ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

ChatGPT Plus 2026: GPT-6 Astra ನಿಜವಾಗ್ಲೂ ಸಿಗುತ್ತಾ? ಪೂರ್ಣ ಮಾಹಿತಿ!

Author
Published
08/09/2026
Updated
08/09/2026
Published On: September 8, 2026 8:46 am
ChatGPT Plus
Google News
Follow Us

ಓಪನ್‌ಎಐ (OpenAI) ಪ್ರತಿ ಕೆಲವು ವಾರಗಳಿಗೊಮ್ಮೆ ಚಾಟ್‌ಜಿಪಿಟಿಗೆ ಹೊಸ ಹೊಸ ಅಪ್‌ಡೇಟ್‌ಗಳನ್ನು ನೀಡುತ್ತಲೇ ಇರುತ್ತೆ. ಆದರೆ, ಸೆಪ್ಟೆಂಬರ್ 2026ರ ಅಪ್‌ಡೇಟ್ ಮಾತ್ರ ಸ್ವಲ್ಪ ವಿಶೇಷವಾಗಿದೆ. ಹೊಸ ಮಾಡೆಲ್ ಬಂದಿರೋದರ ಜೊತೆಗೆ, ಚಾಟ್‌ಜಿಪಿಟಿ ಪ್ಲಾನ್‌ಗಳ ಬಗ್ಗೆಯೂ ಕೆಲವು ವಿಷಯಗಳು ಸ್ಪಷ್ಟವಾಗಿವೆ. ಈಗಾಗಲೇ ChatGPT Plus ಬಳಸುತ್ತಿರುವವರಿಗಾಗಲಿ, ಪ್ಲಸ್ ಪ್ಲಾನ್ ತೆಗೆದುಕೊಳ್ಳಬೇಕಾ ಅಂತ ಯೋಚಿಸುತ್ತಿರುವವರಿಗಾಗಲಿ, ಈ ಅಪ್‌ಡೇಟ್‌ನಲ್ಲಿ ಏನಿದೆ ಅನ್ನೋದನ್ನ ಒಂದೇ ಕಡೆ ಸರಳವಾಗಿ ನೋಡೋಣ.

GPT-6 Astra ಎಂಬ ಹೊಸ ಮಾಡೆಲ್

ಸೆಪ್ಟೆಂಬರ್ 3ರಂದು ಓಪನ್‌ಎಐ ತನ್ನ ಹೊಸ ಫ್ಲ್ಯಾಗ್‌ಶಿಪ್ ಮಾಡೆಲ್ GPT-6 Astra ಅನ್ನು ಪರಿಚಯಿಸಿತು. ಆರಂಭದಲ್ಲಿ ಈ ಮಾಡೆಲ್ ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಈಗ ಹಂತಹಂತವಾಗಿ ಪ್ಲಸ್, ಪ್ರೊ, ಬಿಸಿನೆಸ್ ಮತ್ತು ಎಂಟರ್‌ಪ್ರೈಸ್ ಬಳಕೆದಾರರಿಗೂ ನೀಡಲಾಗುತ್ತಿದೆ. ಕಂಪನಿ ಹೇಳಿಕೊಂಡಿರೋ ಪ್ರಕಾರ, GPT-6 Astra ಬಳಕೆದಾರರ ಉದ್ದೇಶವನ್ನು ಮೊದಲಿಗಿಂತ ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತದೆ. ಹಾಗಾಗಿ ದೊಡ್ಡ ಟಾಸ್ಕ್‌ಗಳನ್ನೂ ಇದಕ್ಕೆ ವಹಿಸಿಕೊಡಬಹುದು.

ಆದ್ರೆ ಇಲ್ಲಿ ಒಂದು ಮುಖ್ಯ ವಿಷಯ ಇದೆ, ಪ್ಲಸ್ ಬಳಕೆದಾರರಿಗೆ GPT-6 Astra ಸದ್ಯಕ್ಕೆ ಸಾಮಾನ್ಯ ಚಾಟ್‌ನಲ್ಲಿ ಲಭ್ಯವಿಲ್ಲ. ChatGPT Work ಮತ್ತು Codexನಲ್ಲಿ ಇದನ್ನು ಹಂತಹಂತವಾಗಿ ನೀಡಲಾಗುತ್ತಿದೆ, ಅದೂ ಬಳಕೆಯ ಮಿತಿಯೊಂದಿಗೆ. ಸಾಮಾನ್ಯ ಚಾಟ್‌ನಲ್ಲಿ ಇನ್ನೂ GPT-5.6 Sol ಡೀಫಾಲ್ಟ್ ಮಾಡೆಲ್ ಆಗಿ ಇರುತ್ತೆ. ಹಾಗಾಗಿ “ಪ್ಲಸ್ ತಗೊಂಡ್ರೆ GPT-6 Astra ಸಿಗುತ್ತೆ” ಅಂತ ನೀವು ಅಂದುಕೊಂಡಿದ್ದರೆ, ಆ ನಿರೀಕ್ಷೆಯನ್ನು ಸ್ವಲ್ಪ ಬದಲಿಸಿಕೊಳ್ಳಿ.

ChatGPT Plus ಬೆಲೆ ಎಷ್ಟಿದೆ?

ಸೆಪ್ಟೆಂಬರ್ 2026ರ ಪ್ರಕಾರ ಪ್ಲಾನ್‌ಗಳ ಬೆಲೆ ಹೀಗಿದೆ:

  • Free – ಉಚಿತ, ಕೆಲವು ಮಾರುಕಟ್ಟೆಗಳಲ್ಲಿ ಜಾಹೀರಾತು ಇರುತ್ತೆ
  • Go – ತಿಂಗಳಿಗೆ $8
  • Plus – ತಿಂಗಳಿಗೆ $20
  • Pro – $100 ಮತ್ತು $200 ಎಂಬ ಎರಡು ಆಯ್ಕೆ
  • Business – ಪ್ರತಿ ಸೀಟ್‌ಗೆ $20-25
  • Enterprise – ಕಸ್ಟಮ್ ಬೆಲೆ
  • GPT-6 Astra ಬಂದ ಮೇಲೂ ChatGPT ಪ್ಲಾನ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂದ್ರೆ, ಹಳೆಯ ಬೆಲೆಯಲ್ಲೇ ಹೊಸ ಮಾಡೆಲ್‌ಗೆ ಸ್ವಲ್ಪ ಮಟ್ಟಿನ ಆಕ್ಸೆಸ್ ಸಿಗ್ತಿದೆ ಅಂತ ಅರ್ಥ.

Plus ಪ್ಲಾನ್‌ನಲ್ಲಿ ಏನೇನು ಸಿಗುತ್ತೆ?

  • Go ಪ್ಲಾನ್‌ಗೆ ಹೋಲಿಸಿದರೆ Plus ತಗೊಂಡಾಗ ಕೆಲವು ಹೆಚ್ಚುವರಿ ಫೀಚರ್‌ಗಳು ಸಿಗುತ್ತವೆ:
  • GPT-5.6 Sol ಮಾಡೆಲ್ ಆಕ್ಸೆಸ್ (ಎಲ್ಲಾ ಪೇಯ್ಡ್ ಪ್ಲಾನ್‌ನ ಡೀಫಾಲ್ಟ್ ಮಾಡೆಲ್)
  • ದೊಡ್ಡ ಕಾಂಟೆಕ್ಸ್ಟ್ ವಿಂಡೋ – ಉದ್ದದ ಡಾಕ್ಯುಮೆಂಟ್ ಮತ್ತು ಚಾಟ್ ಹಿಸ್ಟರಿಯನ್ನ ಸುಲಭವಾಗಿ ನೆನಪಿಟ್ಟುಕೊಳ್ಳುತ್ತೆ.
  • ಪೂರ್ಣ ಪ್ರಮಾಣದ ಡೀಪ್ ರಿಸರ್ಚ್ ಫೀಚರ್
  • ಅಡ್ವಾನ್ಸ್ಡ್ ಇಮೇಜ್ ಜನರೇಷನ್
  • Codex ಕೋಡಿಂಗ್ ಏಜೆಂಟ್ ಆಕ್ಸೆಸ್
  • ಸ್ಕೆಡ್ಯೂಲ್ಡ್ ಟಾಸ್ಕ್‌ಗಳನ್ನ ಬೇರೆಯವರೊಂದಿಗೆ ಶೇರ್ ಮಾಡುವ ಆಯ್ಕೆ
  • ಜಾಹೀರಾತು ರಹಿತ ಅನುಭವ
  • ಇದಲ್ಲದೆ, ಡಾಕ್ಯುಮೆಂಟ್, ಸ್ಪ್ರೆಡ್‌ಶೀಟ್ ಮತ್ತು ಪ್ರೆಸೆಂಟೇಶನ್ ರಚಿಸೋ ಫೀಚರ್‌ಗಳನ್ನೂ ಇತ್ತೀಚೆಗೆ ಸೇರಿಸಲಾಗಿದೆ. ಆಫೀಸ್ ಕೆಲಸಕ್ಕೆ ChatGPT ಬಳಸೋರಿಗೆ ಇದು ಒಳ್ಳೆ ಫೀಚರ್.

Also Read: ChatGPT ಅನ್ನು ಕನ್ನಡದಲ್ಲಿ ಹೇಗೆ ಬಳಸುವುದು? (2026) – ಸಂಪೂರ್ಣ ಮಾಹಿತಿ

ಫ್ಯಾಮಿಲಿ ಪ್ಲಾನ್ ಇದೆಯಾ?

ಈ ಪ್ರಶ್ನೆ ಆಗಾಗ ಕೇಳಿಬರುತ್ತೆ. ಆದ್ರೆ ಸದ್ಯಕ್ಕೆ ChatGPT ಗೆ ಫ್ಯಾಮಿಲಿ ಪ್ಲಾನ್ ಅಂತ ಇಲ್ಲ. ಪ್ರತಿ ಪ್ಲಾನ್ ಒಬ್ಬ ವ್ಯಕ್ತಿಗೆ ಮಾತ್ರ, ಒಂದೇ ಲಾಗಿನ್ ಶೇರ್ ಮಾಡೋದನ್ನ ಕಂಪನಿ ನಿಯಮ ಒಪ್ಪಲ್ಲ. ಮನೆಯವರೆಲ್ಲಾ ಬಳಸಬೇಕು ಅಂದ್ರೆ ಪ್ರತ್ಯೇಕ ಅಕೌಂಟ್ ಮಾಡಿಕೊಳ್ಳೋದೇ ಸದ್ಯಕ್ಕಿರೋ ದಾರಿ.

ಯಾವ ಪ್ಲಾನ್ ಯಾರಿಗೆ ಸೂಕ್ತ?

ಚಾಟ್ ಮಾಡೋಕೆ ಮಾತ್ರ ಬಳಸೋರಿಗೆ Free ಅಥವಾ Go ಸಾಕಾಗುತ್ತೆ. ಡೀಪ್ ರಿಸರ್ಚ್, ಕೋಡಿಂಗ್, ಇಮೇಜ್ ಜನರೇಷನ್ ಥರದ ಕೆಲಸಗಳಿಗೆ Plus ಸೂಕ್ತ ಆಯ್ಕೆ. ಹೆಚ್ಚು ಬಳಕೆ ಮಾಡುವ ಡೆವಲಪರ್‌ಗಳಿಗೆ ಮತ್ತು ChatGPT ಅನ್ನು ಹೆಚ್ಚಾಗಿ ಬಳಸೋರಿಗೆ Pro ಪ್ಲಾನ್ ಒಳ್ಳೆ ಆಯ್ಕೆ ಆಗುತ್ತೆ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →