ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Google Pixel 11 Pro Review: ₹1.2 ಲಕ್ಷದ ಈ ಫೋನ್‌ನಲ್ಲಿ ಏನು ವಿಶೇಷ?

Published On: August 22, 2026 4:47 pm
Google Pixel 11 Pro Review
Google News
Follow Us

Google Pixel ಸರಣಿಯ ಫೋನ್‌ಗಳು ಉತ್ತಮ ಕ್ಯಾಮೆರಾ ಕ್ವಾಲಿಟಿ, ಕ್ಲೀನ್ ಆಂಡ್ರಾಯ್ಡ್ ಅನುಭವ ಮತ್ತು Ai ಫೀಚರ್ಸ್ ಗಾಗಿ ಹೆಚ್ಚು ಗಮನ ಸೆಳೆಯುತ್ತವೆ. ಇದೀಗ ಗೂಗಲ್ ತನ್ನ ಹೊಸ Pixel 11 ಸರಣಿಯೊಂದಿಗೆ ಫ್ಲ್ಯಾಗ್‌ಶಿಪ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ಈ ಸರಣಿಯಲ್ಲಿ Pixel 11 Pro ಪ್ರಮುಖ ಮಾದರಿಯಾಗಿದ್ದು, ಕ್ಯಾಮೆರಾ, ಕಾರ್ಯಕ್ಷಮತೆ ಮತ್ತು AI ಫೀಚರ್ಸ್‌ನಲ್ಲಿ ಹಲವು ಅಪ್‌ಗ್ರೇಡ್‌ಗಳನ್ನು ಹೊಂದಿದೆ.

ಪಿಕ್ಸೆಲ್ 11 Pro ನಲ್ಲಿ ಹೊಸ ಟೆನ್ಸರ್ G6 ಪ್ರೊಸೆಸರ್ (Tensor G6), 120Hz ಡಿಸ್ಪ್ಲೇ, ಟ್ರಿಪಲ್ ಕ್ಯಾಮೆರಾ ಮತ್ತು ಹೊಸ ಜೆಮಿನಿ Ai ಫೀಚರ್ಸ್ (Gemini AI features) ನೀಡಲಾಗಿದೆ. ವಿಶೇಷವಾಗಿ ಫೋಟೋಗ್ರಫಿ ಇಷ್ಟಪಡುವವರಿಗೆ ಇದರ ಕ್ಯಾಮೆರಾ ಸಿಸ್ಟಮ್ ಮತ್ತು Googleನ ಇಮೇಜ್ ಪ್ರೊಸೆಸಿಂಗ್ ಒಳ್ಳೆಯ ಅನುಭವ ನೀಡಬಹುದು.

ಆದರೆ ಫೋನ್‌ನ ವಿಶೇಷತೆಗಳನ್ನು ನೋಡುವುದಕ್ಕೂ, ಅದನ್ನು ನಿಜವಾಗಿ ಬಳಸುವುದಕ್ಕೂ ವ್ಯತ್ಯಾಸವಿದೆ. ಪಿಕ್ಸೆಲ್ 11 Proನ ಕ್ಯಾಮೆರಾ ಹೇಗಿದೆ? ಫೋನ್‌ನ ಕಾರ್ಯಕ್ಷಮತೆ ಹೇಗಿದೆ? ಬ್ಯಾಟರಿ ಎಷ್ಟು ಸಮಯ ಬರುತ್ತದೆ? ಹೊಸ AI ಫೀಚರ್ಸ್ ದಿನನಿತ್ಯದ ಬಳಕೆಗೆ ಎಷ್ಟು ಉಪಯೋಗಕ್ಕೆ ಬರುತ್ತವೆ? ಈ ಎಲ್ಲಾ ವಿಚಾರಗಳನ್ನು ನಾವು ಈ ವಿಮರ್ಶೆಯಲ್ಲಿ ಒಂದೊಂದಾಗಿ ನೋಡೋಣ.

Google Pixel 11 Pro ಬೆಲೆ

Google Pixel 11 Pro ಬೆಲೆ

ಭಾರತದಲ್ಲಿ Google Pixel 11 Pro 12GB RAM + 256GB ಸ್ಟೋರೇಜ್ ಮಾದರಿ ₹1,19,999 ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. 16GB RAM + 512GB ಸ್ಟೋರೇಜ್ ಮಾದರಿ ₹1,34,999 ಬೆಲೆಗೆ Flipkartನಲ್ಲಿ ಸಿಗುತ್ತದೆ.

Google Pixel 11 Pro: ಪ್ರಮುಖ ಸ್ಪೆಸಿಫಿಕೇಶನ್‌ಗಳು

ವೈಶಿಷ್ಟ್ಯವಿವರ
ಡಿಸ್ಪ್ಲೇ6.3 ಇಂಚಿನ Super Actua LTPO OLED, 120Hz
ಪ್ರೊಸೆಸರ್Google Tensor G6
RAM12GB / 16GB
ಸ್ಟೋರೇಜ್256GB / 512GB
ಹಿಂಬದಿ ಕ್ಯಾಮೆರಾ50MP + 48MP + 48MP
ಮುಂಭಾಗದ ಕ್ಯಾಮೆರಾ42MP ಆಟೋಫೋಕಸ್
ಬ್ಯಾಟರಿ4,850mAh
ಚಾರ್ಜಿಂಗ್30W ವೈರ್ಡ್ / 25W ವೈರ್‌ಲೆಸ್
ಸಾಫ್ಟ್‌ವೇರ್Android 17

Google Pixel 11 Proನ ಡಿಸೈನ್ ಮತ್ತು ಡಿಸ್ಪ್ಲೇ ಹೇಗಿದೆ?

ಹಿಂದಿನ ಪಿಕ್ಸೆಲ್ ಪ್ರೊ ಫೋನ್‌ಗಳಿಗೆ ಹೋಲಿಸಿದರೆ, ವಿನ್ಯಾಸದಲ್ಲಿ ದೊಡ್ಡ ಬದಲಾವಣೆ ಕಾಣಿಸುವುದಿಲ್ಲ. ಹಿಂಭಾಗದಲ್ಲಿ Pixel ಸರಣಿಯಲ್ಲಿ ಹಿಂದಿನಿಂದಲೂ ಕಾಣುವ ಕ್ಯಾಮೆರಾ ಬಾರ್‌ನ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಒಟ್ಟಾರೆ ಫೋನ್ ನೋಡಲು premium ಆಗಿ ಅನಿಸುತ್ತದೆ.

ಮುಂಭಾಗದಲ್ಲಿ 6.3 ಇಂಚಿನ ಸೂಪರ್ Actua LTPO OLED ಡಿಸ್ಪ್ಲೇ ಇದೆ. ಇದು 1280 × 2856 ರೆಸಲ್ಯೂಷನ್, 120Hz ರಿಫ್ರೆಶ್ ರೇಟ್ ಮತ್ತು 495 PPI ಹೊಂದಿದೆ. ಡಿಸ್ಪ್ಲೇ 3,600 nitsವರೆಗಿನ ಬ್ರೈಟ್‌ನೆಸ್ ನೀಡುತ್ತದೆ. ಜೊತೆಗೆ ಡಿಸ್ಪ್ಲೇಗೆ Gorilla Glass Victus 2 ರಕ್ಷಣೆ ಕೂಡ ನೀಡಲಾಗಿದೆ.

ದಿನನಿತ್ಯ ಬಳಸುವಾಗ ಈ ಡಿಸ್ಪ್ಲೇ ಉತ್ತಮ ಅನುಭವ ನೀಡುತ್ತದೆ. ಹೆಚ್ಚಿನ ಬ್ರೈಟ್‌ನೆಸ್ ಇರುವುದರಿಂದ ಹೊರಗಡೆ ಬಿಸಿಲಿನಲ್ಲೂ ಸ್ಕ್ರೀನ್ ನೋಡಲು ಸುಲಭವಾಗುತ್ತದೆ. 120Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೋಲ್ ಮಾಡುವಾಗ ಸ್ಕ್ರೀನ್ ಸ್ಮೂತ್ ಆಗಿ ಕಾಣಿಸುತ್ತದೆ. 6.3 ಇಂಚಿನ ಗಾತ್ರ ಇರುವುದರಿಂದ ಫೋನ್ ತುಂಬಾ ದೊಡ್ಡದಾಗಿ ಅನಿಸುವುದಿಲ್ಲ. ಹಾಗಾಗಿ ಫೋನ್ ಅನ್ನು ಒಂದು ಕೈಯಲ್ಲಿ ಹಿಡಿದು ಬಳಸುವುದು ಸುಲಭವಾಗಿದೆ.

Pixel 11 Pro: Tensor G6 ಮತ್ತು Performance

ಪಿಕ್ಸೆಲ್ 11 ಪ್ರೊ ಗೆ ಗೂಗಲ್ ತನ್ನ ಹೊಸ Tensor G6 ಪ್ರೊಸೆಸರ್ ಅನ್ನು ನೀಡಿದೆ. ಇದರ ಜೊತೆಗೆ ಟೈಟಾನ್ M3 ಸೆಕ್ಯೂರಿಟಿ (Titan M3) ಚಿಪ್ ಕೂಡ ಇದೆ. ಫೋನ್ 12GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಬರುತ್ತದೆ. ಹೆಚ್ಚಿನ ಸ್ಟೋರೇಜ್ ಬೇಕಿರುವವರಿಗೆ 16GB RAM ಮತ್ತು 512GB ಸ್ಟೋರೇಜ್ ಮಾದರಿಯೂ ಇದೆ.   

ದಿನನಿತ್ಯದ ಬಳಕೆಯಲ್ಲಿ apps ಓಪನ್ ಮಾಡುವುದು, ಸಾಮಾಜಿಕ ಜಾಲತಾಣಗಳನ್ನು ಬಳಸುವುದು, ಮಲ್ಟಿಟಾಸ್ಕಿಂಗ್ ಮಾಡುವಾಗ ಫೋನ್ ಉತ್ತಮವಾಗಿ ಕೆಲಸ ಮಾಡುತ್ತದೆ. ಗೂಗಲ್ ಈ ಫೋನ್‌ನಲ್ಲಿ ಕೇವಲ ಪರ್ಫಾರ್ಮೆನ್ಸ್‌ಗೆ ಮಾತ್ರವಲ್ಲದೆ Ai ಮತ್ತು ಸಾಫ್ಟವೇರ್ ಅನುಭವಕ್ಕೂ ಹೆಚ್ಚಿನ ಆದ್ಯತೆ ನೀಡಿದೆ.

Pixel 11 Proನ ಕ್ಯಾಮೆರಾ ವಿಶೇಷತೆಗಳು

Google Pixel 11 Pro ಕ್ಯಾಮೆರಾ

ಪಿಕ್ಸೆಲ್ 11 ಪ್ರೊನ ಪ್ರಮುಖ ವಿಶೇಷತೆಗಳಲ್ಲಿ ಕ್ಯಾಮೆರಾ ಕೂಡ ಒಂದು. ಹಿಂಭಾಗದಲ್ಲಿ 50MP, 48MP ಅಲ್ಟ್ರಾ ವೈಡ್ ಮತ್ತು 48MP 5x ಟೆಲಿಫೋಟೋ ಕ್ಯಾಮೆರಾ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಟೆಲಿಫೋಟೋ ಕ್ಯಾಮೆರಾಗೆ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಕೂಡ ಇದೆ. Pro Zoom ಮೂಲಕ 120xವರೆಗೆ ಜೂಮ್ ಮಾಡಿ ಫೋಟೋ ತೆಗೆಯಬಹುದು. ಮುಂಭಾಗದಲ್ಲಿ 42MP ಆಟೋಫೋಕಸ್ ಸೆಲ್ಫಿ ಕ್ಯಾಮೆರಾ ಇದೆ.

ಗೂಗಲ್‌ನ ಕಂಪ್ಯೂಟೇಶನಲ್ ಫೋಟೋಗ್ರಫಿ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ Pixel ಫೋನ್‌ಗಳಲ್ಲಿ photos ನ್ಯಾಚುರಲ್ ಆಗಿ ಕಾಣಿಸುತ್ತವೆ. ಸ್ಕಿನ್ ಟೋನ್ಸ್, ಬಣ್ಣಗಳು ಮತ್ತು ಬೆಳಕು-ನೆರಳಿನ ವಿವರಗಳು ಕೂಡ ಚೆನ್ನಾಗಿ ಬರುತ್ತವೆ. ಪಿಕ್ಸೆಲ್ 11 Proನಲ್ಲೂ ಇದೇ ರೀತಿಯ ಕ್ಯಾಮೆರಾ ಎಕ್ಸ್‌ಪೀರಿಯೆನ್ಸ್ ಮುಂದುವರಿದಿದೆ.

Pixel 11 Pro: AI ಮತ್ತು ಹೊಸ ಸೌಲಭ್ಯಗಳು

Pixel 11 Proನಲ್ಲಿ Google ಈ ಬಾರಿ AIಗೆ ಹೆಚ್ಚು ಒತ್ತು ನೀಡಿದೆ. Tensor G6 ಪ್ರೊಸೆಸರ್ ಜೊತೆಗೆ ಹಲವು ಹೊಸ AI ಸೌಲಭ್ಯಗಳನ್ನು ನೀಡಲಾಗಿದೆ. ಇವುಗಳಲ್ಲಿ ಕೆಲವು ದಿನನಿತ್ಯದ ಬಳಕೆಯಲ್ಲಿ ಕೆಲಸಕ್ಕೆ ಬರಬಹುದು.

ಅದರಲ್ಲೂ Rambler ಎಂಬ ಧ್ವನಿಯನ್ನು ಬರಹಕ್ಕೆ ಬದಲಿಸುವ ಸೌಲಭ್ಯ ಉಪಯುಕ್ತವಾಗಿದೆ. ನಾವು ಮಾತನಾಡುವುದನ್ನು ವೇಗವಾಗಿ ಬರಹವಾಗಿ ಬದಲಿಸುವುದರ ಜೊತೆಗೆ, ವಾಕ್ಯಗಳನ್ನು ಸರಿಯಾಗಿ ಜೋಡಿಸಲು ಮತ್ತು ಬೇಕಾದ ತಿದ್ದುಪಡಿಗಳನ್ನು ಮಾಡಲು ಇದು ಸಹಾಯ ಮಾಡುತ್ತದೆ.

ಮ್ಯಾಜಿಕ್ ಕ್ಯಾಪ್ಚರ್ ಕೂಡ ಉಪಯುಕ್ತ ಸೌಲಭ್ಯವಾಗಿದೆ. ಫೋಟೋಗಳು ಮತ್ತು ವೀಡಿಯೊಗಳಲ್ಲಿರುವ ಪ್ರಮುಖ ಕ್ಷಣಗಳನ್ನು AI ಸಹಾಯದಿಂದ ಆಯ್ಕೆ ಮಾಡಿ, ಅವುಗಳನ್ನು ಒಂದೆಡೆ ಸಂಗ್ರಹಿಸಲು ಇದು ಸಹಾಯ ಮಾಡುತ್ತದೆ.

ಇದರ ಜೊತೆಗೆ Google ಹೊಸ HiLight ಸೌಲಭ್ಯವನ್ನೂ ನೀಡಿದೆ. ಸ್ಕ್ರೀನ್ ನೋಡದೆ ಕೆಲವು ಮುಖ್ಯ ಸೂಚನೆಗಳು ಅಥವಾ ಮಾಹಿತಿಯನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ಈ feature ಹೊಸದಾಗಿ ಕಾಣಿಸಿದರೂ, ದಿನನಿತ್ಯದ ಬಳಕೆಯಲ್ಲಿ ಇದು ಎಷ್ಟು ಕೆಲಸಕ್ಕೆ ಬರುತ್ತದೆ ಎಂಬುದು ಬಳಸಿದಾಗ ಗೊತ್ತಾಗುತ್ತದೆ.

ಪಿಕ್ಸೆಲ್ 11 ಪ್ರೊನ ಬ್ಯಾಟರಿ ಮತ್ತು ಚಾರ್ಜಿಂಗ್

ಪಿಕ್ಸೆಲ್ 11 ಪ್ರೊನಲ್ಲಿ 4,850mAh ಬ್ಯಾಟರಿ ಇದೆ. ಜೊತೆಗೆ 30W ಚಾರ್ಜಿಂಗ್ ಮತ್ತು 25W ವೈರ್‌ಲೆಸ್ ಚಾರ್ಜಿಂಗ್‌ಗೆ ಫೋನ್ ಬೆಂಬಲ ನೀಡುತ್ತದೆ.

ಸಾಮಾನ್ಯ ಬಳಕೆಯಲ್ಲಿ ಒಂದು ದಿನದ ಬ್ಯಾಟರಿ ಬ್ಯಾಕಪ್ ಸಿಗುವ ನಿರೀಕ್ಷೆಯಿದೆ. ಆದರೆ ಚಾರ್ಜಿಂಗ್ ವೇಗದಲ್ಲಿ ಪಿಕ್ಸೆಲ್ 11 Pro ಹಿಂದೆ ಉಳಿಯುತ್ತದೆ. ಇದೇ ಬೆಲೆಯ ಇತರ ಫ್ಲ್ಯಾಗ್‌ಶಿಪ್ ಫೋನ್‌ಗಳಿಗೆ ಹೋಲಿಸಿದರೆ 30W ಚಾರ್ಜಿಂಗ್ ಸ್ವಲ್ಪ ನಿಧಾನವಾಗಿದೆ. ಬ್ಯಾಟರಿ ವಿಷಯದಲ್ಲಿ ಫೋನ್ ಉತ್ತಮವಾಗಿದ್ದರೂ, ಚಾರ್ಜಿಂಗ್ ವೇಗ ಇನ್ನಷ್ಟು ಹೆಚ್ಚಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು.

ಪಿಕ್ಸೆಲ್ 11 ಪ್ರೊನ ಸಾಫ್ಟ್‌ವೇರ್ ಅನುಭವ

ಪಿಕ್ಸೆಲ್ 11 ಪ್ರೊ ಆಂಡ್ರಾಯ್ಡ್ 17ನೊಂದಿಗೆ ಬರುತ್ತದೆ. ಗೂಗಲ್‌ನ ಸರಳ ಆಂಡ್ರಾಯ್ಡ್ ಇಂಟರ್‌ಫೇಸ್ ಇರುವುದರಿಂದ ಫೋನ್ ಬಳಸುವುದು ಸುಲಭವಾಗಿದೆ. ಅನಗತ್ಯ appsಗಳನ್ನು ಹೆಚ್ಚು ಸೇರಿಸದೆ, ಗೂಗಲ್ ಸರಳವಾದ ಸಾಫ್ಟ್‌ವೇರ್ ಅನುಭವವನ್ನು ನೀಡಿದೆ. ಜೊತೆಗೆ ಏಳು ವರ್ಷಗಳ ಕಾಲ ಆಂಡ್ರಾಯ್ಡ್ ಅಪ್‌ಡೇಟ್‌ಗಳು, ಭದ್ರತಾ ಅಪ್‌ಡೇಟ್‌ಗಳು ಮತ್ತು Pixel Drop ಅಪ್‌ಡೇಟ್‌ಗಳನ್ನು ನೀಡುವುದಾಗಿ ಗೂಗಲ್ ಹೇಳಿದೆ.

ಫೋನ್ ಅನ್ನು ಹಲವು ವರ್ಷಗಳ ಕಾಲ ಬಳಸಲು ಬಯಸುವವರಿಗೆ ಇದು ಒಂದು ಒಳ್ಳೆಯ ಆಯ್ಕೆಯಾಗಿದೆ. ನಿರಂತರವಾಗಿ ಅಪ್‌ಡೇಟ್‌ಗಳು ಸಿಗುವುದರಿಂದ ಫೋನ್ ಖರೀದಿಸಿದ ನಂತರವೂ ಸಾಫ್ಟ್‌ವೇರ್ ವಿಚಾರದಲ್ಲಿ ಹೆಚ್ಚು ಚಿಂತೆ ಮಾಡುವ ಅಗತ್ಯ ಇರುವುದಿಲ್ಲ.

Google Pixel 11 Pro: ಇಷ್ಟವಾಗುವ ಮತ್ತು ಇಷ್ಟವಾಗದ ವಿಷಯಗಳು

Google Pixel 11 Pro

ಇಷ್ಟವಾಗುವ ವಿಷಯಗಳು

  • ಅತ್ಯುತ್ತಮ ಕ್ಯಾಮೆರಾ ಗುಣಮಟ್ಟ
  • 50MP + 48MP + 48MP ಟ್ರಿಪಲ್ ಕ್ಯಾಮೆರಾ ಸೆಟಪ್
  • 120Hz Super Actua LTPO OLED ಡಿಸ್ಪ್ಲೇ
  • Tensor G6 ಪ್ರೊಸೆಸರ್ ಮತ್ತು ಹೊಸ Gemini AI ಸೌಲಭ್ಯಗಳು
  • ಸರಳ Android 17 ಅನುಭವ
  • ಏಳು ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್‌ಗಳು
  • ಚಿಕ್ಕ ಗಾತ್ರದಲ್ಲೇ ಪ್ರೀಮಿಯಂ Pro ವಿನ್ಯಾಸ

ಇಷ್ಟವಾಗದ ವಿಷಯಗಳು

  • ಬೆಲೆ ₹1,19,999ರಿಂದ ಆರಂಭವಾಗುತ್ತದೆ
  • ಗೇಮಿಂಗ್ ಕಾರ್ಯಕ್ಷಮತೆ ಕೆಲವು ಇತರ ಫ್ಲ್ಯಾಗ್‌ಶಿಪ್ ಫೋನ್‌ಗಳಿಗಿಂತ ಕಡಿಮೆ
  • 30W ಚಾರ್ಜಿಂಗ್ ಮಾತ್ರ

Google Pixel 11 Pro Review: ಅಂತಿಮ ಅಭಿಪ್ರಾಯ

Google Pixel 11 Pro ಒಟ್ಟಾರೆಯಾಗಿ ಉತ್ತಮ ಫ್ಲ್ಯಾಗ್‌ಶಿಪ್ ಫೋನ್ ಆಗಿದೆ. ಕ್ಯಾಮೆರಾ, AI ಸೌಲಭ್ಯಗಳು ಮತ್ತು ಸರಳ Android ಅನುಭವ ಇಷ್ಟಪಡುವವರಿಗೆ ಇದು ಗಮನಿಸಬಹುದಾದ ಫೋನ್.

ಆದರೆ ಗೇಮಿಂಗ್ ಮತ್ತು ಚಾರ್ಜಿಂಗ್ ವೇಗದಲ್ಲಿ ಕೆಲವು ಇತರ ಫ್ಲ್ಯಾಗ್‌ಶಿಪ್ ಫೋನ್‌ಗಳು ಮುಂದೆ ಇವೆ. ₹1,19,999 ಬೆಲೆಯಿರುವುದರಿಂದ, ಖರೀದಿಸುವ ಮೊದಲು ಈ ಫೋನ್ ನಿಮ್ಮ ಅಗತ್ಯಗಳಿಗೆ ಸೂಕ್ತವಾಗಿದೆಯೇ ಎಂಬುದನ್ನು ಯೋಚಿಸುವುದು ಒಳ್ಳೆಯದು.

ಒಟ್ಟಿನಲ್ಲಿ, ಕ್ಯಾಮೆರಾ ಮತ್ತು ಸಾಫ್ಟ್‌ವೇರ್ ಅನುಭವಕ್ಕೆ ಹೆಚ್ಚು ಆದ್ಯತೆ ನೀಡುವವರಿಗೆ Pixel 11 Pro ಒಳ್ಳೆಯ ಆಯ್ಕೆಯಾಗಬಹುದು.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Pallavi N
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು