ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Vivo NEXT 2026: V80, S2 FE, X Fold 6 ಭಾರತದಲ್ಲಿ ಲಾಂಚ್, ಬೆಲೆ ವಿವರ

Author
Published
04/10/2026
Updated
06/10/2026
Published On: October 4, 2026 7:20 pm
Vivo NEXT 2026
Google News
Follow Us

ದಸರಾ ಮತ್ತು ದೀಪಾವಳಿ ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಫೋನ್ ಕಂಪನಿಗಳ ಲಾಂಚ್‌ಗಳ ಸದ್ದು ಕೂಡ ಜೋರಾಗುತ್ತದೆ. ಈ ಬಾರಿ Vivo ಇಂದು (ಅಕ್ಟೋಬರ್ 6) ನಡೆದ “Vivo NEXT 2026” ಕಾರ್ಯಕ್ರಮದಲ್ಲಿ ಮೂರು ಹೊಸ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅವು Vivo V80, Vivo S2 FE ಮತ್ತು ಫೋಲ್ಡೇಬಲ್ Vivo X Fold 6. ದಸರಾ ಮತ್ತು ದೀಪಾವಳಿ ಸಮಯದಲ್ಲಿ ಹೊಸ ಫೋನ್ ಖರೀದಿಸುವ ಯೋಚನೆ ಇರುವವರಿಗೆ ಈ ಮೂರು ಫೋನ್‌ಗಳ ಬೆಲೆ ಮತ್ತು ಸೇಲ್ ವಿವರಗಳನ್ನು ಇಲ್ಲಿ ಸರಳವಾಗಿ ನೋಡೋಣ.

Vivo ಫೋನ್‌ಗಳ ಬೆಲೆ ಮತ್ತು ಸೇಲ್ ದಿನಾಂಕ

  • Vivo V80: ₹62,999ರಿಂದ ₹79,999 ವರೆಗೆ. ಸೇಲ್ ಅಕ್ಟೋಬರ್ 13ರಿಂದ.
  • Vivo S2 FE: ₹38,999 ಮತ್ತು ₹42,999. ಸೇಲ್ ಅಕ್ಟೋಬರ್ 20ರಿಂದ.
  • Vivo X Fold 6: ₹2,19,999 (12GB+512GB). ಸೇಲ್ ಅಕ್ಟೋಬರ್ 13ರಿಂದ.

Vivo V80

Vivo V80

ಇದು ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗಮನ ಸೆಳೆದ ಫೋನ್. V ಸರಣಿ ಫೋನ್‌ಗಳು ಕ್ಯಾಮೆರಾಗೆ ಹೆಚ್ಚು ಒತ್ತು ನೀಡುತ್ತವೆ. V80ನಲ್ಲೂ ಅದೇ ಕಾಣಿಸುತ್ತದೆ. ZEISS ಟ್ಯೂನಿಂಗ್‌ನೊಂದಿಗೆ ಮೂರು ಹಿಂಬದಿ ಕ್ಯಾಮೆರಾಗಳನ್ನು ನೀಡಲಾಗಿದೆ. ಇದರಲ್ಲಿ OIS ಇರುವ 50MP ಮುಖ್ಯ ಕ್ಯಾಮೆರಾ, 3x ಆಪ್ಟಿಕಲ್ ಜೂಮ್‌ನ 50MP ಟೆಲಿಫೋಟೋ ಕ್ಯಾಮೆರಾ ಮತ್ತು ಅಲ್ಟ್ರಾ ವೈಡ್ ಕ್ಯಾಮೆರಾ ಸೇರಿವೆ. ಸೆಲ್ಫಿಗಾಗಿ 50MP ಕ್ಯಾಮೆರಾ ಇದೆ.

ಫೋನ್‌ನಲ್ಲಿ 6.59 ಇಂಚಿನ 1.5K OLED ಡಿಸ್‌ಪ್ಲೇ ಇದ್ದು, 144Hz ರಿಫ್ರೆಶ್ ರೇಟ್ ಮತ್ತು 5,000 ನಿಟ್ಸ್‌ವರೆಗೆ ಪೀಕ್ ಬ್ರೈಟ್‌ನೆಸ್ ಸಿಗುತ್ತದೆ. ಜೊತೆಗೆ 7,200mAh ದೊಡ್ಡ ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಇದೆ. ಕಾರ್ಯಕ್ಷಮತೆಗಾಗಿ ಸ್ನ್ಯಾಪ್‌ಡ್ರಾಗನ್ 7 ಜೆನ್ 4 ಚಿಪ್‌ಸೆಟ್ ಬಳಸಲಾಗಿದೆ. ಆಂಡ್ರಾಯ್ಡ್ 17 ಆಧಾರಿತ OriginOS 7ನೊಂದಿಗೆ ಬಿಡುಗಡೆಯಾಗುತ್ತಿರುವ ಮೊದಲ V ಸರಣಿ ಫೋನ್ ಕೂಡ V80 ಆಗಿದೆ. (Vivo V80: ಸಂಪೂರ್ಣ ಫೀಚರ್‌ಗಳು ಮತ್ತು ವಿಶೇಷಣಗಳು)

Vivo S2 FE

Vivo S2 FE

ಆಗಸ್ಟ್‌ನಲ್ಲಿ ಭಾರತಕ್ಕೆ ಬಂದ Vivo S2ಗೆ ಹೋಲಿಸಿದರೆ, ಇದು ದೊಡ್ಡ ಬ್ಯಾಟರಿಯೊಂದಿಗೆ ಬಂದಿರುವ ಹೊಸ ಆವೃತ್ತಿ. 6.83 ಇಂಚಿನ 1.5K AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 2,000 ನಿಟ್ಸ್ ಬ್ರೈಟ್‌ನೆಸ್ ಸಿಗುತ್ತದೆ. ಕಾರ್ಯಕ್ಷಮತೆಗಾಗಿ ಮೀಡಿಯಾಟೆಕ್ ಡೈಮೆನ್ಸಿಟಿ 7300e ಚಿಪ್‌ಸೆಟ್ ಬಳಸಲಾಗಿದೆ. 6GB ಮತ್ತು 8GB RAM ಆಯ್ಕೆಗಳಿದ್ದು, ಎರಡರಲ್ಲೂ 128GB UFS 3.1 ಸ್ಟೋರೇಜ್ ಇದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 2MP ಸೆಕೆಂಡರಿ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ.

ಇದರ ಪ್ರಮುಖ ಆಕರ್ಷಣೆ 10,000mAh ಬ್ಯಾಟರಿ ಮತ್ತು 44W ಚಾರ್ಜಿಂಗ್ ಇದೆ. ಹೋಲಿಸಿ ನೋಡಿದರೆ ಸಾಮಾನ್ಯ S2ನಲ್ಲಿ 7,050mAh ಇದೆ. ಇಷ್ಟು ದೊಡ್ಡ ಬ್ಯಾಟರಿ ಇದ್ದರೂ ಫೋನ್ 8.6mm ದಪ್ಪ, ಸುಮಾರು 225 ಗ್ರಾಂ ತೂಕ ಇದೆ. IP68 ಮತ್ತು IP69 ರೇಟಿಂಗ್ ಜೊತೆ MIL-STD-810H ಪ್ರಮಾಣೀಕರಣವೂ ಇದೆ. ಆಂಡ್ರಾಯ್ಡ್ 16 ಆಧಾರಿತ OriginOS 6 ಜೊತೆ ಬರುತ್ತದೆ. (Vivo S2 FE: 10,000mAh ಬ್ಯಾಟರಿ ಬಗ್ಗೆ ಮಾಹಿತಿ)

Vivo X Fold 6

Vivo X Fold 6

ಇದು ಈ ಕಾರ್ಯಕ್ರಮದಲ್ಲಿ ಲಾಂಚ್ ಆದ ಅತ್ಯಂತ ಪ್ರೀಮಿಯಂ ಡಿವೈಸ್. Vivo X Fold 6 ಜೂನ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದು, ಇದೀಗ ಭಾರತಕ್ಕೂ ಬಂದಿದೆ.

ತೆರೆದಾಗ 8.02 ಇಂಚಿನ ಒಳ ಸ್ಕ್ರೀನ್ ಸಿಗುತ್ತದೆ, ಮಡಚಿದಾಗ 6.51 ಇಂಚಿನ ಹೊರಗಿನ ಡಿಸ್‌ಪ್ಲೇ ಬಳಸಬಹುದು. ಎರಡೂ ಸ್ಕ್ರೀನ್‌ಗಳಲ್ಲಿ 1–120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು 5,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿವೆ. ಪ್ರೊಸೆಸರ್ ಮೀಡಿಯಾಟೆಕ್ ಡೈಮೆನ್ಸಿಟಿ 9500 Super Edition, ಜೊತೆಗೆ 12GB RAM. ಕ್ಯಾಮೆರಾ ವಿಭಾಗದಲ್ಲಿ 200MP ಮುಖ್ಯ ಕ್ಯಾಮೆರಾ, 50MP ಟೆಲಿಫೋಟೋ ಮತ್ತು ಅಲ್ಟ್ರಾ ವೈಡ್ ಲೆನ್ಸ್‌ಗಳಿವೆ. ಈ ಸಂಪೂರ್ಣ ಸೆಟಪ್‌ಗೆ ZEISS ಟ್ಯೂನಿಂಗ್ ಕೂಡ ಸಿಕ್ಕಿದೆ.

ಫೋಲ್ಡೇಬಲ್ ಫೋನ್‌ನಲ್ಲಿ ಬ್ಯಾಟರಿ ದೊಡ್ಡದಾಗಿರುವುದು ಅಪರೂಪ. ಭಾರತದ ಮಾದರಿಯಲ್ಲಿ 6,900mAh ಬ್ಯಾಟರಿ ಮತ್ತು 80W ವೈರ್ಡ್ ಚಾರ್ಜಿಂಗ್ ಇದೆ. ಆಂಡ್ರಾಯ್ಡ್ 17 ಆಧಾರಿತ OriginOS 7 ಜೊತೆ ಬರುತ್ತದೆ. ಧೂಳು ಮತ್ತು ನೀರಿನಿಂದ ರಕ್ಷಣೆಗೆ IP58 ಮತ್ತು IP59 ರೇಟಿಂಗ್ ಇದೆ. (Vivo X Fold 6: ಫೋಲ್ಡೇಬಲ್ ಫೋನ್‌ನ ವಿಶೇಷತೆಗಳು)

ಕೊನೆಯ ಮಾತು

ಒಟ್ಟಿನಲ್ಲಿ, ಈ ಬಾರಿ ಮೂರು ಬೇರೆಬೇರೆ ರೀತಿಯ ಫೋನ್‌ಗಳು ಬಂದಿವೆ. ದೊಡ್ಡ ಬ್ಯಾಟರಿ ಮತ್ತು ಬಾಳಿಕೆ ಮುಖ್ಯವಾದರೆ ₹38,999ರ S2 FE ಗಮನಿಸಬಹುದು. ಕ್ಯಾಮೆರಾ ಮತ್ತು 144Hz ಡಿಸ್‌ಪ್ಲೇಗೆ ಆದ್ಯತೆ ನೀಡುವವರಿಗೆ ₹62,999ರ V80 ಸೂಕ್ತ ಆಯ್ಕೆಯಾಗಿದೆ. ಇನ್ನು ಫೋಲ್ಡೇಬಲ್ ಫೋನ್‌ನ ಅನುಭವ ಬೇಕು ಎನ್ನುವವರಿಗೆ ₹2.2 ಲಕ್ಷದ X Fold 6 ಪ್ರೀಮಿಯಂ ಆಯ್ಕೆಯಾಗಿದೆ. ಬೆಲೆ ಮತ್ತು ಅಗತ್ಯಕ್ಕೆ ತಕ್ಕಂತೆ ಈ ಮೂರರಲ್ಲಿ ಆಯ್ಕೆ ಮಾಡಬಹುದು.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →