ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

POCO F9 Series: 200MP ಕ್ಯಾಮೆರಾ, 185Hz ಡಿಸ್‌ಪ್ಲೇ ಜೊತೆ ಲಾಂಚ್

Author
Published
25/09/2026
Updated
25/09/2026
Published On: September 25, 2026 11:17 pm
POCO F9 Series
Google News
Follow Us

ಪ್ರತಿ ವರ್ಷ ಪೊಕೊ (POCO) ಫ್ಯಾನ್ಸ್ ಕುತೂಹಲದಿಂದ ಕಾಯುವ ಸೀರೀಸ್‌ಗಳಲ್ಲಿ F ಸೀರೀಸ್ ಕೂಡ ಒಂದು. ಕಡಿಮೆ ಬೆಲೆಯಲ್ಲಿ ಫ್ಲ್ಯಾಗ್‌ಶಿಪ್ ಮಟ್ಟದ ಪರ್ಫಾರ್ಮೆನ್ಸ್ ನೀಡುವ ಕಾರಣ ಈ ಸೀರೀಸ್‌ಗೆ ಸಾಕಷ್ಟು ಬೇಡಿಕೆ ಇದೆ. ಈ ಬಾರಿ ಕಂಪನಿ ಸೆಪ್ಟೆಂಬರ್ 1ರಂದು ಪೊಕೊ F9 ಸೀರೀಸ್ (POCO F9 Series) ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. “UltraPower Unbound” ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಂದಿರುವ ಈ ಸೀರೀಸ್ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಇಲ್ಲಿ ಸ್ಪಷ್ಟಪಡಿಸಬೇಕಾದ ಒಂದು ಮುಖ್ಯ ವಿಷಯ ಎಂದರೆ, ಈ ಫೋನ್ ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಮಲೇಷ್ಯಾ ಸೇರಿದಂತೆ ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಮಾತ್ರ ಲಾಂಚ್ ಆಗಿದೆ. ಭಾರತದಲ್ಲಿ ಈ ಸೀರೀಸ್ ಯಾವಾಗ ಬರುತ್ತದೆ ಎಂಬ ಬಗ್ಗೆ ಕಂಪನಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಹಾಗಾಗಿ ಈ ಆರ್ಟಿಕಲ್‌ನಲ್ಲಿ ಗ್ಲೋಬಲ್ ವರ್ಷನ್‌ನ ಫೀಚರ್‌ಗಳು ಮತ್ತು ಸಂಪೂರ್ಣ ಸ್ಪೆಸಿಫಿಕೇಶನ್‌ಗಳನ್ನು ನೋಡೋಣ.

ಇನ್ನೊಂದು ವಿಶೇಷತೆ ಎಂದರೆ, ಈ ಬಾರಿ ಸ್ಟ್ಯಾಂಡರ್ಡ್ “ಪೊಕೊ F9” ಮಾಡೆಲ್ ಅನ್ನು ಕಂಪನಿ ಪರಿಚಯಿಸಿಲ್ಲ. ಬದಲಿಗೆ ನೇರವಾಗಿ ಪೊಕೊ F9 ಪ್ರೊ (POCO F9 Pro) ಮತ್ತು ಪೊಕೊ F9 ಪ್ರೊ ಅಲ್ಟ್ರಾ (POCO F9 Ultra) ಎಂಬ ಎರಡು ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಇವೆರಡೂ ಚೀನಾದ Redmi K100 ಸೀರೀಸ್‌ನ ರೀಬ್ರಾಂಡೆಡ್ ಗ್ಲೋಬಲ್ ವರ್ಷನ್‌ಗಳಾಗಿವೆ.

185Hz ಡಿಸ್‌ಪ್ಲೇ ಮತ್ತು 10,000 ನಿಟ್ಸ್ ಬ್ರೈಟ್‌ನೆಸ್

POCO F9 Pro

ಪೊಕೊ F9 ಪ್ರೊನಲ್ಲಿ 6.59 ಇಂಚಿನ HyperRGB AMOLED ಸ್ಕ್ರೀನ್ ಇದ್ದು, 1156×2510 ರೆಸಲ್ಯೂಶನ್ ಹೊಂದಿದೆ. F9 ಅಲ್ಟ್ರಾ ಸ್ವಲ್ಪ ದೊಡ್ಡದಾಗಿದ್ದು, 6.9 ಇಂಚಿನ ಪ್ಯಾನಲ್ ಮತ್ತು 1200×2608 ರೆಸಲ್ಯೂಶನ್ ಕೊಡುತ್ತದೆ. F9 ಪ್ರೊ ಮತ್ತು ಅಲ್ಟ್ರಾ ಎರಡರಲ್ಲೂ 185Hz ರಿಫ್ರೆಶ್ ರೇಟ್, 480Hz ಟಚ್ ಸ್ಯಾಂಪ್ಲಿಂಗ್ ಮತ್ತು ಗರಿಷ್ಠ 4800Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ಇದೆ. ಬ್ರೈಟ್‌ನೆಸ್ ಸಾಮಾನ್ಯವಾಗಿ 4500 nits ಮತ್ತು HDR ಕಂಟೆಂಟ್‌ಗೆ 10000 nits ವರೆಗೆ ಹೋಗುತ್ತದೆ ಎಂದು ಕಂಪನಿ ಹೇಳುತ್ತಿದೆ. ಡಾಲ್ಬಿ ವಿಷನ್, HDR10+ ಜೊತೆಗೆ ಗೊರಿಲ್ಲಾ ಗ್ಲಾಸ್ 7i ಪ್ರೊಟೆಕ್ಷನ್ ಕೂಡ ಇದೆ.

ಬಣ್ಣಗಳ ವಿಷಯದಲ್ಲಿ F9 ಪ್ರೊ ಬ್ಲ್ಯಾಕ್, ವೈಟ್ ಮತ್ತು ಔರೋರಾ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಗ್ರೀನ್ ವೇರಿಯಂಟ್ ಬೆಳಕಿಗೆ ಒಡ್ಡಿಕೊಂಡ ನಂತರ ಗ್ಲೋ ಆಗುವ ವಿಶೇಷ ಫಿನಿಶ್ ಹೊಂದಿದೆ. F9 ಅಲ್ಟ್ರಾ ಬ್ಲ್ಯಾಕ್ ಮತ್ತು ಡಾರ್ಕ್ ಚೆರಿ ಬಣ್ಣಗಳಲ್ಲಿ ಬರುತ್ತದೆ. ಇದರ ಬ್ಯಾಕ್ ಪ್ಯಾನಲ್ ಗ್ಲಾಸ್-ಫೈಬರ್ ಟೆಕ್ಸ್ಚರ್ ಹೊಂದಿದ್ದು, ಸ್ಪೀಕರ್ ಏರಿಯಾದ ಸುತ್ತ ಇಂಟರಾಕ್ಟಿವ್ ಲೈಟಿಂಗ್ ಇದೆ. ಎರಡೂ ಫೋನ್‌ಗಳಿಗೆ IP68 ರೇಟಿಂಗ್ ಇರುವುದರಿಂದ ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆ ಸಿಗುತ್ತದೆ.

ಫ್ಲ್ಯಾಗ್‌ಶಿಪ್ ಪರ್ಫಾರ್ಮೆನ್ಸ್ ಮತ್ತು ಗೇಮಿಂಗ್

ಗೇಮಿಂಗ್ ಮತ್ತು ಪರ್ಫಾರ್ಮೆನ್ಸ್ ವಿಚಾರದಲ್ಲಿ F9 ಅಲ್ಟ್ರಾದಲ್ಲಿ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಜೆನ್ 5 (Snapdragon 8 Elite Gen 5) ಚಿಪ್‌ಸೆಟ್ ಇದ್ದರೆ, F9 ಪ್ರೊನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಜೆನ್ 5 V ಸೀರೀಸ್ ವೇರಿಯಂಟ್ ನೀಡಲಾಗಿದೆ. ಎರಡೂ ಚಿಪ್‌ಸೆಟ್‌ಗಳು 3nm ಪ್ರಾಸೆಸ್‌ನಲ್ಲಿ ತಯಾರಾಗಿದ್ದು, Adreno 840 GPU ಹೊಂದಿವೆ. ಆದರೆ F9 ಅಲ್ಟ್ರಾದಲ್ಲಿ ಫುಲ್ GPU ಕಾನ್ಫಿಗರೇಶನ್ ಸಿಗುತ್ತದೆ.

ಇದರ ಜೊತೆಗೆ ವಿಷನ್‌ಬೂಸ್ಟ್ D8 (VisionBoost D8) ಎಂಬ ಪ್ರತ್ಯೇಕ ಗ್ರಾಫಿಕ್ಸ್ ಚಿಪ್ ಕೂಡ ಇದೆ. ಇದು AI ಆಧಾರಿತ ಫ್ರೇಮ್ ಜನರೇಶನ್ ಮತ್ತು ಸೂಪರ್-ರೆಸಲ್ಯೂಶನ್ ಪ್ರೊಸೆಸಿಂಗ್‌ಗಾಗಿ ಕೆಲಸ ಮಾಡುತ್ತದೆ. ಕಂಪನಿ ಪ್ರಕಾರ, 20ಕ್ಕೂ ಹೆಚ್ಚು ಗೇಮ್‌ಗಳಲ್ಲಿ 185fps ವರೆಗೆ ಗೇಮಿಂಗ್ ಮಾಡಲು ಸಾಧ್ಯವಾಗುತ್ತದೆ. ಮೆಮೊರಿ ವಿಚಾರದಲ್ಲಿ F9 ಪ್ರೊ 12GB RAM ಜೊತೆಗೆ 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿ ಸಿಗುತ್ತದೆ. F9 ಅಲ್ಟ್ರಾ 12GB ಮತ್ತು 16GB RAM ಆಯ್ಕೆಗಳೊಂದಿಗೆ, ಗರಿಷ್ಠ 1TB ಸ್ಟೋರೇಜ್‌ವರೆಗೆ ಲಭ್ಯವಿದೆ.

200MP ಕ್ಯಾಮೆರಾ ಮತ್ತು ಝೂಮ್ ಫೀಚರ್ಸ್

POCO F9 Ultra

ಈ ಸೀರೀಸ್‌ನಲ್ಲಿ ಪೊಕೊ ಬ್ರಾಂಡ್ ಮೊದಲ ಬಾರಿಗೆ 200MP ಮುಖ್ಯ ಕ್ಯಾಮೆರಾ ನೀಡಿದೆ. F9 ಪ್ರೊನಲ್ಲಿ 50MP 2.5x ಫ್ಲೋಟಿಂಗ್ ಟೆಲಿಫೋಟೋ ಲೆನ್ಸ್ ಮತ್ತು OIS ಸಪೋರ್ಟ್ ಇದೆ. ಇದು 10cm ಹತ್ತಿರದಿಂದಲೂ ಫೋಕಸ್ ಮಾಡಬಹುದು. ಇದರ ಜೊತೆಗೆ 8MP ಅಲ್ಟ್ರಾವೈಡ್ ಕ್ಯಾಮೆರಾ ಕೂಡ ಇದೆ.

F9 ಅಲ್ಟ್ರಾದಲ್ಲಿ ಬೇರೆ ರೀತಿಯ ಕ್ಯಾಮೆರಾ ಸೆಟಪ್ ಇದ್ದು, 5x ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಇದೆ. ಇದು 10x ಲಾಸ್‌ಲೆಸ್ ಝೂಮ್ ಮತ್ತು 20x AI ಝೂಮ್ ಸಪೋರ್ಟ್ ಹೊಂದಿದೆ. ಇದರ ಜೊತೆಗೆ 50MP ಅಲ್ಟ್ರಾವೈಡ್ ಸೆನ್ಸರ್ ಕೂಡ ಇದೆ. ಸೆಲ್ಫಿಗಾಗಿ ಎರಡೂ ಫೋನ್‌ಗಳಲ್ಲಿ 32MP ಫ್ರಂಟ್ ಕ್ಯಾಮೆರಾ ಇದ್ದು, 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು. F9 ಅಲ್ಟ್ರಾದ ರಿಯರ್ ಕ್ಯಾಮೆರಾದಲ್ಲಿ 8K ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಬಹುದು.

Also Read: Motorola Signature 27: 200MP ಕ್ಯಾಮೆರಾ, B&O ಆಡಿಯೋ ಜೊತೆ ಹೊಸ ಫ್ಲ್ಯಾಗ್‌ಶಿಪ್!

8050mAh ಬ್ಯಾಟರಿ ಮತ್ತು 100W ಚಾರ್ಜಿಂಗ್

ಬ್ಯಾಟರಿ ವಿಚಾರದಲ್ಲಿ ಪೊಕೊ ಈ ಬಾರಿ ದೊಡ್ಡ ಬದಲಾವಣೆ ಮಾಡಿದೆ. F9 ಪ್ರೊನಲ್ಲಿ 6330mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇದ್ದರೆ, F9 ಅಲ್ಟ್ರಾದಲ್ಲಿ ಬರೋಬ್ಬರಿ 8050mAh ಬ್ಯಾಟರಿ ಇದೆ. ಚಾರ್ಜಿಂಗ್‌ಗೂ ಇಲ್ಲಿ ಸಾಕಷ್ಟು ಗಮನ ನೀಡಲಾಗಿದ್ದು, 100W ವೈಯರ್ಡ್, 50W ವೈರ್‌ಲೆಸ್, 27W ರಿವರ್ಸ್ ವೈಯರ್ಡ್ ಮತ್ತು 22.5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಎರಡರಲ್ಲೂ ಇದೆ.

ಸಾಫ್ಟ್‌ವೇರ್ ಮತ್ತು ಇತರ ಫೀಚರ್‌ಗಳು

ಎರಡೂ ಫೋನ್‌ಗಳು ಆಂಡ್ರಾಯ್ಡ್ 16 ಆಧಾರಿತ HyperOS 3 ನಲ್ಲಿ ರನ್ ಆಗುತ್ತವೆ. ಪೊಕೊ 4 ವರ್ಷಗಳ ಆಂಡ್ರಾಯ್ಡ್ ಅಪ್‌ಡೇಟ್ ಮತ್ತು 6 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ನೀಡುವುದಾಗಿ ಹೇಳಿದೆ. ಕನೆಕ್ಟಿವಿಟಿಗೆ 5G, Wi-Fi 7, Bluetooth 6.0, NFC, ಡ್ಯುಯಲ್ ಸಿಮ್, eSIM, ಇನ್ಫ್ರಾರೆಡ್ ಮತ್ತು USB-C ಇವೆಲ್ಲಾ ಸೇರಿವೆ. ಸೆಕ್ಯುರಿಟಿಗೆ ಅಲ್ಟ್ರಾಸಾನಿಕ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಬಳಸಲಾಗಿದೆ.

ಆಡಿಯೋ ವಿಚಾರದಲ್ಲೂ ಪೊಕೊ ಈ ಬಾರಿ Bose ಜೊತೆ ಕೈಜೋಡಿಸಿ “Sound by Bose” ಟ್ಯೂನಿಂಗ್ ತಂದಿದೆ. ಈ ಫೀಚರ್ ಅನ್ನು X ಪ್ಲಾಟ್‌ಫಾರ್ಮ್‌ನಲ್ಲಿ ನೀಡಿದ ಜಾಹೀರಾತಿನಲ್ಲೂ ಹೈಲೈಟ್ ಮಾಡಲಾಗಿದೆ.

POCO F9 Series ಬೆಲೆ

ಗ್ಲೋಬಲ್ ಮಾರುಕಟ್ಟೆಯಲ್ಲಿ POCO F9 ಪ್ರೊ 12GB+256GB ವೇರಿಯಂಟ್ $699 (ಸುಮಾರು ₹66,000) ಗೆ ಶುರುವಾಗುತ್ತದೆ. 12GB+512GB ವೇರಿಯಂಟ್‌ಗೆ $769 (ಸುಮಾರು ₹73,000) ಬೆಲೆ ಇದೆ. F9 ಅಲ್ಟ್ರಾ 12GB+256GB ವೇರಿಯಂಟ್ $799 (ಸುಮಾರು ₹76,000)ರಿಂದ ಆರಂಭವಾಗುತ್ತದೆ. 16GB+512GB ವೇರಿಯಂಟ್‌ಗೆ $949 (ಸುಮಾರು ₹90,000) ಮತ್ತು ಟಾಪ್-ಎಂಡ್ 16GB+1TB ವೇರಿಯಂಟ್‌ಗೆ $1,199 (ಸುಮಾರು ₹1.14 ಲಕ್ಷ) ವರೆಗೆ ಹೋಗುತ್ತದೆ. 

Also Read: Xiaomi 18 Pro Series: ಜಗತ್ತಿನ ಮೊದಲ Snapdragon 8 Elite Gen 6 ಫೋನ್

ಭಾರತದಲ್ಲಿ ಲಾಂಚ್ ಯಾವಾಗ?

ಸದ್ಯಕ್ಕೆ ಪೊಕೊ ಇಂಡಿಯಾ ತಂಡದಿಂದ F9 ಸೀರೀಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹಿಂದಿನ ಲಾಂಚ್‌ಗಳನ್ನು ಗಮನಿಸಿದರೆ, ಪೊಕೊ ಕೆಲವೊಮ್ಮೆ ಗ್ಲೋಬಲ್ ಲಾಂಚ್ ಆದ ಕೆಲವು ವಾರಗಳು ಅಥವಾ ತಿಂಗಳುಗಳ ನಂತರ ಭಾರತದಲ್ಲಿ ತನ್ನ ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಕೆಲವೊಮ್ಮೆ ಸ್ವಲ್ಪ ಬದಲಾದ ಸ್ಪೆಸಿಫಿಕೇಶನ್ ಜೊತೆಗೂ ಬರುತ್ತದೆ. ಹೀಗಾಗಿ F9 ಸೀರೀಸ್ ಭಾರತಕ್ಕೆ ಯಾವಾಗ ಬರಲಿದೆ ಎಂಬುದಕ್ಕೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಕಂಪನಿ ಅಧಿಕೃತವಾಗಿ ಘೋಷಣೆ ಮಾಡಿದ ನಂತರ ಇದರ ಬಗ್ಗೆ ಅಪ್‌ಡೇಟ್ ಮಾಡುತ್ತೇನೆ.

ಕೊನೆಯ ಮಾತು

ಪೊಕೊ F9 ಸೀರೀಸ್ ಒಟ್ಟಾರೆ ನೋಡಿದರೆ, 185Hz ಡಿಸ್‌ಪ್ಲೇ, 200MP ಕ್ಯಾಮೆರಾ, ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಮತ್ತು 100W ಚಾರ್ಜಿಂಗ್ ಇವೆಲ್ಲಾ ಸೇರಿ, ಗೇಮಿಂಗ್ ಮತ್ತು ಫೋಟೋಗ್ರಫಿ ಎರಡರಲ್ಲೂ ಆಸಕ್ತಿ ಇರುವವರಿಗೆ ಈ ಫೋನ್ ಆಕರ್ಷಕವಾಗಿ ಕಾಣುತ್ತದೆ. ಬಜೆಟ್ ಸ್ವಲ್ಪ ಹೆಚ್ಚಿದ್ದರೂ ಪರವಾಗಿಲ್ಲ ಎನ್ನುವವರಿಗೆ, 8050mAh ಬ್ಯಾಟರಿ, 5x ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು 16GB RAM + 1TB ಸ್ಟೋರೇಜ್‌ವರೆಗೆ ಇರುವ F9 ಅಲ್ಟ್ರಾ ಒಳ್ಳೆಯ ಆಯ್ಕೆಯಾಗಬಹುದು. ಫೋನ್ ಇನ್ನೂ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿಲ್ಲ, ಮತ್ತು ಭಾರತದಲ್ಲಿ ಬಿಡುಗಡೆಯಾದಾಗ ಬೆಲೆ ಅಥವಾ ಸ್ಪೆಸಿಫಿಕೇಶನ್‌ನಲ್ಲಿ ಸಣ್ಣ ಬದಲಾವಣೆ ಆಗುವ ಸಾಧ್ಯತೆಯೂ ಇದೆ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →