆರಾ + 2MP ಮ್ಯಾಕ್ರೋ ಕ್ಯಾಮೆರಾ
  • ಮುಂಭಾಗದ ಕ್ಯಾಮೆರಾ: 13MP ಸೆಲ್ಫಿ ಕ್ಯಾಮೆರಾ
  • ಬ್ಯಾಟರಿ: 5000mAh
  • ಚಾರ್ಜಿಂಗ್: 25W Fast Charging

Galaxy M17 5Gನ 50MP ಮುಖ್ಯ ಕ್ಯಾಮೆರಾ ಹಗಲಿನ ಫೋಟೋಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. OIS ಇರುವುದರಿಂದ 2x ಜೂಮ್‌ನಲ್ಲಿ ಫೋಟೋ ತೆಗೆದಾಗಲೂ ಡೀಟೇಲ್ ಚೆನ್ನಾಗಿ ಉಳಿಯುತ್ತದೆ. ಕಡಿಮೆ ಬೆಳಕಿನಲ್ಲೂ ಸೆನ್ಸರ್ ಸಾಕಷ್ಟು ಬೆಳಕನ್ನು ಸೆರೆಹಿಡಿಯುವುದರಿಂದ ಫೋಟೋಗಳು ಸ್ಪಷ್ಟವಾಗಿ ಬರುತ್ತವೆ. 5MP ಅಲ್ಟ್ರಾ-ವೈಡ್ ಕ್ಯಾಮೆರಾ ರೆಸಲ್ಯೂಷನ್‌ನಲ್ಲಿ ಸ್ವಲ್ಪ ಕಡಿಮೆಯಿದ್ದರೂ, ಒಂದೇ ಫ್ರೇಮ್‌ನಲ್ಲಿ ಹೆಚ್ಚಿನ ದೃಶ್ಯವನ್ನು ಸೆರೆಹಿಡಿಯಲು ಉಪಯುಕ್ತವಾಗಿದೆ. 13MP ಸೆಲ್ಫಿ ಕ್ಯಾಮೆರಾ ಸಾಮಾನ್ಯ ಬಳಕೆ ಮತ್ತು ವಿಡಿಯೋ ಕಾಲ್‌ಗಳಿಗೆ ಸಾಕಾಗುತ್ತದೆ. OIS ಇರುವುದರಿಂದ ಚಲಿಸುತ್ತಾ ವಿಡಿಯೋ ರೆಕಾರ್ಡ್ ಮಾಡಿದಾಗಲೂ ಫುಟೇಜ್ ಹೆಚ್ಚು ಅಲುಗಾಡುವುದಿಲ್ಲ.

Vivo T4x 5G

Vivo T4x 5G

ಪ್ರಮುಖ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.72-ಇಂಚಿನ FHD+ LCD ಡಿಸ್ಪ್ಲೇ, 120Hz ರಿಫ್ರೆಶ್ ರೇಟ್
  • ಪ್ರೊಸೆಸರ್: MediaTek Dimensity 7300
  • ಹಿಂಬದಿಯ ಕ್ಯಾಮೆರಾ: 50MP + 2MP ಡೆಪ್ತ್ ಕ್ಯಾಮೆರಾ
  • ಮುಂಭಾಗದ ಕ್ಯಾಮೆರಾ: 8MP ಸೆಲ್ಫಿ ಕ್ಯಾಮೆರಾ
  • ಬ್ಯಾಟರಿ: 6500mAh
  • ಚಾರ್ಜಿಂಗ್: 44W FlashCharge

ಈ ಪಟ್ಟಿಯಲ್ಲಿರುವ ಫೋನ್‌ಗಳಲ್ಲಿ Vivo T4x 5G ಮಾತ್ರ OIS ಇಲ್ಲದೆ ಬರುತ್ತದೆ. ಆದರೆ AI ಪ್ರೊಸೆಸಿಂಗ್‌ನಿಂದ ಕ್ಯಾಮೆರಾ ಫಲಿತಾಂಶವನ್ನು ಸ್ವಲ್ಪಮಟ್ಟಿಗೆ ಉತ್ತಮಗೊಳಿಸಲಾಗಿದೆ. ಹಗಲಿನಲ್ಲಿ ತೆಗೆದ ಫೋಟೋಗಳು ಚೆನ್ನಾಗಿಯೇ ಬರುತ್ತವೆ. ಆದರೆ ಕಡಿಮೆ ಬೆಳಕಿನಲ್ಲಿ ಸೂಪರ್ ನೈಟ್ ಮೋಡ್ ಆನ್ ಬಳಸಿದಾಗ ಫಲಿತಾಂಶದಲ್ಲಿ ಹೆಚ್ಚು ವ್ಯತ್ಯಾಸ ಕಾಣಿಸುತ್ತದೆ. AI Erase ಫೀಚರ್ ಕೂಡ ಉಪಯುಕ್ತವಾಗಿದ್ದು, ಫೋಟೋದಲ್ಲಿರುವ ಅನಗತ್ಯ ವ್ಯಕ್ತಿಗಳು ಅಥವಾ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. 2MP ಡೆಪ್ತ್ ಕ್ಯಾಮೆರಾ ಮುಖ್ಯವಾಗಿ Portrait ಫೋಟೋಗಳಿಗೆ ಸೀಮಿತವಾಗಿದೆ. 8MP ಸೆಲ್ಫಿ ಕ್ಯಾಮೆರಾ ಕೂಡ ಸಾಮಾನ್ಯ ಮಟ್ಟದಲ್ಲಿದ್ದು, ಸೆಲ್ಫಿಗೆ ಆದ್ಯತೆ ಕೊಡುವವರು ಇದನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಳ್ಳಬಹುದು.

ತೀರ್ಮಾನ (Conclusion)

ಈ ಪಟ್ಟಿಯಲ್ಲಿರುವ ಎಲ್ಲಾ ಫೋನ್‌ಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿವೆ. ಉತ್ತಮ ಫೋಟೋ, ಸೆಲ್ಫಿ ಅಥವಾ ವಿಡಿಯೋ ರೆಕಾರ್ಡಿಂಗ್‌ಗೆ ಯಾವುದು ಹೆಚ್ಚು ಮುಖ್ಯವೋ ಅದರ ಆಧಾರದ ಮೇಲೆ ನಿಮಗೆ ಸೂಕ್ತವಾದ ಫೋನ್‌ನ್ನು ಆಯ್ಕೆ ಮಾಡಬಹುದು. ಖರೀದಿಸುವ ಮೊದಲು ಇತ್ತೀಚಿನ ಬೆಲೆ ಮತ್ತು ಲಭ್ಯವಿರುವ ಆಫರ್‌ಗಳನ್ನು ಪರಿಶೀಲಿಸಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

1. ₹20,000 ಒಳಗೆ OIS ಇರುವ ಕ್ಯಾಮೆರಾ ಫೋನ್ ಖರೀದಿಸುವುದು ಉತ್ತಮವೇ?

ಹೌದು. OIS ಇರುವುದರಿಂದ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದು. ಜೊತೆಗೆ, ವಿಡಿಯೋ ರೆಕಾರ್ಡಿಂಗ್ ವೇಳೆ ಅಲುಗಾಟವೂ ಕಡಿಮೆಯಾಗುತ್ತದೆ.

2. Instagram Reels ಮತ್ತು YouTube ವೀಡಿಯೊಗಳಿಗೆ ಯಾವ ಫೋನ್ ಸೂಕ್ತ?

Moto G86 Power, POCO X7 5G ಮತ್ತು Realme P2 Pro 5G ಉತ್ತಮ ಕ್ಯಾಮೆರಾ ಹಾಗೂ ಸ್ಥಿರ ವಿಡಿಯೋ ರೆಕಾರ್ಡಿಂಗ್ ಅನುಭವವನ್ನು ನೀಡುತ್ತವೆ.

3. 50MP ಕ್ಯಾಮೆರಾ ಇದ್ದರೆ ಮಾತ್ರ ಉತ್ತಮ ಫೋಟೋ ಬರುತ್ತದೆಯೇ?

ಇಲ್ಲ. ಉತ್ತಮ ಫೋಟೋ ಗುಣಮಟ್ಟಕ್ಕೆ ಸೆನ್ಸಾರ್ ಕ್ವಾಲಿಟಿ, OIS, ಇಮೇಜ್ ಪ್ರೊಸೆಸಿಂಗ್ ಮತ್ತು ಸಾಫ್ಟವೇರ್ ಆಪ್ಟಿಮೈಸೇಶನ್ ಕೂಡ ಪ್ರಮುಖ ಪಾತ್ರ ವಹಿಸುತ್ತವೆ.

4. ₹20,000 ಒಳಗೆ ಕ್ಯಾಮೆರಾ ಫೋನ್‌ಗಳಲ್ಲಿ 4K ವಿಡಿಯೋ ರೆಕಾರ್ಡಿಂಗ್ ಸಿಗುತ್ತದೆಯೇ?

ಹೌದು. ₹20,000 ಒಳಗಿನ ಕೆಲವು ಫೋನ್‌ಗಳು 4K ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲ ನೀಡುತ್ತವೆ. ಆದರೆ ಈ ವೈಶಿಷ್ಟ್ಯವು ಎಲ್ಲಾ ಫೋನ್‌ಗಳಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ ಖರೀದಿಸುವ ಮೊದಲು ಆ ಫೋನ್‌ನ ಅಧಿಕೃತ ವಿಶೇಷಣಗಳನ್ನು ಪರಿಶೀಲಿಸುವುದು ಉತ್ತಮ.

5. ₹20,000 ಒಳಗಿನ ಕ್ಯಾಮೆರಾ ಫೋನ್ ಖರೀದಿಸುವಾಗ ಯಾವ ಅಂಶಗಳನ್ನು ಗಮನಿಸಬೇಕು?

ಕ್ಯಾಮೆರಾ ಫೋನ್ ಖರೀದಿಸುವಾಗ ಕೇವಲ ಕ್ಯಾಮೆರಾ ಮೆಗಾಪಿಕ್ಸೆಲ್‌ಗಳನ್ನು ಮಾತ್ರ ಗಮನಿಸದೆ, OIS, ಸೆನ್ಸಾರ್ ಕ್ವಾಲಿಟಿ, ಸೆಲ್ಫಿ ಕ್ಯಾಮೆರಾ, ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ, ಪ್ರೊಸೆಸರ್ ಹಾಗೂ ಬ್ಯಾಟರಿ ಕಾರ್ಯಕ್ಷಮತೆಯನ್ನೂ ಪರಿಗಣಿಸಿ ಫೋನ್ ಆಯ್ಕೆ ಮಾಡುವುದು ಉತ್ತಮ. 

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →