ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

OnePlus N6 Lite ಲಾಂಚ್ ಡೇಟ್ ಫಿಕ್ಸ್! 7000mAh ಬ್ಯಾಟರಿ ಜೊತೆ ಬರ್ತಿದೆ ಹೊಸ ಫೋನ್

Author
Published
18/09/2026
Updated
18/09/2026
Published On: September 18, 2026 3:25 pm
OnePlus N6 Lite
Google News
Follow Us

ಒನ್‌ಪ್ಲಸ್ ಕಂಪನಿ ತನ್ನ N-ಸೀರೀಸ್‌ಗೆ ಹೊಸ ಫೋನ್ ಸೇರಿಸ್ತಿದೆ. ಇದರ ಹೆಸರು ಒನ್‌ಪ್ಲಸ್ N6 ಲೈಟ್ (OnePlus N6 Lite). ಈ ಫೋನ್ ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ ಎಂದು ಕಂಪನಿ ಖಚಿತಪಡಿಸಿದೆ. Amazon India ಮತ್ತು OnePlus ಇಂಡಿಯಾ ವೆಬ್‌ಸೈಟ್‌ನಲ್ಲಿ ಫೋನ್‌ನ ಮೈಕ್ರೋಸೈಟ್ ಕೂಡ ಲೈವ್ ಆಗಿದೆ, ಅದರಲ್ಲಿ ಫೋನ್‌ನ ಕೆಲವು ಮುಖ್ಯ ಫೀಚರ್‌ಗಳನ್ನ ಬಹಿರಂಗಪಡಿಸಲಾಗಿದೆ.

ಈ ಫೋನ್ ಬಜೆಟ್ ಸೆಗ್ಮೆಂಟ್‌ ಅನ್ನು ಗುರಿಯಾಗಿಸಿಕೊಂಡಿದ್ದು, ದೊಡ್ಡ ಬ್ಯಾಟರಿ, ಸ್ಮೂತ್ ಡಿಸ್‌ಪ್ಲೇ ಮತ್ತು ಡ್ಯುರಬಿಲಿಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹಾಗಾದರೆ ಈ ಫೋನ್‌ನಲ್ಲಿ ಏನೆಲ್ಲಾ ಫೀಚರ್‌ಗಳಿವೆ ಎಂಬುದನ್ನು ವಿವರವಾಗಿ ನೋಡೋಣ.

Also Read: POCO M8x 5G vs OnePlus N6 5G: ಯಾವುದು ಬೆಸ್ಟ್? ಬೆಲೆ, ಫೀಚರ್ಸ್ ಹೋಲಿಕೆ

ಡಿಸ್‌ಪ್ಲೇ ಮತ್ತು ಡಿಸೈನ್ಫೋನ್

6.75 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತೆ. ಇದರಲ್ಲಿ “Aqua Touch” ಟೆಕ್ನಾಲಜಿ ಇದ್ದು, ಕೈ ಒದ್ದೆಯಾಗಿದ್ದಾಗ ಅಥವಾ ಸ್ಕ್ರೀನ್ ಮೇಲೆ ನೀರಿನ ಹನಿಗಳಿದ್ದಾಗಲೂ ಟಚ್ ಸರಿಯಾಗಿ ಕೆಲಸ ಮಾಡುತ್ತೆ. ಮಳೆಗಾಲದಲ್ಲಿ ಅಥವಾ ವರ್ಕೌಟ್ ಮಾಡುವಾಗ ಫೋನ್ ಬಳಸುವವರಿಗೆ ಇದು ಚೆನ್ನಾಗಿ ಉಪಯೋಗ ಆಗುತ್ತದೆ.

ಡಿಸೈನ್ ವಿಷಯಕ್ಕೆ ಬಂದ್ರೆ, ಫೋನ್ 8.95mm ದಪ್ಪ ಇದ್ದು, ಸುಮಾರು 215 ಗ್ರಾಂ ತೂಕ ಹೊಂದಿದೆ. ರೌಂಡೆಡ್ ಎಡ್ಜ್‌ಗಳೊಂದಿಗೆ ಬರುತ್ತಿರುವ ಈ ಫೋನ್ ಮಿಡ್‌ನೈಟ್ ಹೈಪ್ ಮತ್ತು ನಿಯೋ ಗ್ರೀನ್ ಎಂಬ ಎರಡು ಬಣ್ಣಗಳಲ್ಲಿ ಬರುತ್ತದೆ.

ಬ್ಯಾಟರಿ – ಈ ಫೋನ್‌ನ ಹೈಲೈಟ್

ಒನ್‌ಪ್ಲಸ್ N6 ಲೈಟ್

ಒನ್‌ಪ್ಲಸ್ N6 ಲೈಟ್‌ನ ಮುಖ್ಯ ಆಕರ್ಷಣೆ ಅದರ 7000mAh ಬ್ಯಾಟರಿ. ಇಷ್ಟು ದೊಡ್ಡ ಬ್ಯಾಟರಿ ಇರುವುದರಿಂದ ಒಂದೇ ಚಾರ್ಜ್‌ನಲ್ಲಿ ಮೂರು ದಿನದವರೆಗೆ ಬಳಸಬಹುದು ಎಂದು ಕಂಪನಿ ಹೇಳಿದೆ. ಇದಲ್ಲದೆ, ಬ್ಯಾಟರಿ ಬ್ಯಾಕಪ್‌ಗೆ ಸಂಬಂಧಿಸಿದ ಕೆಲವು ಅಂಕಿ ಅಂಶಗಳನ್ನೂ ಕಂಪನಿ ಹಂಚಿಕೊಂಡಿದೆ. ಒಂದೇ ಚಾರ್ಜ್‌ನಲ್ಲಿ 26.8 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್, 29.9 ಗಂಟೆಗಳವರೆಗೆ ಗೂಗಲ್ ಮ್ಯಾಪ್ಸ್ ನ್ಯಾವಿಗೇಶನ್ ಮತ್ತು 49.7 ಗಂಟೆಗಳವರೆಗೆ ಫೋನ್ ಕಾಲ್ ಮಾಡಬಹುದು ಎಂದು ತಿಳಿಸಿದೆ.

ಇನ್ನೊಂದು ವಿಶೇಷ ಅಂದ್ರೆ, ಆರು ವರ್ಷಗಳ ಬಳಕೆಯ ನಂತರವೂ ಬ್ಯಾಟರಿ 80%ಗಿಂತ ಹೆಚ್ಚು ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತೆ ಅಂತ ಒನ್‌ಪ್ಲಸ್ ಹೇಳಿದೆ. ಸಾಮಾನ್ಯವಾಗಿ ಬಜೆಟ್ ಫೋನ್‌ಗಳ ಬ್ಯಾಟರಿ ಎರಡು-ಮೂರು ವರ್ಷಗಳ ಬಳಕೆಯ ನಂತರ ಬ್ಯಾಕಪ್ ಕಡಿಮೆಯಾಗೋದನ್ನ ನೋಡ್ತೀವಿ. ಈ ಕಾರಣಕ್ಕೆ ದೀರ್ಘಕಾಲ ಫೋನ್ ಬಳಸೋರಿಗೆ ಈ ಬ್ಯಾಟರಿ ಲೈಫ್ ಗಮನ ಸೆಳೆಯಬಹುದು.

OnePlus N6 Lite ಬೆಲೆ

ಫೋನ್‌ನ ಅಧಿಕೃತ ಬೆಲೆ ಇನ್ನೂ ಪ್ರಕಟವಾಗಿಲ್ಲ. ಸೆಪ್ಟೆಂಬರ್ 22 ರಂದು ಲಾಂಚ್ ಆಗುವಾಗ ಬೆಲೆ, ಲಾಂಚ್ ಆಫರ್‌ಗಳು ಮತ್ತು ಸೇಲ್ ದಿನಾಂಕವನ್ನು ಕಂಪನಿ ಪ್ರಕಟಿಸಲಿದೆ. ಫೋನ್ OnePlus ಮತ್ತು Amazon ಜೊತೆಗೆ ಆಫ್‌ಲೈನ್ ರೀಟೇಲ್ ಸ್ಟೋರ್‌ಗಳಲ್ಲೂ ಖರೀದಿಗೆ ಲಭ್ಯವಿರಲಿದೆ.

Also Read: ₹25,000 ಒಳಗೆ Best Phone ಯಾವುದು? Top 7 5G Phones ಹೋಲಿಕೆ (2026)

ಕೊನೆಯ ಮಾತು

ಒನ್‌ಪ್ಲಸ್ N6 ಲೈಟ್‌ನ ಮಾಹಿತಿ ನೋಡಿದ್ರೆ, ಇದು ಬ್ಯಾಟರಿ ಬ್ಯಾಕಪ್ ಬಯಸೋ ಗ್ರಾಹಕರಿಗೆ ಒಳ್ಳೆ ಆಯ್ಕೆಯಾಗಬಹುದು ಅನ್ಸುತ್ತೆ. ಆದ್ರೆ ಬೆಲೆ ಎಷ್ಟು ಇಡ್ತಾರೆ ಮತ್ತು ಕ್ಯಾಮೆರಾ ಡೀಟೇಲ್ಸ್ ಏನು ಅನ್ನೋದು ಇನ್ನೂ ಗೊತ್ತಾಗಬೇಕಿದೆ. ಸೆಪ್ಟೆಂಬರ್ 22 ರಂದು ನಡೆಯುವ ಲಾಂಚ್ ಕಾರ್ಯಕ್ರಮದ ನಂತರ ಈ ಫೋನ್ ಬಗ್ಗೆ ಉಳಿದ ವಿವರಗಳು ಸ್ಪಷ್ಟವಾಗಲಿವೆ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →