ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Mivi One 5G: ಆಡಿಯೋ ಬ್ರಾಂಡ್‌ನ ಮೊದಲ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 24ಕ್ಕೆ ಲಾಂಚ್

Author
Published
10/09/2026
Updated
17/09/2026
Published On: September 10, 2026 8:25 am
Mivi One
Google News
Follow Us

ಇಯರ್‌ಬಡ್ಸ್, ಸ್ಪೀಕರ್, ಹೆಡ್‌ಫೋನ್ ಸೇರಿದಂತೆ ಆಡಿಯೋ ಪ್ರೊಡಕ್ಟ್‌ಗಳಿಗೆ ಹೆಸರುವಾಸಿಯಾಗಿರುವ ಹೈದರಾಬಾದ್ ಮೂಲದ ಬ್ರಾಂಡ್ Mivi, ಈಗ ಸ್ಮಾರ್ಟ್‌ಫೋನ್ ಮಾರುಕಟ್ಟೆಗೂ ಕಾಲಿಡುತ್ತಿದೆ. ಕಂಪನಿಯ ಮೊದಲ ಫೋನ್ Mivi One 5G, ಸೆಪ್ಟೆಂಬರ್ 24, 2026ರಂದು ಭಾರತದಲ್ಲಿ ಲಾಂಚ್ ಆಗಲಿದೆ ಅಂತ ಅಧಿಕೃತವಾಗಿ ಖಚಿತವಾಗಿದೆ. ಕಳೆದ ಒಂದು ದಶಕದಿಂದ ಆಡಿಯೋ ಮತ್ತು ಇತರ ಕನ್ಸ್ಯೂಮರ್ ಟೆಕ್ ಪ್ರೊಡಕ್ಟ್‌ಗಳನ್ನ ಡಿಸೈನ್ ಮಾಡಿ, ಮ್ಯಾನುಫ್ಯಾಕ್ಚರ್ ಮಾಡ್ತಾ ಬಂದಿರುವ Mivi, ಈಗ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲೂ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

₹15,000ದೊಳಗಿನ ಬಜೆಟ್ 5G ಫೋನ್‌ಗಳ ವಿಭಾಗದಲ್ಲಿ Mivi One 5G ಎಂಟ್ರಿ ಕೊಡ್ತಿರೋದು ಗಮನ ಸೆಳೆಯುವ ವಿಚಾರ. ಅದರಲ್ಲೂ ಈ ಬೆಲೆ ವ್ಯಾಪ್ತಿಯಲ್ಲಿ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಇರುವ ಏಕೈಕ ಫೋನ್ ಇದಾಗಬಹುದು ಅಂತ ವರದಿಗಳು ಹೇಳ್ತಿವೆ.

Also Read: Boltt Ace 5G & Evo 4G: ಬೆಲೆ, ಫೀಚರ್ಸ್ ಮತ್ತು 6000mAh ಬ್ಯಾಟರಿ

Mivi One 5G ಯಾವಾಗ ಲಾಂಚ್ ಆಗುತ್ತೆ? ಎಲ್ಲಿ ಸಿಗುತ್ತೆ?

Mivi One 5G

Mivi One 5G ಸೆಪ್ಟೆಂಬರ್ 24ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಫೋನ್ ಫ್ಲಿಪ್‌ಕಾರ್ಟ್‌ನ “Flipkart Unique” ಪ್ರೋಗ್ರಾಂ ಅಡಿ ಎಕ್ಸ್‌ಕ್ಲೂಸಿವ್ ಆಗಿ ಮಾರಾಟವಾಗಲಿದೆ. ಅಂದ್ರೆ ಬೇರೆ ಯಾವ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲೂ, ಆರಂಭದಲ್ಲಿ ಈ ಫೋನ್ ಸಿಗುವ ಸಾಧ್ಯತೆ ಕಡಿಮೆ. ಈ ಪ್ರೋಗ್ರಾಂ ಮುಖ್ಯವಾಗಿ ಭಾರತೀಯ ಬ್ರಾಂಡ್‌ಗಳ ವಿಭಿನ್ನ ಪ್ರೊಡಕ್ಟ್‌ಗಳ ಮೇಲೆ ಫೋಕಸ್ ಮಾಡುತ್ತೆ. ಹೀಗಾಗಿ Mivi ಇದರ ಜೊತೆ ಕೈಜೋಡಿಸಿರೋದು ಗಮನ ಸೆಳೆಯುವ ವಿಚಾರ.

ನಿರೀಕ್ಷಿತ ಸ್ಪೆಸಿಫಿಕೇಶನ್ಸ್

Mivi ಇನ್ನೂ ಫೋನ್‌ನ ಸಂಪೂರ್ಣ ಸ್ಪೆಕ್ ಶೀಟ್‌ನ್ನ ಬಿಡುಗಡೆ ಮಾಡಿಲ್ಲ. ಆದ್ರೆ ಗೀಕ್‌ಬೆಂಚ್ ಲಿಸ್ಟಿಂಗ್ ಸೇರಿದಂತೆ ಸಿಕ್ಕಿರೋ ಮಾಹಿತಿಯಿಂದ ಫೋನ್‌ನ ಕೆಲವು ಫೀಚರ್‌ಗಳ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದೆ. ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 5G ಚಿಪ್‌ಸೆಟ್ ಇರಲಿದೆ ಅಂತ ಖಚಿತವಾಗಿದ್ದು, ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡ ಮಾಹಿತಿಯ ಪ್ರಕಾರ ಇದು ಸ್ನಾಪ್‌ಡ್ರಾಗನ್ 4 ಜೆನ್ 2 ಆಗಿರಬಹುದು. ಆದರೆ ಈ ಬಗ್ಗೆ Mivi ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಇದರ ಜೊತೆಗೆ 6GB RAM ಇರಬಹುದು ಅಂತ ಲೀಕ್‌ಗಳು ಸೂಚಿಸಿವೆ. ಗೂಗಲ್ ಜೊತೆಗಿನ ಪಾರ್ಟ್ನರ್‌ಶಿಪ್ ಇರೋದ್ರಿಂದ, ಫೋನ್‌ನಲ್ಲಿ ಕ್ಲೀನ್ ಆಗಿರೋ, ಸ್ಟಾಕ್ ಆಂಡ್ರಾಯ್ಡ್ ರೀತಿಯ ಸಾಫ್ಟ್‌ವೇರ್ ಎಕ್ಸ್‌ಪೀರಿಯನ್ಸ್ ಸಿಗಬಹುದು.

ಇನ್ನು ಕ್ಯಾಮೆರಾ, ಬ್ಯಾಟರಿ ಮತ್ತು ಡಿಸ್ಪ್ಲೇ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಈ ಫೀಚರ್‌ಗಳ ಬಗ್ಗೆ ಲಾಂಚ್ ದಿನವೇ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ.

ಡಿಸೈನ್ ಮತ್ತು ಕ್ಯಾಮೆರಾ ಟೀಸರ್

Mivi ಈಗಾಗಲೇ ಫೋನ್‌ನ ಹಿಂಭಾಗದ ಡಿಸೈನ್‌ನ ಒಂದು ನೋಟ ತೋರಿಸಿದೆ. ಬ್ಯಾಕ್ ಪ್ಯಾನಲ್‌ನಲ್ಲಿ ಎರಡು ದೊಡ್ಡ ಗುಂಡಗಿನ ಕ್ಯಾಮೆರಾ ರಿಂಗ್‌ಗಳು ಡಯಾಗನಲ್ ಆಗಿ ಜೋಡಿಸಲ್ಪಟ್ಟಿದ್ದು, ಅದರ ಪಕ್ಕದಲ್ಲೇ ಪಿಲ್ ಶೇಪ್‌ನ ಎಲ್‌ಇಡಿ ಫ್ಲ್ಯಾಶ್ ನೀಡಲಾಗಿದೆ.

ಫೋನ್‌ನ್ನು ಎದ್ದು ಕಾಣುವ ಗ್ರೀನ್ ಕಲರ್‌ನಲ್ಲಿ ತೋರಿಸಲಾಗಿದ್ದು, ರೌಂಡೆಡ್ ಕಾರ್ನರ್‌ಗಳಿವೆ. ಬೇರೆ ಕಲರ್ ಆಪ್ಷನ್‌ಗಳು ಇರಲಿವೆಯಾ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಮೇಡ್ ಇನ್ ಇಂಡಿಯಾ ಮತ್ತು ಸರ್ವಿಸ್ ನೆಟ್‌ವರ್ಕ್

Mivi One 5G ಅನ್ನ ಹೈದರಾಬಾದ್‌ನಲ್ಲಿರುವ Mivi ಫ್ಯಾಸಿಲಿಟಿಯಲ್ಲೇ ತಯಾರಿಸಲಾಗುತ್ತಿದೆ. ಹೊಸದಾಗಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುವ ಬ್ರಾಂಡ್‌ಗಳಿಗೆ ಸಾಮಾನ್ಯವಾಗಿ ಇರೋ ಆಫ್ಟರ್-ಸೇಲ್ಸ್ ಸಪೋರ್ಟ್ ಬಗ್ಗೆ ಕಸ್ಟಮರ್‌ಗಳಿಗೆ ಇರೋ ಡೌಟ್‌ಗಳನ್ನ ದೂರ ಮಾಡೋಕೆ, ಕಂಪನಿ ಲಾಂಚ್‌ಗೂ ಮುಂಚೆಯೇ ದೇಶಾದ್ಯಂತ 500ಕ್ಕೂ ಹೆಚ್ಚು ಅಧಿಕೃತ ಸರ್ವಿಸ್ ಸೆಂಟರ್‌ಗಳ ನೆಟ್‌ವರ್ಕ್ ಸಿದ್ಧಪಡಿಸ್ತಿದೆ ಅಂತ ವರದಿಯಾಗಿದೆ.

ಈ ಫೋನ್‌ಗಾಗಿ Mivi, ಕ್ವಾಲ್ಕಾಮ್, ಗೂಗಲ್ ಮತ್ತು ಫ್ಲಿಪ್‌ಕಾರ್ಟ್ ಜೊತೆ ಕೈಜೋಡಿಸಿದೆ.

ಬೆಲೆ ಎಷ್ಟಿರಬಹುದು?

Mivi ಇನ್ನೂ ಫೋನ್‌ನ ಅಧಿಕೃತ ಬೆಲೆಯನ್ನ ಪ್ರಕಟಿಸಿಲ್ಲ. ಆದ್ರೆ ಇದು ₹15,000ದೊಳಗೆ ಬರಬಹುದು ಅಂತ ಹಲವು ವರದಿಗಳು ಹೇಳ್ತಿವೆ. ಈ ಬೆಲೆ ವಿಭಾಗದಲ್ಲಿ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಹೊಂದಿರುವ ಫೋನ್‌ಗಳ ಆಯ್ಕೆ ಕಡಿಮೆ ಇರೋದ್ರಿಂದ, ಇದು ಒಂದು ಪ್ಲಸ್ ಪಾಯಿಂಟ್ ಆಗಬಹುದು. ಆದ್ರೆ ಫೋನ್‌ನ ನಿಖರ ಬೆಲೆ ಲಾಂಚ್ ದಿನವೇ ಗೊತ್ತಾಗಲಿದೆ.

Mivi One 5Gಗೆ ಸ್ಪರ್ಧೆ ಹೇಗಿದೆ?

₹15,000ದೊಳಗಿನ 5G ಫೋನ್‌ಗಳ ಮಾರುಕಟ್ಟೆಯಲ್ಲಿ ಈಗಾಗಲೇ Redmi, Realme, POCO ತರಹದ ಹಲವು ಬ್ರಾಂಡ್‌ಗಳು ಇದ್ದು, ಬೆಲೆ ಮತ್ತು ಸ್ಪೆಕ್ಸ್ ವಿಷಯದಲ್ಲಿ ಸಾಕಷ್ಟು ಪೈಪೋಟಿ ಇದೆ.

ಹೀಗಾಗಿ Mivi ಈ ಮಾರುಕಟ್ಟೆಯಲ್ಲಿ ತನ್ನದೇ ಜಾಗ ಮಾಡ್ಕೊಳ್ಳೋಕೆ ಬರೀ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಕೊಟ್ರೆ ಸಾಕಾಗಲ್ಲ. ಕ್ಯಾಮೆರಾ ಪರ್ಫಾರ್ಮೆನ್ಸ್, ಬ್ಯಾಟರಿ ಲೈಫ್ ಮತ್ತು ಸಾಫ್ಟ್‌ವೇರ್ ಅಪ್‌ಡೇಟ್‌ಗಳಲ್ಲೂ ಉತ್ತಮ ಆಯ್ಕೆ ನೀಡಬೇಕಾಗುತ್ತದೆ.

ಆದ್ರೆ Mivi ಈಗಾಗಲೇ ಆಡಿಯೋ ಪ್ರೊಡಕ್ಟ್‌ಗಳ ಮೂಲಕ ಭಾರತೀಯ ಗ್ರಾಹಕರನ್ನ ಅರ್ಥ ಮಾಡಿಕೊಂಡಿರೋದ್ರಿಂದ, ಆ ಅನುಭವವನ್ನ ಸ್ಮಾರ್ಟ್‌ಫೋನ್‌ಗಳಲ್ಲೂ ಬಳಸಿಕೊಳ್ಳೋಕೆ ಸಾಧ್ಯವಾಗಬಹುದು. Mivi One 5G ಹೇಗೆ ಸ್ಪರ್ಧೆ ನೀಡುತ್ತೆ ಅನ್ನೋದು ಲಾಂಚ್ ಆದ್ಮೇಲೆ ಗೊತ್ತಾಗಲಿದೆ.

Also Read: ₹25,000 ಒಳಗೆ Best Phone ಯಾವುದು? Top 7 5G Phones ಹೋಲಿಕೆ (2026)

ಒಟ್ಟಾರೆ ಹೇಳೋದಾದ್ರೆ

Mivi One 5G, ಆಡಿಯೋ ಬ್ರಾಂಡ್ ಒಂದು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡ್ತಿರೋ ಹೊಸ ಪ್ರಯತ್ನ. ಸೆಪ್ಟೆಂಬರ್ 24ಕ್ಕೆ ಲಾಂಚ್ ಆಗ್ತಿರೋ ಈ ಫೋನ್, ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಸಿಗಲಿದೆ. ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಜೊತೆ ₹15,000ದೊಳಗಿನ ಬೆಲೆಯಲ್ಲಿ ಬರುವ ನಿರೀಕ್ಷೆ ಇದೆ.

ಪೂರ್ಣ ಸ್ಪೆಕ್ಸ್ ಮತ್ತು ಬೆಲೆ ಇನ್ನೂ ಅಧಿಕೃತವಾಗಿ ಬಂದಿಲ್ಲ. ಹಾಗಾಗಿ ಫೋನ್ ಹೇಗಿರುತ್ತೆ ಅನ್ನೋದನ್ನ ಲಾಂಚ್ ಆದ ಮೇಲಷ್ಟೇ ಖಚಿತವಾಗಿ ಹೇಳಬಹುದು. ಬಜೆಟ್ 5G ಫೋನ್ ಹುಡುಕ್ತಿರೋರಿಗೆ ಇದೊಂದು ಗಮನಿಸಬೇಕಾದ ಆಯ್ಕೆ ಆಗಬಹುದು.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →