ವಿವೋ (Vivo) ತನ್ನ ಜನಪ್ರಿಯ V-ಸೀರೀಸ್ನ ಹೊಸ ಫೋನ್ ವಿವೋ V80 (Vivo V80) ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. 8GB + 128GB ವೇರಿಯಂಟ್ಗೆ ₹62,999 ಬೆಲೆ ಇದೆ. ಫೆಬ್ರವರಿಯಲ್ಲಿ ಬಂದಿದ್ದ V70 ಪ್ರೀಮಿಯಂ ಮಿಡ್-ರೇಂಜ್ ಸೆಗ್ಮೆಂಟ್ನಲ್ಲಿ ಒಳ್ಳೆ ಹೆಸರು ಗಳಿಸಿತ್ತು. ಈಗ ಅದೇ ಸರಣಿಯ ಮುಂದಿನ ಆವೃತ್ತಿ ಬಂದಿದೆ. ಫೋನ್ನ ಡಿಸೈನ್, ಕ್ಯಾಮೆರಾ, ಬ್ಯಾಟರಿ, ಬೆಲೆ ಮತ್ತು ಆಫರ್ಗಳ ಬಗ್ಗೆ ಇಲ್ಲಿ ಸರಳವಾಗಿ ತಿಳಿದುಕೊಳ್ಳೋಣ.
ಡಿಸೈನ್ನಲ್ಲಿ ಏನಿದೆ ಹೊಸತು?

V80 ಫೋನ್ನ ಅತಿ ದೊಡ್ಡ ಆಕರ್ಷಣೆ ಅಂದ್ರೆ ಅದರ ಫ್ಲಾಗ್ಶಿಪ್ ಮಟ್ಟದ ಒಂದೇ-ಪೀಸ್ ಕೋಲ್ಡ್-ಕಾರ್ವ್ಡ್ ಗ್ಲಾಸ್ ಬ್ಯಾಕ್ ಡಿಸೈನ್. ಇದರ ಜೊತೆಗೆ ಫ್ಲೋಟಿಂಗ್ ಕ್ಯಾಮೆರಾ ಮಾಡ್ಯೂಲ್ ಕೂಡ ಇದ್ದು, ಫೋನ್ಗೆ ಇನ್ನಷ್ಟು ಪ್ರೀಮಿಯಂ ಲುಕ್ ಕೊಡುತ್ತೆ. ಅಲ್ಯೂಮಿನಿಯಂ ಅಲಾಯ್ ಫ್ರೇಮ್ ಇರುವ ಈ ಫೋನ್ ಸುಮಾರು 7.6mm ದಪ್ಪ ಮತ್ತು 203 ಗ್ರಾಂ ತೂಕ ಹೊಂದಿದೆ. ಇದು ಸನ್ರೈಸ್ ಆಂಥಮ್ (Sunrise Anthem), ಹರೈಸನ್ ಬ್ಲೂ (Horizon Blue) ಮತ್ತು ಸ್ಟೆಲ್ಲರ್ ಬ್ಲ್ಯಾಕ್ (Stellar Black) ಬಣ್ಣಗಳಲ್ಲಿ ಲಭ್ಯ. ಧೂಳು ಮತ್ತು ನೀರಿನಿಂದ ರಕ್ಷಣೆಗೆ IP68 ಮತ್ತು IP69 ರೇಟಿಂಗ್ ಇದೆ.
ಕ್ಯಾಮೆರಾದಲ್ಲಿ ದೊಡ್ಡ ಅಪ್ಗ್ರೇಡ್
ವಿವೋ V80ನಲ್ಲಿ ಕ್ಯಾಮೆರಾಗೆ ಹೆಚ್ಚು ಗಮನ ಕೊಡಲಾಗಿದೆ. 50MP ZEISS ಮುಖ್ಯ ಕ್ಯಾಮೆರಾದಲ್ಲಿ Sony LYTIA 700V ಸೆನ್ಸರ್, OIS ಮತ್ತು CIPA 4.5 ಸ್ಟೆಬಿಲೈಸೇಶನ್ ಸಪೋರ್ಟ್ ಇದೆ. ಇದರ ಜೊತೆಗೆ Sony IMX882 ಸೆನ್ಸರ್ ಹೊಂದಿರುವ 50MP ZEISS ನೈಟ್ ಟೆಲಿಫೋಟೋ ಕ್ಯಾಮೆರಾ ಕೂಡ ಇದ್ದು, 3x ಆಪ್ಟಿಕಲ್ ಝೂಮ್ ಮತ್ತು 100x ವರೆಗೆ ಡಿಜಿಟಲ್ ಝೂಮ್ ಮಾಡುತ್ತದೆ. ಇವುಗಳಿಗೆ ಪೂರಕವಾಗಿ 8MP ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಕೂಡ ಇದೆ. ಪೋರ್ಟ್ರೇಟ್ ಫೋಟೋಗಳಿಗೆ 23mm ನಿಂದ 100mm ವರೆಗೆ ಐದು ಫೋಕಲ್ ಲೆಂಗ್ತ್ ಆಯ್ಕೆಗಳು ಸಿಗುತ್ತವೆ. ಸೆಲ್ಫಿಗೆ 92° ವೈಡ್-ಆಂಗಲ್ ಲೆನ್ಸ್ ಮತ್ತು ಆಟೋಫೋಕಸ್ ಹೊಂದಿರುವ 50MP ZEISS ಗ್ರೂಪ್ ಕ್ಯಾಮೆರಾ ನೀಡಲಾಗಿದೆ.
ವಿಡಿಯೋ ವಿಷಯದಲ್ಲೂ ಫೋನ್ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. 4K ಸಿನಿಮ್ಯಾಟಿಕ್ ವಿಡಿಯೋ ಮತ್ತು 4K 60fps ವಿಡಿಯೋ ರೆಕಾರ್ಡಿಂಗ್ ಸಪೋರ್ಟ್ ಇದ್ದು, ವೈಬ್ರಂಟ್ (Vibrant), ಮಾಡರ್ನ್ ಮೂವಿ (Modern Movie) ಮತ್ತು ಪ್ಯಾಸ್ಟೆಲ್ (Pastel) ಎಂಬ ಮೂರು ಮೂವಿ-ಸ್ಟೈಲ್ ಕಲರ್ ಟೋನ್ಸ್ ಕೂಡ ಸಿಗುತ್ತವೆ. ಇನ್ನು AI ಕ್ರಿಯೇಟಿವ್ ಕ್ಯಾಮೆರಾ ಫೀಚರ್ ಒಂದೇ ಟ್ಯಾಪ್ನಲ್ಲಿ ಫೋಟೋಗೆ ಲೈಟಿಂಗ್ ಎಫೆಕ್ಟ್ ಸೇರಿಸಲು ಸಹಾಯ ಮಾಡುತ್ತದೆ. ಹಬ್ಬದ ಸೀಸನ್ಗಾಗಿ AI ದೀಪಾವಳಿ ಪೋರ್ಟ್ರೇಟ್ 2.0 ಫೀಚರ್ ಕೂಡ ಇದ್ದು, ಇದು ಫೋಟೋಗೆ ದೀಪ ಮತ್ತು ರಂಗೋಲಿ ಸೇರಿಸುತ್ತದೆ. ಆದರೆ ಈ ಫೀಚರ್ ಅಕ್ಟೋಬರ್ 10 ರಿಂದ ನವೆಂಬರ್ 20, 2026ರವರೆಗೆ ಮಾತ್ರ ಕೆಲಸ ಮಾಡುತ್ತದೆ.
ಬ್ಯಾಟರಿ ಮತ್ತು ಡಿಸ್ಪ್ಲೇ – ಫೋನ್ನ ಪ್ರಮುಖ ಹೈಲೈಟ್
ವಿವೋ ಇದನ್ನ “V-ಸೀರೀಸ್ನ ಅತಿ ದೊಡ್ಡ ಬ್ಯಾಟರಿ” ಎಂದು ಹೇಳಿಕೊಂಡಿದೆ. 7200mAh BlueVolt ಬ್ಯಾಟರಿ ಜೊತೆಗೆ 90W ಫ್ಲಾಶ್ಚಾರ್ಜ್ ಕೊಡಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಮೋಡ್ನಲ್ಲಿ ಕೇವಲ 30 ನಿಮಿಷದಲ್ಲಿ 50% ಚಾರ್ಜ್ ಆಗುತ್ತೆ ಎಂದು ಕಂಪನಿ ತಿಳಿಸಿದೆ. ಒಂದೇ ಫುಲ್ ಚಾರ್ಜ್ನಲ್ಲಿ 39.5 ಗಂಟೆ ವಿಡಿಯೋ ಪ್ಲೇಬ್ಯಾಕ್ ಸಿಗುತ್ತೆ ಎಂಬ ಮಾಹಿತಿ ಇದ್ದು, ಹೆಚ್ಚು ಸಮಯ ಫೋನ್ ಬಳಸೋರಿಗೆ ಇದು ಖಂಡಿತ ಒಳ್ಳೆ ವಿಚಾರ.
ಡಿಸ್ಪ್ಲೇ ವಿಷಯಕ್ಕೆ ಬಂದ್ರೆ, 6.59 ಇಂಚಿನ 144Hz ರಿಫ್ರೆಶ್ ರೇಟ್ ಹೊಂದಿರುವ 1.5K OLED ಸ್ಕ್ರೀನ್ ನೀಡಲಾಗಿದೆ. 5000 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು 1.07 ಬಿಲಿಯನ್ ಕಲರ್ಸ್ ಸಪೋರ್ಟ್ ಇರುವ ಈ ಸ್ಕ್ರೀನ್ನಲ್ಲಿ, ರಾತ್ರಿ ಸಮಯದಲ್ಲಿ ಕಣ್ಣಿಗೆ ಹೆಚ್ಚು ಆರಾಮವಾಗಿರಲಿ ಎಂಬ ಉದ್ದೇಶದಿಂದ 1 ನಿಟ್ ವರೆಗೆ ಬ್ರೈಟ್ನೆಸ್ ಕಡಿಮೆ ಆಗುವ ಫೀಚರ್ ಕೂಡ ಹೊಂದಿದೆ. ಫೋನ್ನ ಒಳಗೆ 4nm ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 7 ಜೆನ್ 4 (Snapdragon 7 Gen 4) ಚಿಪ್ಸೆಟ್, 8GB LPDDR4X RAM ಮತ್ತು 512GB ವರೆಗೆ UFS 3.1 ಸ್ಟೋರೇಜ್ ಇದೆ.
Vivo T5 5G ಬಗ್ಗೆ ತಿಳ್ಕೋಬೇಕು ಅಂದ್ರೆ, ಇದರ ಬೆಲೆ ಮತ್ತು ಪ್ರಮುಖ ಫೀಚರ್ಸ್ಗಳ ಸಂಪೂರ್ಣ ಮಾಹಿತಿ ಇಲ್ಲಿದೆ. Vivo T5 5G: 7,050mAh ಬ್ಯಾಟರಿ, 144Hz ಡಿಸ್ಪ್ಲೇ – ಬೆಲೆ ಎಷ್ಟು?
OriginOS 7 ಜೊತೆಗಿನ AI ಫೀಚರ್ಸ್
ಫೋನ್ OriginOS 7 ಜೊತೆ ಬರುತ್ತೆ. ಇದರಲ್ಲಿ ಕೆಲವು ಇಂಟರೆಸ್ಟಿಂಗ್ AI ಫೀಚರ್ಸ್ಗಳನ್ನೂ ಸೇರಿಸಲಾಗಿದೆ. ಪೆಟ್ ಪಾಲ್ಸ್ (Pet Pals) ಅನ್ನೋ ಫೀಚರ್ ಲಾಕ್ ಸ್ಕ್ರೀನ್ನಲ್ಲಿ ವರ್ಚುಯಲ್ ಪೆಟ್ ಕಂಪ್ಯಾನಿಯನ್ ತೋರಿಸುತ್ತೆ. ಸ್ನ್ಯಾಪ್ ನೋಟ್ (Snap Note) ಫೀಚರ್ ಮೂಲಕ ವೈಟ್ಬೋರ್ಡ್ ಅಥವಾ ನೋಟ್ಸ್ನ ಫೋಟೋ ತೆಗೆದ್ರೆ, AI ಅದನ್ನ ಎಡಿಟ್ ಮಾಡಬಹುದಾದ ಡಾಕ್ಯುಮೆಂಟ್ ಆಗಿ ಬದಲಾಯಿಸುತ್ತೆ. ಇನ್ನು ಸೆಕ್ಯುರಿಟಿ ಶೀಲ್ಡ್ (Security Shield) ಫೀಚರ್ ಕರೆಗಳು, ಆಪ್ಸ್ ಮತ್ತು ನೆಟ್ವರ್ಕ್ನಲ್ಲಿ ಬರುವ ಸ್ಕ್ಯಾಮ್ ಹಾಗೂ ಥ್ರೆಟ್ಗಳಿಂದ ರಕ್ಷಣೆ ಒದಗಿಸುತ್ತೆ. ಇನ್ನೊಂದು ವಿಶೇಷ ಅಂದ್ರೆ, ಫೋನ್ಗೆ 6 ವರ್ಷಗಳ ಎಕ್ಸ್ಟೆಂಡೆಡ್ ಸೆಕ್ಯುರಿಟಿ ಅಪ್ಡೇಟ್ಸ್ ಸಿಗುತ್ತೆ ಎಂದು ವಿವೋ ಪ್ರಕಟಿಸಿದೆ.
Vivo V80 ಬೆಲೆ, ಆಫರ್ ಮತ್ತು ಸೇಲ್ ದಿನಾಂಕ
ವಿವೋ V80 ಮೂರು ವೇರಿಯಂಟ್ಗಳಲ್ಲಿ ಬಂದಿದೆ. 8GB + 128GB ಮಾದರಿಗೆ ₹62,999, 8GB + 256GB ಮಾದರಿಗೆ ₹69,999 ಮತ್ತು 8GB + 512GB ಮಾದರಿಗೆ ₹79,999 ಬೆಲೆ ಇದೆ. ಫೋನ್ನ ಪ್ರಿ-ಬುಕಿಂಗ್ ಈಗಾಗಲೇ ಶುರುವಾಗಿದ್ದು, ಅಕ್ಟೋಬರ್ 13ರಿಂದ ವಿವೋ ಇಂಡಿಯಾ ವೆಬ್ಸೈಟ್, ಫ್ಲಿಪ್ಕಾರ್ಟ್, ಅಮೆಜಾನ್ ಮತ್ತು ಆಫ್ಲೈನ್ ಸ್ಟೋರ್ಗಳಲ್ಲಿ ಮಾರಾಟ ಆರಂಭವಾಗುತ್ತದೆ.
ಲಾಂಚ್ ಆಫರ್ಗಳ ಭಾಗವಾಗಿ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 10% ಇನ್ಸ್ಟಂಟ್ ಕ್ಯಾಶ್ಬ್ಯಾಕ್ ಸಿಗುತ್ತದೆ. ಹಳೆಯ ಫೋನ್ ಎಕ್ಸ್ಚೇಂಜ್ ಮಾಡಿದಾಗ ಗರಿಷ್ಠ 10% ಬೋನಸ್ ಕೂಡ ಪಡೆಯಬಹುದು. ಆದರೆ ಎಕ್ಸ್ಚೇಂಜ್ಗೆ ಸಿಗುವ ಮೊತ್ತ ಹಳೆಯ ಫೋನ್ನ ಸ್ಥಿತಿ ಮತ್ತು ಮಾದರಿಯನ್ನು ಅವಲಂಬಿಸಿರುತ್ತದೆ.
EMI ಆಯ್ಕೆಯಲ್ಲಿ 24 ತಿಂಗಳ ಜೀರೋ ಡೌನ್ ಪೇಮೆಂಟ್ ಪ್ಲಾನ್ಗೆ ತಿಂಗಳಿಗೆ ₹2,625 ಆಗುತ್ತದೆ. ಜೊತೆಗೆ ₹101 ಕೊಟ್ಟು ಫೋನ್ ಮನೆಗೆ ತೆಗೆದುಕೊಂಡು ಹೋಗುವ ಆಯ್ಕೆಯೂ ಇದೆ. 6 ತಿಂಗಳ Google One 100GB ಸ್ಟೋರೇಜ್ ಕೂಡ ಸಿಗುತ್ತದೆ.
₹20,000 ಒಳಗೆ Vivo ಫೋನ್ ಬೇಕಿದ್ದರೆ, ಈ ಲಿಸ್ಟ್ ಕೂಡ ಒಮ್ಮೆ ನೋಡಿ: ಯಾವ ವಿವೋ 5G ಫೋನ್ ಬೆಸ್ಟ್? – Vivo Phones Under 20000 ಲಿಸ್ಟ್
Vivo V80 ಬಗ್ಗೆ ಕೊನೆಯದಾಗಿ
ವಿವೋ V80 ನೋಡಿದರೆ, ಕಂಟೆಂಟ್ ಕ್ರಿಯೇಟರ್ಗಳನ್ನು ಗಮನದಲ್ಲಿಟ್ಟುಕೊಂಡು ಹಲವು ಫೀಚರ್ಸ್ಗಳನ್ನು ನೀಡಿರುವುದು ಸ್ಪಷ್ಟವಾಗುತ್ತದೆ. ZEISS ಜೊತೆ ಕೋ-ಎಂಜಿನಿಯರ್ಡ್ ಮಾಡಿರುವ ಕ್ಯಾಮೆರಾ ಸಿಸ್ಟಂ, ದೊಡ್ಡ ಬ್ಯಾಟರಿ ಮತ್ತು ಸ್ಮೂತ್ ಡಿಸ್ಪ್ಲೇ ಈ ಫೋನ್ನ ಪ್ರಮುಖ ಆಕರ್ಷಣೆಗಳಾಗಿವೆ. ಆದರೆ ₹62,999 ಆರಂಭಿಕ ಬೆಲೆ ಕೊಂಚ ದುಬಾರಿಯಾಗಿದೆ. ಇದೇ ಬೆಲೆಯಲ್ಲಿರುವ ಇತರ ಫೋನ್ಗಳ ಜೊತೆ ಹೋಲಿಕೆ ಮಾಡಿಕೊಂಡು, ನಿಮ್ಮ ಅಗತ್ಯಕ್ಕೆ ಯಾವುದು ಹೆಚ್ಚು ಸೂಕ್ತ ಎನ್ನುವುದನ್ನು ನೋಡಿ ಖರೀದಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.












