ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

ಯಾವ ವಿವೋ 5G ಫೋನ್ ಬೆಸ್ಟ್? – Vivo Phones Under 20000 ಲಿಸ್ಟ್

Author
Published
15/09/2026
Updated
16/09/2026
Published On: September 15, 2026 5:47 pm
Vivo Phones under 20000
Google News
Follow Us

20,000 ರೂಪಾಯಿ ಬಜೆಟ್‌ನಲ್ಲಿ 5G ಫೋನ್ ಖರೀದಿಸಲು Vivo ಹಲವು ಆಯ್ಕೆಗಳನ್ನು ನೀಡುತ್ತಿದೆ. ದೊಡ್ಡ ಬ್ಯಾಟರಿ, ಉತ್ತಮ ಡಿಸ್ಪ್ಲೇ ಮತ್ತು ದಿನನಿತ್ಯದ ಬಳಕೆಗೆ ಬೇಕಾದ ಪರ್ಫಾರ್ಮೆನ್ಸ್‌ಗೆ ಆದ್ಯತೆ ನೀಡುವ ಫೋನ್‌ಗಳು ಇಲ್ಲಿ ಸಿಗುತ್ತವೆ. ಕೆಲ ಫೋನ್‌ಗಳು ಕಡಿಮೆ ಬೆಲೆಗೆ ಗಮನ ನೀಡಿದರೆ, ಇನ್ನು ಕೆಲವು ಬ್ಯಾಟರಿ ಅಥವಾ ಪರ್ಫಾರ್ಮೆನ್ಸ್‌ಗೆ ಹೆಚ್ಚು ಒತ್ತು ನೀಡುತ್ತವೆ. ಹಾಗಾಗಿ ನಿಮ್ಮ ಅಗತ್ಯಕ್ಕೆ ಯಾವ ಫೋನ್ ಸೂಕ್ತ ಅನ್ನೋದನ್ನು ತಿಳಿದುಕೊಳ್ಳಲು, ಈ ಪಟ್ಟಿಯಲ್ಲಿರುವ Vivo ಫೋನ್‌ಗಳ ವಿಶೇಷತೆಗಳನ್ನು ಒಂದೊಂದಾಗಿ ನೋಡೋಣ.

Vivo Phones Under 20000: ಪ್ರಮುಖ ಸ್ಪೆಸಿಫಿಕೇಶನ್‌ಗಳ ಹೋಲಿಕೆ

ಫೋನ್ಪ್ರೊಸೆಸರ್ಡಿಸ್ಪ್ಲೇರಿಯರ್ ಕ್ಯಾಮೆರಾಫ್ರಂಟ್ ಕ್ಯಾಮೆರಾಬ್ಯಾಟರಿ
Vivo T4x 5GDimensity 73006.72″ FHD+ 120Hz50MP + 2MP8MP6,500mAh
Vivo T4 Lite 5GDimensity 63006.74″ HD+ 90Hz50MP + 2MP5MP6,000mAh
Vivo Y21 5GDimensity 63006.74″ 120Hz50MP + 0.08MP5MP6,500mAh
Vivo Y19s 5GDimensity 63006.74″ HD+ 90Hz13MP + 0.08MP5MP6,000mAh
Vivo Y11 5GDimensity 63006.74″ HD+ 120Hz13MP + 0.08MP5MP6,500mAh

1. Vivo T4x 5G

Vivo T4x 5G

T4 ಸೀರೀಸ್‌ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡುವ ಫೋನ್‌ಗಳಲ್ಲಿ ವಿವೋ T4x 5G ಕೂಡ ಒಂದು. ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಇರುವುದರಿಂದ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ನ್ನು ಸ್ಮೂತ್ ಆಗಿ ನಿರ್ವಹಿಸಬಹುದು. 6.72 ಇಂಚಿನ FHD+ IPS LCD ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಕ್ಯಾಮೆರಾ ವಿಷಯಕ್ಕೆ ಬಂದ್ರೆ 50MP+2MP ಡ್ಯುಯಲ್ ರಿಯರ್ ಸೆಟಪ್ ಮತ್ತು 8MP ಫ್ರಂಟ್ ಕ್ಯಾಮೆರಾ ಇದೆ.

ಈ ಫೋನ್‌ನ 6GB+128GB ವೇರಿಯಂಟ್‌ ಬೆಲೆ ₹16,999 ಆಗಿದೆ. 8GB+128GB ವೇರಿಯಂಟ್‌ ₹19,499ಕ್ಕೆ ಲಭ್ಯವಿದೆ. ಬ್ಯಾಟರಿ ವಿಷಯದಲ್ಲಿ 6,500mAh ಬ್ಯಾಟರಿ ಜೊತೆಗೆ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರುವುದರಿಂದ ದೀರ್ಘ ಸಮಯದ ಬಳಕೆಗೆ ಇದು ಸೂಕ್ತವಾಗಿದೆ. ಉತ್ತಮ ಪರ್ಫಾರ್ಮೆನ್ಸ್, ದೊಡ್ಡ ಬ್ಯಾಟರಿ ಮತ್ತು 120Hz ಡಿಸ್ಪ್ಲೇ ಬೇಕು ಅನ್ನೋರಿಗೆ T4x 5G ಈ ಲಿಸ್ಟ್‌ನಲ್ಲಿರುವ ಪ್ರಮುಖ ಆಯ್ಕೆಗಳಲ್ಲಿ ಒಂದಾಗಿದೆ.

2. Vivo T4 Lite 5G

Vivo T4 Lite 5G

20,000 ರೂಪಾಯಿ ಒಳಗೆ 5G ಫೋನ್ ಹುಡುಕೋರಿಗೆ ವಿವೋ T4 Lite 5G ಕೂಡ ಒಳ್ಳೆಯ ಫೋನ್. ಇದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6300 5G ಪ್ರೊಸೆಸರ್ ಇದ್ದು, ದಿನನಿತ್ಯದ ಬಳಕೆ ಮತ್ತು ಸಾಮಾನ್ಯ ಮಲ್ಟಿಟಾಸ್ಕಿಂಗ್‌ಗೆ ಸಾಕಷ್ಟು ಕಾರ್ಯಕ್ಷಮತೆ ನೀಡುತ್ತದೆ. 6.74 ಇಂಚಿನ HD+ LCD ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ 50MP ಸೋನಿ AI ರಿಯರ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾ ಸಿಗುತ್ತದೆ.

ವಿವೋ ಅಧಿಕೃತ ವೆಬ್‌ಸೈಟ್‌ನಲ್ಲಿ 4GB+64GB ವೇರಿಯಂಟ್ ₹16,999ಕ್ಕೆ ಮತ್ತು 4GB+128GB ವೇರಿಯಂಟ್ ₹18,999ಕ್ಕೆ ಲಭ್ಯವಿದೆ. 6,000mAh ಬ್ಯಾಟರಿ ಇರುವುದರಿಂದ ದೀರ್ಘ ಸಮಯದ ಬಳಕೆಗೆ ಇದು ಸಹಾಯ ಮಾಡುತ್ತದೆ. 15W ಚಾರ್ಜಿಂಗ್ ಇರುವುದರಿಂದ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು ಸ್ವಲ್ಪ ಹೆಚ್ಚು ಸಮಯ ಬೇಕಾಗಬಹುದು. ಇದರ ಜೊತೆಗೆ IP64 ರೇಟಿಂಗ್ ಕೂಡ ಇದೆ. ದೊಡ್ಡ ಬ್ಯಾಟರಿ ಮತ್ತು 5G ಕನೆಕ್ಟಿವಿಟಿಗೆ ಆದ್ಯತೆ ನೀಡುವವರಿಗೆ ಈ ಫೋನ್ ಸೂಕ್ತ.

Also Read: Best Camera Phone Under 20000: ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು

3. Vivo Y21 5G

Vivo Y21 5G

Y ಸೀರೀಸ್‌ನಲ್ಲಿ ಬ್ಯಾಟರಿಗೆ ಹೆಚ್ಚು ಆದ್ಯತೆ ನೀಡುವವರಿಗೆ Y21 5G ಒಳ್ಳೆಯ ಫೋನ್. ಇದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಇದೆ. 6.74 ಇಂಚಿನ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿರುವುದರಿಂದ ಸ್ಕ್ರೋಲಿಂಗ್ ಸ್ಮೂತ್ ಆಗಿ ಕಾಣುತ್ತದೆ. ಕ್ಯಾಮೆರಾ ವಿಷಯದಲ್ಲಿ 50MP+0.08MP ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾ ಇದೆ.

4GB+64GB ವೇರಿಯಂಟ್ ₹19,499ಕ್ಕೆ ಲಭ್ಯವಿದೆ. 6,500mAh ಬ್ಯಾಟರಿ ಜೊತೆಗೆ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರುವುದರಿಂದ ದೀರ್ಘ ಸಮಯ ಬಳಸಬಹುದು ಮತ್ತು ಬ್ಯಾಟರಿ ಚಾರ್ಜ್ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. 120Hz ಡಿಸ್ಪ್ಲೇ ಜೊತೆಗೆ ದೊಡ್ಡ ಬ್ಯಾಟರಿ ಬೇಕು ಅನ್ನೋರಿಗೆ ಇದು ಸರಿಹೊಂದುತ್ತದೆ.

4. Vivo Y19s 5G

Vivo Y19s 5G

ಕಡಿಮೆ ಬೆಲೆಯಲ್ಲಿ 5G ಫೋನ್ ಜೊತೆಗೆ ದೊಡ್ಡ ಬ್ಯಾಟರಿ ಬೇಕಾದರೆ ವಿವೋ Y19s 5G ನೋಡಬಹುದು. ಇದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಇದೆ. 6.74 ಇಂಚಿನ HD+ LCD ಡಿಸ್ಪ್ಲೇ ಮತ್ತು 90Hz ರಿಫ್ರೆಶ್ ರೇಟ್ ಹೊಂದಿದೆ. ಜೊತೆಗೆ 13MP+0.08MP ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾ ಸಿಗುತ್ತದೆ.

4GB+64GB ವೇರಿಯಂಟ್ ಬೆಲೆ ₹14,999, 4GB+128GB ₹15,999 ಮತ್ತು 6GB+128GB ವೇರಿಯಂಟ್ ₹17,499. 6,000mAh ಬ್ಯಾಟರಿ ಜೊತೆಗೆ 15W ಚಾರ್ಜಿಂಗ್ ಸಪೋರ್ಟ್ ಇದೆ. ಇಲ್ಲಿ ಕ್ಯಾಮೆರಾ ಸ್ಪೆಕ್ಸ್ ಇತರ ಫೋನ್‌ಗಳಿಗಿಂತ ಕಡಿಮೆ ಇದ್ದರೂ, 5G ಕನೆಕ್ಟಿವಿಟಿ ಮತ್ತು ದೊಡ್ಡ ಬ್ಯಾಟರಿ ಬೇಕು ಅನ್ನೋರಿಗೆ Y19s 5G ನೋಡಬಹುದು.

5. Vivo Y11 5G

Vivo Y11 5G

Y ಸೀರೀಸ್‌ನ ಕಡಿಮೆ ಬೆಲೆಯ 5G ಫೋನ್‌ಗಳಲ್ಲಿ ವಿವೋ Y11 5G ಕೂಡ ಒಂದು. ಈ ಫೋನ್‌ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಇದೆ. 6.74 ಇಂಚಿನ HD+ LCD ಡಿಸ್ಪ್ಲೇ ಇದ್ದರೂ, Y19s ಗಿಂತ ಭಿನ್ನವಾಗಿ ಇಲ್ಲಿ 120Hz ರಿಫ್ರೆಶ್ ರೇಟ್ ಸಿಗುತ್ತದೆ. ಇನ್ನು ಕ್ಯಾಮೆರಾ 13MP ರಿಯರ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ.

4GB+64GB ವೇರಿಯಂಟ್ ಸದ್ಯ ₹17,999ರಿಂದ ಆರಂಭವಾಗುತ್ತದೆ. 4GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಕೂಡ ಇದೆ. 6,500mAh ಬ್ಯಾಟರಿ ಇದ್ದರೂ ಚಾರ್ಜಿಂಗ್ ಸ್ಪೀಡ್ 15W ಮಾತ್ರ. ಸ್ವಲ್ಪ ಹೆಚ್ಚು ಹಣ ಕೊಟ್ಟು 120Hz ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿ ಬೇಕಾದವರಿಗೆ Y11 5G ತೆಗೆದುಕೊಳ್ಳಬಹುದು.

ಯಾವ Vivo ಫೋನ್ ನಿಮಗೆ ಬೆಸ್ಟ್?

ಪ್ರತಿ ಫೋನ್‌ ಕೂಡ ಒಂದೊಂದು ರೀತಿಯ ಫೀಚರ್‌ಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಪರ್ಫಾರ್ಮೆನ್ಸ್ ಮತ್ತು 44W ಫಾಸ್ಟ್ ಚಾರ್ಜಿಂಗ್ ಮುಖ್ಯವಾಗಿದ್ದರೆ ವಿವೋ T4x 5G ಒಳ್ಳೆಯ ಆಯ್ಕೆ. ದೊಡ್ಡ ಬ್ಯಾಟರಿ ಜೊತೆಗೆ ಕಡಿಮೆ ಬೆಲೆಯಲ್ಲಿ 5G ಫೋನ್ ಬೇಕಿದ್ದರೆ ವಿವೋ T4 Lite 5G ತೆಗೆದುಕೊಳ್ಳಬಹುದು. 120Hz ಡಿಸ್ಪ್ಲೇ ಮತ್ತು 6,500mAh ಬ್ಯಾಟರಿಗಾಗಿ ವಿವೋ Y21 5G ಸೂಕ್ತವಾದ ಆಯ್ಕೆ. ಇನ್ನು ಕಡಿಮೆ ಬಜೆಟ್‌ನಲ್ಲಿ 5G ಫೋನ್ ಬೇಕಿದ್ದರೆ ವಿವೋ Y19s 5G ಮತ್ತು Y11 5G ಎರಡೂ ಲಿಸ್ಟ್‌ನಲ್ಲಿವೆ.

ಫೈನಲ್ ಆಗಿ ಹೇಳೋದಾದ್ರೆ, 20,000 ರೂ. ಬಜೆಟ್‌ನಲ್ಲಿ Vivo ಹಲವು ಫೋನ್‌ಗಳನ್ನು ನೀಡುತ್ತಿದೆ. ಪ್ರೈಸ್ ಮತ್ತು ಆಫರ್‌ಗಳು ಸ್ಟೋರ್‌ಗೆ ಅನುಗುಣವಾಗಿ ಬದಲಾಗಬಹುದು. ಹಾಗಾಗಿ ಖರೀದಿ ಮಾಡುವ ಮುನ್ನ ಅಧಿಕೃತ Vivo ಸೈಟ್, Flipkart ಅಥವಾ Amazonನಲ್ಲಿ ಲೇಟೆಸ್ಟ್ ಪ್ರೈಸ್ ಒಮ್ಮೆ ಚೆಕ್ ಮಾಡಿಕೊಳ್ಳಿ.

ಪದೇ ಪದೇ ಕೇಳುವ ಪ್ರಶ್ನೆಗಳು (FAQ)

01. ₹20,000 ಒಳಗೆ ಬೆಸ್ಟ್ Vivo ಫೋನ್ ಯಾವುದು?

ಪರ್ಫಾರ್ಮೆನ್ಸ್ ಮತ್ತು ಬ್ಯಾಟರಿ ಎರಡೂ ಬೇಕು ಅನ್ನೋರಿಗೆ Vivo T4x 5G ಒಳ್ಳೆಯ ಆಯ್ಕೆ.

02. Vivo T4x 5G ಮತ್ತು Vivo Y21 5G ನಡುವೆ ವ್ಯತ್ಯಾಸ ಏನು?

T4x 5G ನಲ್ಲಿ ಸ್ವಲ್ಪ ಸ್ಟ್ರಾಂಗ್ ಪ್ರೊಸೆಸರ್ (ಡೈಮೆನ್ಸಿಟಿ 7300) ಇದೆ. Y21 5G ನಲ್ಲಿ ಡೈಮೆನ್ಸಿಟಿ 6300 ಇದೆ. ಆದ್ರೆ ಡಿಸ್ಪ್ಲೇ ರಿಫ್ರೆಶ್ ರೇಟ್ ಎರಡರಲ್ಲೂ 120Hz ಇದೆ.

03. ಕಡಿಮೆ ಬಜೆಟ್‌ನಲ್ಲಿ 5G ಫೋನ್ ಬೇಕಾದರೆ ಯಾವ ಫೋನ್ ಉತ್ತಮ?

ವಿವೋ Y19s ಅಥವಾ ವಿವೋ Y11 ಎರಡೂ ಕಡಿಮೆ ಬೆಲೆಯಲ್ಲಿ ಸಿಗುವ 5G ಫೋನ್‌ಗಳಾಗಿವೆ.

04. ಈ ಫೋನ್‌ಗಳಲ್ಲಿ ಫಾಸ್ಟ್ ಚಾರ್ಜಿಂಗ್ ಇರುವ ಫೋನ್‌ಗಳು ಯಾವುದು?

ವಿವೋ T4x 5G ಮತ್ತು ವಿವೋ Y21 5G ಎರಡರಲ್ಲೂ 44W ಫಾಸ್ಟ್ ಚಾರ್ಜಿಂಗ್ ಇದೆ. ಉಳಿದ ಫೋನ್‌ಗಳಲ್ಲಿ 15W ಚಾರ್ಜಿಂಗ್ ಮಾತ್ರ ಸಿಗುತ್ತದೆ.

05. ಈ ಫೋನ್‌ಗಳಲ್ಲಿ ಯಾವುದು ಹೆಚ್ಚು ಬ್ಯಾಟರಿ ಹೊಂದಿದೆ?

ವಿವೋ T4x 5G ಮತ್ತು Y21 5G ಎರಡರಲ್ಲೂ 6,500mAh ಬ್ಯಾಟರಿ ಇದೆ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →