ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Xiaomi ಹೊಸ ಬಜೆಟ್ 5G ಫೋನ್ Redmi 17C – ಏನೇನಿದೆ ಈ ಫೋನ್‌ನಲ್ಲಿ?

Author
Published
25/09/2026
Updated
25/09/2026
Published On: September 25, 2026 5:01 pm
Redmi 17C
Google News
Follow Us

ಬಜೆಟ್ ಫೋನ್ ಖರೀದಿಸಲು ಕಾಯುತ್ತಿರುವವರಿಗೆ ಶಿಯೋಮಿ (Xiaomi) ಕಡೆಯಿಂದ ಇದೀಗ ಒಂದು ಹೊಸ ಅಪ್‌ಡೇಟ್ ಸಿಕ್ಕಿದೆ. ರೆಡ್ಮಿ 17C 5G (Redmi 17C 5G) ಅನ್ನು ಭಾರತದಲ್ಲಿ ಅಕ್ಟೋಬರ್ 1ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಕಂಪನಿ ಅಧಿಕೃತವಾಗಿ ತಿಳಿಸಿದೆ. mi ವೆಬ್‌ಸೈಟ್‌ನಲ್ಲಿ ಈಗಾಗಲೇ ಟೀಸರ್ ಪೇಜ್ ಲೈವ್ ಆಗಿದ್ದು, ಲಾಂಚ್ ದಿನಾಂಕವೂ ಸ್ಪಷ್ಟವಾಗಿದೆ. “Main Character Energy” ಅನ್ನೋ ಟ್ಯಾಗ್‌ಲೈನ್‌ನೊಂದಿಗೆ ಪರಿಚಯಿಸಲಾಗುತ್ತಿರುವ ಈ ಫೋನ್, ಕಳೆದ ವರ್ಷದ ರೆಡ್ಮಿ 15C 5G ಮಾದರಿಯ ಮುಂದಿನ ಆವೃತ್ತಿಯಾಗಿದೆ.

ಈ ಬಾರಿ ಡಿಸೈನ್‌ನಲ್ಲೂ ಶಿಯೋಮಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕಂಪನಿ ಇದನ್ನು “Astral Camera Deco” ಎಂದು ಕರೆಯುತ್ತಿದ್ದು, ಗ್ಲೋಬಲ್ ಸೈಟ್‌ನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಡಿಸೈನ್‌ಗಿಂತ ಭಾರತೀಯ ವೇರಿಯಂಟ್ ಸ್ವಲ್ಪ ವಿಭಿನ್ನವಾಗಿ ಕಾಣುತ್ತಿದೆ. ಹಾಗಾದ್ರೆ ಟೀಸರ್‌ನಲ್ಲಿ ಏನೇನು ಮಾಹಿತಿ ಸಿಕ್ಕಿದೆ? ರೆಡ್ಮಿ 17C 5G ಬಗ್ಗೆ ಇದುವರೆಗೆ ನಮಗೆ ಗೊತ್ತಿರುವ ವಿಷಯಗಳೇನು? ಒಂದೊಂದಾಗಿ ನೋಡೋಣ.

ಹೊಸ ಡಿಸೈನ್ – Astral Camera Deco

ಹೊಸ ಡಿಸೈನ್ - Astral Camera Deco

mi ಟೀಸರ್ ಪೇಜ್‌ನಲ್ಲಿರುವ ಮಾಹಿತಿಯ ಪ್ರಕಾರ, ರೆಡ್ಮಿ 17C 5G ಈ ಬಾರಿ ಹೊಸ ಬ್ಯಾಕ್ ಡಿಸೈನ್‌ನೊಂದಿಗೆ ಬರಲಿದೆ. ಈ ಹಿಂದೆ ಗ್ಲೋಬಲ್ ಸೈಟ್‌ನಲ್ಲಿ ನೋಡಿದ್ದ ಫ್ಲೋಟಿಂಗ್ ಕ್ರೇಟರ್ ಡಿಸೈನ್‌ಗೆ ಬದಲಾಗಿ, ಭಾರತೀಯ ವೇರಿಯಂಟ್‌ನಲ್ಲಿ ಡ್ಯುಯಲ್ ಸರ್ಕಲ್ ಕ್ಯಾಮೆರಾ ಮಾಡ್ಯುಲ್ ಇಟ್ಟಿರೋದು ಕಾಣಿಸ್ತಿದೆ. ಇದಕ್ಕೆ ಕಂಪನಿ “Astral Camera Deco” ಎಂದು ಹೆಸರಿಟ್ಟಿದೆ.

ಟೀಸರ್ ಇಮೇಜ್‌ನಲ್ಲಿ ಮೂರು ಬಣ್ಣಗಳನ್ನೂ ತೋರಿಸಲಾಗಿದೆ. ಡಾರ್ಕ್ ನೈಟ್, ಕಾಫಿ ಬ್ರೂ ಮತ್ತು ಪರ್ಪಲ್ ಡಾನ್. ಡಾರ್ಕ್ ನೈಟ್ ಒಂದು ಡೀಪ್ ಗ್ರೇ-ಬ್ಲ್ಯಾಕ್ ಶೇಡ್ ಆಗಿದ್ದು, ಮ್ಯಾಟ್ ಫಿನಿಶ್ ಜೊತೆ ಬರುತ್ತೆ. ಕಾಫಿ ಬ್ರೂ ಗೋಲ್ಡ್ ಬಾರ್ಡರ್ ಹೊಂದಿರುವ ಲೆದರ್-ಟೆಕ್ಸ್ಚರ್ ಬ್ರೌನ್ ಬ್ಯಾಕ್ ಪ್ಯಾನಲ್ ಹೊಂದಿದ್ದು, ಫೋನ್‌ಗೆ ಪ್ರೀಮಿಯಂ ಲುಕ್ ಕೊಡುತ್ತೆ. ಮೂರನೇ ಬಣ್ಣ ಪರ್ಪಲ್ ಡಾನ್, ಇದು ಸಾಫ್ಟ್ ಲ್ಯಾವೆಂಡರ್-ಪರ್ಪಲ್ ಶೇಡ್ ಆಗಿದೆ. ಫ್ರಂಟ್‌ನಲ್ಲಿ ಚಿಕ್ಕ ವಾಟರ್‌ಡ್ರಾಪ್ ನಾಚ್ ಕೂಡ ಸ್ಪಷ್ಟವಾಗಿ ಕಾಣಿಸುತ್ತೆ.

Redmi 17C 5G ಲಾಂಚ್ ದಿನಾಂಕ 

ರೆಡ್ಮಿ 17C 5G ಭಾರತದಲ್ಲಿ ಅಕ್ಟೋಬರ್ 1ರಂದೇ ಅಧಿಕೃತವಾಗಿ ಬಿಡುಗಡೆಯಾಗಲಿದೆ ಅನ್ನೋದು ಈಗ ಖಚಿತವಾಗಿದೆ. ಆದ್ರೆ ಸದ್ಯದ ಟೀಸರ್ ಪೇಜ್‌ನಲ್ಲಿ ಡಿಸೈನ್ ಮತ್ತು ಲಾಂಚ್ ದಿನಾಂಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ನೀಡಲಾಗಿದೆ. 

ಫೋನ್‌ನ ಸಂಪೂರ್ಣ ಸ್ಪೆಸಿಫಿಕೇಶನ್‌ಗಳು ಮತ್ತು ಬೆಲೆಯನ್ನು ಶಿಯೋಮಿ ಇನ್ನೂ ಬಹಿರಂಗಪಡಿಸಿಲ್ಲ. ಈ ವಿವರಗಳನ್ನು ಲಾಂಚ್ ದಿನ ಅಥವಾ ಅದಕ್ಕೂ ಮುಂಚೆ ಕಂಪನಿ ಹಂತ ಹಂತವಾಗಿ ತಿಳಿಸುವ ಸಾಧ್ಯತೆ ಇದೆ.

Also Read: Redmi 17 5G: ₹23,999 ಬೆಲೆಗೆ 7900mAh ಬ್ಯಾಟರಿ, ಮತ್ತೇನಿದೆ?

Redmi 17C 5G: ಫೀಚರ್ಸ್ ಮತ್ತು ಸ್ಪೆಕ್ಸ್

Redmi 17C 5G: ಫೀಚರ್ಸ್ ಮತ್ತು ಸ್ಪೆಕ್ಸ್

ಫೋನ್ ಈಗಾಗಲೇ ಶಿಯೋಮಿಯ ಗ್ಲೋಬಲ್ ವೆಬ್‌ಸೈಟ್‌ನಲ್ಲಿ ಲಿಸ್ಟ್ ಆಗಿರೋದ್ರಿಂದ, ಅಲ್ಲಿನ ಮಾಹಿತಿಯ ಪ್ರಕಾರ 6.9 ಇಂಚಿನ 120Hz ಡಿಸ್‌ಪ್ಲೇ ಸಿಗಲಿದೆ. ಇದು 660 nits ಬ್ರೈಟ್‌ನೆಸ್ ಕೊಡುತ್ತೆ. ಮೀಡಿಯಾಟೆಕ್ ಡೈಮೆನ್ಸಿಟಿ 6300 (MediaTek Dimensity 6300) ಚಿಪ್‌ಸೆಟ್ ನೀಡಲಾಗಿದ್ದು, 6nm ಪ್ರೊಸೆಸ್‌ನಲ್ಲಿ ತಯಾರಿಸಲಾಗಿದೆ. RAM 4GB ಇದ್ದು, ಮೆಮೊರಿ ಎಕ್ಸ್‌ಟೆನ್ಶನ್ ಮೂಲಕ 8GB ವರೆಗೆ ಹೆಚ್ಚಿಸಿಕೊಳ್ಳಬಹುದು. ಸ್ಟೋರೇಜ್ 64GB ಮತ್ತು 128GB ಆಯ್ಕೆಗಳಲ್ಲಿ ಸಿಗಲಿದ್ದು, microSD ಕಾರ್ಡ್ ಬಳಸಿ 1TB ವರೆಗೆ ವಿಸ್ತರಿಸಬಹುದು.

ಬ್ಯಾಟರಿ ವಿಷಯಕ್ಕೆ ಬಂದರೆ, 6000mAh ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ. ಕ್ಯಾಮೆರಾ ವಿಭಾಗದಲ್ಲಿ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಇರುತ್ತದೆ. ಸಾಫ್ಟ್‌ವೇರ್‌ಗಾಗಿ ಶಿಯೋಮಿ ಹೈಪರ್‌ಓಎಸ್ 3 (Xiaomi HyperOS 3) ಆಧಾರಿತ ಆಂಡ್ರಾಯ್ಡ್ 16 (Android 16) ಸಿಗಲಿದ್ದು, ಗೂಗಲ್ ಜೆಮಿನಿ AI ಅಸಿಸ್ಟೆಂಟ್ ಕೂಡ ಮೊದಲೇ ಇನ್‌ಸ್ಟಾಲ್ ಆಗಿರುತ್ತದೆ. ಇನ್ನು IP64 ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, 3.5mm ಹೆಡ್‌ಫೋನ್ ಜಾಕ್ ಮತ್ತು NFC ಸಪೋರ್ಟ್ ಕೂಡ ಇದೆ.

Redmi 17C 5G: ಬೆಲೆ ಎಷ್ಟಿರಬಹುದು?

ಶಿಯೋಮಿ ಇನ್ನೂ ಅಧಿಕೃತ ಬೆಲೆ ಪ್ರಕಟಿಸಿಲ್ಲ. ಆದ್ರೆ ಕೆಲವು ವರದಿಗಳ ಪ್ರಕಾರ, ಫೋನ್ ₹19,990 ಆಸುಪಾಸಿನಲ್ಲಿ ಬರಬಹುದು ಎನ್ನಲಾಗ್ತಿದೆ. ಹಿಂದಿನ ರೆಡ್ಮಿ 15C 5G ₹12,499ಕ್ಕೆ ಲಾಂಚ್ ಆಗಿತ್ತು ಅನ್ನೋದನ್ನ ನೋಡಿದ್ರೆ, ಈ ಬಾರಿ ಫೋನ್‌ನಲ್ಲಿ ಚಿಪ್‌ಸೆಟ್, ಬ್ಯಾಟರಿ ಮತ್ತು ಕ್ಯಾಮೆರಾದಲ್ಲಿ ಅಪ್‌ಗ್ರೇಡ್‌ಗಳು ಇರೋದ್ರಿಂದ ಬೆಲೆ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಆದ್ರೂ ಇದು ಕೇವಲ ಅಂದಾಜು, ನಿಖರವಾದ ಬೆಲೆ ಲಾಂಚ್ ದಿನವೇ ಗೊತ್ತಾಗುತ್ತೆ.

Also Read: ₹25,000 ಒಳಗೆ Best Phone ಯಾವುದು? Top 7 5G Phones ಹೋಲಿಕೆ (2026)

ಕೊನೆಯ ಮಾತು

ರೆಡ್ಮಿ 17C 5G ಈಗ ಭಾರತ ಮಾರುಕಟ್ಟೆಯಲ್ಲಿ ದೊಡ್ಡ ಸದ್ದು ಮಾಡೋಕೆ ರೆಡಿ ಆಗ್ತಿದೆ. ದೊಡ್ಡ ಬ್ಯಾಟರಿ, 5G ಸಪೋರ್ಟ್ ಮತ್ತು ಹೊಸ ಡಿಸೈನ್ ಕೂಡ ಇರೋದ್ರಿಂದ, ಬಜೆಟ್ ಫೋನ್ ಹುಡುಕೋರಿಗೆ ಇದು ಒಳ್ಳೆಯ ಆಯ್ಕೆಯಾಗಬಹುದು. ಅಕ್ಟೋಬರ್ 1ಕ್ಕೂ ಮುಂಚೆ ಶಿಯೋಮಿ ಇನ್ನಷ್ಟು ಟೀಸರ್‌ಗಳ ಮೂಲಕ ಫೋನ್‌ನ ಕೆಲವು ವಿವರಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಖರೀದಿಸಲು ಆಸಕ್ತಿ ಇರೋರು, ಅಂತಿಮ ಬೆಲೆ ಮತ್ತು ಸ್ಪೆಕ್ಸ್ ಏನು ಅನ್ನೋದನ್ನ ನೋಡಿಕೊಂಡು ಆಮೇಲೆ ನಿರ್ಧಾರ ಮಾಡೋದು ಒಳ್ಳೇದು.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →