ಒಪ್ಪೋ K ಸೀರಿಸ್‌ನಲ್ಲಿ ಬಜೆಟ್ 5G ಸೆಗ್ಮೆಂಟ್‌ಗಾಗಿ ಒಪ್ಪೋ K14 5G (Oppo K14 5G) ಮತ್ತು ಒಪ್ಪೋ K14x (Oppo K14x) ಫೋನ್‌ಗಳನ್ನು ಪರಿಚಯಿಸಿದೆ. ಎರಡೂ ಫೋನ್‌ಗಳ ಡಿಸೈನ್ ಬಹುತೇಕ ಒಂದೇ ರೀತಿ ಕಾಣುವುದರ ಜೊತೆಗೆ, ಪ್ರೊಸೆಸರ್ ಕೂಡ ಒಂದೇ ಆಗಿದೆ. ಹಾಗಾಗಿ ಇವೆರಡರ ನಡುವೆ ಗೊಂದಲ ಆಗೋದು ಸಹಜ. ಆದರೆ ಸ್ವಲ್ಪ ಆಳವಾಗಿ ನೋಡಿದರೆ, ಬ್ಯಾಟರಿ, ಸ್ಟೋರೇಜ್, ಫ್ರಂಟ್ ಕ್ಯಾಮೆರಾ ಮತ್ತು ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಈ ಆರ್ಟಿಕಲ್‌ನಲ್ಲಿ ಎರಡೂ ಫೋನ್‌ಗಳನ್ನು ಡೀಟೈಲ್ ಆಗಿ ಹೋಲಿಸಿ, ನಿಮ್ಮ ಬಜೆಟ್‌ಗೆ ಮತ್ತು ಅಗತ್ಯಕ್ಕೆ ಯಾವ ಫೋನ್ ಸೂಕ್ತ? ಎಂಬುದನ್ನು ಒಂದೊಂದಾಗಿ ನೋಡೋಣ.
Oppo K14 5G vs Oppo K14x: ಸ್ಪೆಕ್ಸ್ ಹೋಲಿಕೆ
| ಫೀಚರ್ | Oppo K14 5G | Oppo K14x 5G |
|---|---|---|
| ಡಿಸ್ಪ್ಲೇ | 6.75-ಇಂಚು HD+ LCD, 120Hz | 6.75-ಇಂಚು HD+ LCD, 120Hz |
| ಪ್ರೊಸೆಸರ್ | MediaTek Dimensity 6300 | MediaTek Dimensity 6300 |
| RAM | 6GB / 8GB | 4GB / 6GB |
| ಸ್ಟೋರೇಜ್ | 128GB / 256GB | 64GB / 128GB |
| ಹಿಂಬದಿಯ ಕ್ಯಾಮೆರಾ | 50MP + 2MP | 50MP + 2MP |
| ಫ್ರಂಟ್ ಕ್ಯಾಮೆರಾ | 8MP | 5MP |
| ಬ್ಯಾಟರಿ | 7000mAh | 6500mAh |
| ಫಾಸ್ಟ್ ಚಾರ್ಜಿಂಗ್ | 45W SuperVOOC | 45W SuperVOOC |
| ಆಪರೇಟಿಂಗ್ ಸಿಸ್ಟಮ್ | ಆಂಡ್ರಾಯ್ಡ್ 15, ColorOS 15 | ಆಂಡ್ರಾಯ್ಡ್ 15, ColorOS 15 |
| ಬೆಲೆ | ₹25,999 | ₹18,999 |
ಬೆಲೆ ಮತ್ತು ವೇರಿಯಂಟ್‌ಗಳು

ಒಪ್ಪೋ K14x 5G ಬೇಸ್ 4GB RAM + 64GB ಸ್ಟೋರೇಜ್ ವೇರಿಯಂಟ್ ಈಗ ಸುಮಾರು ₹18,999ಕ್ಕೆ ಸಿಗುತ್ತಿದೆ. ಇನ್ನು 4GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ ಸುಮಾರು ₹21,999, ಟಾಪ್ 6GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ ಸುಮಾರು ₹23,999ಕ್ಕೆ ಲಭ್ಯವಿದೆ.

ಒಪ್ಪೋ K14 5G ಬೆಲೆ ಸ್ವಲ್ಪ ಹೆಚ್ಚಾಗಿದೆ. 6GB RAM + 128GB ಬೇಸ್ ವೇರಿಯಂಟ್ ₹25,999 ಇದ್ದು, 6GB RAM + 256GB ವೇರಿಯಂಟ್ ಕೂಡ ಆಫರ್ ಜೊತೆ ₹25,999ಕ್ಕೆ ಸಿಗುತ್ತದೆ. ಟಾಪ್ 8GB RAM + 256GB ವೇರಿಯಂಟ್ ₹28,999 ಬೆಲೆಯಲ್ಲಿ ಬರುತ್ತದೆ.
ಇಲ್ಲಿ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಿ: ಇವು ನಿರ್ದಿಷ್ಟ ಸಮಯದ ಬೆಲೆಗಳಾಗಿದ್ದು, ಆನ್‌ಲೈನ್ ಸ್ಟೋರ್‌ಗಳಲ್ಲಿ ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳಿಂದ ಬೆಲೆ ಬದಲಾಗಬಹುದು. ಖರೀದಿಸುವ ಮೊದಲು ಪ್ರಸ್ತುತ ಬೆಲೆಯನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.
Also Read: Oppo K14 Lite ಸೆಪ್ಟೆಂಬರ್ 16ಕ್ಕೆ ಲಾಂಚ್: 7,000mAh ಬ್ಯಾಟರಿ ಫೋನ್
ಡಿಸ್ಪ್ಲೇ
ಡಿಸ್ಪ್ಲೇ ವಿಷಯದಲ್ಲಿ ಈ ಎರಡೂ ಫೋನ್‌ಗಳ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಎರಡರಲ್ಲೂ 6.75 ಇಂಚಿನ HD+ LCD ಸ್ಕ್ರೀನ್ ಇದ್ದು, 120Hz ರಿಫ್ರೆಶ್ ರೇಟ್ ಸಪೋರ್ಟ್ ಇದೆ. ಗರಿಷ್ಠ ಬ್ರೈಟ್‌ನೆಸ್ ಕೂಡ 1125 ನಿಟ್ಸ್‌ವರೆಗೆ ಹೋಗುತ್ತದೆ. ಇದರಿಂದ ಬಿಸಿಲಿನಲ್ಲೂ ಸ್ಕ್ರೀನ್ ನೋಡಲು ಅನುಕೂಲವಾಗುತ್ತದೆ. ಆದರೆ ರೆಸಲ್ಯೂಶನ್ HD+ ಆಗಿರುವುದರಿಂದ, ಇದೇ ಬೆಲೆ ವಿಭಾಗದಲ್ಲಿ Full HD+ ಡಿಸ್ಪ್ಲೇ ನಿರೀಕ್ಷಿಸುವವರಿಗೆ ಇದು ಸ್ವಲ್ಪ ಕಡಿಮೆ ಅನಿಸಬಹುದು. ಒಟ್ಟಾರೆ ಡಿಸ್ಪ್ಲೇ ವಿಚಾರದಲ್ಲಿ ಎರಡರಲ್ಲೂ ಹೆಚ್ಚು ವ್ಯತ್ಯಾಸ ಕಾಣಿಸುವುದಿಲ್ಲ.
ಪ್ರೊಸೆಸರ್ ಮತ್ತು ಪರ್ಫಾರ್ಮೆನ್ಸ್
ಎರಡೂ ಫೋನ್‌ಗಳಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಇದ್ದು, ಪರ್ಫಾರ್ಮೆನ್ಸ್ ವಿಷಯದಲ್ಲಿ ದೊಡ್ಡ ವ್ಯತ್ಯಾಸ ಇರುವುದಿಲ್ಲ. ಆದರೆ RAM-ಸ್ಟೋರೇಜ್ ವೇರಿಯಂಟ್‌ಗಳು ಬೇರೆ ಬೇರೆ ಇವೆ. K14x 4GB RAM + 64GB ಸ್ಟೋರೇಜ್ ಬೇಸ್ ವೇರಿಯಂಟ್‌ನಿಂದ ಶುರುವಾಗಿ, 4GB + 128GB ಮತ್ತು ಗರಿಷ್ಠ 6GB RAM + 128GB ಆಯ್ಕೆಯಲ್ಲಿ ಸಿಗುತ್ತದೆ. ಇನ್ನು K14 5G ಸ್ಟಾರ್ಟಿಂಗ್‌ನಿಂದಲೇ 6GB RAM + 128GB ಸ್ಟೋರೇಜ್ ನೀಡುತ್ತದೆ. ಟಾಪ್ ವೇರಿಯಂಟ್‌ನಲ್ಲಿ 8GB RAM + 256GB ಸ್ಟೋರೇಜ್ ಆಯ್ಕೆಯೂ ಇದೆ. ಅಂದರೆ ಕಡಿಮೆ ಬಜೆಟ್‌ನಲ್ಲಿ K14x ಎಂಟ್ರಿ-ಲೆವೆಲ್ ಆಯ್ಕೆ ನೀಡಿದರೆ, ಹೆಚ್ಚಿನ RAM ಮತ್ತು ಸ್ಟೋರೇಜ್ ಬೇಕಾದವರಿಗೆ K14 5G ಉತ್ತಮ ಆಯ್ಕೆಯಾಗುತ್ತದೆ.
ಕ್ಯಾಮೆರಾ
ಕ್ಯಾಮೆರಾ ವಿಚಾರದಲ್ಲಿ ಎರಡೂ ಫೋನ್‌ಗಳಲ್ಲಿ 50MP ಮುಖ್ಯ ಕ್ಯಾಮೆರಾ ಜೊತೆಗೆ 2MP ಡೆಪ್ತ್ ಸೆನ್ಸರ್ ಇದೆ. ಹಿಂಬದಿಯ ಕ್ಯಾಮೆರಾ ಸೆಟಪ್ ಒಂದೇ ಆಗಿರುವುದರಿಂದ ಇಲ್ಲಿ ಹೆಚ್ಚಿನ ಬದಲಾವಣೆ ಕಾಣಿಸುವುದಿಲ್ಲ. ಸೆಲ್ಫಿ ಕ್ಯಾಮೆರಾ ಮಾತ್ರ ಬೇರೆ ಇದೆ. K14 5G ನಲ್ಲಿ 8MP ಫ್ರಂಟ್ ಕ್ಯಾಮೆರಾ ಇದ್ದರೆ, K14x ನಲ್ಲಿ 5MP ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳನ್ನು ಹೆಚ್ಚಾಗಿ ಮಾಡುವವರಿಗೆ K14 5G ಹೆಚ್ಚು ಅನುಕೂಲ.
ಬ್ಯಾಟರಿ ಮತ್ತು ಚಾರ್ಜಿಂಗ್
ಬ್ಯಾಟರಿ ವಿಷಯದಲ್ಲಿ K14 5G ಸ್ವಲ್ಪ ಮುಂದೆ ಇದೆ. ಇದರಲ್ಲಿ 7000mAh ಬ್ಯಾಟರಿ ಇದ್ದರೆ, K14x ನಲ್ಲಿ 6500mAh ಬ್ಯಾಟರಿ ಇದೆ. ಎರಡರಲ್ಲೂ 45W SuperVOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದ್ದು, ಚಾರ್ಜರ್ ಬಾಕ್ಸ್‌ನಲ್ಲೇ ಸಿಗುತ್ತದೆ. 500mAh ಹೆಚ್ಚುವರಿ ಬ್ಯಾಟರಿ ಇರುವುದರಿಂದ ದಿನವಿಡೀ ಫೋನ್ ಹೆಚ್ಚು ಬಳಸುವವರಿಗೆ K14 ಸ್ವಲ್ಪ ಹೆಚ್ಚಿನ ಬ್ಯಾಕಪ್ ಕೊಡುತ್ತದೆ.
ಬಿಲ್ಡ್ ಮತ್ತು ಸಾಫ್ಟ್‌ವೇರ್
ಡಿಸೈನ್ ವಿಷಯದಲ್ಲಿ ಎರಡು ಫೋನ್‌ಗಳು ಕೂಡ ಬಹುತೇಕ ಒಂದೇ ರೀತಿ ಕಾಣುತ್ತವೆ. ಡೈಮೆನ್ಷನ್ಸ್ ಕೂಡ ಬಹುತೇಕ ಸೇಮ್. K14x ತುಸು ಹಗುರವಾಗಿದ್ದರೆ, K14 5G ಸ್ವಲ್ಪ ಭಾರವಾಗಿದೆ. ಇದಕ್ಕೆ ದೊಡ್ಡ ಬ್ಯಾಟರಿ ಕಾರಣ ಇರಬಹುದು. ಸಾಫ್ಟ್‌ವೇರ್ ವಿಚಾರಕ್ಕೆ ಬಂದರೆ, ಆಂಡ್ರಾಯ್ಡ್ 15 ಆಧಾರಿತ ColorOS 15 ಎರಡರಲ್ಲೂ ಇದೆ. ಹಾಗಾಗಿ ಯೂಸರ್ ಇಂಟರ್‌ಫೇಸ್‌ನಲ್ಲೂ ಯಾವುದೇ ವಿಶೇಷ ಬದಲಾವಣೆ ಇಲ್ಲ.
ಯಾವ ಫೋನ್ ತೆಗೆದುಕೊಳ್ಳಬೇಕು?
ಬಜೆಟ್ ಕಡಿಮೆ ಇದ್ದು, ಡೈಲಿ ಬಳಕೆಗೆ ಫೋನ್ ಬೇಕು ಅಂದ್ರೆ ಒಪ್ಪೋ K14x ಒಂದು ಒಳ್ಳೆ ಆಯ್ಕೆ. ಕಡಿಮೆ ಬೆಲೆಯಲ್ಲಿ ಸಿಗುವುದರ ಜೊತೆಗೆ, ಡೈಲಿ ಟಾಸ್ಕ್‌ಗಳಿಗೆ ಬೇಕಾದ ಪರ್ಫಾರ್ಮೆನ್ಸ್ ಕೂಡ ನೀಡುತ್ತದೆ.
ಇನ್ನು ಸ್ವಲ್ಪ ಹೆಚ್ಚಿನ ಬಜೆಟ್ ಇಟ್ಟುಕೊಂಡು, ಜಾಸ್ತಿ RAM-ಸ್ಟೋರೇಜ್, ದೊಡ್ಡ ಬ್ಯಾಟರಿ ಮತ್ತು ಉತ್ತಮ ಸೆಲ್ಫಿ ಕ್ಯಾಮೆರಾ ಬೇಕು ಅನ್ನೋರಿಗೆ ಒಪ್ಪೋ K14 5G ಕಡೆ ನೋಡಬಹುದು. ಹೆಚ್ಚುವರಿ ಹಣ ಖರ್ಚು ಮಾಡಿದರೆ ಹೆಚ್ಚಿನ ಸ್ಟೋರೇಜ್ ಜೊತೆಗೆ ದೊಡ್ಡ ಬ್ಯಾಟರಿ ಕೂಡ ಸಿಗುತ್ತದೆ.
Also Read: ₹25,000 ಒಳಗೆ Best Phone ಯಾವುದು? Top 7 5G Phones ಹೋಲಿಕೆ (2026)
ಪದೇ ಪದೇ ಕೇಳುವ ಪ್ರಶ್ನೆಗಳು (FAQ)
01. ಒಪ್ಪೋ K14 5G ಮತ್ತು ಒಪ್ಪೋ K14x ಒಂದೇ ಪ್ರೊಸೆಸರ್ ಇದೆಯಾ?
ಹೌದು, ಎರಡರಲ್ಲೂ ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಬಳಸಲಾಗಿದೆ.
02. ಈ ಎರಡರಲ್ಲಿ ಯಾವುದರ ಬ್ಯಾಟರಿ ದೊಡ್ಡದು?
ಒಪ್ಪೋ K14 5G ನಲ್ಲಿ 7000mAh ಬ್ಯಾಟರಿ ಇದ್ದು, K14x ನಲ್ಲಿ 6500mAh ಬ್ಯಾಟರಿ ಇದೆ.
03. ಡಿಸ್ಪ್ಲೇ ವಿಷಯದಲ್ಲಿ ವ್ಯತ್ಯಾಸ ಇದೆಯಾ?
ಇಲ್ಲ, ಎರಡೂ ಫೋನ್‌ಗಳಲ್ಲಿ 6.75 ಇಂಚಿನ HD+ LCD ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಇದೆ.
04. ಕಡಿಮೆ ಬಜೆಟ್‌ಗೆ ಯಾವ ಫೋನ್ ಸೂಕ್ತ?
ಬಜೆಟ್ ಕಡಿಮೆ ಇದ್ದರೆ ಒಪ್ಪೋ K14x ಒಳ್ಳೆಯ ಆಯ್ಕೆ.
05. ಸೆಲ್ಫಿ ಕ್ಯಾಮೆರಾ ಯಾವುದರಲ್ಲಿ ಬೆಟರ್ ಇದೆ?
ಒಪ್ಪೋ K14 5G ನಲ್ಲಿ 8MP ಫ್ರಂಟ್ ಕ್ಯಾಮೆರಾ ಇದ್ದರೆ, K14x ನಲ್ಲಿ 5MP ಮಾತ್ರ ಇದೆ. ಹಾಗಾಗಿ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗೆ K14 5G ಹೆಚ್ಚು ಅನುಕೂಲ.












