ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

Airtel ರೀಚಾರ್ಜ್‌ ಪ್ಲಾನ್‌ ₹399, ₹838, ₹979 ರಲ್ಲಿ ಯಾವುದು ಬೆಸ್ಟ್? (ನವೆಂಬರ್ 2026)

Author
Published
06/11/2026
Updated
06/11/2026
Published On: November 6, 2026 9:11 pm
Airtel ರೀಚಾರ್ಜ್‌ ಪ್ಲಾನ್‌
Google News
Follow Us

ರೀಚಾರ್ಜ್ ಮುಗಿಯುವ ದಿನ ಹತ್ತಿರ ಬಂದಾಗ ಎಲ್ಲರದ್ದೂ ಒಂದೇ ಪ್ರಶ್ನೆ, ಈ ಸಲ ಯಾವುದು ತಗೊಳ್ಳೋದು? ಏರ್‌ಟೆಲ್ ನಲ್ಲಿ ₹399, ₹838 ಮತ್ತು ₹979 ಈ ಮೂರು ಪ್ಲಾನ್‌ಗಳ ಬಗ್ಗೆ ಜನ ತುಂಬಾ ಕೇಳುತ್ತಿದ್ದಾರೆ. ಒಂದರ ವ್ಯಾಲಿಡಿಟಿ ತಿಂಗಳು, ಇನ್ನೊಂದರದ್ದು ಎರಡು ತಿಂಗಳು, ಮತ್ತೊಂದರದ್ದು ಮೂರು ತಿಂಗಳು. ಬೆಲೆ ಹತ್ತಿರವಿದ್ದರೂ ಸಿಗುವ ಲಾಭ ಬೇರೆ ಬೇರೆ. ಏರ್‌ಟೆಲ್ ಪ್ಲಾನ್‌ಗಳ ಲಾಭಗಳು ಆಗಾಗ ಬದಲಾಗುತ್ತಲೇ ಇರುತ್ತವೆ, ಕೆಲವು ಸೌಲಭ್ಯಗಳು ಕೆಲವು ಸರ್ಕಲ್‌ಗಳಲ್ಲಿ ಮಾತ್ರ ಸಿಗುತ್ತವೆ. ಅದಕ್ಕೇ ಇತ್ತೀಚಿನ ಮಾಹಿತಿ ನೋಡಿಕೊಂಡು ಯಾವುದು ಯಾರಿಗೆ ಸರಿ ಅನ್ನೋದನ್ನು ಇಲ್ಲಿ ಸರಳವಾಗಿ ಹೇಳಿದ್ದೇವೆ. ರೀಚಾರ್ಜ್ ಮಾಡುವ ಮೊದಲು ಆ್ಯಪ್‌ನಲ್ಲಿ ಒಮ್ಮೆ ಚೆಕ್ ಮಾಡಿ.

Airtel ರೀಚಾರ್ಜ್‌ ಪ್ಲಾನ್‌ಗಳ ಹೋಲಿಕೆ

ವಿವರಗಳು₹399₹838₹979
ಬೆಲೆ₹399₹838₹979
ವ್ಯಾಲಿಡಿಟಿ28 ದಿನ56 ದಿನ84 ದಿನ
ಡೇಟಾUnlimited3GB/ದಿನ2GB/ದಿನ
ಅನ್ಲಿಮಿಟೆಡ್ ಕರೆಹೌದುಹೌದುಹೌದು
SMS100/ದಿನ100/ದಿನ100/ದಿನ
Unlimited 5Gಹೌದುಹೌದುಹೌದು

₹399 ಪ್ಲಾನ್‌ನಲ್ಲಿ ಏನೇನು ಸಿಗುತ್ತದೆ?

ಇದು 28 ದಿನದ ಪ್ಲಾನ್. ಇದರ ವಿಶೇಷ ಅಂದರೆ ದಿನದ ಡೇಟಾ ಮಿತಿ ಇಲ್ಲದೆ ಅನ್ಲಿಮಿಟೆಡ್ 4G + 5G ಡೇಟಾ ಬಳಸಬಹುದು. ಜೊತೆಗೆ ಲೋಕಲ್, STD ಮತ್ತು ರೋಮಿಂಗ್‌ನಲ್ಲಿ ಅನ್ಲಿಮಿಟೆಡ್ ಕರೆ ಹಾಗೂ ದಿನಕ್ಕೆ 100 SMS ಸಿಗುತ್ತದೆ. ಇದರ ಜೊತೆಗೆ 12 ತಿಂಗಳ Adobe Express Premium, ಏರ್‌ಟೆಲ್ ಸೇಫ್ ಮತ್ತು ಪ್ರತಿ 30 ದಿನಗಳಿಗೊಮ್ಮೆ ಉಚಿತವಾಗಿ HelloTunes ಬದಲಾಯಿಸುವ ಸೌಲಭ್ಯವೂ ಇದೆ. ದಿನದ ಖರ್ಚು ಲೆಕ್ಕ ಹಾಕಿದರೆ ಸುಮಾರು ₹14.25 ಬೀಳುತ್ತದೆ.

₹838 ಪ್ಲಾನ್ ಯಾರಿಗೆ ಹೊಂದುತ್ತದೆ?

ದಿನದ ಮಿತಿಯ ಲೆಕ್ಕದಲ್ಲಿ ಹೆಚ್ಚು ಡೇಟಾ ಕೊಡುವುದು ಇದೇ. ವ್ಯಾಲಿಡಿಟಿ 56 ದಿನ, ದಿನಕ್ಕೆ 3GB, ಅನ್ಲಿಮಿಟೆಡ್ ಕರೆ, ದಿನಕ್ಕೆ 100 SMS. ದಿನದ ಡೇಟಾ ಮುಗಿದರೆ ಇಂಟರ್ನೆಟ್ ವೇಗ 64 Kbps ಗೆ ಇಳಿಯುತ್ತದೆ, ಅಂದರೆ ಬರೀ WhatsApp ಟೆಕ್ಸ್ಟ್ ಹೋಗುವಷ್ಟು ಮಾತ್ರ. 100 SMS ದಾಟಿದರೆ ಲೋಕಲ್‌ಗೆ ₹1, STD ಗೆ ₹1.5 ಕಟ್ ಆಗುತ್ತದೆ.

ಈ ಪ್ಲಾನ್‌ನ ನಿಜವಾದ ಪ್ಲಸ್ ಪಾಯಿಂಟ್ OTT. 56 ದಿನದ Amazon Prime Lite ಇದೆ, ಅಂದರೆ Prime Video ಮತ್ತು ಒಂದು ದಿನದ ಉಚಿತ ಡೆಲಿವರಿ. ಇದರ ಜೊತೆ Airtel Xstream Play Premium ಮೂಲಕ 56 ದಿನ Sony LIV, Lionsgate Play, Aha, Chaupal, SunNxt ಸೇರಿ 18ಕ್ಕೂ ಹೆಚ್ಚು OTT ಆ್ಯಪ್‌ಗಳು ಸಿಗುತ್ತವೆ. ದಿನಕ್ಕೆ ಸುಮಾರು ₹14.96 ಖರ್ಚು.

₹979 ಯಾಕೆ ಹೆಚ್ಚು ಲಾಭದಾಯಕ?

ಇದರಲ್ಲಿ ದಿನಕ್ಕೆ 2GB ಡೇಟಾ ಮಾತ್ರ. ಅದರ ಬದಲು ವ್ಯಾಲಿಡಿಟಿ 84 ದಿನ. ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 SMS ಇದೆ. ದಿನದ ಖರ್ಚು ಸುಮಾರು ₹11.65, ಮೂರರಲ್ಲಿ ಕಡಿಮೆ. ಹೆಚ್ಚುವರಿಯಾಗಿ 12 ತಿಂಗಳ Adobe Express Premium ಸಿಗುತ್ತದೆ.

ಒಂದು ಲೆಕ್ಕ ಹೇಳುತ್ತೇವೆ. ₹838 ಪ್ಲಾನ್‌ನಲ್ಲಿ 3GB × 56 ದಿನ ಅಂದರೆ 168GB. ₹979 ಪ್ಲಾನ್‌ನಲ್ಲಿ 2GB × 84 ದಿನ ಕೂಡ 168GB. ಅಂದರೆ ಒಟ್ಟು ಡೇಟಾ ಒಂದೇ. ₹141 ಹೆಚ್ಚು ಕೊಟ್ಟರೆ 28 ದಿನ ಹೆಚ್ಚು ವ್ಯಾಲಿಡಿಟಿ ಸಿಗುತ್ತದೆ. ಆದರೆ ಅದನ್ನು ನಿಧಾನವಾಗಿ ದಿನಕ್ಕೆ 2GB ಯಂತೆ ಬಳಸಬೇಕು.

Also Read (ಇದನ್ನು ಓದಿ): 

ಏರ್‌ಟೆಲ್ ಹೊಸ ರೀಚಾರ್ಜ್ ಪ್ಲಾನ್‌ಗಳು: ₹185, ₹203, ₹206 ಪ್ಲಾನ್‌ಗಳ ವಿವರ

Airtel ₹200 Recharge Plan: 30GB ಡೇಟಾ, OTT ಜೊತೆಗೆ ಏನೆಲ್ಲ ಸಿಗುತ್ತದೆ?

ಅನ್ಲಿಮಿಟೆಡ್ 5G ಬಗ್ಗೆ ಒಂದು ಮಾತು

ಮೂರೂ ಪ್ಲಾನ್‌ಗಳಲ್ಲಿ “ಅನ್ಲಿಮಿಟೆಡ್ 5G ಡೇಟಾ” ಅಂತ ಬರೆದಿರುತ್ತಾರೆ. ಇದು ನಿಮ್ಮ ಪ್ಲಾನ್‌ನ ಡೇಟಾ ಮಿತಿಯ ಮೇಲೆ ಹೆಚ್ಚುವರಿಯಾಗಿ ಸಿಗುವಂಥದ್ದು, ಆದರೆ 5G ನೆಟ್‌ವರ್ಕ್ ಇರುವ ಏರಿಯಾಗಳಲ್ಲಿ ಮಾತ್ರ ಬಳಸಬಹುದು. ಅಂದರೆ ನಿಮ್ಮ ಫೋನ್ 5G ಆಗಿರಬೇಕು ಮತ್ತು ನಿಮ್ಮ ಏರಿಯಾದಲ್ಲಿ ಏರ್‌ಟೆಲ್ 5G ಇರಬೇಕು.

ಹಾಗಾದರೆ ಯಾವುದನ್ನು ತಗೊಳ್ಳೋದು?

ವಿದ್ಯಾರ್ಥಿ ಅಥವಾ ವರ್ಕ್ ಫ್ರಂ ಹೋಮ್ ಮಾಡುವವರಿಗೆ ದಿನಕ್ಕೆ 3GB ಬೇಕಾಗುತ್ತದೆ, ಅವರು ₹838 ನೋಡಬಹುದು. ಮೊಬೈಲ್‌ನಲ್ಲೇ ಸಿನಿಮಾ ಮತ್ತು ವೆಬ್ ಸೀರೀಸ್ ನೋಡುವವರಿಗೂ Prime Lite ಮತ್ತು Xstream Play ಇರುವುದರಿಂದ ಇದು ಹೊಂದುತ್ತದೆ. ದಿನದ ಮಿತಿಯ ಚಿಂತೆ ಇಲ್ಲದೆ ಬೇಕಾದಷ್ಟು ಡೇಟಾ ಬಳಸಬೇಕು, ತಿಂಗಳ ರೀಚಾರ್ಜ್ ಅಭ್ಯಾಸ ಇದೆ ಅನ್ನುವವರಿಗೆ ₹399 ಸರಿ. ಆದರೆ ಆ್ಯಪ್‌ನಲ್ಲಿ ಈ ಪ್ಲಾನ್ ತೋರಿಸುತ್ತಾ ಅಂತ ಮೊದಲು ನೋಡಿ. ಇನ್ನು ಮೂರು ತಿಂಗಳು ರೀಚಾರ್ಜ್ ಯೋಚನೆಯೇ ಬೇಡ, ದಿನಕ್ಕೆ 2GB ಸಾಕು ಅನ್ನುವವರಿಗೆ ₹979 ಹೆಚ್ಚು ಉಳಿತಾಯದ ಆಯ್ಕೆ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →