ಸ್ಮಾರ್ಟ್‌ವಾಚ್ ಮತ್ತು ವೇರಬಲ್ಸ್ ಕ್ಷೇತ್ರದಲ್ಲಿ ಈಗಾಗಲೇ ಹೆಸರುವಾಸಿಯಾಗಿರುವ ಫೈರ್-ಬೋಲ್ಟ್ (Fire-Boltt) ಕಂಪನಿ, ಇದೀಗ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಿದೆ. ಕಂಪನಿಯ ಹೊಸ ಸಬ್-ಬ್ರಾಂಡ್ ಬೋಲ್ಟ್ ಅಡಿಯಲ್ಲಿ ಎರಡು ಫೋನ್‌ಗಳಾದ ಬೋಲ್ಟ್ ಏಸ್ 5G ಮತ್ತು ಬೋಲ್ಟ್ ಇವೋ 4G (Boltt Ace 5G ಮತ್ತು Boltt Evo 4G) ಅನ್ನು ಆಗಸ್ಟ್ 25, 2026 ರಂದು ಅಧಿಕೃತವಾಗಿ ಪರಿಚಯಿಸಲಾಗಿದೆ. ಈ ಫೋನ್‌ಗಳ ಸೇಲ್ ಇಂದು, ಸೆಪ್ಟೆಂಬರ್ 1, 2026 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭವಾಗಿದೆ. ಈ ಎರಡು ಫೋನ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Fire-Boltt ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶ
ಭಾರತದ ಪ್ರಮುಖ ವೇರಬಲ್ಸ್ ಬ್ರಾಂಡ್‌ಗಳಲ್ಲಿ ಒಂದಾಗಿರುವ ಫೈರ್-ಬೋಲ್ಟ್, ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಕಾಲಿಡಲು ಸುಮಾರು ₹430 ಕೋಟಿ ಹೂಡಿಕೆ ಮಾಡಿದೆ ಎಂದು ವರದಿಯಾಗಿದೆ. ಈ ಫೋನ್‌ಗಳನ್ನು ಭಾರತದಲ್ಲೇ ತಯಾರಿಸಲಾಗಿದ್ದು, ಕಂಪನಿಯು ಫ್ಲಿಪ್‌ಕಾರ್ಟ್ ಜೊತೆ “ಫ್ಲಿಪ್‌ಕಾರ್ಟ್ ಯೂನಿಕ್” ಪ್ರೋಗ್ರಾಂ ಅಡಿ ವಿಶೇಷ ಪಾಲುದಾರಿಕೆ ಮಾಡಿಕೊಂಡಿದೆ.
Boltt Ace 5G – ಸ್ಪೆಸಿಫಿಕೇಶನ್

ಬೋಲ್ಟ್ ಏಸ್ 5G ಈ ಸರಣಿಯ ಫ್ಲ್ಯಾಗ್‌ಶಿಪ್ ಮಾದರಿಯಾಗಿದ್ದು, 5G ಕನೆಕ್ಟಿವಿಟಿ ಬಯಸುವವರಿಗೆ ಸೂಕ್ತ ಆಯ್ಕೆಯಾಗಿದೆ. ಈ ಫೋನ್ 6.79 ಇಂಚಿನ ದೊಡ್ಡ ಸ್ಕ್ರೀನ್ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು 600 nits ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ, ಇದರಿಂದ ಗೇಮಿಂಗ್, ವಿಡಿಯೋ ವೀಕ್ಷಣೆ ಮತ್ತು ಬಿಸಿಲಿನಲ್ಲಿಯೂ ಸ್ಕ್ರೀನ್ ಸ್ಪಷ್ಟವಾಗಿ ಕಾಣುತ್ತದೆ.
ಪರ್ಫಾರ್ಮೆನ್ಸ್‌ಗಾಗಿ ಬೋಲ್ಟ್ ಇವೋ 5Gನಲ್ಲಿ Unisoc T8200 ಚಿಪ್‌ಸೆಟ್ ನೀಡಲಾಗಿದೆ. ಇದು 5G ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯವೂ ಇದೆ.
ಕ್ಯಾಮೆರಾ ವಿಷಯದಲ್ಲಿ, ಈ ಫೋನ್ 64MP ರಿಯರ್ ಕ್ಯಾಮೆರಾ ಮತ್ತು 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದು, ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗೆ ಸೂಕ್ತವಾಗಿದೆ. ಸಾಫ್ಟ್‌ವೇರ್ ಪರವಾಗಿ, ಫೋನ್ ಇತ್ತೀಚಿನ ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಫೋನ್‌ನಲ್ಲಿ NFC ಸಪೋರ್ಟ್ ಇರುವುದರಿಂದ ಕಾಂಟ್ಯಾಕ್ಟ್‌ಲೆಸ್ ಪೇಮೆಂಟ್ಸ್ ಮಾಡಲು ಅನುಕೂಲವಾಗುತ್ತದೆ.
RAM ಮತ್ತು ಸ್ಟೋರೇಜ್‌ಗಾಗಿ 4GB+64GB, 6GB+128GB ಮತ್ತು 8GB+128GB ಎಂಬ ಮೂರು ವೇರಿಯಂಟ್‌ಗಳಿವೆ. ಬಣ್ಣಗಳ ವಿಷಯದಲ್ಲಿ, ಈ ಫೋನ್ ಆರ್ಕ್ಟಿಕ್ ವೈಟ್, ಬೆರಿ ರೆಡ್, ಲ್ಯಾವೆಂಡರ್ ಬ್ಲೂಮ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ಸ್ಕೈ ಬ್ಲೂ ಎಂಬ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
₹10,000 ಒಳಗಿನ 5G ಫೋನ್‌ಗಳ ಆಯ್ಕೆಗಳನ್ನು ನೋಡಲು ನಮ್ಮ 5G Phone Under ₹10,000 ಲೇಖನವನ್ನೂ ಓದಬಹುದು.
Boltt Evo 4G – ಸ್ಪೆಸಿಫಿಕೇಶನ್

ಬೋಲ್ಟ್ ಇವೋ 4G ಇದೇ ಸರಣಿಯ ಬಜೆಟ್ ಸ್ನೇಹಿ ಮಾದರಿಯಾಗಿದ್ದು, ಇದು 4G ಫೋನ್ ಆಗಿದೆ. ಫೋನ್ 6.79 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ನೀಡಲಾಗಿದೆ. Ace 5Gಗೆ ಹೋಲಿಸಿದರೆ ಮುಖ್ಯ ವ್ಯತ್ಯಾಸ ಪ್ರೊಸೆಸರ್ ಮತ್ತು ನೆಟ್‌ವರ್ಕ್ ಕನೆಕ್ಟಿವಿಟಿ ವಿಭಾಗದಲ್ಲಿದೆ.
ಈ ಫೋನ್‌ನಲ್ಲಿ Unisoc T7250 ಚಿಪ್‌ಸೆಟ್ ಬಳಸಲಾಗಿದ್ದು, ಇದು 4G ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಬ್ಯಾಟರಿ ಇಲ್ಲಿಯೂ 6000mAh ಸಾಮರ್ಥ್ಯದ್ದೇ ಆಗಿದ್ದು, ದೀರ್ಘಕಾಲದ ಬಳಕೆಗೆ ಇದು ಸಹಾಯ ಮಾಡುತ್ತದೆ.
ಕ್ಯಾಮೆರಾ ವಿಭಾಗದಲ್ಲಿ ಇದು 50MP + 2MP ಎಂಬ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಫ್ರಂಟ್‌ನಲ್ಲಿ 8MP ಕ್ಯಾಮೆರಾ ಇದೆ. ಸಾಫ್ಟ್‌ವೇರ್ ಪರವಾಗಿ, ಈ ಫೋನ್ ಕೂಡ ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
RAM ಮತ್ತು ಸ್ಟೋರೇಜ್‌ಗಾಗಿ 6GB+128GB ಎಂಬ ಒಂದೇ ವೇರಿಯಂಟ್ ಇದೆ. ಬಣ್ಣಗಳ ವಿಷಯದಲ್ಲಿ, Ace 5G ನಂತೆಯೇ ಇಲ್ಲಿಯೂ ಆರ್ಕ್ಟಿಕ್ ವೈಟ್, ಬೆರಿ ರೆಡ್, ಲ್ಯಾವೆಂಡರ್ ಬ್ಲೂಮ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.
Boltt ಫೋನ್‌ಗಳ ಬೆಲೆ
ಎರಡೂ ಫೋನ್‌ಗಳು Flipkart ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಸೇಲ್‌ಗೆ ಬಿಡುಗಡೆಯಾಗಿದ್ದವು. ಬೆಲೆ ವಿಷಯಕ್ಕೆ ಬಂದರೆ, Boltt Ace 5G ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, 4GB+64GB ವೇರಿಯಂಟ್‌ಗೆ ₹13,999, 6GB+128GB ಗೆ ₹14,999 ಮತ್ತು 8GB+128GB ಗೆ ₹15,999 ಬೆಲೆ ನಿಗದಿಪಡಿಸಲಾಗಿದೆ. ಇನ್ನು Boltt Evo 4G ಎರಡು ವೇರಿಯಂಟ್‌ಗಳಲ್ಲಿ ಬರುತ್ತಿದ್ದು, 4GB+64GB ಗೆ ₹10,999 ಮತ್ತು 6GB+128GB ಗೆ ₹11,999 ಬೆಲೆ ಇದೆ.
ಕ್ಯಾಮೆರಾಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವವರು ₹20,000 ಒಳಗಿನ Camera Phone ಆಯ್ಕೆಗಳನ್ನೂ ನೋಡಬಹುದು.
Ace 5G vs Evo 4G – ಯಾವುದನ್ನು ಆಯ್ಕೆ ಮಾಡಬೇಕು?
ಇವೆರಡೂ ಫೋನ್‌ಗಳಲ್ಲಿ ಒಂದೇ ಡಿಸ್‌ಪ್ಲೇ, ಬ್ಯಾಟರಿ ಮತ್ತು ಸಾಫ್ಟ್‌ವೇರ್ ಇದ್ದರೂ, ಪ್ರೊಸೆಸರ್, ನೆಟ್‌ವರ್ಕ್ ಮತ್ತು ಬೆಲೆಯಲ್ಲಿ ವ್ಯತ್ಯಾಸವಿದೆ. ಯಾವುದನ್ನು ತೆಗೆದುಕೊಳ್ಳಬೇಕು ಎಂಬುದು ನಿಮ್ಮ ಅಗತ್ಯಕ್ಕೆ ಬಿಟ್ಟಿದ್ದು, 5G ಕನೆಕ್ಟಿವಿಟಿ ಮತ್ತು NFC ಸೌಲಭ್ಯ ಬಯಸುವವರಿಗೆ Boltt Ace 5G ಸೂಕ್ತ ಆಯ್ಕೆಯಾಗಿದ್ದರೆ, ಕಡಿಮೆ ಬಜೆಟ್‌ನಲ್ಲಿ 4G ಸಾಕು ಎನ್ನುವವರಿಗೆ ಬೋಲ್ಟ್ ಇವೋ 4G ಉತ್ತಮ ಆಯ್ಕೆಯಾಗಿದೆ. ಹೆಚ್ಚು RAM ಮತ್ತು ಸ್ಟೋರೇಜ್ ಬೇಕಾದವರು Ace 5G ನ 8GB+128GB ವೇರಿಯಂಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಕೊನೆಯ ಮಾತು
Fire-Boltt ಕಂಪನಿಯು ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಗಳಿಸಿದ ನಂಬಿಕೆಯನ್ನು ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೂ ತರುವ ಪ್ರಯತ್ನ ಇದಾಗಿದೆ. boltt Ace 5G ಮತ್ತು Evo 4G ಎರಡೂ ಬಜೆಟ್ ವಿಭಾಗದಲ್ಲಿ ಆಕರ್ಷಕ ಸ್ಪೆಸಿಫಿಕೇಶನ್ ಮತ್ತು ಬೆಲೆಯೊಂದಿಗೆ ಬಂದಿವೆ. ಆದರೆ ಇದು ಹೊಸ ಬ್ರಾಂಡ್ ಆಗಿರುವುದರಿಂದ, ಸಾಫ್ಟ್‌ವೇರ್ ಅಪ್‌ಡೇಟ್ಸ್ ಮತ್ತು ದೀರ್ಘಾವಧಿಯ ಬಳಕೆಯಲ್ಲಿ ಹೇಗಿರುತ್ತವೆ ಅನ್ನೋದು ಇನ್ನೂ ನೋಡಬೇಕಿದೆ.












