ಗೂಗಲ್ Pixel ಫೋನ್ಗಳಿಗಾಗಿ Android 17 QPR2 Beta 4 ಅಪ್ಡೇಟ್ ಬಿಡುಗಡೆ ಮಾಡಿದೆ. ಡಿಸೆಂಬರ್ನಲ್ಲಿ ಸ್ಟೇಬಲ್ ಆವೃತ್ತಿ ಬರಲಿರುವುದರಿಂದ, ಅದಕ್ಕೂ ಮುನ್ನ ಈ Beta ಆವೃತ್ತಿಯಲ್ಲಿ ಹಲವು ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದೆ.
ಈ ಅಪ್ಡೇಟ್ನಲ್ಲಿ ನೋಟಿಫಿಕೇಶನ್ ಇಂಟೆಲಿಜೆನ್ಸ್ ಸೇರಿದಂತೆ ಕೆಲವು ಬದಲಾವಣೆಗಳಿವೆ. ಜೊತೆಗೆ ಕರೆ-ಫಾರ್ವರ್ಡಿಂಗ್ಗೆ ಭದ್ರತೆ ಹೆಚ್ಚಿಸಲಾಗಿದ್ದು, ಮೈಕ್ರೋಫೋನ್, ಓವರ್ಹೀಟಿಂಗ್, ಗೆಸ್ಚರ್ ನ್ಯಾವಿಗೇಶನ್ ಮತ್ತು ಬ್ಯಾಟರಿ ಚಾರ್ಜಿಂಗ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ಸರಿಪಡಿಸಲಾಗಿದೆ. ಹಾಗಾದರೆ ಈ ಹೊಸ ಅಪ್ಡೇಟ್ನಲ್ಲಿ ಇನ್ನೇನು ಬದಲಾವಣೆಗಳಿವೆ? ನೋಡೋಣ.
ಯಾವ ಸಾಧನಗಳಿಗೆ ಲಭ್ಯ?
Android 17 QPR2 Beta 4 ಅಪ್ಡೇಟ್ Pixel 6a ನಿಂದ Pixel 10a ವರೆಗಿನ ಹಲವು Pixel ಫೋನ್ಗಳಿಗೆ ಲಭ್ಯವಾಗುತ್ತಿದೆ. Pixel 7, 7 Pro, 7a, Pixel Tablet, Pixel Fold, Pixel 8 ಸರಣಿ, Pixel 9 ಸರಣಿ, Pixel 9a, Pixel 10 ಸರಣಿ ಮತ್ತು Pixel 10a ಸೇರಿದಂತೆ ಹಲವು ಮಾದರಿಗಳು ಈ ಅಪ್ಡೇಟ್ ಪಡೆಯುತ್ತಿವೆ.
ಗಮನಿಸಬೇಕಾದ ಅಂಶವೆಂದರೆ, ಈ ಅಪ್ಡೇಟ್ ಇನ್ನೂ ಹೊಸ Pixel 11 ಸರಣಿಗೆ ಲಭ್ಯವಿಲ್ಲ. ಗೂಗಲ್ ನಂತರದ ಹಂತದಲ್ಲಿ Pixel 11 ಸರಣಿಗೂ ಇದನ್ನು ನೀಡುವ ಸಾಧ್ಯತೆಯಿದೆ.
ಇನ್ನು Pixel 6 ಮತ್ತು Pixel 6 Pro ಬಳಕೆದಾರರಿಗೆ ಈ ಅಪ್ಡೇಟ್ ಸಿಗುವುದಿಲ್ಲ. ಈ ಎರಡೂ ಫೋನ್ಗಳ ಸಾಫ್ಟ್ವೇರ್ ಬೆಂಬಲ ಅವಧಿ ಮುಗಿಯುವ ಹಂತದಲ್ಲಿರುವುದೇ ಇದಕ್ಕೆ ಕಾರಣ.
ಪ್ಲಾಟ್ಫಾರ್ಮ್ ಸ್ಟೆಬಿಲಿಟಿ ತಲುಪಿದೆ
Beta 4 ಬಿಡುಗಡೆಯೊಂದಿಗೆ ಆಂಡ್ರಾಯ್ಡ್ 17 QPR2 ಪ್ಲಾಟ್ಫಾರ್ಮ್ ಸ್ಟೆಬಿಲಿಟಿ ಹಂತಕ್ಕೆ ಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ API ಬದಲಾವಣೆಗಳು ಇರುವ ಸಾಧ್ಯತೆ ಕಡಿಮೆ. ಡೆವಲಪರ್ಗಳು ತಮ್ಮ ಆ್ಯಪ್ಗಳನ್ನು ಸ್ಟೇಬಲ್ ಆವೃತ್ತಿಗಾಗಿ ಈಗಲೇ test ಮಾಡಬಹುದು.
ಪ್ರಮುಖ ಹೊಸ ಫೀಚರ್: Notification Intelligence
ಈ ಅಪ್ಡೇಟ್ನಲ್ಲಿ ನೋಟಿಫಿಕೇಶನ್ ಇಂಟೆಲಿಜೆನ್ಸ್ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ. ಇದು ಸಂಪೂರ್ಣ ಹೊಸ ಫೀಚರ್ ಅಲ್ಲ. ಈಗಾಗಲೇ ಇರುವ ನೋಟಿಫಿಕೇಶನ್ ಸೆಟ್ಟಿಂಗ್ಸ್ಗಳನ್ನು ಒಂದೇ ವಿಭಾಗದಲ್ಲಿ ಸೇರಿಸಲಾಗಿದ್ದು, Google ನ Intelligence branding ಗೆ ತಕ್ಕಂತೆ ಬದಲಾಯಿಸಲಾಗಿದೆ.
Read More: Nothing OS 5.0: ಹೊಸ Features, Update ಯಾವಾಗ? ಯಾವ ಫೋನ್ಗಳಿಗೆ?
ಭದ್ರತಾ ಸುಧಾರಣೆ: USSD ಕರೆ ಫಾರ್ವರ್ಡಿಂಗ್ ರಕ್ಷಣೆ
ವಂಚನೆಗಳನ್ನು ತಡೆಯಲು ಗೂಗಲ್ ಕರೆ-ಫಾರ್ವರ್ಡಿಂಗ್ಗೆ ಹೆಚ್ಚುವರಿ security ಬದಲಾವಣೆಗಳನ್ನು ಮಾಡಿದೆ.
- ಆ್ಯಪ್ಗಳು ಹಿನ್ನೆಲೆಯಲ್ಲಿ *21# ನಂತಹ ಕಾಲ್ ಫಾರ್ವರ್ಡಿಂಗ್ ಕೋಡ್ಗಳನ್ನು ಬಳಸಲು ಸಾಧ್ಯವಿಲ್ಲ.
- ಬಳಕೆದಾರರು Dialer ಮೂಲಕ ಇಂತಹ code ಅನ್ನು ಬಳಸಿದಾಗ system confirmation dialog ಕಾಣಿಸಿಕೊಳ್ಳುತ್ತದೆ.
ಪ್ರಮುಖ Bug Fixes
Beta 4 ನಲ್ಲಿ 16ಕ್ಕೂ ಹೆಚ್ಚು ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಪ್ರಮುಖ fixes ಹೀಗಿವೆ:
- Microphone Lockup: ಸ್ಕ್ರೀನ್ ರೆಕಾರ್ಡಿಂಗ್ ಮಾಡಿದ ಬಳಿಕ Gboard ಮತ್ತು Gemini ನಲ್ಲಿ ಮೈಕ್ರೋಫೋನ್ ಕೆಲಸ ಮಾಡದ ಸಮಸ್ಯೆ ಇತ್ತು. ಈ ಸಮಸ್ಯೆಯನ್ನು ಈಗ ಸರಿಪಡಿಸಲಾಗಿದೆ.
- Overheating & Reboot: ಫೋನ್ ಹೆಚ್ಚು ಬಿಸಿಯಾಗಿ ಇದ್ದಕ್ಕಿದ್ದಂತೆ reboot ಆಗುತ್ತಿದ್ದ ಸಮಸ್ಯೆಯನ್ನು ಗೂಗಲ್ ಸರಿಪಡಿಸಿದೆ.
- XR Glass Mirroring: USB-C XR glasses ಗೆ ಸ್ಕ್ರೀನ್ ಮಿರರಿಂಗ್ ಆಗದ ಸಮಸ್ಯೆಯನ್ನು ಸರಿಪಡಿಸಲಾಗಿದೆ.
- Gesture Navigation: ಕೆಲವು ಆ್ಯಪ್ಗಳಲ್ಲಿ ಡಿಸ್ಪ್ಲೇ ಕಟ್ಔಟ್ ಬಳಿ ಜೆಸ್ಚರ್ ನ್ಯಾವಿಗೇಶನ್ ಕೆಲಸ ಮಾಡದ ಸಮಸ್ಯೆಯನ್ನು ಸರಿಪಡಿಸಲಾಗಿದೆ.
- Battery Charging: 80% ಬ್ಯಾಟರಿ ಲಿಮಿಟ್ ಬಳಸುವಾಗ ಕೊನೆಯ 2% ಚಾರ್ಜ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ ಸಮಸ್ಯೆ ಸರಿಪಡಿಸಲಾಗಿದೆ.
ಹೇಗೆ Download ಮಾಡುವುದು?
ಈ ಅಪ್ಡೇಟ್ ಪಡೆಯಲು ಎರಡು ಮಾರ್ಗಗಳಿವೆ:
- Android Beta Program: Beta Program ನಲ್ಲಿ ನೋಂದಾಯಿಸಿಕೊಂಡಿದ್ದರೆ, OTA ಅಪ್ಡೇಟ್ ಮೂಲಕ ನೇರವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು.
- Manual Flashing: ಡೆವಲಪರ್ಗಳು ಅಥವಾ ಅನುಭವ ಇರುವ ಬಳಕೆದಾರರು, Android Flash Tool ಅಥವಾ ಅಧಿಕೃತ Pixel downloads ಪುಟದಿಂದ system image ಬಳಸಿ update ಮಾಡಬಹುದು.
ಸೂಚನೆ: ಇದು ಇನ್ನೂ ಬೀಟಾ ಸಾಫ್ಟ್ವೇರ್ ಆಗಿರುವುದರಿಂದ, ಅಪ್ಡೇಟ್ ಮಾಡುವ ಮೊದಲು ನಿಮ್ಮ ಮುಖ್ಯ ಡಾಟಾ ಅನ್ನು ಬ್ಯಾಕ್ಅಪ್ ಮಾಡಿಕೊಳ್ಳುವುದು ಉತ್ತಮ.
ಕೊನೆಯ ಮಾತು
Android 17 QPR2 Beta 4 ನಲ್ಲಿ ಹೊಸ ಫೀಚರ್ಗಳಿಗಿಂತ ಈಗಿರುವ ಸಮಸ್ಯೆಗಳನ್ನು ಸರಿಪಡಿಸುವುದಕ್ಕೆ ಹೆಚ್ಚು ಗಮನ ನೀಡಲಾಗಿದೆ. ಸ್ಟೆಬಿಲಿಟಿ ಮತ್ತು ಸೆಕ್ಯುರಿಟಿಯಲ್ಲೂ ಸುಧಾರಣೆ ಮಾಡಲಾಗಿದೆ. ಪ್ಲಾಟ್ಫಾರ್ಮ್ ಸ್ಟೆಬಿಲಿಟಿ ಹಂತಕ್ಕೆ ಬಂದಿರುವುದರಿಂದ, ಸ್ಟೇಬಲ್ ಆವೃತ್ತಿಯ ಬಿಡುಗಡೆಗೆ Android 17 QPR2 ಈಗ ಹತ್ತಿರದಲ್ಲಿದೆ.










