ಒನ್ಪ್ಲಸ್ ಭಾರತದ ಮಾರುಕಟ್ಟೆಯಲ್ಲಿ ತನ್ನ N6 ಸರಣಿಯ ಮೂರನೇ ಮಾಡೆಲ್ ಆಗಿ OnePlus N6 Lite ಫೋನನ್ನು ₹16,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಈ ಫೋನಿನ ಪ್ರಮುಖ ಆಕರ್ಷಣೆ ಇದರಲ್ಲಿರುವ ಬೃಹತ್ 7,000mAh ಬ್ಯಾಟರಿ. ಆದರೆ ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ₹17,000 ಬಜೆಟ್ಗೆ ಗ್ರಾಹಕರು 5G ಕನೆಕ್ಟಿವಿಟಿ ಮತ್ತು ವೇಗದ ಚಾರ್ಜಿಂಗ್ ನಿರೀಕ್ಷಿಸುತ್ತಾರೆ. ಅಂತಹ ಸನ್ನಿವೇಶದಲ್ಲಿ ಈ 4G ಫೋನ್ ನಿಮ್ಮ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡೋಣ.
Also Read: POCO M8x 5G vs OnePlus N6 5G: ಯಾವುದು ಬೆಸ್ಟ್? ಬೆಲೆ, ಫೀಚರ್ಸ್ ಹೋಲಿಕೆ
OnePlus N6 Lite ಬೆಲೆ ಮತ್ತು ವೇರಿಯಂಟ್

ಈ ಫೋನ್ ಮಾರುಕಟ್ಟೆಯಲ್ಲಿ ಒಂದೇ ಒಂದು ವೇರಿಯಂಟ್ನಲ್ಲಿ ಲಭ್ಯವಿದೆ:
- 4GB RAM ಮತ್ತು 64GB ಸ್ಟೋರೇಜ್: ₹16,999
ಇದು ಒನ್ಪ್ಲಸ್ ಅಧಿಕೃತ ಆನ್ಲೈನ್ ಸ್ಟೋರ್, ಅಮೆಜಾನ್ ಮತ್ತು ಆಯ್ದ ಆಫ್ಲೈನ್ ಮಳಿಗೆಗಳಲ್ಲಿ ಖರೀದಿಗೆ ಸಿಗುತ್ತದೆ. ಬಣ್ಣಗಳ ವಿಷಯದಲ್ಲಿ ಮಿಡ್ನೈಟ್ ಹೈಪ್ ಮತ್ತು ನಿಯೋ ಗ್ರೀನ್ ಎಂಬ ಎರಡು ಆಯ್ಕೆಗಳನ್ನು ನೀಡಲಾಗಿದೆ.
ಬ್ಯಾಟರಿ ಸಾಮರ್ಥ್ಯ ಮತ್ತು 15W ಚಾರ್ಜಿಂಗ್
7,000mAh ಬ್ಯಾಟರಿ ಈ ಫೋನಿನ ಅತಿ ದೊಡ್ಡ ಶಕ್ತಿ. ನೀವು ಕೇವಲ ಕಾಲಿಂಗ್, ವಾಟ್ಸಾಪ್, ಯೂಟ್ಯೂಬ್ ಮತ್ತು ದೈನಂದಿನ ಕಚೇರಿ ಕೆಲಸಗಳಿಗೆ ಬಳಸಿದರೆ, ಈ ಫೋನ್ ಸುಲಭವಾಗಿ ಎರಡರಿಂದ ಮೂರು ದಿನಗಳವರೆಗೆ ಚಾರ್ಜ್ ಉಳಿಸಿಕೊಳ್ಳುತ್ತದೆ. ದೀರ್ಘ ಪ್ರಯಾಣ ಮಾಡುವವರಿಗೆ ಮತ್ತು ದಿನವಿಡೀ ಚಾರ್ಜರ್ ಹುಡುಕಲು ಇಷ್ಟಪಡದವರಿಗೆ ಇದು ಅತ್ಯುತ್ತಮ ಬ್ಯಾಕಪ್ ನೀಡುತ್ತದೆ. ಜೊತೆಗೆ 5W ರಿವರ್ಸ್ ಚಾರ್ಜಿಂಗ್ ಮೂಲಕ ಬೇರೆ ಫೋನ್ ಅಥವಾ ಇಯರ್ಬಡ್ಸ್ಗಳಿಗೆ ತುರ್ತು ಪವರ್ ನೀಡುವ ಸೌಲಭ್ಯವೂ ಇದೆ.
ಆದರೆ ಇಲ್ಲಿ ಗಮನಿಸಬೇಕಾದ ದೊಡ್ಡ ಮೈನಸ್ ಪಾಯಿಂಟ್ ಚಾರ್ಜಿಂಗ್ ಸ್ಪೀಡ್. ಈ ಬೃಹತ್ ಬ್ಯಾಟರಿಗೆ ಕಂಪನಿ ನೀಡಿರುವುದು ಕೇವಲ 15W ಚಾರ್ಜರ್. 7,000mAh ಬ್ಯಾಟರಿ ಶೂನ್ಯದಿಂದ 100% ಪೂರ್ತಿ ಚಾರ್ಜ್ ಆಗಲು ಕನಿಷ್ಠ 3 ರಿಂದ 3.5 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ರಾತ್ರಿ ಪೂರ್ತಿ ಚಾರ್ಜ್ ಮಾಡುವವರಿಗೆ ಇದು ಸಮಸ್ಯೆಯಾಗಲ್ಲ. ಆದರೆ ಅರ್ಧ ಗಂಟೆಯಲ್ಲಿ ತುರ್ತಾಗಿ ಚಾರ್ಜ್ ಮಾಡಿಕೊಂಡು ಹೊರಡಬೇಕು ಎನ್ನುವವರಿಗೆ ಇದು ಕಿರಿಕಿರಿ ಉಂಟುಮಾಡುತ್ತದೆ.
ಡಿಸ್ಪ್ಲೇ ಮತ್ತು ಡಿಸೈನ್

ಫೋನ್ 6.75 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಇರೋದ್ರಿಂದ ಸ್ಕ್ರೋಲಿಂಗ್ ತುಂಬಾ ಸ್ಮೂತ್ ಆಗಿದೆ. ಆದರೆ ರೆಸಲ್ಯೂಶನ್ ಕೇವಲ HD+ (720p) ಮಾತ್ರ ಇದೆ. ₹17,000 ಬಜೆಟ್ಗೆ ಕನಿಷ್ಠ Full HD ಅಥವಾ AMOLED ಸ್ಕ್ರೀನ್ ಇಲ್ಲದಿರುವುದು ವಿಡಿಯೋ ನೋಡುವವರಿಗೆ ಕೊರತೆಯಾಗಿ ಕಾಣುತ್ತೆ. 900 ನಿಟ್ಸ್ ಬ್ರೈಟ್ನೆಸ್ ಇರುವುದರಿಂದ ಮನೆಯೊಳಗಡೆ ಡಿಸ್ಪ್ಲೇ ಕ್ಲಿಯರ್ ಆಗಿದೆ, ಆದರೆ ಬಿರುಬಿಸಿಲಿನಲ್ಲಿ ಸ್ಕ್ರೀನ್ ನೋಡುವುದು ಸ್ವಲ್ಪ ಕಷ್ಟವಾಗಬಹುದು.
ಇದರಲ್ಲಿರುವ “Aqua Touch” ಫೀಚರ್ನಿಂದ ಕೈ ಒದ್ದೆಯಾಗಿದ್ದಾಗ ಅಥವಾ ಸ್ಕ್ರೀನ್ ಮೇಲೆ ನೀರಿನ ಹನಿ ಬಿದ್ದಾಗಲೂ ಟಚ್ ಸರಿಯಾಗಿ ರೆಸ್ಪಾನ್ಸ್ ಮಾಡುತ್ತೆ. ಫೋನ್ 8.95mm ದಪ್ಪ ಮತ್ತು 215 ಗ್ರಾಂ ತೂಕವಿದ್ದು, ದೊಡ್ಡ ಬ್ಯಾಟರಿ ಇರೋದ್ರಿಂದ ಕೈಯಲ್ಲಿ ಹಿಡಿದಾಗ ಸ್ವಲ್ಪ ಭಾರ ಎನಿಸುತ್ತೆ. ಆದರೆ MIL-STD-810H ಮಿಲಿಟರಿ ಗ್ರೇಡ್ ಬಿಲ್ಡ್ ಕ್ವಾಲಿಟಿ ಇರುವುದರಿಂದ ಕೈಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದರೂ ಫೋನ್ಗೆ ಸುಲಭವಾಗಿ ಡ್ಯಾಮೇಜ್ ಆಗಲ್ಲ.
ಪ್ರೊಸೆಸರ್, ಕಾರ್ಯಕ್ಷಮತೆ ಮತ್ತು ಕನೆಕ್ಟಿವಿಟಿ
OnePlus N6 Lite ಫೋನಿನಲ್ಲಿ Unisoc T7250 ಪ್ರೊಸೆಸರ್ ಜೊತೆಗೆ 4GB RAM ಮತ್ತು 64GB ಸ್ಟೋರೇಜ್ ನೀಡಿದ್ದು, ಬೇಕಿದ್ದರೆ ಮೆಮೊರಿ ಕಾರ್ಡ್ ಹಾಕಿ ಸ್ಟೋರೇಜ್ ಜಾಸ್ತಿ ಮಾಡಿಕೊಳ್ಳಬಹುದು. ಆದರೆ ಈ ಬಜೆಟ್ನಲ್ಲಿ ಎಲ್ಲ ಬ್ರ್ಯಾಂಡ್ಗಳು 5G ನೀಡುತ್ತಿರುವಾಗ, ಒನ್ಪ್ಲಸ್ ಇದರಲ್ಲಿ 5G ಸಪೋರ್ಟ್ ನೀಡದೆ ಕೇವಲ 4G ಮಾತ್ರ ಕೊಟ್ಟಿರುವುದು ಮುಂದಿನ ದಿನಗಳ ಬಳಕೆಯ ದೃಷ್ಟಿಯಿಂದ ದೊಡ್ಡ ಹಿನ್ನಡೆ.
ಇನ್ನು ಇದರ 4GB RAM ಮತ್ತು Unisoc ಚಿಪ್ಸೆಟ್ ಕೇವಲ ಕಾಲಿಂಗ್, ವಾಟ್ಸಾಪ್ ಮತ್ತು ಸಾಮಾನ್ಯ ಬ್ರೌಸಿಂಗ್ಗೆ ಮಾತ್ರ ಸರಿಹೊಂದುತ್ತದೆ. ಒಂದೇ ಸಲ ಹಲವು ಆ್ಯಪ್ಗಳನ್ನು ಬಳಸುವಾಗ ಅಥವಾ BGMI, Free Fire ನಂತಹ ಹೆವಿ ಗೇಮ್ಗಳನ್ನು ಆಡುವಾಗ ಫೋನ್ ಲ್ಯಾಗ್ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಗೇಮಿಂಗ್ ಪ್ರಿಯರಿಗೆ ಇದು ಖಂಡಿತ ಸೆಟ್ ಆಗಲ್ಲ.
ಸಾಫ್ಟ್ವೇರ್ ವಿಚಾರಕ್ಕೆ ಬಂದರೆ, ಇದರಲ್ಲಿ ಆಂಡ್ರಾಯ್ಡ್ 16 ಆಧಾರಿತ OxygenOS 16 ಇದ್ದು, ಇಂಟರ್ಫೇಸ್ ಕ್ಲೀನ್ ಆಗಿದೆ ಹಾಗೂ ಗೂಗಲ್ ಜೆಮಿನಿ ಸಪೋರ್ಟ್ ಕೂಡ ಸಿಗುತ್ತದೆ.
ಕ್ಯಾಮೆರಾ ಸಾಮರ್ಥ್ಯ
ಹಿಂಭಾಗದಲ್ಲಿ 13MP ಮುಖ್ಯ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಸಾಫ್ಟ್ವೇರ್ ಮೂಲಕ 50MP ಹೈ-ರೆಸ್ ಫೋಟೋ ತೆಗೆಯುವ ಆಯ್ಕೆ ಮತ್ತು AI ಇರೇಸರ್ ಟೂಲ್ಸ್ ಇವೆ. ಉತ್ತಮ ಬೆಳಕಿನಲ್ಲಿ ಸಾಮಾನ್ಯ ಫೋಟೋಗಳು ಮತ್ತು ದಿನನಿತ್ಯದ ಡಾಕ್ಯುಮೆಂಟ್ ಸ್ಕ್ಯಾನ್, ವಿಡಿಯೋ ಕಾಲ್ಗಳಿಗೆ ಇದು ಸರಿಯಾಗಿದೆ. ಕಡಿಮೆ ಬೆಳಕಿನಲ್ಲಿ ನಾಯ್ಸ್ ಹೆಚ್ಚಿರುತ್ತದೆ.
OnePlus N6 Lite: ಪ್ಲಸ್ ಮತ್ತು ಮೈನಸ್ ಪಾಯಿಂಟ್ಗಳು (Pros & Cons)
ಪ್ಲಸ್ ಪಾಯಿಂಟ್ಗಳು (Pros):
- 7,000mAh ಬ್ಯಾಟರಿಯಿಂದ ಸಿಗುವ ದೀರ್ಘಾವಧಿಯ ಬ್ಯಾಕಪ್ (2 ರಿಂದ 3 ದಿನ).
- 120Hz ರಿಫ್ರೆಶ್ ರೇಟ್ ಮತ್ತು Aqua Touch ತಂತ್ರಜ್ಞಾನ.
- MIL-STD-810H ದೃಢವಾದ ಬಾಡಿ ಡಿಸೈನ್.
- ಕ್ಲೀನ್ OxygenOS 16 ಸಾಫ್ಟ್ವೇರ್ ಅನುಭವ.
ಮೈನಸ್ ಪಾಯಿಂಟ್ಗಳು (Cons):
- ₹16,999 ಬೆಲೆಗೆ 5G ನೆಟ್ವರ್ಕ್ ಇಲ್ಲದಿರುವುದು (ಕೇವಲ 4G ಮಾತ್ರ).
- 7,000mAh ಬ್ಯಾಟರಿಗೆ ಕೇವಲ 15W ಚಾರ್ಜಿಂಗ್ ಇರುವುದರಿಂದ ಚಾರ್ಜ್ ಆಗಲು 3+ ಗಂಟೆ ಬೇಕು.
- ಕೇವಲ HD+ ಡಿಸ್ಪ್ಲೇ (FHD+ ಇಲ್ಲ).
- ಈ ಬೆಲೆಗೆ 4GB RAM ಮತ್ತು 64GB ಸ್ಟೋರೇಜ್ ತೀರಾ ಕಡಿಮೆ.
Also Read: ₹25,000 ಒಳಗೆ Best Phone ಯಾವುದು? Top 7 5G Phones ಹೋಲಿಕೆ (2026)
ಈ ಫೋನ್ ಯಾರಿಗೆ ಸೂಕ್ತ?
ನಿಮಗೆ 5G ನೆಟ್ವರ್ಕ್, ಗೇಮಿಂಗ್ ಅಥವಾ ಹೈ-ಕ್ವಾಲಿಟಿ ಕ್ಯಾಮೆರಾ ಬೇಕಿಲ್ಲ, ಕೇವಲ ದಿನನಿತ್ಯದ ಕರೆಗಳು, ವಾಟ್ಸಾಪ್, ಒನ್ಪ್ಲಸ್ ಬ್ರ್ಯಾಂಡ್ ಮತ್ತು ಮುಖ್ಯವಾಗಿ 2-3 ದಿನ ಬಾಳಿಕೆ ಬರುವ ದಪ್ಪ ಬ್ಯಾಟರಿ ಮಾತ್ರ ಸಾಕು ಅನ್ನೋ ಹಿರಿಯರಿಗೆ ಅಥವಾ ಫೀಲ್ಡ್ ವರ್ಕ್ ಮಾಡುವವರಿಗೆ ಈ ಫೋನ್ ಓಕೆ. ಆದರೆ ₹17,000 ಖರ್ಚು ಮಾಡಿ ನಿಮಗೆ 5G ಸ್ಪೀಡ್, ಗೇಮಿಂಗ್ ಸಾಮರ್ಥ್ಯ, ಫುಲ್ ಹೆಚ್ಡಿ ಸ್ಕ್ರೀನ್ ಮತ್ತು ಅರ್ಧ ಗಂಟೆಯಲ್ಲಿ ಫಾಸ್ಟ್ ಚಾರ್ಜ್ ಆಗುವ ಫೋನ್ ಬೇಕು ಎಂದರೆ ಇದನ್ನು ಕೊಳ್ಳದೇ ಇರುವುದೇ ಒಳ್ಳೆಯದು. ಏಕೆಂದರೆ ಇದೇ ಬಜೆಟ್ನಲ್ಲಿ ಮಾರುಕಟ್ಟೆಯಲ್ಲಿ 5G ಸಪೋರ್ಟ್, 6GB RAM ಮತ್ತು 45W ವರೆಗೆ ಫಾಸ್ಟ್ ಚಾರ್ಜಿಂಗ್ ಕೊಡುವ ಎಷ್ಟೋ ಉತ್ತಮ ಇತರ ಫೋನ್ಗಳು ಸುಲಭವಾಗಿ ಸಿಗುತ್ತವೆ.











