ಬಜೆಟ್ ಫೋನ್ ಖರೀದಿಸುವಾಗ ಬ್ಯಾಟರಿ ಎಷ್ಟು ದೊಡ್ಡದು ಅನ್ನೋದನ್ನ ಹೆಚ್ಚಿನ ಜನ ಗಮನಿಸ್ತಾರೆ. ಬೆಳಿಗ್ಗೆ ಫುಲ್ ಚಾರ್ಜ್ ಮಾಡಿದ ಮೇಲೆ ದಿನವಿಡೀ ಆರಾಮವಾಗಿ ಬಳಸಬೇಕು, ಪದೇಪದೇ ಚಾರ್ಜರ್ ಹುಡುಕುವಂತಾಗಬಾರದು ಅನ್ನೋದು ಸಹಜ. ಇದೇ ಕಾರಣಕ್ಕೆ ಶಿಯೋಮಿ (Xiaomi) ಈಗ ರೆಡ್ಮಿ ಸರಣಿಯಲ್ಲಿ ಹೊಸ ರೆಡ್ಮಿ 17 5G (Redmi 17 5G) ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ರೆಡ್ಮಿ 17 5G ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿದ್ದು, ಈ ಫೋನ್ನಲ್ಲಿ ಮೊದಲಿಗೆ ಗಮನ ಸೆಳೆಯೋದು ಇದರ 7,900mAh ಬ್ಯಾಟರಿ. ಅದರಲ್ಲೂ ಭಾರತದಲ್ಲಿ ಬಿಡುಗಡೆಯಾಗಿರುವ ಮಾಡೆಲ್ಗೆ ಗ್ಲೋಬಲ್ ವೇರಿಯಂಟ್ಗಿಂತ ದೊಡ್ಡ ಬ್ಯಾಟರಿ ನೀಡಿರುವುದು ವಿಶೇಷ.
ಬ್ಯಾಟರಿ ಮಾತ್ರವಲ್ಲ, 6.9-ಇಂಚಿನ ದೊಡ್ಡ ಡಿಸ್ಪ್ಲೇ ಮತ್ತು ಹೊಸ ಸ್ನಾಪ್ಡ್ರ್ಯಾಗನ್ ಚಿಪ್ಸೆಟ್ ಕೂಡ ಫೋನ್ನಲ್ಲಿದೆ. ₹20,000ರಿಂದ ₹27,000 ಬೆಲೆ ವಿಭಾಗದಲ್ಲಿ ಬರುವ ರೆಡ್ಮಿ 17 5Gಗೆ ಇದೇ ಸೆಗ್ಮೆಂಟ್ನಲ್ಲಿರುವ ಪೋಕೊ X7 ಪ್ರೊ, ರಿಯಲ್ಮಿ P4 ಮತ್ತು ವಿವೋ T4ನಿಂದಲೂ ಸ್ಪರ್ಧೆ ಇದೆ. ಹಾಗಾದ್ರೆ ಈ ಬೆಲೆಗೆ ರೆಡ್ಮಿ 17 5G ಎಷ್ಟು ವ್ಯಾಲ್ಯೂ ಕೊಡುತ್ತೆ? ಬ್ಯಾಟರಿ, ಡಿಸ್ಪ್ಲೇ, ಕ್ಯಾಮೆರಾ ಮತ್ತು ಪ್ರೊಸೆಸರ್ ವಿಚಾರದಲ್ಲಿ ಈ ಫೋನ್ ಹೇಗಿದೆ ಅನ್ನೋದನ್ನ ಈಗ ಒಂದೊಂದಾಗಿ ನೋಡೋಣ.
Redmi 17 5G ಫೀಚರ್ಸ್ ಮತ್ತು ಸ್ಪೆಕ್ಸ್
| ಫೀಚರ್ | Redmi 17 5G |
|---|---|
| ಡಿಸ್ಪ್ಲೇ | 6.9-ಇಂಚಿನ HD+ LCD, 120Hz |
| ಪ್ರೊಸೆಸರ್ | Snapdragon 4 Gen 5 |
| RAM | 6GB / 8GB |
| ಸ್ಟೋರೇಜ್ | 128GB / 256GB |
| ಹಿಂಭಾಗದ ಕ್ಯಾಮೆರಾ | 50MP + ಆಕ್ಸಿಲಿಯರಿ ಲೆನ್ಸ್ |
| ಮುಂಭಾಗದ ಕ್ಯಾಮೆರಾ | 8MP |
| ಬ್ಯಾಟರಿ | 7,900mAh |
| ಚಾರ್ಜಿಂಗ್ | 45W ಫಾಸ್ಟ್ ಚಾರ್ಜಿಂಗ್ |
| ರಿವರ್ಸ್ ಚಾರ್ಜಿಂಗ್ | 22.5W |
| ಸಾಫ್ಟ್ವೇರ್ | Android 16, HyperOS 3 |
| ರಕ್ಷಣೆ | IP64 |
| ಬಣ್ಣಗಳು | Absolutely Black, Endless Blue, Eternal Orange |
| ಆರಂಭಿಕ ಬೆಲೆ | ₹23,999 |
| ಮೊದಲ ಸೇಲ್ | ಸೆಪ್ಟೆಂಬರ್ 10, 2026 |
₹30,000 ಒಳಗಿನ ಉತ್ತಮ ಫೋನ್ಗಳ ಬಗ್ಗೆ ಇನ್ನಷ್ಟು ತಿಳಿಯಲು ಈ ಪಟ್ಟಿಯನ್ನು ನೋಡಬಹುದು.
Redmi 17 5G ಬೆಲೆ ಮತ್ತು ವೇರಿಯಂಟ್ಸ್

ಭಾರತದಲ್ಲಿ ರೆಡ್ಮಿ 17 5G ಸ್ಮಾರ್ಟ್ಫೋನ್ ಎರಡು ವೇರಿಯಂಟ್ಗಳಲ್ಲಿ ಬಿಡುಗಡೆಯಾಗಿದೆ. 6GB RAM + 128GB ಸ್ಟೋರೇಜ್ ಹೊಂದಿರುವ ಬೇಸ್ ವೇರಿಯಂಟ್ ಬೆಲೆ ₹23,999 ಹಾಗೂ 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ ₹26,999 ನಿಗದಿಯಾಗಿದೆ. ಇದು Amazon ಸೇರಿದಂತೆ ಪ್ರಮುಖ ಆನ್ಲೈನ್ ಸ್ಟೋರ್ಗಳಲ್ಲಿ ಲಭ್ಯವಿದ್ದು, ಆಬ್ಸಲ್ಯೂಟ್ಲಿ ಬ್ಲ್ಯಾಕ್, ಎಂಡ್ಲೆಸ್ ಬ್ಲೂ ಮತ್ತು ಎಟರ್ನಲ್ ಆರೆಂಜ್ ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ.
6.9-ಇಂಚಿನ 120Hz ಡಿಸ್ಪ್ಲೇ
ರೆಡ್ಮಿ 17 5Gನಲ್ಲಿ 6.9-ಇಂಚಿನ HD+ LCD ಡಿಸ್ಪ್ಲೇ ನೀಡಲಾಗಿದೆ. ಇದು 120Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಸ್ಕ್ರೀನ್ ದೊಡ್ಡದಾಗಿರುವುದರಿಂದ ಸಿನಿಮಾ, ಯೂಟ್ಯೂಬ್ ವಿಡಿಯೋ ನೋಡುವುದು ಮತ್ತು ಗೇಮಿಂಗ್ ಮಾಡುವಾಗ ಒಳ್ಳೆಯ ಅನುಭವ ಸಿಗಬಹುದು. ಆದ್ರೆ ಇಲ್ಲಿ ಒಂದು ವಿಷಯ ಗಮನಿಸಬೇಕು. ಈ ಫೋನ್ನಲ್ಲಿ AMOLED ಡಿಸ್ಪ್ಲೇ ಬದಲು LCD ಪ್ಯಾನಲ್ ನೀಡಲಾಗಿದೆ. ಹಾಗಾಗಿ ಈ ಬೆಲೆಯಲ್ಲಿ AMOLED ಸ್ಕ್ರೀನ್ ನಿರೀಕ್ಷಿಸುವವರಿಗೆ ಇದು ಸ್ವಲ್ಪ ಕಾಂಪ್ರಮೈಸ್ ಅನಿಸಬಹುದು.
ಸ್ನಾಪ್ಡ್ರ್ಯಾಗನ್ 4 Gen 5 ಪ್ರೊಸೆಸರ್ ಮತ್ತು RAM
ಪರ್ಫಾರ್ಮೆನ್ಸ್ಗಾಗಿ ರೆಡ್ಮಿ 17 5Gನಲ್ಲಿ ಸ್ನಾಪ್ಡ್ರ್ಯಾಗನ್ 4 Gen 5 ಚಿಪ್ಸೆಟ್ ನೀಡಲಾಗಿದೆ. ಇದು 2.4GHz ವರೆಗೆ ಕ್ಲಾಕ್ ಸ್ಪೀಡ್ ಹೊಂದಿದ್ದು, ದಿನನಿತ್ಯದ ಬಳಕೆ, ಸೋಶಿಯಲ್ ಮೀಡಿಯಾ ಮತ್ತು ಸಾಮಾನ್ಯ ಆ್ಯಪ್ಗಳ ಬಳಕೆಗೆ ಉತ್ತಮವಾಗಿ ಕೆಲಸ ಮಾಡಬಹುದು. ಲೈಟ್ ಗೇಮಿಂಗ್ಗೂ ಸಾಕಾಗುತ್ತದೆ, ಆದರೆ ಹೆವಿ ಗೇಮಿಂಗ್ ಮಾಡುವವರು ಹೆಚ್ಚು ಪರ್ಫಾರ್ಮೆನ್ಸ್ ನಿರೀಕ್ಷಿಸುವುದು ಬೇಡ. ಸ್ಟೋರೇಜ್ ಅಗತ್ಯ ಹೆಚ್ಚಾದರೆ microSD ಕಾರ್ಡ್ ಬಳಸಿ 2TB ವರೆಗೆ ಹೆಚ್ಚಿಸಿಕೊಳ್ಳುವ ಅವಕಾಶವೂ ಇದೆ.
50MP ಕ್ಯಾಮೆರಾ ಸೆಟಪ್
ಕ್ಯಾಮೆರಾ ವಿಚಾರಕ್ಕೆ ಬಂದರೆ, ರೆಡ್ಮಿ 17 5Gನಲ್ಲಿ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ ಆಕ್ಸಿಲಿಯರಿ ಲೆನ್ಸ್ ಕೂಡ ಇದೆ. ಸೆಲ್ಫಿ ಮತ್ತು ವಿಡಿಯೋ ಕಾಲ್ಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಸಿಗುತ್ತದೆ. ಕ್ಯಾಮೆರಾ ಫೀಚರ್ಸ್ ನೋಡಿದಾಗ ಈ ಫೋನ್ ಹೆಚ್ಚು ಸರಳವಾಗಿಯೇ ಕಾಣಿಸುತ್ತದೆ. ಇದೇ ಬೆಲೆಯಲ್ಲಿರುವ ಕೆಲವು ಫೋನ್ಗಳಿಗೆ ಹೋಲಿಸಿದರೆ ಕ್ಯಾಮೆರಾ ಸೆಟಪ್ ಅಷ್ಟೊಂದು ಗಮನ ಸೆಳೆಯುವುದಿಲ್ಲ.
ಬ್ಯಾಟರಿ – ಇದೇ ಈ ಫೋನ್ನ ಮೇನ್ ಹೈಲೈಟ್

ಬ್ಯಾಟರಿ ವಿಚಾರದಲ್ಲಿ ರೆಡ್ಮಿ 17 5G ಗಮನ ಸೆಳೆಯುತ್ತದೆ. ಫೋನ್ನಲ್ಲಿ 7,900mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದ್ದು, 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ನೀಡಲಾಗಿದೆ. ದೊಡ್ಡ ಬ್ಯಾಟರಿ ಇರೋದ್ರಿಂದ ದಿನವಿಡೀ ಫೋನ್ ಬಳಸುವವರಿಗೆ ಇದು ಹೆಚ್ಚು ಅನುಕೂಲವಾಗಬಹುದು. ಇದರ ಜೊತೆಗೆ 22.5W ರಿವರ್ಸ್ ಚಾರ್ಜಿಂಗ್ ಆಯ್ಕೆಯೂ ಇದೆ. ಅಗತ್ಯವಿದ್ದಾಗ ಇಯರ್ಬಡ್ಸ್ ಅಥವಾ ಬೇರೆ ಸಣ್ಣ ಗ್ಯಾಜೆಟ್ಗಳನ್ನು ಫೋನ್ನಿಂದಲೇ ಚಾರ್ಜ್ ಮಾಡಬಹುದು.
ಸಾಫ್ಟ್ವೇರ್ ಮತ್ತು ಬಿಲ್ಡ್ ಕ್ವಾಲಿಟಿ
ಆಂಡ್ರಾಯ್ಡ್ 16 ಆಧಾರಿತ ಹೊಸ HyperOS 3 ನೊಂದಿಗೆ ಈ ಫೋನ್ ಕಾರ್ಯನಿರ್ವಹಿಸುತ್ತದೆ. ‘HyperIsland’ ಫೀಚರ್ ಮೂಲಕ ಕರೆಗಳು ಮತ್ತು ನೋಟಿಫಿಕೇಶನ್ಗಳನ್ನು ಸ್ಕ್ರೀನ್ ಮೇಲ್ಭಾಗದಲ್ಲಿ ಆಕರ್ಷಕವಾಗಿ ನೋಡಬಹುದು. ಜೊತೆಗೆ IP64 ರೇಟಿಂಗ್ ಇರುವುದರಿಂದ, ಧೂಳು ಮತ್ತು ನೀರಿನ ಹನಿಗಳಿಂದ ಫೋನ್ಗೆ ರಕ್ಷಣೆ ಸಿಗುತ್ತದೆ.
Redmi 17 5G ಹೇಗಿದೆ? ನಮ್ಮ ರಿವ್ಯೂ
Redmi 17 5G ಸ್ಮಾರ್ಟ್ಫೋನ್ ಸಂಪೂರ್ಣವಾಗಿ ಬ್ಯಾಟರಿ ಪ್ರಿಯರನ್ನು ಗುರಿಯಾಗಿಸಿಕೊಂಡು ಬಿಡುಗಡೆಯಾಗಿದೆ. ₹23,999 ದರದಲ್ಲಿ 7,900mAh ಸಾಮರ್ಥ್ಯದ ಬೃಹತ್ ಪವರ್ ಬ್ಯಾಕಪ್ ಹೊಂದಿರುವುದು ಇದರ ಅತಿದೊಡ್ಡ ಪ್ಲಸ್ ಪಾಯಿಂಟ್. ಆದರೆ, ಇದೇ ಬೆಲೆಗೆ ಮಾರುಕಟ್ಟೆಯಲ್ಲಿ AMOLED ಮತ್ತು FHD+ ಡಿಸ್ಪ್ಲೇ ಫೋನ್ಗಳು ಲಭ್ಯವಿರುವಾಗ, ಕೇವಲ HD+ LCD ಪ್ಯಾನಲ್ ಹಾಗೂ ಸಾಧಾರಣ ಕ್ಯಾಮೆರಾ ಕೊಟ್ಟಿರುವುದು ದೊಡ್ಡ ಕೊರತೆಯಾಗಿ ಕಾಣುತ್ತದೆ. ಕ್ಯಾಮೆರಾ ವಿಭಾಗದಲ್ಲೂ ಹೆಚ್ಚಿನ ವಿಶೇಷತೆಗಳಿಲ್ಲ.
Redmi 17 5G: ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್
ಪ್ಲಸ್ ಪಾಯಿಂಟ್ಸ್ (Pros):
- 7,900mAh ಸಾಮರ್ಥ್ಯದ ಬೃಹತ್ ಬ್ಯಾಟರಿಯಿಂದ ಸತತ ಎರಡು ದಿನಗಳ ಪವರ್ ಬ್ಯಾಕಪ್.
- ವಿಡಿಯೋ ವೀಕ್ಷಣೆಗೆ ಅತ್ಯುತ್ತಮವಾದ 6.9-ಇಂಚಿನ ದೊಡ್ಡ 120Hz ಸ್ಕ್ರೀನ್.
- 45W ಫಾಸ್ಟ್ ಚಾರ್ಜಿಂಗ್ ಹಾಗೂ ಇತರ ಗ್ಯಾಜೆಟ್ ಚಾರ್ಜ್ ಮಾಡಲು 22.5W ರಿವರ್ಸ್ ಚಾರ್ಜಿಂಗ್ ಸೌಲಭ್ಯ.
- ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುವ IP64 ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್ ರೇಟಿಂಗ್.
ಮೈನಸ್ ಪಾಯಿಂಟ್ಸ್ (Cons):
- ₹23,999 ಬೆಲೆಗೆ ಕೇವಲ HD+ LCD ಡಿಸ್ಪ್ಲೇ ನೀಡಿರುವುದು.
- ಅಲ್ಟ್ರಾ-ವೈಡ್ ಲೆನ್ಸ್ ಕೊರತೆ ಮತ್ತು ಸಾಧಾರಣ ಕ್ಯಾಮೆರಾ ಸೆಟಪ್.
- ಹೆವಿ ಗೇಮಿಂಗ್ಗೆ ಹೇಳಿಮಾಡಿಸಿದ ಪ್ರೊಸೆಸರ್ ಅಲ್ಲ.
ಕೊನೆಯ ಮಾತು
ನಿಮಗೆ ಪದೇ ಪದೇ ಚಾರ್ಜ್ ಮಾಡುವ ಕಿರಿಕಿರಿ ಇರಬಾರದು ಮತ್ತು ದೊಡ್ಡ ಸ್ಕ್ರೀನ್ನಲ್ಲಿ ಯೂಟ್ಯೂಬ್, ಸಿನಿಮಾ ನೋಡಲು ಫೋನ್ ಬೇಕು ಎಂದಾದರೆ Redmi 17 5G ಉತ್ತಮ ಆಯ್ಕೆ. ಆದರೆ, ನೀವು ಕ್ಯಾಮೆರಾ ಪ್ರಿಯರಾಗಿದ್ದರೆ ಅಥವಾ ಅತ್ಯುತ್ತಮ ಗೇಮಿಂಗ್ ಮತ್ತು AMOLED ಡಿಸ್ಪ್ಲೇ ನಿರೀಕ್ಷಿಸುತ್ತಿದ್ದರೆ, ಇದೇ ಬಜೆಟ್ನಲ್ಲಿ ಲಭ್ಯವಿರುವ ಬೇರೆ ಸ್ಮಾರ್ಟ್ಫೋನ್ಗಳತ್ತ ಗಮನಹರಿಸುವುದು ಉತ್ತಮ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
1. ರೆಡ್ಮಿ 17 5G ಬೆಲೆ ಎಷ್ಟು?
ರೆಡ್ಮಿ 17 5G ಬೆಲೆ ₹23,999 ರಿಂದ (6GB+128GB) ಶುರುವಾಗುತ್ತದೆ ಹಾಗೂ 8GB+256GB ಮಾದರಿಯು ₹26,999 ಬೆಲೆಗೆ ಲಭ್ಯವಿದೆ.
2. ರೆಡ್ಮಿ 17 5G ನಲ್ಲಿ ಮೆಮೊರಿ ಕಾರ್ಡ್ ಹಾಕಬಹುದಾ?
ಹೌದು, ಇದರಲ್ಲಿ ಮೈಕ್ರೋ ಎಸ್ಡಿ (microSD) ಕಾರ್ಡ್ ಬಳಸುವ ಅವಕಾಶವಿದ್ದು, ಅಗತ್ಯವಿದ್ದರೆ ಸ್ಟೋರೇಜ್ ಅನ್ನು 2TB ವರೆಗೆ ಹೆಚ್ಚಿಸಿಕೊಳ್ಳಬಹುದು.
3. ರೆಡ್ಮಿ 17 5G ಬ್ಯಾಟರಿ ಎಷ್ಟು?
ಈ ಫೋನ್ನಲ್ಲಿ 7,900mAh ಸಾಮರ್ಥ್ಯದ ಬೃಹತ್ ಬ್ಯಾಟರಿ ಇದ್ದು, 45W ವೇಗದ ಚಾರ್ಜಿಂಗ್ ಮತ್ತು 22.5W ರಿವರ್ಸ್ ಚಾರ್ಜಿಂಗ್ ಬೆಂಬಲಿಸುತ್ತದೆ.
4. ರೆಡ್ಮಿ 17 5Gನಲ್ಲಿ AMOLED ಡಿಸ್ಪ್ಲೇ ಇದೆಯಾ?
ಇಲ್ಲ, ಇದರಲ್ಲಿ 6.9-ಇಂಚಿನ HD+ LCD ಡಿಸ್ಪ್ಲೇ (120Hz) ನೀಡಲಾಗಿದೆ.
5. ರೆಡ್ಮಿ 17 5G ವಾಟರ್ಪ್ರೂಫ್ ಆಗಿದೆಯಾ?
ಇದಕ್ಕೆ IP64 ರೇಟಿಂಗ್ ಇದೆ. ಇದು ಧೂಳು ಮತ್ತು ನೀರಿನಿಂದ ಫೋನ್ಗೆ ರಕ್ಷಣೆ ನೀಡುತ್ತದೆ.












